ETV Bharat / sports

IPLನ ಪ್ರತೀ ಪಂದ್ಯದಿಂದ ಒಬ್ಬ ಆಟಗಾರ ಗಳಿಸುವ ಹಣ ಎಷ್ಟು? ಸಂಪೂರ್ಣ ವಿವರ - IPL PLAYERS SALARY

ಐಪಿಎಲ್​ನಲ್ಲಿ ಆಡುವ ಆಟಗಾರರು ಪ್ರತೀ ಪಂದ್ಯದಿಂದ ಭಾರಿ ಹಣ ಪಡೆದುಕೊಳ್ಳುತ್ತಾರೆ.

RCB Team
ಆರ್‌ಸಿಬಿ ತಂಡ (IANS)
author img

By ETV Bharat Sports Team

Published : Nov 17, 2024, 10:44 AM IST

ಹೈದರಾಬಾದ್​: ಇಂಡಿಯನ್​​ ಪ್ರೀಮಿಯರ್​ ಲೀಗ್​ (IPL). ಇದು ಅತೀ ಹೆಚ್ಚು ಖ್ಯಾತಿ ಪಡೆದುಕೊಂಡ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್. ವರ್ಷಕ್ಕೊಮ್ಮೆ ನಡೆಯುವ ಈ ಪಂದ್ಯಾವಳಿಗೆ ICC ನಡೆಸುವ ಪ್ರತಿಷ್ಠಿತ ಟೂರ್ನಿಗಳಷ್ಟೇ ಕ್ರೇಜ್​ ಇದೆ.

ಹಾಗಾಗಿ, ಐಪಿಎಲ್​ನಲ್ಲಿ ಆಡಬೇಕೆಂದು ದೇಶ-ವಿದೇಶದ ಕ್ರಿಕೆಟರ್​ಗಳು ಬಯಸುತ್ತಾರೆ. ಒಮ್ಮೆ ಆಟಗಾರ ಇದರಲ್ಲಿ ಖ್ಯಾತಿ ಪಡೆದರೆ ಕೈತುಂಬಾ ಹಣ ಸಂಪಾದಿಸುತ್ತಾನೆ. ಆದ್ರೆ, ಒಪ್ಪಂದದ ಹಣ ಹೊರತುಪಡಿಸಿ ಒಬ್ಬ ಆಟಗಾರರು ಪ್ರತೀ ಪಂದ್ಯದಿಂದ ಗಳಿಸುವ ಹಣ ಎಷ್ಟು ಎಂಬುದು ನಿಮಗೆ ಗೊತ್ತೇ?.

ಆಟಗಾರರ ಪಂದ್ಯದ ವೇತನ: ಇತ್ತೀಚೆಗೆ ಐಪಿಎಲ್​ಗೆ ಸಂಬಂಧಿಸಿದಂತೆ ಬಿಸಿಸಿಐ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಇದರಲ್ಲಿ ಆಟಗಾರರ ಪಂದ್ಯದ ವೇತನವೂ ಒಂದು. ಇನ್ಮುಂದೆ ಐಪಿಎಲ್​ನಲ್ಲಿ ಆಡುವ ಆಟಗಾರರು ಒಪ್ಪಂದದ ಮೊತ್ತ ಹೊರತುಪಡಿಸಿ ಪ್ರತೀ ಪಂದ್ಯಕ್ಕೆ ಹೆಚ್ಚುವರಿ ಹಣವನ್ನೂ ಪಡೆಯಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ಧರು. ಐಪಿಎಲ್‌ನಲ್ಲಿ ಪ್ರತೀ ಪಂದ್ಯವನ್ನು ಆಡುವುದರಿಂದ ಒಬ್ಬ ಆಟಗಾರನಿಗೆ ಹೆಚ್ಚುವರಿಯಾಗಿ 7.5 ಲಕ್ಷ ರೂಪಾಯಿ ಪಂದ್ಯದ ಶುಲ್ಕವಾಗಿ ನೀಡಲಾಗುತ್ತದೆ ಎಂದು ಶಾ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಒಬ್ಬ ಆಟಗಾರ ಪ್ರತೀ ಪಂದ್ಯದಿಂದ 7.5 ಲಕ್ಷದ ಜೊತೆಗೆ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರೆ, ಕ್ಯಾಚ್​ಗಳನ್ನು ಪಡೆದರೆ ಅಥವಾ ವಿಕೆಟ್​ಗಳನ್ನು ಉರುಳಿಸಿದರೆ ಪಂದ್ಯದ ನಂತರ ಕೊಡುವ ಪ್ರಶಸ್ತಿ ಮತ್ತು ನಗದು ಬಹುಮಾನಗಳನ್ನು ಪಡೆಯುವ ಅವಕಾಶವಿರುತ್ತದೆ. ಪ್ರತೀ ಪ್ರಶಸ್ತಿಗೂ 1 ಲಕ್ಷ ರೂಪಾಯಿ ಬಹುಮಾನವಾಗಿ ನೀಡಲಾಗುತ್ತದೆ.

ಇದರಿಂದಾಗಿ ಪ್ರತೀ ಆಟಗಾರ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿ ಒಂದೆರಡು ಪ್ರಶಸ್ತಿಗಳನ್ನು ಪಡೆದುಕೊಂಡರೆ ಪ್ರತೀ ಪಂದ್ಯದಿಂದ 9ರಿಂದ 10 ಲಕ್ಷ ರೂ.ವರೆಗೆ ಪಡೆದುಕೊಳ್ಳಬಹುದು.

ಐಪಿಎಲ್​ ಮೆಗಾ ಹರಾಜು: ಮುಂದಿನ ಆವೃತ್ತಿಯ ಐಪಿಎಲ್​ಗೆ ಸಂಬಂಧಿಸಿದಂತೆ ನವೆಂಬರ್ 24 ಮತ್ತು 25ರಂದು ಮೆಗಾ ಹರಾಜು ನಡೆಯಲಿದೆ. ಈ ಬಾರಿ ಒಟ್ಟು 1574 ಆಟಗಾರರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 574 ಆಟಗಾರರನ್ನು ಶಾರ್ಟ್​ಲಿಸ್ಟ್​ ಮಾಡಲಾಗಿದೆ. ಈ ಪೈಕಿ 208 ವಿದೇಶಿ ಆಟಗಾರರಿದ್ದು 12 ಅನ್​ಕ್ಯಾಪ್ಡ್​ ಪ್ಲೇಯರ್​ಗಳಿದ್ದಾರೆ. ಉಳಿದಂತೆ, ಭಾರತದ 318 ಆಟಗಾರರಿದ್ದು ಇವರಲ್ಲಿ ಹೆಚ್ಚಿನವರು ಅನ್‌ಕ್ಯಾಪ್ಡ್​ ಆಟಗಾರರಾಗಿದ್ದಾರೆ.

ಇದನ್ನೂ ಓದಿ: IPL​ ಮೆಗಾ ಹರಾಜಿನಲ್ಲಿ 6 ಪ್ರಮುಖ ಬೌಲರ್‌ಗಳು: ಈ ಇಬ್ಬರ ಮೇಲೆ RCB ಕಣ್ಣು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.