ETV Bharat / sports

ಆಸ್ಟ್ರೇಲಿಯಾ ವಿರುದ್ದ ಮೊದಲ ಟೆಸ್ಟ್​ ಗೆದ್ದರೂ ಟೀಂ ಇಂಡಿಯಾಗೆ ಟೆನ್ಶನ್​: ಕಾರಣವೇನು? - TEAM INDIA STATISTICS IN ADELAIDE

ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್​ ಪಂದ್ಯ ಅಡಿಲೇಡ್​​ ಮೈದಾನದಲ್ಲಿ ನಡೆಯಲಿದ್ದು, ಉಭಯ ತಂಡಗಳ ಅಂಕಿಅಂಶಗಳು ಹೀಗಿವೆ.

IND VS AUS 2ND TEST  PINK BALL TEST  BORDER GAVASKAR TROPHY  TEAM INDIA TEST STATISTICS
ರಿಷಭ್​ ಪಂತ್​ (IANS)
author img

By ETV Bharat Sports Team

Published : Nov 29, 2024, 11:48 AM IST

Ind vs Aus 2nd Test: ಬಾರ್ಡರ್​-ಗವಾಸ್ಕರ್​ ಟ್ರೋಫಿಯನ್ನು ಟೀಂ ಇಂಡಿಯಾ ಗೆಲುವಿನೊಂದಿಗೆ ಪ್ರಾರಂಭಿಸಿದೆ. ನ.22ರಂದು ಪರ್ತ್​ ಮೈದಾನದಲ್ಲಿ ನಡೆದಿದ್ದ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 295 ರನ್​ಗಳಿಂದ ಆಸ್ಟ್ರೇಲಿಯಾವನ್ನು ಮಣಿಸಿ ಬೃಹತ್​ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಕಳಪೆ ಆರಂಭ ಪಡೆದಿದ್ದ ಟೀಂ ಇಂಡಿಯಾ, ಮೊದಲ ಇನ್ನಿಂಗ್ಸ್​ನಲ್ಲಿ ಕೇವಲ 150 ರನ್​ಗಳಿಗೆ ಆಲೌಟ್​ ಆಗಿತ್ತು. ಎರಡನೇ ಇನ್ನಿಂಗ್ಸ್​ನಲ್ಲಿ ಬಲಿಷ್ಟವಾಗಿ ಕಮ್​ಬ್ಯಾಕ್​ ಮಾಡಿದ್ದ ಭಾರತ, ಬೌಲಿಂಗ್​ ಮತ್ತು ಬ್ಯಾಟಿಂಗ್​ ಎರಡರಲ್ಲೂ ಉತ್ತಮ ಪ್ರದರ್ಶನ ತೋರಿ ಗೆಲುವು ಸಾಧಿಸಿತ್ತು.

ಇದೀಗ ಟೀಂ ಇಂಡಿಯಾ ಅಡಿಲೇಡ್​ನಲ್ಲಿ ನಡೆಯಲಿರುವ ಎರಡನೇ ಟೆಸ್ಟ್​ ಪಂದ್ಯಕ್ಕಾಗಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆದ್ರೆ ಈ​ ಮೈದಾನದಲ್ಲಿ ಭಾರತ ಇದುವರೆಗೂ ಆಡಿರುವ ಟೆಸ್ಟ್​ಗಳಿಲ್ಲಿ ಕೆಲವು ಬಾರಿ ಮಾತ್ರ ಗೆಲುವು ಸಾಧಿಸಿದೆ.

IND VS AUS 2ND TEST  PINK BALL TEST  BORDER GAVASKAR TROPHY  TEAM INDIA TEST STATISTICS
ಟೀಂ ಇಂಡಿಯಾ (IANS)

ಭಾರತ ಗೆದ್ದ ಟೆಸ್ಟ್​ ಪಂದ್ಯಗಳೆಷ್ಟು?: ಅಡಿಲೇಡ್​ನಲ್ಲಿ ಭಾರತ ಈವರೆಗೂ ಒಟ್ಟು 13 ಟೆಸ್ಟ್​ ಪಂದ್ಯಗಳನ್ನು ಆಡಿದೆ. ಇದರಲ್ಲಿ ಕೇವಲ ಎರಡು ಬಾರಿ ಮಾತ್ರ ಗೆದ್ದಿದೆ. ಎಂಟು ಬಾರಿ ಸೋಲು ಮತ್ತು 3 ಬಾರಿ ಪಂದ್ಯಗಳು ಡ್ರಾಗೊಂಡಿವೆ.

