ETV Bharat / sports

WTC: ಭಾರತಕ್ಕೆ 2ನೇ ಸ್ಥಾನ ಭದ್ರ, ಸತತ ಸೋಲಿನಿಂದ 8ನೇ ಸ್ಥಾನಕ್ಕೆ ಕುಸಿದ ಇಂಗ್ಲೆಂಡ್​ - ICC WTC standings

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿ ಬಿಡುಗಡೆಯಾಗಿದ್ದು, ಭಾರತ 2ನೇ ಸ್ಥಾನದಲ್ಲಿ ಮುಂದುವರಿದಿದೆ.

ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್
ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್
author img

By ETV Bharat Karnataka Team

Published : Feb 27, 2024, 8:42 AM IST

ನವದೆಹಲಿ: ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಸರಣಿಯನ್ನು 1 ಪಂದ್ಯ ಬಾಕಿ ಇರುವಾಗಲೇ ವಶಪಡಿಸಿಕೊಂಡ ಭಾರತ 2023 - 25ರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ (WTC) ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಮಾಡಿಕೊಂಡಿತು. ಡಬ್ಲ್ಯೂಟಿಸಿಯಲ್ಲಿ ಆಡಿದ 8 ಪಂದ್ಯಗಳಲ್ಲಿ ಐದನೇ ಗೆಲುವು ದಾಖಲಿಸಿ, 64.58 ಪ್ರತಿಶತದೊಂದಿಗೆ 2ನೇ ಸ್ಥಾನ ಪಡೆದುಕೊಂಡಿದೆ..

ಅಂತಾರಾಷ್ಟ್ರೀಯ ಕ್ರಿಕೆಟ್​ ಮಂಡಳಿ (ಐಸಿಸಿ) ಸೋಮವಾರ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಅಂಕಪಟ್ಟಿ ಬಿಡುಗಡೆ ಮಾಡಿದ್ದು, ಐದು ಗೆಲುವು, 2 ಸೋಲು, 1 ಡ್ರಾ ಸಾಧಿಸಿರುವ ಭಾರತ ಎರಡನೇ ಸ್ಥಾನದಲ್ಲಿದೆ. ಸದ್ಯ ನಡೆಯುತ್ತಿರುವ ಇಂಗ್ಲೆಂಡ್​ ವಿರುದ್ಧದ ಸರಣಿಯನ್ನು 3-1 ರಲ್ಲಿ ತನ್ನದಾಗಿಸಿಕೊಂಡಿದ್ದು, ಇನ್ನೊಂದು ಪಂದ್ಯ ಬಾಕಿ ಇದೆ. ಧರ್ಮಶಾಲಾದಲ್ಲಿ ನಡೆಯುವ ಐದನೇ ಮತ್ತು ಕೊನೆಯ ಟೆಸ್ಟ್​ ಅನ್ನು ಗೆದ್ದಲ್ಲಿ ಗೆಲುವಿನ ಸರಾಸರಿ ಮತ್ತಷ್ಟು ಉತ್ತಮವಾಗಲಿದೆ. ಡಬ್ಲ್ಯೂಟಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರುವ ಅವಕಾಶವಿದೆ.

ವೆಸ್ಟ್ಇಂಡೀಸ್​ ವಿರುದ್ಧದ 2 ಪಂದ್ಯಗಳ ಸರಣಿಯಲ್ಲಿ 1 ಗೆದ್ದು ,1 ಡ್ರಾ ಸಾಧಿಸಲಾಗಿತ್ತು. ಇದಾದ ಬಳಿಕ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ತಲಾ 1 ಸೋಲು ಗೆಲುವಿನ ಮೂಲಕ ಡ್ರಾ ಮಾಡಿಕೊಂಡಿತ್ತು. ಇದೀಗ ಇಂಗ್ಲೆಂಡ್​ ವಿರುದ್ಧ 5 ಪಂದ್ಯಗಳ ಸರಣಿಯಲ್ಲಿ 1 ರಲ್ಲಿ ಸೋತು, ಮೂರರಲ್ಲಿ ಗೆದ್ದಿದೆ. ಇದರಿಂದ ಗೆಲುವಿನ ಶೇಕಡಾವಾರು ಪ್ರಮಾಣ 64.58ಕ್ಕೆ ಏರಿದೆ.

