ETV Bharat / sports

IPL ಫೈನಲ್‌ಗೆ ಕೆಂಪು ಮಣ್ಣಿನ ಪಿಚ್‌ ಬಳಕೆ: ಯಾವ ತಂಡಕ್ಕೆ ಲಾಭ? ಮಳೆ ಅಡ್ಡಿಪಡಿಸಿದ್ರೆ ಏನಾಗುತ್ತೆ? ಕಂಪ್ಲೀಟ್ ಡಿಟೇಲ್ಸ್‌ - IPL Final - IPL FINAL

ಚೆನ್ನೈನ ಚೆಪಾಕ್​ ಮೈದಾನ ಫೈನಲ್​ ಪಂದ್ಯಕ್ಕೆ ಸಜ್ಜಾಗಿದೆ. ಆದರೆ, ರಾಜ್ಯದಲ್ಲಿ ಮಳೆ ಸುರಿಯುತ್ತಿದೆ. ಮಳೆ ಅಬ್ಬರ ಮುಂದುವರಿದಲ್ಲಿ ಪಂದ್ಯದ ಫಲಿತಾಂಶ ಏನಾಗಲಿದೆ ಎಂಬುದು ಕ್ರಿಕೆಟ್‌ಪ್ರಿಯರ ಆತಂಕ.

ಮಳೆಯಿಂದ ಕೆಕೆಆರ್​ ಅಭ್ಯಾಸದ ಅವಧಿ ಮೊಟಕು
ಮಳೆಯಿಂದ ಕೆಕೆಆರ್​ ಅಭ್ಯಾಸದ ಅವಧಿ ಮೊಟಕು (IPL X Handle)
author img

By PTI

Published : May 26, 2024, 1:06 PM IST

ಚೆನ್ನೈ(ತಮಿಳುನಾಡು): ಇಲ್ಲಿನ ಚೆಪಾಕ್​ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್​ ಫೈನಲ್​ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಆತಂಕವಿದೆ. ಕೆಲ ದಿನಗಳಿಂದ ತಮಿಳುನಾಡಿನಲ್ಲಿ ಮಳೆಯಾಗುತ್ತಿದೆ. ಶುಕ್ರವಾರ ಸುರಿದ ವರುಣನಿಂದಾಗಿ ಕೋಲ್ಕತ್ತಾ ನೈಟ್​ ರೈಡರ್ಸ್​ ಅಭ್ಯಾಸಕ್ಕೆ ನಡೆಸಲೂ ಸಾಧ್ಯವಾಗಿಲ್ಲ. ಆಟಗಾರರು ಒಳಾಂಗಣದಲ್ಲಿ ಫುಟ್ಬಾಲ್​ ಮಾತ್ರ ಆಡಿ ದೈಹಿಕ ಕಸರತ್ತು ನಡೆಸಿದರು.

ಶನಿವಾರ ಬೆಳಗ್ಗೆ ಹೈದರಾಬಾದ್​ ಅಭ್ಯಾಸ ನಡೆಸಿದ ಬಳಿಕ, ಸಂಜೆ ಕೆಕೆಆರ್​ಗೆ ಅಭ್ಯಾಸ ನಿಗದಿಯಾಗಿತ್ತು. ಆದರೆ, ಮಳೆ ಸುರಿದ ಕಾರಣ ಆಭ್ಯಾಸದ ಅವಧಿ ಮೊಟಕುಗೊಳಿಸಲಾಯಿತು. ಫೈನಲ್​ ಕದನಕ್ಕೂ ಮುನ್ನ ತಂಡಕ್ಕೆ ಮಳೆ ಅಡಚಣೆ ಉಂಟುಮಾಡಿತು.

ಕೆಂಪು ಮಣ್ಣಿನ ಪಿಚ್​ ಬಳಕೆ: ಎಸ್​ಆರ್​ಎಚ್​ ಮತ್ತು ಕೆಕೆಆರ್​ ಫೈನಲ್​ ಪಂದ್ಯಕ್ಕೆ ಕೆಂಪು ಮಣ್ಣಿನ ಪಿಚ್​ ಬಳಕೆ ಮಾಡಲಾಗುತ್ತಿದೆ. ಎರಡನೇ ಕ್ವಾಲಿಫೈಯರ್​ಗೆ ಇಲ್ಲಿ ಕಪ್ಪು ಮಣ್ಣಿನ ಪಿಚ್​ ನೀಡಲಾಗಿತ್ತು. ಇದರಿಂದ ಸ್ಪಿನ್ನರ್​ಗಳು ಪಂದ್ಯದಲ್ಲಿ ಮಿಂಚಿದ್ದರು. ಕೆಂಪು ಮಣ್ಣಿನಿಂದ ತಯಾರಿಸಲಾಗಿರುವ ಪಿಚ್​ ಬ್ಯಾಟರ್​ಗಳಿಗೆ ಹೆಚ್ಚು ನೆರವಾಗಲಿದೆ. ಹೀಗಾಗಿ ಪಂದ್ಯದಲ್ಲಿ ರನ್​ ಮಳೆ ಹರಿಯುವ ನಿರೀಕ್ಷೆ ಇದೆ.

