ETV Bharat / sports

ಇಂಗ್ಲೆಂಡ್ vs ಭಾರತ ಟೆಸ್ಟ್‌ ಸರಣಿ: ಪಂದ್ಯಗಳು ಯಾವಾಗ, ಎಲ್ಲಿ? - India vs England Test Series

ಮುಂದಿನ ವರ್ಷ 5 ಟೆಸ್ಟ್​ ಪಂದ್ಯಗಳ ಸರಣಿಗೆ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್​ ಪ್ರವಾಸ ಕೈಗೊಳ್ಳಲಿದೆ. ಪಂದ್ಯಗಳ ವೇಳಾಪಟ್ಟಿಯನ್ನು ಇಂದು ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ ಬಿಡುಗಡೆಗೊಳಿಸಿದೆ.

ಭಾರತ ಕ್ರಿಕೆಟ್​ ತಂಡ
ಭಾರತ ಕ್ರಿಕೆಟ್​ ತಂಡ (ANI)
author img

By ETV Bharat Sports Team

Published : Aug 22, 2024, 9:21 PM IST

ನವದೆಹಲಿ: ಮುಂದಿನ ವರ್ಷ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿರುವ ಟೀಂ ಇಂಡಿಯಾ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. ಈ ಸರಣಿಯ ವೇಳಾಪಟ್ಟಿಯನ್ನು ಇಂಗ್ಲೆಂಡ್​ ಕ್ರಿಕೆಟ್​ ಮಂಡಳಿ (ಇಸಿಬಿ) ಇಂದು ಪ್ರಕಟಿಸಿತು. ಇದರಂತೆ ಭಾರತ ತಂಡ 2 ತಿಂಗಳ ಸುದೀರ್ಘ ಪ್ರವಾಸ ಕೈಗೊಳ್ಳಲಿದೆ.

2007ರಿಂದ ಭಾರತ ಇಂಗ್ಲೆಂಡ್‌ನಲ್ಲಿ ಯಾವುದೇ ಟೆಸ್ಟ್ ಸರಣಿ ಗೆದ್ದಿಲ್ಲ. 2021ರಲ್ಲಿ ಅಂದರೆ 3 ವರ್ಷಗಳ ಹಿಂದೆ ಇಂಗ್ಲೆಂಡ್ ವಿರುದ್ಧದ ಸರಣಿ ಗೆಲ್ಲುವ ಅವಕಾಶವನ್ನು ಕಳೆದುಕೊಂಡಿತ್ತು. ಈ ಸರಣಿ 2-2 ಅಂತರದಿಂದ ಡ್ರಾದಲ್ಲಿ ಕೊನೆಗೊಂಡಿತ್ತು.

ಇನ್ನು, ಇಂಗ್ಲೆಂಡ್ ವಿರುದ್ಧದ ಮುಂದಿನ ಸರಣಿಗೆ ರೋಹಿತ್ ಶರ್ಮಾ ನಾಯಕತ್ವ ವಹಿಸುವ ನಿರೀಕ್ಷೆಯಿದೆ. ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಈಗಾಗಲೇ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡವನ್ನು ತವರಿನಲ್ಲಿ ಮಣಿಸಿದೆ. ಈ ಸರಣಿಯನ್ನೂ ಗೆದ್ದುಕೊಂಡದ್ದೇ ಆದಲ್ಲಿ ಇತಿಹಾಸ ಸೃಷ್ಟಿಯಾಗಲಿದೆ.

ಜೂನ್ 20ರಿಂದ ಆಗಸ್ಟ್ 4ರ ವರೆಗೆ ನಡೆಯಲಿರುವ ಸರಣಿ: ಜೂನ್ 20ರಂದು ಹೆಡಿಂಗ್ಲಿಯಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ. ಎರಡನೇ ಟೆಸ್ಟ್ ಜುಲೈ 2ರಿಂದ 6ರ ವರೆಗೆ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಲಂಡನ್‌ನ ಪ್ರತಿಷ್ಠಿತ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ 3ನೇ ಟೆಸ್ಟ್ ನಡೆಯಲಿದೆ. ಸರಣಿಯ ಐದನೇ ಮತ್ತು ಅಂತಿಮ ಪಂದ್ಯ ಲಂಡನ್‌ನ ಓವಲ್‌ನಲ್ಲಿ ಜುಲೈ 31ರಿಂದ ಆಗಸ್ಟ್ 4ರ ವರೆಗೆ ನಡೆಯಲಿದೆ.

ಈ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತವರಿನಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿ ಆಡಿತ್ತು. ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಸೋತ ನಂತರ, ಇಂಗ್ಲೆಂಡ್ ವಿರುದ್ಧ ಭಾರತ 4-1 ಅಂತರದಿಂದ ಜಯ ದಾಖಲಿಸಿತ್ತು. ಯುವ ಕ್ರಿಕೆಟರ್​ಗಳಾದ ಧ್ರುವ್ ಜುರೈಲ್, ಸರ್ಫರಾಜ್ ಖಾನ್, ದೇವದತ್ ಪಡಿಕ್ಕಲ್, ಆಕಾಶದೀಪ್ ಮತ್ತು ರಜತ್ ಪಾಟಿದಾರ್ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದರು.

ಇದನ್ನೂ ಓದಿ: ಯೂಟ್ಯೂಬ್​ ಚಾನೆಲ್‌ ಆರಂಭಿಸಿದ ಒಂದೇ ದಿನ ರೊನಾಲ್ಡೊ ಗಳಿಸಿದ ರೊಕ್ಕ ಎಷ್ಟು ಗೊತ್ತೇ? - Cristiano Ronaldo YouTube Earnings

ETV Bharat Logo

Copyright © 2024 Ushodaya Enterprises Pvt. Ltd., All Rights Reserved.