ETV Bharat / sports

"ನಾನು ನನ್ನ ಕೈಲಾದ ಪ್ರಯತ್ನ ಮಾಡಿದ್ದೇನೆ, ಆದರೆ ಇಂದು ಅರ್ಷದ್ ನದೀಮ್ ದಿನ": ನೀರಜ್ ಚೋಪ್ರಾ ಮಾತು - Neeraj Chopra Reaction - NEERAJ CHOPRA REACTION

"ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ, ಆದರೆ, ಇಂದು ಅರ್ಷದ್ ನದೀಮ್ ದಿನವಾಗಿದೆ'' ಎಂದು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಪ್ರತಿಕ್ರಿಯೆ ನೀಡಿದ್ದಾರೆ.

Neeraj Chopra  Neeraj Chopra Reaction Arshad Nadeem
ಒಲಿಂಪಿಕ್ ಬೆಳ್ಳಿ ಪದಕ ವಿಜೇತ ನೀರಜ್ ಚೋಪ್ರಾ (IANS)
author img

By ANI

Published : Aug 9, 2024, 9:24 AM IST

ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಗಳಿಸಿದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಮಾತನಾಡಿದ್ದು, "ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ, ಆದರೆ ಇದು ಅರ್ಷದ್ ನದೀಮ್ ಅವರ ದಿನವಾಗಿದೆ. ತಮ್ಮ ಕಾರ್ಯಕ್ಷಮತೆಯನ್ನು ನಿರ್ಣಯಿಸಲು ಮತ್ತು ಭವಿಷ್ಯದ ಸುಧಾರಣೆಗಳತ್ತ ಗಮನ ಹರಿಸಲು ಇದು ಸೂಕ್ತ ಸಮಯವಾಗಿದೆ'' ಎಂದು ಹೇಳಿದರು.

"ಸ್ಪರ್ಧೆ ಕಠಿಣವಾಗಿತ್ತು ಮತ್ತು ಪ್ರತಿಯೊಬ್ಬ ಅಥ್ಲೀಟ್‌ಗೆ ಅವರದೇ ಅಂತಾ ದಿನವಿರುತ್ತೆ. ಇಂದು ಅರ್ಷದ್ ಅವರ ದಿನ. ನಾನು ನನ್ನ ಕೈಲಾದಷ್ಟು ಅತ್ಯುತ್ತಮವಾದದ್ದನ್ನು ನೀಡಲು ಪ್ರಯತ್ನಿಸಿದ್ದೇನೆ. ನಾವು ದೇಶಕ್ಕಾಗಿ ಪದಕ ಗೆದ್ದಾಗಲೆಲ್ಲ ಸಂತೋಷಪಡುತ್ತೇವೆ. ಈಗ ಆಟವನ್ನು ಸುಧಾರಿಸುವ ಸಮಯ ಬಂದಿದೆ. ನಾವು ಕುಳಿತು ಚರ್ಚಿಸುತ್ತೇವೆ ಮತ್ತು ನನ್ನ ಪ್ರದರ್ಶನವನ್ನು ಮತ್ತಷ್ಟು ಉತ್ತಮ ಪಡಿಸಲು ಪ್ರಯತ್ನಿಸುತ್ತೇನೆ. '' ಎಂದು ಚೋಪ್ರಾ ತಮ್ಮ ಮನದಾಳದಲ್ಲಿರುವುದನ್ನು ಹೇಳಿದರು.

ಭಾರತದ ಭವಿಷ್ಯದ ಒಲಂಪಿಕ್ ನಿರೀಕ್ಷೆಗಳ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, "ಭಾರತವು ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಉತ್ತಮವಾಗಿ ಆಡಿದೆ. ನಮ್ಮ ರಾಷ್ಟ್ರಗೀತೆಯನ್ನು ಇಂದು ನುಡಿಸದೇ ಇರಬಹುದು, ಆದರೆ ಭವಿಷ್ಯದಲ್ಲಿ ಅದು ಮತ್ತೆ ಕೇಳಿ ಬರುತ್ತದೆ" ಎಂದು ಇದೇ ವೇಳೆ ಅವರು ವಿಶ್ವಾಸ ವ್ಯಕ್ತಪಡಿಸಿದರು.