ಕೆಕೆಆರ್​ ಮೆಂಟರ್​ ಗೌತಮ್​ ಗಂಭೀರ್ ಅವರು​ ಸಿದ್ಧಪಡಿಸಲಾದ ಈ ಪಿಚ್​ ಅನ್ನು ಹಲವು ಬಾರಿ ಪರಿಶೀಲಿಸಿದರು. ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಮತ್ತು ಬೌಲಿಂಗ್ ಕೋಚ್ ಭರತ್ ಅರುಣ್ ಅವರೂ ಜೊತೆಗಿದ್ದರು. ತುಂತುರು ಹನಿ ಬೀಳುತ್ತಿರುವ ಕಾರಣ ಪಿಚ್​ ಅನ್ನು ಕವರ್​ನಿಂದ ಮುಚ್ಚಲಾಗಿದೆ.

ಮಳೆ ಬಂದರೆ ಫಲಿತಾಂಶದ ಲೆಕ್ಕಾಚಾರ: ಬಂಗಾಳಕೊಲ್ಲಿಯಲ್ಲಿ ರೆಮಲ್ ಚಂಡಮಾರುತ ಬೀಸುತ್ತಿದೆ. ಇದರಿಂದ ಹಲವೆಡೆ ವರುಣಾರ್ಭಟ ಮುಂದುವರಿದಿದೆ. ಇಂದಿನ ಐಪಿಎಲ್​ ಫೈನಲ್​ ಪಂದ್ಯಕ್ಕೆ ಮಳೆ ಅಡ್ಡಿ ಉಂಟಾದರೆ, ನಾಳೆಗೆ ಮೀಸಲು ದಿನ ಇರಲಿದೆ. ಮೀಸಲು ದಿನದಲ್ಲಿ ಮಳೆ ಬಂದರೆ ಫಲಿತಾಂಶ ಹೇಗೆ ಎಂಬುದು ಕ್ರಿಕೆಟ್‌ಪ್ರಿಯರ ಕುತೂಹಲ.

ಪಂದ್ಯ ಸಂಜೆ 7.30ಕ್ಕೆ ಆರಂಭವಾಗಲಿದೆ. ಈ ಅವಧಿಯಲ್ಲಿ ಮಳೆ ಬಂದರೆ ಓವರ್​ ಕಡಿತ ಮಾಡುವುದಿಲ್ಲ. ರಾತ್ರಿ 9.40 ರೊಳಗೆ ಮಳೆ ನಿಂತು ಪಂದ್ಯ ಸಾಗಿದಲ್ಲಿ ನಿಗದಿತ 20 ಓವರ್​ ಆಡಿಸಲಾಗುತ್ತದೆ. ಇದರ ಬಳಿಕವೂ ಮಳೆ ಬಂದಲ್ಲಿ ಪ್ರತಿ 8 ನಿಮಿಷಕ್ಕೆ ಒಂದು ಓವರ್​ ಕಡಿತವಾಗಲಿದೆ. ಫೈನಲ್​ ಪಂದ್ಯಕ್ಕೆ 2 ಗಂಟೆ ಹೆಚ್ಚುವರಿ ಅವಧಿ ಕೂಡ ನೀಡಲಾಗಿದೆ. ಅಂದರೆ, ಟಿ20 ಪಂದ್ಯದ ಒಟ್ಟಾರೆ ನಿಗದಿತ ಸಮಯ 3 ಗಂಟೆ 15 ನಿಮಿಷ. ಹೆಚ್ಚುವರಿ ಸಮಯ ಸೇರಿ 5 ಗಂಟೆ 15 ನಿಮಿಷವಾಗಲಿದೆ. ರಾತ್ರಿ 1 ಗಂಟೆಯವರೆಗೂ ಪಂದ್ಯ ನಡೆಯಲಿದೆ.

ಆಟ ಆರಂಭವಾಗಿ ಕೆಲ ಓವರ್​ಗಳ ಬಳಿಕ ಮಳೆ ಸುರಿದು ಆಟ ನಿಂತರೆ ಮೀಸಲು ದಿನದಲ್ಲಿ ಪಂದ್ಯ ಎಲ್ಲಿ ನಿಂತಿರುತ್ತದೆಯೋ ಅಲ್ಲಿಂದಲೇ ಮುಂದುವರಿಯಲಿದೆ. ಮೀಸಲು ದಿನದಲ್ಲೂ ಎಡಬಿಡದೆ ಮಳೆ ಬಿದ್ದಲ್ಲಿ ಕನಿಷ್ಠ 5 ಓವರ್​ ಆಟಕ್ಕೆ ಮೊರೆ ಹೋಗಲಾಗುತ್ತದೆ. ಅದೂ ಕೂಡ ಸಾಧ್ಯವಾಗದಿದ್ದಲ್ಲಿ ಸೂಪರ್​ ಓವರ್​ ಆಡಿಸಲಾಗುವುದು. ಇದ್ಯಾವುದೂ ನಡೆಯದಿದ್ದಲ್ಲಿ ಲೀಗ್​ ಹಂತದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಕೆಕೆಆರ್‌ ಚಾಂಪಿಯನ್​ ಎಂದು ಘೋಷಿಸಲಾಗುತ್ತದೆ.

ಇದನ್ನೂ ಓದಿ: ಚೆನ್ನೈನಲ್ಲಿಂದು IPL ಫೈನಲ್: ಪೈಪೋಟಿಗೆ ಹೈದರಾಬಾದ್​-ಕೋಲ್ಕತ್ತಾ ರೆಡಿ; ಕೌನ್‌ ಬನೇಗಾ ಚಾಂಪಿಯನ್? - IPL Final

ETV Bharat Logo

Copyright © 2025 Ushodaya Enterprises Pvt. Ltd., All Rights Reserved.