ಮೊದಲ ಗೆಲುವು ಯಾವಾಗ?: ಭಾರತ ಮೊದಲ ಬಾರಿಗೆ ಅಡಿಲೇಡ್​ನಲ್ಲಿ 2003ರಲ್ಲಿ ಐತಿಹಾಸಿಕ ಗೆಲುವು ಸಾಧಿಸಿತ್ತು. ಈ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಭಾರತೀಯ ಬೌಲರ್​ಗಳು 556 ರನ್​ ಬಿಟ್ಟುಕೊಟ್ಟಿದ್ದರು. ಆದರೆ ಬ್ಯಾಟಿಂಗ್​ನಲ್ಲಿ ಭಾರತೀಯರು ಉತ್ತಮ ಪ್ರದರ್ಶನ ನೀಡಿದ್ದರು. ಕನ್ನಡಿಗ ರಾಹುಲ್​ ದ್ರಾವಿಡ್​ ಮೊದಲ ಇನ್ನಿಂಗ್ಸ್​ನಲ್ಲಿ ಅದ್ಬುತ ದ್ವಿಶತಕ (233) ಸಿಡಿಸಿದ್ದರೆ, ವಿವಿಎಸ್​ ಲಕ್ಷ್ಮಣ್​ 148 ರನ್​ ಬಾರಿಸಿದ್ದರು.

ದಿಗ್ಗಜರ ಅತ್ಯುತ್ತಮ ಆಟದಿಂದಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​ನಲ್ಲಿ 523 ರನ್​ ಗಳಿಸಿತ್ತು. ನಂತರ ಅಜಿತ್ ಅಗರ್ಕರ್ ಆರು ವಿಕೆಟ್ ಕಬಳಿಸಿ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾವನ್ನು 196 ರನ್‌ಗಳಿಗೆ ಕಟ್ಟಿ ಹಾಕಿದ್ದರು. ಕೆಲವು ಎಡವಟ್ಟುಗಳ ನಡುವೆಯೂ ಭಾರತ 230 ರನ್‌ಗಳ ಗುರಿ ಬೆನ್ನಟ್ಟಿ ನಾಲ್ಕು ವಿಕೆಟ್‌ಗಳ ಜಯ ದಾಖಲಿಸಿತ್ತು.

ಭಾರತದ 15 ವರ್ಷಗಳ ಬಳಿಕ ಎರಡನೇ ಬಾರಿಗೆ ಗೆಲುವಿನ ಯಶಸ್ಸು ಕಂಡಿತ್ತು. 2018ರಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಪೂಜಾರ ಎರಡು ಇನ್ನಿಂಗ್ಸ್​ಗಳಲ್ಲಿ 123 ಮತ್ತು 71 ಸ್ಕೋರ್​ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು. ಬೌಲಿಂಗ್​ನಲ್ಲಿ ಬುಮ್ರಾ, ಶಮಿ, ಅಶ್ವಿನ್​ ಮಿಂಚಿದ್ದರು. ಅಂತಿಮವಾಗಿ ಭಾರತ ಈ ಪಂದ್ಯವನ್ನು 31 ರನ್​ಗಳಿಂದ ಗೆದ್ದು ಬೀಗಿತ್ತು.

ಆಸ್ಟ್ರೇಲಿಯಾ ತಂಡ (IANS)

2020ರಲ್ಲಿ ಕೊನೆಯ ಬಾರಿಗೆ ಉಭಯ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ, ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಕೆಟ್ಟ ದಾಖಲೆ ಬರೆದಿತ್ತು. ಪಂದ್ಯವನ್ನು ಆಸ್ಟ್ರೇಲಿಯಾ ಎಂಟು ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. 2018ರ ಬಳಿಕ ಭಾರತ ಒಮ್ಮೆಯೂ ಗೆಲುವು ಸಾಧಿಸಿಲ್ಲ. ಅಲ್ಲದೇ ಈ ಮೈದಾನದಲ್ಲಿ ಆಸ್ಟ್ರೇಲಿಯಾ ಹೆಚ್ಚಿನ ಗೆಲುವು ಸಾಧಿಸಿದ್ದು ಎರಡನೇ ಟೆಸ್ಟ್​ನಲ್ಲಿ ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: IPL ಆರಂಭಕ್ಕೂ ಮುನ್ನವೇ ವಿವಾದಕ್ಕೆ ಸಿಲುಕಿದ RCB: ಅಭಿಮಾನಿಗಳ ಆಕ್ರೋಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.