ನ್ಯೂಯಾರ್ಕ್: ಐಸಿಸಿ ಪುರುಷರ ಟಿ20 ವಿಶ್ವಕಪ್ 2024ರ ಅಭ್ಯಾಸ ಪಂದ್ಯದಲ್ಲಿ ಭಾರತ 60 ರನ್‌ಗಳಿಂದ ಬಾಂಗ್ಲಾದೇಶ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದೆ. ಶನಿವಾರ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ನೀಡಿದ್ದ 183 ರನ್‌ಗಳ ಗುರಿ ಬೆನ್ನುಹತ್ತಿದ್ದ ಬಾಂಗ್ಲಾ 9 ವಿಕೆಟ್ ಕಳೆದುಕೊಂಡು 122 ರನ್ ಗಳಿಸಲಷ್ಟೇ ಶಕ್ತವಾಯಿತು.
ಬಾಂಗ್ಲಾ ಪರ ಮಹಮುದುಲ್ಲಾ ರಿಯಾದ್ (40) ಮತ್ತು ಶಕೀಬ್ ಅಲ್ ಹಸನ್ (28) ರನ್ ಗಳಿಸಿದರು. ಭಾರತದ ಪರ ಶಿವಂ ದುಬೆ ಮತ್ತು ಅರ್ಷದೀಪ್ ಸಿಂಗ್ ತಲಾ ಎರಡು ವಿಕೆಟ್ ಪಡೆದರೇ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಉರುಳಿಸಿದರು.
ಇದಕ್ಕೂ ಮೊದಲು ಟಾಸ್ ಗೆದ್ದ ಬ್ಯಾಟ್ ಮಾಡಿದ್ದ ಭಾರತ, ಐದು ವಿಕೆಟ್‌ಗೆ 182 ರನ್ ಕಲೆಹಾಕಿತ್ತು. ತಂಡದ ಪರ, ರಿಷಬ್ ಪಂತ್ (53) ಬಿರುಸಿನ ಬ್ಯಾಟ್ ಮೂಲಕ ಅರ್ಧ ಶತಕ ಪೂರೈಸಿದರೇ, ಹಾರ್ದಿಕ್ ಪಾಂಡ್ಯ 23 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿ ಸಮೇತ ಅಜೇಯ 40 ರನ್ ಚಚ್ಚಿದರು. ಉಳಿದಂತೆ ಸೂರ್ಯಕುಮಾರ್ ಯಾದವ್ (31), ನಾಯಕ ರೋಹಿತ್ ಶರ್ಮಾ (23) ರನ್ ಗಳಿಸಿದರು. ಬಾಂಗ್ಲಾದೇಶ ಪರ ಮಹೆದಿ ಹಸನ್, ಶೋರಿಫುಲ್ ಇಸ್ಲಾಂ, ಮಹಮ್ಮದುಲ್ಲಾ ಮತ್ತು ತನ್ವೀರ್ ಇಸ್ಲಾಂ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ಟಿ20 ವಿಶ್ವಕಪ್ ಅಧಿಕೃತ ಪ್ರಾರಂಭ: ಮೊದಲ ಪಂದ್ಯದಲ್ಲಿ ಕೆನಡಾ-ಯುಎಸ್ ಫೈಟ್ - T20 WORLD CUP