ETV Bharat / sports

ವಿಶ್ವಕಪ್​​ ಅರ್ಚರಿ 2024: ಬಿಲ್ವಿದ್ಯೆಯಲ್ಲಿ ಭಾರತ ಮಹಿಳಾ ತಂಡಕ್ಕೆ ಹ್ಯಾಟ್ರಿಕ್​ ಚಿನ್ನ - World Cup gold medals

ಅರ್ಚರಿ ವಿಶ್ವಕಪ್​ನಲ್ಲಿ ಭಾರತದ ವನಿತೆಯರು ಹ್ಯಾಟ್ರಿಕ್​ ಚಿನ್ನದ ಸಾಧನೆ ಮಾಡಿದ್ದಾರೆ. ಶಾಂಘೈ ಮತ್ತು ಯೆಚಿಯೋನ್‌ನಲ್ಲಿ ನಡೆದ ಎರಡು ಹಂತದ ವಿಶ್ವಕಪ್​ನಲ್ಲೂ ಅಗ್ರಸ್ಥಾನ ಪಡೆದಿದ್ದರು.

author img

By PTI

Published : Jun 22, 2024, 5:22 PM IST

Updated : Jun 22, 2024, 5:51 PM IST

ಬಿಲ್ವಿದ್ದೆಯಲ್ಲಿ ಭಾರತ ಮಹಿಳಾ ತಂಡಕ್ಕೆ ಹ್ಯಾಟ್ರಿಕ್​ ಚಿನ್ನ
ಬಿಲ್ವಿದ್ದೆಯಲ್ಲಿ ಭಾರತ ಮಹಿಳಾ ತಂಡಕ್ಕೆ ಹ್ಯಾಟ್ರಿಕ್​ ಚಿನ್ನ (IANS Photos)

ಅಂಟಲ್ಯ (ಟರ್ಕಿ): ಅರ್ಚರಿ (ಬಿಲ್ಲುಗಾರಿಕೆ)ಯಲ್ಲಿ ಭಾರತ ಮಹಿಳಾ ತಂಡ ಸೋಲಿಲ್ಲದ ಸರದಾರನಂತೆ ಸಾಗುತ್ತಿದೆ. ಅರ್ಚರಿ ವಿಶ್ವಕಪ್​ನ ಮೂರನೇ ಹಂತದಲ್ಲೂ ಕಾಂಪೌಂಡ್​ ವಿಭಾಗದಲ್ಲಿ ಗೆಲುವು ಸಾಧಿಸಿ ಹ್ಯಾಟ್ರಿಕ್​ ಚಿನ್ನದ ಸಾಧನೆ ಮಾಡಿದೆ.

ಶನಿವಾರ ಇಲ್ಲಿ ನಡೆದ ಫೈನಲ್​ನಲ್ಲಿ ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರಿದ್ದ ತಂಡವು ಎಸ್ಟೋನಿಯಾದ ಲಿಸೆಲ್ ಜಾತ್ಮಾ, ಮೀರಿ ಮರಿಟಾ ಪಾಸ್ ಮತ್ತು ಮಾರಿಸ್ ಟೆಟ್ಸ್‌ಮನ್ ಅವರನ್ನು 232-229 ಅಂಕಗಳಿಂದ ಸೋಲಿಸಿದರು. ಈ ಮೂಲಕ ಋತುವಿನಲ್ಲಿ ಸತತ ಮೂರನೇ ಚಿನ್ನವನ್ನು ಗೆದ್ದುಕೊಂಡಿತು.

ವಿಶ್ವಕಪ್​ನಲ್ಲಿ ಅಗ್ರ ಶ್ರೇಯಾಂಕ ಹೊಂದಿದ್ದ ಭಾರತ ವನಿತೆಯರ ತಂಡಕ್ಕೆ, ಎಸ್ಟೋನಿಯಾ ವನಿತೆಯರು ಯಾವುದೇ ಹಂತದಲ್ಲಿ ಸವಾಲಾಗಲಿಲ್ಲ. ಸತತ ಅಂಕ ಗಳಿಸುತ್ತಾ ಸಾಗಿದ ಭಾರತೀಯರು ಗೆಲುವಿನ ನಗೆ ಬೀರಿದರು. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಶಾಂಘೈ ಮತ್ತು ಯೆಚಿಯೋನ್‌ನಲ್ಲಿ ನಡೆದ ವಿಶ್ವಕಪ್ ಹಂತ 1 ಮತ್ತು ಹಂತ 2 ರಲ್ಲಿ ಚಿನ್ನದ ಪದಕಗಳನ್ನು ಗೆದ್ದಿತ್ತು.

ಇನ್ನೊಂದು ಪಂದ್ಯದಲ್ಲಿ ಭಾರತದ ಪುರುಷರ ಕಾಂಪೌಂಡ್ ಬಿಲ್ಲುಗಾರ ಪ್ರಿಯಾಂಶ್ ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ. ರಿಕರ್ವ್ ವಿಭಾಗದಲ್ಲಿ ಅಂಕಿತಾ ಭಕತ್ ಮತ್ತು ಧೀರಜ್ ಬೊಮ್ಮದೇವರ ಕೂಡ ವೈಯಕ್ತಿಕ ವಿಭಾಗದಲ್ಲಿ ಸೆಮಿಫೈನಲ್‌ ತಲುಪಿದ್ದಾರೆ. ಇದರಿಂದ ವಿಶ್ವಕಪ್​ನಲ್ಲಿ ಇನ್ನೆರಡು ಪದಕಗಳು ಖಾತ್ರಿಯಾಗಿವೆ.

ಇದನ್ನೂ ಓದಿ: ಆಗಸ್ಟ್ 15ರಿಂದ ಮೂರನೇ ಆವೃತ್ತಿಯ ಮಹಾರಾಜ ಟ್ರೋಫಿ ಟಿ20 ಕ್ರಿಕೆಟ್‌ ಟೂರ್ನಿ - Maharaja Trophy

Last Updated : Jun 22, 2024, 5:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.