ಕುಸಿದ ಆಂಗ್ಲ ಪಡೆ: ಇತ್ತ ಸರಣಿಯಲ್ಲಿ ದಯನೀಯ ಪ್ರದರ್ಶನ ನೀಡುತ್ತಿರುವ ಬಾಜ್​ಬಾಲ್​ ಖ್ಯಾತಿಯ ಆಂಗ್ಲ ಪಡೆ ಸತತ ಮೂರು ಸೋಲಿನಿಂದ ಅಂಕಪಟ್ಟಿಯಲ್ಲಿ 8ನೇ ಸ್ಥಾನಕ್ಕೆ ಕುಸಿದಿದೆ. ಬೆನ್​ ಸ್ಟೋಕ್ಸ್​ ಬಳಗದ ಶೇಕಡಾವಾರ ಅಂಕಗಳು ಕೂಡ 19.44ರಷ್ಟಿದೆ. ಆಡಿದ 9 ಟೆಸ್ಟ್​ ಪಂದ್ಯಗಳಲ್ಲಿ ಐದು ಸೋಲು ಕಂಡಿದೆ. ಉಳಿದ ಪಂದ್ಯಗಳಲ್ಲಿ ಗೆದ್ದಿದೆ.

ಇನ್ನು ಚಾಂಪಿಯನ್​ಶಿಪ್​ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್​ ತಂಡ ಅಗ್ರಸ್ಥಾನದಲ್ಲಿ ಮುಂದುವರಿದಿದೆ. ತಾನು ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಗೆದ್ದಿದೆ. ಒಂದರಲ್ಲಿ ಸೋಲು ಕಂಡಿದ್ದರೂ, ಶೇಕಡಾವಾರು ಅಂಕ 75.00 ರಷ್ಟಿದೆ. ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ಮೂರನೇ ಸ್ಥಾನ ಪಡೆದಿದ್ದು, ಆಡಿದ 10 ಪಂದ್ಯಗಳಲ್ಲಿ 6 ರಲ್ಲಿ ಗೆಲುವು ಸಾಧಿಸಿದೆ. ಕಾಂಗರೂಗಳ ಶೇಕಡಾವಾರು ಅಂಕಗಳು 55.00 ರಷ್ಟಿದೆ.

ಇನ್ನು ಟಾಪ್​ ಹತ್ತರ ಪಟ್ಟಿಯಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ವೆಸ್ಟ್​ ಇಂಡೀಸ್​ ತಂಡಗಳು ಕ್ರಮವಾಗಿ ನಾಲ್ಕು, ಐದು ಮತ್ತು ಆರನೇ ಸ್ಥಾನ ಪಡೆದಿವೆ. ಬಾಂಗ್ಲಾ ಕೇವಲ 2 ಟೆಸ್ಟ್​ ಪಂದ್ಯವಾಡಿದ್ದು, ತಲಾ 1 ಸೋಲು, ಗೆಲುವು ಕಂಡಿದೆ. ಶೇಕಡಾವಾರು ಅಂಕ 55.00 ಆಗಿದೆ. ಪಾಕಿಸ್ತಾನ 5 ಟೆಸ್ಟ್​ನಲ್ಲಿ 2 ಗೆದ್ದು, ಮೂರು ಸೋತಿದೆ. 36.66 ಶೇಕಡಾವಾರು ಅಂಕ ಹೊಂದಿದೆ.

ಇದನ್ನೂ ಓದಿ: IND vs End: 4ನೇ ಟೆಸ್ಟ್‌ನಲ್ಲಿ 5 ವಿಕೆಟ್ ಜಯ, ತವರಿನಲ್ಲಿ ಸತತ 17ನೇ ಸರಣಿ ಗೆದ್ದ ಭಾರತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.