ETV Bharat / sports

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸರಣಿ ಕ್ಲೀನ್​ಸ್ವೀಪ್​: ಇದು 'ಸ್ಮೃತಿ'ಯಲ್ಲಿ ಉಳಿಯುವ ಟೂರ್ನಿ - INDW vs SAW match

author img

By ETV Bharat Karnataka Team

Published : Jun 23, 2024, 9:12 PM IST

ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ ಭಾರತೀಯ ವನಿತೆಯರು ಏಕದಿನ ಸರಣಿ ಕ್ಲೀನ್​ಸ್ವೀಪ್​ ಸಾಧಿಸಿದರು. ಸ್ಮೃತಿ ಮಂಧಾನ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸರಣಿ ಕ್ಲೀನ್​ಸ್ವೀಪ್
ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಸರಣಿ ಕ್ಲೀನ್​ಸ್ವೀಪ್ (X video grab)

ಬೆಂಗಳೂರು: ದಕ್ಷಿಣ ಆಫ್ರಿಕಾ ವನಿತೆಯರ ವಿರುದ್ಧ ನಡೆದ ಮೂರನೇ ಮತ್ತು ಕೊನೆಯ ಪಂದ್ಯವನ್ನು 6 ವಿಕೆಟ್​ಗಳಿಂದ ಗೆಲ್ಲುವ ಮೂಲಕ ಭಾರತದ ವನಿತೆಯರು ಏಕದಿನ ಸರಣಿಯನ್ನು 3-0 ಅಂತರದಿಂದ ಸರಣಿ ಕ್ಲೀನ್​ಸ್ವೀಪ್ ಮಾಡಿದರು.

ಮೂರು ಪಂದ್ಯಗಳ ಏಕದಿನ ಸರಣಿಗೆ ಆತಿಥ್ಯ ವಹಿಸಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ವನಿತೆಯರು ಚಿನ್ನದ ಬೆಳೆ ಬೆಳೆದರು. ಸತತ ಮೂರು ಪಂದ್ಯಗಳಲ್ಲಿ ಪಾರಮ್ಯ ಮೆರೆಯುವ ಮೂಲಕ ತಾಯ್ನಾಡಿನಲ್ಲಿ ತಾವು ಎಷ್ಟು ಬಲವಂತರು ಎಂಬುದನ್ನು ಸಾಬೀತು ಮಾಡಿದರು.

ಸ್ಮೃತಿ ಮಂಧಾನ ಒನ್​​ವುಮನ್​ ಶೋ: ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವನಿತೆಯರಿಗೆ ಇನ್ನಿಲ್ಲದಂತೆ ಕಾಡಿದ್ದು, ಭಾರತ ತಂಡದ ಹಿರಿಯ ಬ್ಯಾಟರ್​ ಸ್ಮೃತಿ ಮಂಧಾನ. ಚಿನ್ನಸ್ವಾಮಿಯಲ್ಲಿ ತಮ್ಮ ಬ್ಯಾಟಿಂಗ್​ ಝಲಕ್​ ತೋರಿಸಿದ ಅವರು, ಮೊದಲೆರಡು ಪಂದ್ಯಗಳಲ್ಲಿ ಸತತ ಶತಕ ಬಾರಿಸಿದರು. ಮೂರನೇ ಪಂದ್ಯದಲ್ಲಿ ಶತಕದ ಅಂಚಿನಲ್ಲಿ (90) ಎಡವಿ ಮೂರನೇ ಹಂಡ್ರೆಡ್​ನಿಂದ ತಪ್ಪಿಸಿಕೊಂಡರು. ಮೊದಲ ಪಂದ್ಯದಲ್ಲಿ 117, ಎರಡನೇ ಪಂದ್ಯದಲ್ಲಿ 136 ರನ್​ ಗಳಿಸಿದ್ದರು.

