ETV Bharat / sports

Watch: ದಯವಿಟ್ಟು ನಮ್ಮನ್ನು ಬಿಟ್ಟು ಹೋಗಬೇಡಿ ಸರ್.. ಗಂಭೀರ್ ಮುಂದೆ ಅಳಲು ತೋಡಿಕೊಂಡ ಫ್ಯಾನ್ಸ್​ - KKR fans crying - KKR FANS CRYING

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎರಡು ವರ್ಷಗಳ ಬಳಿಕ ಮತ್ತೆ ಲಯದ ಹಳಿಗೆ ಮರಳಿದ್ದಕ್ಕೆ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೋಲ್ಕತ್ತಾ ನೈಟ್ ರೈಡರ್ಸ್ ಕೋಚ್ ಮತ್ತು ಗೌತಮ್ ಗಂಭೀರ್ ಅವರ ಮುಂದೆ ಕೆಲವು ಬೇಡಿಕೆಗಳನ್ನು ತೋಡಿಕೊಂಡರು.

IPL 2024 KKR fans crying for Gautam Gambhir, said- Dont leave us watch viral video
ಗೌತಮ್ ಗಂಭೀರ್ (ETV Bharat)
author img

By ETV Bharat Karnataka Team

Published : May 11, 2024, 4:36 PM IST

ನವದೆಹಲಿ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಬಿಟ್ಟು ಹೋಗದಂತೆ ಗೌತಮ್ ಗಂಭೀರ್ ಅಭಿಮಾನಿಗಳು ಅಳಲು ತೋಡಿಕೊಂಡಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ನಾಯಕನಾಗಿ ಎರಡು ಬಾರಿ ಟ್ರೋಫಿ ಗೆದ್ದುಕೊಟ್ಟಿರುವ ಗಂಭೀರ್, ಕೆಕೆಆರ್ ಅಭಿಮಾನಿಗಳ ಹೃದಯದಲ್ಲಿ ವಿಶೇಷ ಸ್ಥಾನ ಪಡೆದ ಅನ್ನೋದರಲ್ಲಿ ಎರಡು ಮಾತಿಲ್ಲ. ಎರಡು ವರ್ಷಗಳ ನಂತರ ಅವರು ಮತ್ತೆ ತಂಡಕ್ಕೆ ಮರಳಿದ್ದಕ್ಕೆ ಅವರ ಅಭಿಮಾನಿಗಳ ಖುಷಿ ಇಮ್ಮಡಿಯಾಗಿದೆ ಅನ್ನೋದಕ್ಕೆ ಇದೊಂದು ಉದಾಹರಣೆ. ತಂಡಕ್ಕೆ ಮತ್ತೆ ವಾಪಸ್​ ಆಗಿದ್ದಕ್ಕೆ ಅವರ ಅಭಿಮಾನಿಗಳು ಈ ರೀತಿಯಲ್ಲಿ ಖುಷಿ ವ್ಯಕ್ತಪಡಿಸಿದರು.

ಸ್ವತಃ ಗೌತಮ್ ಗಂಭೀರ್ ಮುಂದೆ ಮೈಕ್ ಹಿಡಿದ ಅಭಿಮಾನಿಯೊಬ್ಬ ಅಳುತ್ತಲೇ, ಸರ್... ನಾನು ನಿಮ್ಮ ದೊಡ್ಡ ಅಭಿಮಾನಿ. ದಯವಿಟ್ಟು ನಮ್ಮನ್ನು ಬಿಟ್ಟು ಹೋಗಬೇಡಿ. ನೀವು ಇರದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ನೆನೆದರೆ ಬಹಳ ಬೇಸರ ಅನ್ನಿಸುತ್ತದೆ. ಆ ನೋವನ್ನು ವಿವರಿಸಲು ಸಾಧ್ಯವಿಲ್ಲ ಎಂದು ಹೇಳುತ್ತಲೇ ತನ್ನ ದುಃಖವನ್ನು ತೋಡಿಕೊಂಡಿದ್ದಾನೆ.

