ETV Bharat / sports

Emerging Asia Cup: ಇಂದು ಭಾರತ - ಅಫ್ಘಾನಿಸ್ತಾನ ಸೆಮೀಸ್ ಕದನ; ಉಚಿತವಾಗಿ ಪಂದ್ಯ ಎಲ್ಲಿ ವೀಕ್ಷಿಸಬೇಕು?

ಎಮರ್ಜಿಂಗ್​ ಏಷ್ಯಾಕಪ್​ನಲ್ಲಿಂದು ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎ ಮತ್ತು ಅಫ್ಘಾನಿಸ್ತಾನ ಎ ತಂಡಗಳು ಮುಖಾಮುಖಿಯಾಗಲಿವೆ. ​

ಭಾರತ-ಅಫ್ಘಾನಿಸ್ತಾನ ಸೆಮೀಸ್
ಭಾರತ-ಅಫ್ಘಾನಿಸ್ತಾನ ಸೆಮೀಸ್ (ACC Twitter)
author img

By ETV Bharat Sports Team

Published : Oct 25, 2024, 1:53 PM IST

Emerging Asia Cup 2024 Semi final: ಟಿ20 ಎಮರ್ಜಿಂಗ್ ಏಷ್ಯಾಕಪ್​ನಲ್ಲಿಂದು ಟೀಂ ಇಂಡಿಯಾ ಸೆಮಿಫೈನಲ್ ಪಂದ್ಯವನ್ನು ಆಡಲಿದೆ. ಭಾರತ ಎ ತಂಡ ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನವನ್ನು ಎದುರಿಸಲಿದೆ. ಈ ಪಂದ್ಯ ಒಮಾನ್‌ನ ಅಲ್ ಅಮರತ್ ಕ್ರಿಕೆಟ್ ಮೈದಾನದಲ್ಲಿ ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ನಡೆಯಲಿದೆ.

ಈ ಪಂದ್ಯವನ್ನು ಗೆದ್ದು ಅಜೇಯವಾಗಿ ಭಾರತ ಎ ತಂಡವು ಫೈನಲ್‌ಗೆ ಪ್ರವೇಶ ಪಡೆಯಲು ಬಯಸುತ್ತದೆ. ಭಾರತ ಗ್ರೂಪ್​ ಹಂತದ ಎಲ್ಲಾ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಸೆಮೀಸ್​ಗೆ ಪ್ರವೇಶ ಪಡೆದಿದೆ. ಈ ಟೂರ್ನಿಯಲ್ಲಿ ಭಾರತ ಎ ತಂಡ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಶುಭಾರಂಭ ಮಾಡಿತು.

ಇದರಲ್ಲಿ ಮೊದಲು ಬ್ಯಾಟ್​ ಮಾಡಿದ್ದ ಭಾರತ 183 ರನ್​ಗಳನ್ನು ಕಲೆ ಹಾಕಿತ್ತು. ಈ ಗುರಿ ಬೆನ್ನಟ್ಟಿದ ಪಾಕ್​ 176 ರನ್​ಗಳಿಸಲಷ್ಟೇ ಶಕ್ತವಾಯಿತು. ನಂತರ ಯುಎಇ ವಿರುದ್ಧ 7 ವಿಕೆಟ್​, ಒಮಾನ್ ವಿರುದ್ಧ 6 ವಿಕೆಟ್​ಗಳನ ಗೆಲುವು ಸಾಧಿಸಿ ಗ್ರೂಪ್​ನಲ್ಲಿ ಅಗ್ರ ತಂಡವಾಯಿತು. ಇದರೊಂದಿಗೆ ಅಜೇಯವಾಗಿ ಗೆಲುವಿನ ಓಟ ಮುಂದುವರೆಸಿದೆ.

ಪಂದ್ಯ ಯಾವಾಗ ಎಲ್ಲಿ ವೀಕ್ಷಿಸಬೇಕು: ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಈ ಪಂದ್ಯ ಟಿವಿಯಲ್ಲಿ ಸ್ಟಾರ್ ಸ್ಪೋರ್ಟ್ಸ್‌ ನೆಟವರ್ಕ್​ನಲ್ಲಿ ಪ್ರಸಾರವಾಗಲಿದೆ. ಅಲ್ಲದೇ, ಜಿಯೋ ಸಿನಿಮಾ ಮತ್ತು ಸೋನಿ, ಡಿಸ್ನಿ ಹಾಟ್​ಸ್ಟಾರ್​ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.

ಸಂಭಾವ್ಯ ತಂಡಗಳು-ಭಾರತ ಎ: ಅಭಿಷೇಕ್ ಶರ್ಮಾ, ತಿಲಕ್ ವರ್ಮಾ (ನಾಯಕ), ಆಯುಷ್ ಬಡೋನಿ, ನೆಹಾಲ್ ವಧೇರಾ, ಅನುಜ್ ರಾವತ್ (ವಿಕೆಟ್ ಕೀಪರ್), ರಮಣದೀಪ್ ಸಿಂಗ್, ರಾಹುಲ್ ಚಾಹರ್, ನಿಶಾಂತ್ ಸಿಂಧು, ರಸಿಖ್ ದಾರ್ ಸಲಾಮ್, ರವಿಶ್ರೀನಿವಾಸನ್ ಸಾಯಿ ಕಿಶೋರ್, ಆಕಿಬ್ ಖಾನ್, ವೈಭವ್ ಅರೋರಾ, ಅನ್ಶುಲ್ ಕಾಂಬೋಜಿನ್ ಪ್ರಭಾಸಿಮ್ರಾನ್ ಸಿಂಗ್.

ಅಫ್ಘಾನಿಸ್ತಾನ ಎ: ಸೇದಿಖುಲ್ಲಾ ಅಟಲ್, ನುಮಾನ್ ಶಾ(ವಿ.ಕೀ), ದರ್ವಿಶ್ ರಸೂಲಿ(ನಾ), ವಫಿವುಲ್ಲಾ ತಾರಖಿಲ್, ಕರೀಂ ಜನತ್, ಶಾಹಿದುಲ್ಲಾ ಕಮಾಲ್, ನಂಗೆಯಾಲಿಯಾ ಖರೋಟೆ, ಶರಫುದ್ದೀನ್ ಅಶ್ರಫ್, ಅಬ್ದುಲ್ ರೆಹಮಾನ್, ಕೈಸ್ ಅಹ್ಮದ್, ಫರಿದೂನ್ ದಾವೂದ್‌ಜಾಯ್, ಜುಬೈದ್ ಅಕ್ಬರಿ, ಅಲ್ಲಾ ಘಝನ್‌ಫರ್, ಮೊಹಮದ್ ಸಮೀಕ್

ಇದನ್ನೂ ಓದಿ: 60 ವರ್ಷಗಳ ನಂತರ ಭಾರತದ ಹಳೆಯ ಪ್ಲಾನ್ ಅನುಸರಿಸಿ ಟೆಸ್ಟ್​​ನಲ್ಲಿ ಸಕ್ಸಸ್​ ಆದ ಪಾಕಿಸ್ತಾನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.