6 ವಿಕೆಟ್​ಗಳ ಜಯ: ಮೂರನೇ ಪಂದ್ಯದಲ್ಲಿ ಭಾರತ ವನಿತೆಯರು ಪ್ರಯಾಸವಿಲ್ಲದೇ ಗೆಲುವು ಸಾಧಿಸಿದರು. ಮೊದಲು ಬ್ಯಾಟ್​ ಮಾಡಿದ ದಕ್ಷಿಣ ಆಫ್ರಿಕಾ ವನಿತೆಯರು 50 ಓವರ್​ಗಳಲ್ಲಿ 8 ವಿಕೆಟ್​ಗೆ 215 ರನ್​ ಗುರಿ ನೀಡಿದರು. ಭಾರತ 40.4 ಓವರ್​ಗಳಲ್ಲಿ 220 ರನ್​ ಗಳಿಸಿ ಗೆಲುವಿನ ಕೇಕೆ ಹಾಕಿತು. ಇದಕ್ಕೆ ಕಳೆದುಕೊಂಡಿದ್ದು ನಾಲ್ಕು ವಿಕೆಟ್​ಗಳು ಮಾತ್ರ.

ಕೊನೆಯ ಪಂದ್ಯದಲ್ಲಿ ರನ್​ ಮಳೆ ಹರಿಸಿದ ಸ್ಮೃತಿ ಮಂಧಾನ ಶತಕ ವಂಚಿತರಾದರು. 83 ಎಸೆತಗಳಲ್ಲಿ 11 ಬೌಂಡರಿಗಳ ಸಮೇತ 90 ರನ್​ ಗಳಿಸಿದರು. ಶೆಫಾಲಿ ವರ್ಮಾ 25, ಪ್ರಿಯಾ ಪೂನಿಯಾ 28, ನಾಯಕಿ ಹರ್ಮನ್​ಪ್ರೀತ್​ ಕೌರ್​ 42 ಗಳಿಸಿದರು. ಕೊನೆಯಲ್ಲಿ ಜೆಮಿಮಾ ರೋಡ್ರಿಗಸ್​ 19, ರಿಚಾ ಘೋಷ್​ 6 ರನ್​ ಗಳಿಸಿ ಗೆಲುವಿನ ಶಾಸ್ತ್ರ ಮುಗಿಸಿದರು.

ಇದಕ್ಕೂ ಮೊದಲು ಬ್ಯಾಟ್​ ಮಾಡಿದ್ದ ದಕ್ಷಿಣ ಆಫ್ರಿಕಾಕ್ಕೆ ನಾಯಕಿ ಲೌರಾ ವಾಲ್ವಾರ್ಟ್​ 61, ತಜ್ಮಿನ್​ ಬ್ರಿಟ್ಸ್​ 38, ನದಿನೆ ಡಿ ಕ್ಲರ್ಕ್​ 26, ಮೀಕಿ ಡಿ ರಿಡ್ಡರ್​ 26 ರನ್​ ಗಳಿಸಿ ತಂಡಕ್ಕೆ ನೆರವಾದರು. ಭಾರತದ ಬೌಲಿಂಗ್​ ಪಡೆಯ ಬಿಗಿದಾಳಿಗೆ ನಲುಗಿದ ಹರಿಣಗಳ ನಾಡಿನ ಪಡೆ ರನ್​ ಗಳಿಸಲು ಪರದಾಡಿತು. ಅರುಂಧರಿ ರೆಡ್ಡಿ, ದೀಪ್ತಿ ಶರ್ಮಾ ತಲಾ 2, ಶ್ರೇಯಾಂಕ ಪಾಟೀಲ್​, ಪೂಜಾ ವಸ್ತ್ರಕಾರ್​ ತಲಾ 1 ವಿಕೆಟ್​ ಪಡೆದರು.

ಜೂನ್​ 28 ರಿಂದ ಜುಲೈ 1 ರವರೆಗೂ ಏಕೈಕ ಟೆಸ್ಟ್​ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಾದ ಬಳಿಕ ಮೂರು ಪಂದ್ಯಗಳ ಟಿ20 ಸರಣಿ ಕೂಡ ಇದೆ.

ಇದನ್ನೂ ಓದಿ: ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವೇಗಿ ಪ್ಯಾಟ್​ ಕಮಿನ್ಸ್​ 'ಹ್ಯಾಟ್ರಿಕ್​' ವಿಶ್ವದಾಖಲೆ - pat Cummins hat tricks

ETV Bharat Logo

Copyright © 2024 Ushodaya Enterprises Pvt. Ltd., All Rights Reserved.