ETV Bharat / sports

ಐಪಿಎಲ್​ 2024: ಮೇ 26 ರಂದು ಚೆನ್ನೈನಲ್ಲಿ ಫೈನಲ್​ ಸೇರಿ ಬಾಕಿ ಪಂದ್ಯಗಳ ವೇಳಾಪಟ್ಟಿ ಪ್ರಕಟ - ipl 2024

17ನೇ ಆವೃತ್ತಿಯ ಐಪಿಎಲ್​ನ ಫೈನಲ್​ ಸೇರಿದಂತೆ ಉಳಿದ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ.

ಐಪಿಎಲ್​ 2024
ಐಪಿಎಲ್​ 2024
author img

By ETV Bharat Karnataka Team

Published : Mar 25, 2024, 8:05 PM IST

ಹೈದರಾಬಾದ್: ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಎರಡನೇ ವೇಳಾಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಲಾಗಿದೆ. ಉಳಿದ ಪಂದ್ಯಗಳು, ಸೆಮಿಫೈನಲ್​, ಫೈನಲ್​ ಪಂದ್ಯವನ್ನು ಘೋಷಿಸಲಾಗಿದೆ. ಫೈನಲ್ ಪಂದ್ಯವು ಮೇ 26 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.

ಐಪಿಎಲ್​ನ 17ನೇ ಆವೃತ್ತಿ ಸೇರಿದಂತೆ ಮೂರನೇ ಬಾರಿಗೆ ಚೆನ್ನೈ ಕ್ರೀಡಾಂಗಣದಲ್ಲಿ ಫೈನಲ್​ ನಡೆಸಲಾಗುತ್ತಿದೆ. 2012 ರಲ್ಲಿ ನಡೆದ ಫೈನಲ್​ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಡೆದಿತ್ತು. ಗೌತಮ್ ಗಂಭೀರ್​ ನೇತೃತ್ವದ ಕೆಕೆಆರ್​ ಗೆಲುವು ಸಾಧಿಸಿತ್ತು. 12 ವರ್ಷಗಳ ಬಳಿಕ ಮತ್ತೆ ಚೆನ್ನೈಗೆ ಫೈನಲ್​ ಪಂದ್ಯ ಆಯೋಜಿಸುವ ಅವಕಾಶ ಸಿಕ್ಕಿದೆ.

ಪಂದ್ಯಾವಳಿಯ ನಾಕೌಟ್ ಹಂತವು ಮೇ 21 ರಂದು ಪ್ರಾರಂಭವಾಗುತ್ತದೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ 2 ತಂಡಗಳು ಕ್ವಾಲಿಫೈಯರ್ 1 ನಲ್ಲಿ ತಮ್ಮ ಸ್ಥಾನವನ್ನು ಫೈನಲ್‌ನಲ್ಲಿ ಕಾಯ್ದಿರಿಸಲು ಪರಸ್ಪರ ಸೆಣಸಲಿವೆ. ಎಲಿಮಿನೇಟರ್ ಪಂದ್ಯ ಮೇ 22 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಕ್ವಾಲಿಫೈಯರ್ 2 ಪಂದ್ಯ ಮೇ 24 ರಂದು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಪ್ಲೇಆಫ್ ಸೇರಿದಂತೆ ಉಳಿದ 52 ಪಂದ್ಯಗಳು ಏಪ್ರಿಲ್ 8 ರಿಂದ ಪ್ರಾರಂಭವಾಗಲಿವೆ. ಎರಡನೇ ಹಂತದ ಮೊದಲ ಪಂದ್ಯವು ಸಿಎಸ್​ಕೆ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಚೆನ್ನೈನಲ್ಲಿ ಪಂದ್ಯ ನಡೆಯಲಿದೆ. 17ನೇ ಆವೃತ್ತಿಯಲ್ಲಿ ಲೀಗ್ ಹಂತದ 11 ಪಂದ್ಯಗಳು ಒಂದು ದಿನದಲ್ಲಿ ಎರಡು ಪಂದ್ಯಗಳು ನಡೆಯಲಿವೆ.

10 ತಂಡಗಳ ತವರು ಕ್ರೀಡಾಂಗಣವಲ್ಲದೇ, ಪಂದ್ಯಾವಳಿಯು ವಿಶಾಖಪಟ್ಟಣಂ, ಧರ್ಮಶಾಲಾ ಮತ್ತು ಗುವಾಹಟಿಯಲ್ಲೂ ನಡೆಯಲಿದೆ. ಇವುಗಳು ದೆಹಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್‌ನ ಎರಡನೇ ತವರು ಮೈದಾನವಾಗಿ ತಲಾ ಎರಡು ಪಂದ್ಯಗಳನ್ನು ನಡೆಯಲಿವೆ. ಮೇ 19 ರಂದು ರಾಜಸ್ಥಾನ್ ರಾಯಲ್ಸ್ ಮತ್ತು ಕೆಕೆಆರ್​ ನಡುವೆ ಸೀಸನ್‌ನ ಅಂತಿಮ ಲೀಗ್ ಪಂದ್ಯವನ್ನು ಗುವಾಹಟಿಯಲ್ಲಿ ಜರುಗಲಿದೆ.

ಭಾರತದಲ್ಲೇ ಐಪಿಎಲ್​: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಐಪಿಎಲ್​ನ ಎರಡನೇ ಹಂತದ ಪಂದ್ಯಗಳನ್ನು ವಿದೇಶದಲ್ಲಿ ಆಡಿಸಲಾಗುತ್ತದೆ ಎಂಬ ಊಹಾಪೋಹ ಕೇಳಿ ಬಂದಿತ್ತು. ಇದಕ್ಕೆ ಉತ್ತರ ನೀಡಿದ್ದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, 2024 ರ ಲೋಕಸಭಾ ಚುನಾವಣೆಯ ನಡುವೆ ಐಪಿಎಲ್‌ನ ಎಲ್ಲ 74 ಪಂದ್ಯಗಳನ್ನು ಭಾರತದಲ್ಲಿ ನಡೆಯಲಿವೆ. ನಾವು ಉಳಿದಿರುವ ಪಂದ್ಯಗಳ ವೇಳಾಪಟ್ಟಿಯನ್ನು ಶೀಘ್ರದಲ್ಲೇ ರೂಪಿಸಿ ಪ್ರಕಟಿಸುತ್ತೇವೆ ಎಂದು ತಿಳಿಸಿದ್ದರು.

ಐಪಿಎಲ್‌ನ ಮೊದಲ 2 ವಾರಗಳ ವೇಳಾಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಮಾರ್ಚ್ 22 ರಿಂದ ಆರಂಭವಾಗಿರುವ ಐಪಿಎಲ್ 2024 ರ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಗಳು ಸೆಣಸಾಡಿದ್ದವು. ಅದಲ್ಲಿ ಆರ್​ಸಿಬಿ ಸೋಲು ಕಂಡಿತ್ತು.

ಇದನ್ನೂ ಓದಿ; ಐಪಿಎಲ್ 2024: ಪ್ಲೇ ಆಫ್‌ ತಲುಪುವ 4 ತಂಡಗಳ ಭವಿಷ್ಯ ನುಡಿದ ದಿಗ್ಗಜ ಕ್ರಿಕೆಟಿಗರು - IPL 2024 play offs

ETV Bharat Logo

Copyright © 2024 Ushodaya Enterprises Pvt. Ltd., All Rights Reserved.