ETV Bharat / sports

ಭಾರತ vs ಆಸ್ಟ್ರೇಲಿಯಾ ಪಿಂಕ್​ ಬಾಲ್​ ಟೆಸ್ಟ್​: ಟಾಸ್​ ಗೆದ್ದ ಟೀಂ ಇಂಡಿಯಾ; ತಂಡದಲ್ಲಿ ಹೀಗಿದೆ ಪ್ರಮುಖ ಬದಲಾವಣೆ! - INDIA VS AUSTRALIA

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಟಾಸ್​ ಗೆದ್ದು ಮೊದಲಿಗೆ ಬ್ಯಾಟಿಂಗ್​ ಆಯ್ದುಕೊಂಡಿದೆ.

INDIA VS AUSTRALIA 2ND TEST  PINK BALL TEST  BORDER GAVASKARA TROPHY
ಟೀಂ ಇಂಡಿಯಾ (IANS)
author img

By ETV Bharat Sports Team

Published : Dec 6, 2024, 9:28 AM IST

Ind vs Aus 2nd Test: ಬಾರ್ಡರ್ ಗವಾಸ್ಕರ್ ಟ್ರೋಫಿಯ ಮೊದಲ ಪಂದ್ಯ ಗೆದ್ದಿರುವ ಟೀಂ ಇಂಡಿಯಾ ಮತ್ತೊಂದು ಪಂದ್ಯಕ್ಕೆ ಸಜ್ಜಾಗಿದೆ. ಇಂದಿನಿಂದ ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನ ಓವೆಲ್​ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ. ಪಿಂಕ್ ಬಾಲ್ ಪಂದ್ಯವಾದ ಇದು ಡೇ/ನೈಟ್ ಟೆಸ್ಟ್ ಆಗಿದೆ. ಆಸ್ಟ್ರೇಲಿಯಾ ಇದುವರೆಗೆ ಅಡಿಲೇಡ್‌ನಲ್ಲಿ ಏಳು ಹಗಲು/ರಾತ್ರಿ ಟೆಸ್ಟ್‌ಗಳನ್ನು ಆಡಿದ್ದು ಎಲ್ಲದರಲ್ಲೂ ಗೆಲುವು ಸಾಧಿಸಿದೆ.

ಮತ್ತೊಂದೆಡೆ, ಭಾರತ ಒಟ್ಟು ನಾಲ್ಕು ಪಿಂಕ್ ಬಾಲ್ ಟೆಸ್ಟ್‌ಗಳನ್ನು ಆಡಿದ್ದು ಅವುಗಳಲ್ಲಿ ಮೂರರಲ್ಲಿ ಗೆಲುವು ಸಾಧಿಸಿದೆ. ಬಾಂಗ್ಲಾದೇಶ, ಇಂಗ್ಲೆಂಡ್ ಮತ್ತು ಶ್ರೀಲಂಕಾ ವಿರುದ್ಧ ಗೆದ್ದಿದೆ. ಈ ಹಿಂದೆ ಅಡಿಲೇಡ್ ಮೈದಾನದಲ್ಲಿ ಆಸೀಸ್ ವಿರುದ್ಧ ಆಡಿದ ಪಂದ್ಯದಲ್ಲಿ ಸೋಲನುಭವಿಸಿತ್ತು. ಕೇವಲ 36 ರನ್‌ಗಳಿಗೆ ಕುಸಿದಿದ್ದ ಭಾರತ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಡಿಮೆ ಸ್ಕೋರ್ ದಾಖಲಿಸಿತ್ತು. ಇಂದಿನ ಪಂದ್ಯದೊಂದಿಗೆ ಈ ಕಹಿ ನೆನಪುಗಳನ್ನು ಅಳಿಸಿ ಹಾಕಲು ಟೀಂ ಇಂಡಿಯಾ ಸಂಕಲ್ಪ ತೊಟ್ಟಿದೆ.

ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಯಾವ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಬರುತ್ತೇನೆ ಎಂದು ಹಿಟ್ ಮ್ಯಾನ್ ಸ್ಪಷ್ಟಪಡಿಸಿದ್ದರೂ ನಂ.5 ಅಥವಾ 6ಕ್ಕೆ ಬರುತ್ತಾರಾ ಎಂಬುದು ಕುತೂಹಲ ಮೂಡಿಸಿದೆ. ವೈಯಕ್ತಿಕ ಕಾರಣಗಳಿಂದ ರೋಹಿತ್ ಮೊದಲ ಪಂದ್ಯದಿಂದ ಹೊರಗುಳಿದಿರುವುದು ಗೊತ್ತೇ ಇದೆ. ಮತ್ತೊಂದೆಡೆ ಈ ಪಿಚ್​ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡಕ್ಕೂ ಬೆಂಬಲ ಸಿಗಲಿದೆ. ಆದರೆ, ಅಡಿಲೇಡ್ ಪಿಚ್ ಸಾಮಾನ್ಯವಾಗಿ ವೇಗಿಗಳಿಗೆ ಹೆಚ್ಚು ಅನುಕೂಲಕರವಾಗಿರುತ್ತದೆ ಎನ್ನಲಾಗಿದೆ.

ತಂಡದಲ್ಲಿ ಪ್ರಮುಖ ಬದಲಾವಣೆ: ಈ ಪಂದ್ಯಕ್ಕಾಗಿ ತಂಡದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದೆ. ಮೊದಲ ಪಂದ್ಯದಲ್ಲಾಡಿದ್ದ ದೇವದತ್​ ಪಡಿಕ್ಕಲ್​, ದ್ರುವ್​ ಜುರೇಲ್​ ಮತ್ತು ವಾಷಿಂಗ್ಟನ್​ ಸುಂದರ್​ ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರ ಸ್ಥಾನಕ್ಕೆ ರೋಹಿತ್​ ಶರ್ಮಾ, ಶುಭಮನ್​ ಗಿಲ್, ರವಿಚಂದ್ರನ್​ ಅಶ್ವಿನ್​ ಕಣಕ್ಕಿಳಿಯಲಿದ್ದಾರೆ.

ತಂಡಗಳು-ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್(ಡಬ್ಲ್ಯೂ), ರೋಹಿತ್ ಶರ್ಮಾ(ಸಿ), ನಿತೀಶ್ ರೆಡ್ಡಿ, ರವಿಚಂದ್ರನ್ ಅಶ್ವಿನ್, ಹರ್ಷಿತ್ ರಾಣಾ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ: ಉಸ್ಮಾನ್ ಖವಾಜಾ, ನಾಥನ್ ಮೆಕ್‌ಸ್ವೀನಿ, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ಡಬ್ಲ್ಯೂ), ಪ್ಯಾಟ್ ಕಮಿನ್ಸ್ (ಸಿ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.

ಇದನ್ನೂ ಓದಿ: ಇಂದಿನಿಂದ ಅಡಿಲೇಡ್‌ನಲ್ಲಿ ಪಿಂಕ್‌ ಬಾಲ್‌ ಟೆಸ್ಟ್​​: ಕೆ.ಎಲ್‌.ರಾಹುಲ್​ಗೆ ಮಹತ್ವದ ಜವಾಬ್ದಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.