ಪಲ್ಲೆಕಲೆ(ಶ್ರೀಲಂಕಾ): ಭಾರತ ಮತ್ತು ಶ್ರೀಲಂಕಾ ನಡುವಿನ 3 ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯ ಇಂದು ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಪಂದ್ಯ ಗೆದ್ದು ಬೀಗಿರುವ ಟೀಂ ಇಂಡಿಯಾ ಈ ಪಂದ್ಯವನ್ನೂ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ.
India take a 1-0 lead in the series with a clinical victory 🙌#SLvIND: https://t.co/CPxoJ8LlRJ pic.twitter.com/VuCtkyv4XB
— ICC (@ICC) July 27, 2024
ನಿನ್ನೆಯ ಪಂದ್ಯದಲ್ಲಿ ಸೂರ್ಯ ಕುಮಾರ್ ಯಾದವ್ ನಾಯಕತ್ವದ ಟೀಂ ಇಂಡಿಯಾ, ಶ್ರೀಲಂಕಾವನ್ನು 43 ರನ್‌ಗಳಿಂದ ಸೋಲಿಸಿತು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ, ಶ್ರೀಲಂಕಾ ತಂಡಕ್ಕೆ 214 ರನ್‌ಗಳ ಗುರಿ ನೀಡಿತು. ಬೌಲರ್‌ಗಳು ಈ ಸ್ಕೋರ್ ಅನ್ನು ಯಶಸ್ವಿಯಾಗಿ ರಕ್ಷಿಸಿಕೊಂಡರು.
A new chapter begins for Gautam Gambhir and India 📖#SLvIND pic.twitter.com/857B6s7rps
— ICC (@ICC) July 27, 2024
ಶ್ರೀಲಂಕಾ 19.2 ಓವರ್‌ಗಳಲ್ಲಿ 170 ರನ್ ಗಳಿಗೆ ಸರ್ವಪತನ ಕಂಡು ಸೋಲು ಅನುಭವಿಸಿತು. ಹಾಗಾಗಿ, ಲಂಕಾ ತಂಡಕ್ಕೆ ಸರಣಿ ಜೀವಂತ ಉಳಿಸಿಕೊಳ್ಳಲು ಇಂದಿನ ಪಂದ್ಯ ಮಹತ್ವದ್ದಾಗಿದೆ. ಭಾರತೀಯ ಕಾಲಮಾನ ಸಂಜೆ 7ಕ್ಕೆ ಪಂದ್ಯ ಆರಂಭವಾಗಲಿದ್ದು, ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ವೀಕ್ಷಿಸಬಹುದು.
ತಂಡಗಳ ಬಲಾಬಲ: ವೇಗಿಗಳಾದ ಅರ್ಷ್‌ದೀಪ್ ಮತ್ತು ಸಿರಾಜ್ ಜೊತೆ ಮೂವರು ಸ್ಪಿನ್ನರ್‌ಗಳೊಂದಿಗೆ ಭಾರತ ಕಣಕ್ಕಿಳಿಯುವ ಸಾಧ್ಯತೆ ಇದೆ. ಬ್ಯಾಟಿಂಗ್‌ನಲ್ಲಿ ಗಿಲ್ ಮತ್ತು ಜೈಸ್ವಾಲ್ ಆರಂಭಿಕರಾಗಿ ಕಣಕ್ಕಿಳಿದರೆ, ರಿಂಕು ಸಿಂಗ್ ಫಿನಿಶರ್ ಕೆಲಸ ಪೂರೈಸುವರು. ಪಂತ್ ಮತ್ತು ಸ್ಯಾಮ್ಸನ್ ಮಧ್ಯಮ ಕ್ರಮಾಂಕಕ್ಕೆ ಬಲ ನೀಡಬಲ್ಲರು.
The white-ball series against India kicks off TODAY! Let's get behind our Lions and show our unwavering support. #SLvIND pic.twitter.com/y3KhdV4PtU
— Sri Lanka Cricket 🇱🇰 (@OfficialSLC) July 27, 2024
ಇನ್ನು, ಕುಸಾಲ್ ಮೆಂಡಿಸ್, ಅವಿಷ್ಕಾ ಫೆರ್ನಾಂಡೋ, ದಿನೇಶ್ ಚಾಂಡಿಮಲ್ ಮತ್ತು ಪಾತುಮ್ ನಿಸ್ಸಾಂಕಾ ಅವರನ್ನೊಳಗೊಂಡ ಲಂಕಾ ಶಕ್ತಿಶಾಲಿ ಬ್ಯಾಟಿಂಗ್ ಲೈನ್‌ಅಪ್ ಹೊಂದಿದೆ. ಬೌಲಿಂಗ್ ವಿಭಾಗದಲ್ಲಿ ಪ್ರಮುಖರಾದ ಪತಿರಣ, ತೀಕ್ಷಣ ಮತ್ತು ಹಸರಂಗ ಇದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ವಿರುದ್ಧ ಮೊದಲ ಟಿ20 ಗೆದ್ದ ಟೀಂ ಇಂಡಿಯಾ; ಗಂಭೀರ್-ಸೂರ್ಯ ಹೊಸ ಯುಗಾರಂಭ - India Beat Sri Lanka