ಮತ್ತೊಬ್ಬ ಗಂಭೀರ್ ಅಭಿಮಾನಿ ಬಂಗಾಳಿ ಭಾಷೆಯ ಹಾಡು ಹಾಡಿ ಅವರ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ನೀವು ನಮ್ಮ ಹೃದಯಕ್ಕೆ ಹತ್ತಿರವಾದವರು ಹಾಗಾಗಿ, ನಿನ್ನನ್ನು ನಮ್ಮ ಹೃದಯದಲ್ಲಿ ಇಟ್ಟುಕೊಳ್ಳುತ್ತೇವೆ. ನೀವು ಎಂದಿಗೂ ನಮ್ಮನ್ನು ಕೈಬಿಡುವುದಿಲ್ಲ ಎಂಬ ವಿಶ್ವಾಸ ಇದೆ. ಮತ್ತೆ ಅಂತಹ ತೊಂದರೆ ಕೊಡಬೇಡಿ. ನಿಮ್ಮನ್ನು ಬಿಟ್ಟು ಹೋಗಲು ನಮಗೂ ಸಾಧ್ಯವಿಲ್ಲ ಎಂದು ನೋವು ಹೊರಹಾಕಿದ್ದಾನೆ.

ಅಭಿಮಾನಿಗಳ ಈ ಮನ ಕಲಕುವ ಮಾತು ಕೇಳುತ್ತಿದ್ದ ಗೌತಮ್ ಗಂಭೀರ್ ಒಂದು ಕ್ಷಣ ಮೌನವಾಗಿದ್ದರು. ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕೂಡ ಇದಕ್ಕೆ ಪ್ರತಿಕ್ರಿಯಿಸುತ್ತಿದ್ದಾರೆ. ಗಂಭೀರ್ ಎರಡು ವರ್ಷಗಳ ಹಿಂದೆ ಕೋಲ್ಕತ್ತಾವನ್ನು ತೊರೆದು ಲಕ್ನೋ ಸೂಪರ್‌ ಜೈಂಟ್ಸ್‌ನ ಮಾರ್ಗದರ್ಶಕರಾಗಿದ್ದರು. ಆಗ ಕೋಲ್ಕತ್ತಾ ಟಾಪ್-4ಕ್ಕೆ ಬರಲು ಸಹ ಸಾಧ್ಯವಾಗಲಿಲ್ಲ. ಎರಡೂ ವರ್ಷ ಏಳನೇ ಸ್ಥಾನದಲ್ಲಿತ್ತು. ಇದಕ್ಕೂ ಮೊದಲು ಗಂಭೀರ್ ನಾಯಕತ್ವದಲ್ಲಿ ಕೋಲ್ಕತ್ತಾ ಉತ್ತಮ ಪ್ರದರ್ಶನ ನೀಡುತ್ತಿತ್ತು. ಸದ್ಯ ಅವರು ಮತ್ತೆ ವಾಪಸ್​ ಆಗಿದ್ದರಿಂದ ಕೋಲ್ಕತ್ತಾ ಮತ್ತೊಮ್ಮೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜೊತೆಗೆ ಅದ್ಭುತ ಪ್ರದರ್ಶನ ಕೂಡ ನೀಡುತ್ತಿದೆ. ಈ ತಂಡ ಇದುವರೆಗೆ ಆಡಿರುವ 11 ಪಂದ್ಯಗಳಲ್ಲಿ 8 ರಲ್ಲಿ ಗೆಲುವು ಸಾಧಿಸಿದೆ.

ಇದನ್ನೂ ಓದಿ: IPL: ಗಿಲ್​, ಸಾಯಿ ಸುದರ್ಶನ್​ ಅಬ್ಬರಕ್ಕೆ ಮಣಿದ ಚೆನ್ನೈ: ಗಾಯಕ್ವಾಡ್​ ಪಡೆಗೆ ಪ್ಲೇ ಆಫ್​​ ಹಾದಿ ಕಠಿಣ - GT Beat CSK

ETV Bharat Logo

Copyright © 2024 Ushodaya Enterprises Pvt. Ltd., All Rights Reserved.