ಹೈದರಾಬಾದ್: ಓಲಿ ಪೋಪ್ (196) ಅವರ ಅಬ್ಬರದ ಆಟದ ಫಲವಾಗಿ ಇಂದು ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 420 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಮೊದಲ ಟೆಸ್ಟ್ ಗೆಲುವಿಗೆ 231 ರನ್‌ಗಳು ಬೇಕಿವೆ. ಅಮೋಘ ಪ್ರದರ್ಶನ ತೋರಿದ ಪೋಪ್ ದ್ವಿಶತಕದ ಹೊಸ್ತಿನಲ್ಲಿ ವಿಕೆಟ್ ಕಳೆದುಕೊಂಡರು.
-
Ollie Pope's incredible innings of 196 has helped England set a competitive target for the hosts 👊
— ICC (@ICC) January 28, 2024 " class="align-text-top noRightClick twitterSection" data="
Can India chase this down?#WTC25 | #INDvENG: https://t.co/E53vcqjfHE pic.twitter.com/up0AjxmDCL
">Ollie Pope's incredible innings of 196 has helped England set a competitive target for the hosts 👊
— ICC (@ICC) January 28, 2024
Can India chase this down?#WTC25 | #INDvENG: https://t.co/E53vcqjfHE pic.twitter.com/up0AjxmDCLOllie Pope's incredible innings of 196 has helped England set a competitive target for the hosts 👊
— ICC (@ICC) January 28, 2024
Can India chase this down?#WTC25 | #INDvENG: https://t.co/E53vcqjfHE pic.twitter.com/up0AjxmDCL
ಮೂರನೇ ದಿನವಾದ ನಿನ್ನೆ ಕ್ರೀಸ್ಗೆ ಬಂದಿದ್ದ ಪೋಪ್ ನಾಲ್ಕನೇ ದಿನವಾದ ಇಂದೂ ತನ್ನ ಜವಾಬ್ದಾರಿಯುತ ಆಟ ಮುಂದುವರೆಸಿದರು. ಆದರೆ ಭಾರತ ವೇಗದ ಬೌಲರ್ ಜಸ್ರೀತ್ ಬುಮ್ರಾ ಪೋಪ್ ಆಟಕ್ಕೆ ಬ್ರೇಕ್ ಹಾಕಿದರು. ಭಾರತದ ಎರಡನೇ ಇನ್ನಿಂಗ್ಸ್‌ನಲ್ಲಿ ಬುಮ್ರಾ 4 ವಿಕೆಟ್ ಪಡೆಯುವ ಮೂಲಕ ಯಶಸ್ವಿ ಬೌಲರ್ ಎನಿಸಿದರು. ಅಶ್ವಿನ್ ಪ್ರಮುಖ 3 ವಿಕೆಟ್ ಕಬಳಿಸಿ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಸಾಧನೆಯ ಹೊಸ್ತಿಲಿನಲ್ಲಿದ್ದಾರೆ. ಜಡೇಜಾ 2, ಅಕ್ಷರ್ ಪಟೇಲ್ 1 ವಿಕೆಟ್ ಪಡೆಯುವಲ್ಲಿ ಯಶ ಕಂಡರು. ಮೊಹಮ್ಮದ್ ಸಿರಾಜ್ ಮೊದಲ ಟೆಸ್ಟ್‌ನಲ್ಲಿ ಒಂದೂ ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ.
ಹೈದರಾಬಾದ್‌ನ ಸ್ಪಿನ್ ಟ್ರ್ಯಾಕ್ ಪಿಚ್ನಲ್ಲಿ ಆಂಗ್ಲರ ಸ್ಪಿನ್ ಬೌಲಿಂಗ್ ಎದುರಿಸುವ ಸವಾಲು ಭಾರತೀಯ ಬ್ಯಾಟ್ಸ್‌ಮನ್‌ಗಳಿಗಿದೆ. ಇದೀಗ ನಾಯಕ ರೋಹಿತ್ ಶರ್ಮಾ (15) ಮತ್ತು ಯಶಸ್ವಿ ಜೈಸ್ವಾಲ್ (1) ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಇದನ್ನೂ ಓದಿ: Ind vs Eng 1st Test: ಓಲಿ ಪೋಪ್ ಶತಕ; ಇಂಗ್ಲೆಂಡ್‌ಗೆ 126 ರನ್‌ಗಳ ಮುನ್ನಡೆ