ದುಬೈ: ಕ್ರಿಕೆಟ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಗ್ಗೆ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಟಿ-20 ಕ್ರಿಕೆಟ್‌ನಲ್ಲಿ ಐಪಿಎಲ್ ಟೂರ್ನಿಯಂತ ಮತ್ತೊಂದು ದೊಡ್ಡ ಕ್ರಿಕೆಟ್ ಟೂರ್ನಾಮೆಂಟ್ ಇಲ್ಲ ಎಂದು ಆಸೀಸ್ ಮಾಜಿ ಕ್ರಿಕೆಟ್ ಶ್ಲಾಘಿಸಿದ್ದಾರೆ.
ದೇಶಿ ಮತ್ತು ವಿದೇಶಿ ಆಟಗಾರರ ನಡುವೆ ಸಮತೋಲನ ಕಾಯ್ದುಕೊಂಡಿರುವುದೇ ಐಪಿಎಲ್ ಲೀಗ್ ಹೆಚ್ಚು ವಿಶಿಷ್ಟ ಮತ್ತು ವಿಶೇಷವಾಗಲು ಕಾರಣವಾಗಿದೆ. ಇನ್ನು 20 ಓವರ್ಗಳ ಪಂದ್ಯಾವಳಿಯಲ್ಲಿ ಭಾರತವು ಅತೀ ಹೆಚ್ಚು ಪ್ರತಿಭೆಗಳನ್ನು ಹೊಂದಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿಶ್ವ ಟಿ -20 ಕ್ರಿಕೆಟ್‌ನಲ್ಲಿ ಐಪಿಎಲ್‌ನಂತಹ ದೊಡ್ಡ ಟೂರ್ನಾಮೆಂಟ್ ಮತ್ತೊಂದು ಇಲ್ಲ. ಇದು ವಿದೇಶಿ ಮತ್ತು ದೇಶಿ ಆಟಗಾರರ ನಡುವಿನ ಸಮತೋಲ ಮತ್ತು ಸಾಮರಸ್ಯದಿಂದಾಗಿ ತುಂಬಾ ವಿಭಿನ್ನವಾಗಿದೆ. ಅದರಲ್ಲೂ ಚುಟುಕು ಕ್ರಿಕೆಟ್‌ನಲ್ಲಿ ಭಾರತವು ಅಗಾಧ ಪ್ರತಿಭೆಗಳನ್ನು ಹೊಂದಿದೆ. ಐಪಿಎಲ್ ಲೀಗ್ ಅತ್ಯಂತ ವಿಭಿನ್ನ ಮತ್ತು ಅನನ್ಯವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
58 ವರ್ಷದ ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಸದ್ಯ ಡೆಸರ್ಟ್ ವೈಪರ್ಸ್‌ನೊಂದಿಗೆ ಇಂಟರ್ನ್ಯಾಷನಲ್ ಲೀಗ್ T20 (ILT20) ನಲ್ಲಿ 'ಕ್ರಿಕೆಟ್ ಡೈರೆಕ್ಟರ್' ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈಪರ್ಸ್ ಜೊತೆ ಅಷ್ಟೇ ಅಲ್ಲ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಟೀಂನಲ್ಲಿ ಸಹ ಇವರು ಕೆಲಸ ಮಾಡಿದ್ದಾರೆ.