Rachin Ravindra India Vs Newzealand 1st Test: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್‌ನ ಯುವ ಬ್ಯಾಟರ್ ರಚಿನ್ ರವೀಂದ್ರ ಭರ್ಜರಿ ಶತಕ ಸಿಡಿಸಿದ್ದಾರೆ. ಟೆಸ್ಟ್ ವೃತ್ತಿ ಜೀವನದ ಎರಡನೇ ಶತಕ ಸಿಡಿಸುವುದರ ಜೊತೆಗೆ ದಾಖಲೆ ಬರೆದಿದ್ದಾರೆ.
ಕಳೆದೊಂದು ದಶಕದಲ್ಲಿ ಭಾರತದ ನೆಲದಲ್ಲಿ ಯಾವೊಬ್ಬ ನ್ಯೂಜಿಲೆಂಡ್ ಆಟಗಾರರೂ ಶತಕ ಸಿಡಿಸಲು ಸಾಧ್ಯವಾಗಿಲ್ಲ. ಇದೀಗ 12 ವರ್ಷಗಳ ನಂತರ ರಚಿನ್ ರವೀಂದ್ರ ಭಾರತದಲ್ಲಿ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಹಿಂದೆ 2012 ರಲ್ಲಿ ಕೊನೆಯ ಬಾರಿಗೆ ನ್ಯೂಜಿಲೆಂಡ್ ಬ್ಯಾಟರ್ ರಾಸ್ ಟೇಲರ್ ಇದೇ ಮೈದಾನದಲ್ಲಿ ಶತಕ ಸಿಡಿಸಿದ್ದರು. ರಚಿನ್ 123 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 11 ಬೌಂಡರಿ ನೆರವಿನಿಂದ ಶತಕ ಪೂರೈಸಿದರು.
Test century number two for Rachin Ravindra!
— BLACKCAPS (@BLACKCAPS) October 18, 2024
It comes from 124 balls with 11 fours and 2 sixes. Pushing the team towards a big lead in Bengaluru. Follow play LIVE in NZ on @skysportnz or @SENZ_Radio LIVE scoring | https://t.co/yADjMlJjpO 📲 #INDvNZ #CricketNation 📸 BCCI pic.twitter.com/rshaKAYyDI
ಎರಡನೇ ಶತಕ: ರಚಿನ್ಗೆ ಇದು ಎರಡನೇ ಟೆಸ್ಟ್ ಶತಕವಾಗಿದೆ. ಇದಕ್ಕೂ ಮೊದಲು ಈ ವರ್ಷ ಫೆಬ್ರವರಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಶತಕವನ್ನು ಬಾರಿಸಿದ್ದರು. ಇದೀಗ ತವರಿನಿಂದ ಹೊರಗೆ ಮೊದಲ ಶತಕವಾಗಿದೆ.
RACHIN RAVINDRA HAS A WORLD CUP AND A TEST CENTURY IN BENGALURU. 🦁
— Mufaddal Vohra (@mufaddal_vohra) October 18, 2024
- The Local guy from the Kiwi land.pic.twitter.com/ev48ZXAKi0
ಚಿನ್ನಸ್ವಾಮಿ ಫೇವರಿಟ್: ಚಿನ್ನಸ್ವಾಮಿ ಮೈದಾನದಲ್ಲಿ ಬ್ಯಾಟಿಂಗ್ ಮಾಡಲು ರಚಿನ್ ಹೆಚ್ಚಾಗಿ ಇಷ್ಟ ಪಡುತ್ತಾರೆ. ಅದನ್ನು ಶತಕದ ಮೂಲಕ ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಇದಕ್ಕೂ ಮುನ್ನ ಇದೇ ಮೈದಾನದಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲೂ ಶತಕ ಸಮೇತ 150 ರನ್ಗಳನ್ನು ಸಿಡಿಸಿದ್ದರು. ಇದಷ್ಟೇ ಅಲ್ಲದೇ ಐಪಿಎಲ್ನಲ್ಲೂ ಇದೇ ಮೈದಾನದಲ್ಲಿ ಅರ್ಧಶತಕ ಬಾರಿಸಿದ್ದರು.
Basking in glory in Bengaluru ✨
— ESPNcricinfo (@ESPNcricinfo) October 18, 2024
In the city where his paternal grandparents are based, Rachin Ravindra has marked his first ODI and Test innings with hundreds 💯💯 pic.twitter.com/Z5kiLvE1qe
ಪಂದ್ಯ ಹೀಗಿತ್ತು: ಮಳೆಯಿಂದಾಗಿ ಉಭಯ ತಂಡಗಳ ನಡುವಿನ ಮೊದಲ ದಿನದ ಪಂದ್ಯ ಟಾಸ್ ಕಾಣದೆ ರದ್ದಾಗಿತ್ತು. ಎರಡನೇ ದಿನ ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ದುಕೊಂಡಿತ್ತು. ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 46 ರನ್ಗಳಿಗೆ ಸರ್ವಪತನ ಕಂಡಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ಎರಡನೇ ದಿನದಾಟದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 180 ರನ್ನೊಂದಿಗೆ ಮೂರನೇ ದಿನದಾಟ ಆರಂಭಿಸಿದೆ.
ಮೂರನೇ ದಿನದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಮೇಲೆ ಭಾರತೀಯ ಬೌಲರ್‌ಗಳು ಆರಂಭದಲ್ಲಿ ಪ್ರಾಬಲ್ಯ ಸಾಧಿಸಿದರು. ಸಿರಾಜ್, ಬುಮ್ರಾ ಮತ್ತು ಜಡೇಜಾ ಅತ್ಯುತ್ತಮ ಎಸೆತಗಳಿಂದ ವಿಕೆಟ್ ಪಡೆದರು. ಇದರಿಂದಾಗಿ ಕಿವೀಸ್ ಸ್ಕೋರ್ 233/7ಕ್ಕೆ ಕುಸಿಯಿತು. ಮೂರನೇ ದಿನ ಕಿವೀಸ್ ಡ್ಯಾರಿಲ್ ಮಿಚೆಲ್ 18, ಟಾಮ್ ಬ್ಲಂಡೆಲ್ 5, ಗ್ಲೆನ್ ಫಿಲಿಪ್ಸ್ 14 ಮತ್ತು ಮ್ಯಾಟ್ ಹೆನ್ರಿ 8 ವಿಕೆಟ್ ಕಳೆದುಕೊಂಡಿತ್ತು. ಕೊನೆಯಲ್ಲಿ ರಚಿನ್ (134), ಟಿಮ್ ಸೌಥಿ (65) ಭರ್ಜರಿ ಬ್ಯಾಟಿಂಗ್ನಿಂದಾಗಿ ಮೊದಲ ಇನ್ನಿಂಗ್ಸ್ನಲ್ಲಿ ಕಿವೀಸ್ 402 ರನ್ಗಳಿಸಿತು. ಇದರೊಂದಿಗೆ 356 ರನ್ಗಳ ಮುನ್ನಡೆ ಸಾಧಿಸಿತು.
ಭಾರತದ ಪರ ಜಡೇಜಾ 3 ವಿಕೆಟ್ ಪಡೆದರೆ, ಬುಮ್ರಾ, ಸಿರಾಜ್, ಅಶ್ವಿನ್ ಮತ್ತು ಕುಲದೀಪ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ಶೂನ್ಯ ಎಸೆತಕ್ಕೆ ವಿಕೆಟ್ ಪಡೆದ ವಿಶ್ವದ ಏಕೈಕ ಕ್ರಿಕೆಟಿಗ ಯಾರು? ಇವರೀಗ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್!