ನವದೆಹಲಿ: ಬಾಂಗ್ಲಾದೇಶ ವಿರುದ್ದದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದೆ. ಮಳೆ ಬಾಧಿತ ಕಾನ್ಪುರ ಟೆಸ್ಟ್‌ನಲ್ಲಿ ಭಾರತ ಅಮೋಘ ಪ್ರದರ್ಶನ ನೀಡುವ ಮೂಲಕ ಡ್ರಾದಿಂದ ಪಾರಾಗಿದ್ದು, ಮಾತ್ರವಲ್ಲದೇ 7 ವಿಕೆಟ್‌ಗಳಿಂದ ಜಯಭೇರಿ ಬಾರಿಸಿದೆ. ಈ ಗೆಲುವಿನೊಂದಿಗೆ ಭಾರತ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿದೆ.
ಎರಡನೇ ಇನ್ನಿಂಗ್ಸ್ನಲ್ಲಿ 146 ರನ್ಗಳಿಗೆ ಸರ್ವಪತನ ಕಂಡಿದ್ದ ಬಾಂಗ್ಲಾ ತಂಡ ಭಾರತಕ್ಕೆ 95 ರನ್ಗಳ ಸಾಮಾನ್ಯ ಗುರಿಯನ್ನು ನೀಡಿತು. ಇದನ್ನು ಬೆನ್ನಟ್ಟಿದ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡು ಗುರಿ ತಲುಪುವ ಮೂಲಕ ಗೆಲುವಿನ ನಗೆ ಬೀರಿತು. ಭಾರತದ ಪರ ಎರಡನೇ ಇನ್ನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ (51) ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
18ನೇ ಸರಣಿ ಗೆದ್ದ ಭಾರತ: ಬಾಂಗ್ಲಾ ವಿರುದ್ದ ಸರಣಿ ಗೆಲ್ಲುತ್ತಿದ್ದಂತೆ ಭಾರತ ತವರಿನಲ್ಲಿ ಗೆಲುವಿನ ಓಟ ಮುಂದುವರೆಸಿದೆ. ಇದು ತವರಿನಲ್ಲಿ ಭಾರತಕ್ಕೆ ಸತತ 18ನೇ ಸರಣಿ ಗೆಲುವಾಗಿದೆ. 2012-13ರಿಂದ ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಭಾರತ ಒಂದೇ ಒಂದು ಸೋಲನ್ನು ಕಂಡಿಲ್ಲ.
Rishabh Pant hits the winning runs 💥
— BCCI (@BCCI) October 1, 2024
He finishes off in style as #TeamIndia complete a 7-wicket win in Kanpur 👏👏
Scorecard - https://t.co/JBVX2gyyPf#INDvBAN | @IDFCFIRSTBank pic.twitter.com/Nl2EdZS9VF
ಪಂದ್ಯದ ಹೈಲೈಟ್ಸ್: ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತ್ತು. ಈ ಟೆಸ್ಟ್ನ ಮೊದಲ ದಿನ ಮಳೆಯಿಂದಾಗಿ ಕೇವಲ 35 ಓವರ್‌ಗಳು ಆಟ ಮಾತ್ರ ನಡೆದಿತ್ತು, ನಂತರ ಎರಡು ಮತ್ತು ಮೂರನೇ ದಿನ ಸಂಪೂರ್ಣವಾಗಿ ಮಳೆಗಾಹುತಿಯಾಗಿತ್ತು. 4ನೇ ದಿನ ಮಳೆರಾಯ ಬಿಡುವು ನೀಡಿದ್ದರಿಂದ ಪಂದ್ಯವನ್ನು ಮುಂದುವರೆಸಲಾಯಿತು. ಮೊದಲ ಇನ್ನಿಂಗ್ಸ್ನಲ್ಲಿ ಬಾಂಗ್ಲಾ 233 ರನ್ಗಳಿಗೆ ಆಲೌಟ್ ಆಗಿತ್ತು. ಇದಕ್ಕುತ್ತರವಾಗಿ ಭಾರತ 285/9 ರನ್ಗಳಿಗೆ ಡಿಕ್ಲೇರ್ ಮಾಡಿಕೊಂಡಿತು ಮತ್ತು 52 ರನ್ಗಳ ಮುನ್ನಡೇ ಸಾಧಿಸಿತು.
Yashasvi Jaiswal registers back to back fifties as #TeamIndia complete a successful chase in Kanpur 👏👏
— BCCI (@BCCI) October 1, 2024
Scorecard - https://t.co/JBVX2gyyPf#INDvBAN | @IDFCFIRSTBank pic.twitter.com/TKvJCkIPYU
ಎರಡನೇ ಇನ್ನಿಂಗ್ಸ್ಗೆ ಬ್ಯಾಟಿಂಗ್ ಬಂದ ಬಾಂಗ್ಲಾ 146 ರನ್ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು. ಜತೆಗೆ ಭಾರತಕ್ಕೆ 95 ರನ್ಗಳ ಗುರಿಯನ್ನು ನೀಡಿತು. ಈ ಸಾಮಾನ್ಯ ಗುರಿಯನ್ನು ಬೆನ್ನತಿದ ಟೀಂ ಇಂಡಿಯಾ ಜೈಸ್ವಾಲ್ ಅವರ ಅರ್ಧಶತಕ ನೆರವಿನಿಂದ 3 ವಿಕೆಟ್ ಕಳೆದುಕೊಂಡು ಕಪ್ ಗೆದ್ದುಕೊಂಡಿತಿ. ಇದರೊಂದಿಗೆ ಭಾರತ ಎರಡು ಟೆಸ್ಟ್‌ಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.