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಚೋಪ್ರಾ 89.45 ಮೀಟರ್‌ ದೂರ ಜಾವೆಲಿನ್​ ಎಸೆದು ಬೆಳ್ಳಿ ಪದಕವನ್ನು ತಮ್ಮ ಕಿರೀಟಕ್ಕೆ ಸಿಕ್ಕಿಸಿಕೊಂಡಿದ್ದಾರೆ. ಮೊದಲ ಎಸೆತ ಪೌಲ್​ ಆದ ಬಳಿಕ ತಮ್ಮ ಎರಡನೇ ಎಸೆತದಲ್ಲಿ ಈ ಸಾಧನೆ ಮಾಡಿ ಬೆಳ್ಳಿ ಪದಕಕ್ಕೆ ಭಾಜನರಾಗಿದ್ದಾರೆ. ಆದರೆ, ಆ ಬಳಿಕ ಸತತ ನಾಲ್ಕು ಫೌಲ್‌ಗಳು ಚಿನ್ನ ಗೆಲ್ಲುವ ಅವಕಾಶಕ್ಕೆ ಅಡ್ಡಗಾಲಾದವು ಎನ್ನಬಹುದು. ಇದು ಏನೇ ಇದ್ದರು ಚೋಪ್ರಾ ಅವರು ವೈಯಕ್ತಿಕ ಸ್ಪರ್ಧೆಯಲ್ಲಿ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಸ್ವಾತಂತ್ರ್ಯಾ ನಂತರದ ಎರಡನೇ ಪುರುಷ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಭಾಜನರಾದರು.

ಪಾಕಿಸ್ತಾನದ ಅರ್ಷದ್ ನದೀಮ್ 92.97 ಮೀಟರ್ ಎಸೆದು ಚಿನ್ನ ಗೆದ್ದು, ಹೊಸ ಒಲಿಂಪಿಕ್ ದಾಖಲೆ ನಿರ್ಮಿಸಿದರು. ಮತ್ತು ಬೀಜಿಂಗ್ 2008 ರಿಂದ ಡೆನ್ಮಾರ್ಕ್‌ನ ಆಂಡ್ರಿಯಾಸ್ ಥಾರ್ಕಿಲ್ಡ್‌ಸೆನ್ ಅವರ ದಾಖಲೆಯನ್ನು ಕೂಡಾ ಅವರು ಪುಡಿಗಟ್ಟಿದರು. ಗ್ರೆನಡಾದ ಆಂಡರ್ಸನ್ ಪೀಟರ್ಸ್ 88.54 ಮೀಟರ್ ಎಸೆದು ಕಂಚಿನ ಪದಕಕ್ಕೆ ಭಾಜನರಾದರು.

ಇದಕ್ಕೂ ಮೊದಲು, ಚೋಪ್ರಾ ಅವರು ಗ್ರೂಪ್ ಬಿ ಅರ್ಹತಾ ಸುತ್ತಿನಲ್ಲಿ 89.34 ಮೀಟರ್‌ ದೂರ ಜಾವೆಲಿನ್ ಎಸೆದಿದ್ದರು. ಇದು ಅವರ ಎರಡನೇ ಅತ್ಯುತ್ತಮ ಸಾರ್ವಕಾಲಿಕ ಎಸೆತವಾಗಿತ್ತು. ನದೀಮ್‌ನೊಂದಿಗಿನ ಸ್ಪರ್ಧಾತ್ಮಕ ಪೈಪೋಟಿಯ ಹೊರತಾಗಿಯೂ, ಚೋಪ್ರಾ ಅವರು 9-0 ಮುನ್ನಡೆ ಸಾಧಿಸಿದರು. 2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನದೀಮ್ ಅವರ 90.18 ಮೀಟರ್‌ ಜಾವೆಲಿನ್ ಎಸೆತವು ಚೋಪ್ರಾ ಅವರ ಉನ್ನತ ಪ್ರಯತ್ನವನ್ನು ಮೀರಿತ್ತು.

ಇದನ್ನೂ ಓದಿ: ಬೆಳ್ಳಿ ಗೆದ್ದ ಚಿನ್ನದ ಹುಡುಗ ನೀರಜ್​ ಚೋಪ್ರಾ: "ಅತ್ಯುತ್ತಮ ಸಾಧನೆ" ಎಂದು ಪ್ರಧಾನಿ ಮೋದಿ ಶ್ಲಾಘನೆ - PM Modi praised Neeraj Chopra

ETV Bharat Logo

Copyright © 2024 Ushodaya Enterprises Pvt. Ltd., All Rights Reserved.