ETV Bharat / sports

ರೊನಾಲ್ಡೊ ಯೂಟ್ಯೂಬ್​ ಚಾನೆಲ್ ಕೇವಲ​ ಜಾಹೀರಾತಿನಿಂದ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ! - Ronaldo Youtube Channel Income

ರೊನಾಲ್ಡೊ ಯೂಟ್ಯೂಬ್​ ಚಾನೆಲ್​ ಒಂದು ವಾರದಲ್ಲಿ ಕೇವಲ ಜಾಹೀರಾತಿನಿಂದ ಗಳಿಸಿದ್ದು ಎಷ್ಟು ಕೋಟಿ ಹಣ ಎಂಬುದರ ಕುರಿತಾದ ಮಾಹಿತಿ ಇಲ್ಲಿದೆ.

ಕ್ರಿಸ್ಟಿಯಾನೊ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ (AP)
author img

By ETV Bharat Sports Team

Published : Aug 29, 2024, 1:21 PM IST

ಹೈದರಾಬಾದ್​: ಫುಟ್​ಬಾಲ್​ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಯೂಟ್ಯೂಬ್​ ಚಾನೆಲ್​ ಆರಂಭಿಸಿ ಒಂದು ವಾರ ಕಳೆದಿದೆ. ಚಾನೆಲ್​ ಆರಂಭಗೊಂಡ ದಿನದಿಂದ ಹಿಡಿದು ಪ್ರತಿದಿನ ಒಂದಲ್ಲಾ ಒಂದು ದಾಖಲೆಗಳು ಬರೆಯುತ್ತಿದೆ. ಇದೀಗ ಕೇವಲ ಒಂದೇ ವಾರದಲ್ಲಿ ರೊನಾಲ್ಡೊ ಚಾನೆಲ್​ ಕೋಟ್ಯಂತರ ರೂಪಾಯಿ ಗಳಿಕೆ ಮಾಡಿ ಮತ್ತೊಂದು ದಾಖಲೆ ನಿರ್ಮಿಸಿದೆ. ಕಳೆದ 7 ದಿನಗಳಲ್ಲಿ ರೊನಾಲ್ಡೊ ಚಾನೆಲ್​ಗೆ ಹರಿದು ಬಂದ ಹಣದಿಂದ ಐಷಾರಾಮಿ ಬಂಗ್ಲೆ​ ಖರೀದಿಸಬಹುದಾಗಿದೆ.

ಡೈಮಂಡ್​ ಪ್ಲೇ ಬಟನ್ ಪಡೆದ ರೊನಾಲ್ಡೊ: ಪೋರ್ಚುಗೀಸ್ ಸ್ಟ್ರೈಕರ್ ರೊನಾಲ್ಡೊ ಆಗಸ್ಟ್​ 21ರಂದು 'ಯುಆರ್ ಕ್ರಿಸ್ಟಿಯಾನೋ' ಹೆಸರಿನಲ್ಲಿ ಯೂಟ್ಯೂಬ್​ ಚಾನೆಲ್​ ಆರಂಭಿಸಿದ್ದರು. ಇದು ಅನಾವರಣಗೊಂಡ 90 ನಿಮಿಷಗಳಲ್ಲೇ 1 ಮಿಲಿಯನ್​ ಚಂದಾದಾರರನ್ನು ಪಡೆದು, ಅತ್ಯಂತ ವೇಗವಾಗಿ 10 ಲಕ್ಷ ಚಂದಾದಾರನ್ನು ಪೂರೈಸಿದ ಚಾನೆಲ್​ ಎಂಬ ದಾಖಲೆಯನ್ನು ಬರೆದಿತ್ತು. ಬಳಿಕ ತಮ್ಮ ಚಾನೆಲ್‌ನಲ್ಲಿ 15 ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು. ಪ್ರತಿ ವಿಡಿಯೋ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿತ್ತು. ಚಾನೆಲ್ ಆರಂಭಿಸಿದ 90 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 10 ಲಕ್ಷಕ್ಕೂ ಹೆಚ್ಚಿನ ಫಾಲೋವರ್ಸ್ ಪಡೆದ ಕಾರಣ ಅವರಿಗೆ ಯೂಟ್ಯೂಬ್​ ಗೋಲ್ಡನ್ ಬಟನ್ ಕೂಡ ಬಂದಿತ್ತು, ಬಳಿಕ 10 ಗಂಟೆಯಲ್ಲಿಯೇ ಡೈಮಂಡ್​ ಪ್ಲೇ ಬಟನ್​​ ಸಹ ಪಡೆದಿದ್ದರು.

50 ಮಿಲಿಯನ್​ ಚಂದಾರರನ್ನು ತಲುಪಿದ ಚಾನೆಲ್​: ಇದೀಗ ಒಂದು ವಾರ ಪೂರ್ಣಗೊಂಡಿದ್ದು ಅವರ ಚಾನೆಲ್​ 50 ಮಿಲಿಯನ್ ಚಂದಾದಾರರನ್ನು ದಾಟಿದೆ. ಅಂದರೆ 5 ಕೋಟಿಗೂ ಅಧಿಕ ಸಬ್​ಸ್ಕ್ರೈಬ್​ ಪಡೆದುಕೊಂಡಿದೆ. ಈ ಮೊದಲು, ಯಾರೂ ಈ ದಾಖಲೆಯನ್ನು ಮಾಡಿಲ್ಲ. ಅಲ್ಲದೇ ಕಳೆದ 7 ದಿನಗಳಲ್ಲಿ ರೊನಾಲ್ಡೊ ಅವರ ಚಾನಲ್ 282,480,111 ಕ್ಕೂ ಹೆಚ್ಚು ಬಾರಿ ವೀಕ್ಷಣೆ ಪಡೆದುಕೊಂಡಿದೆ. ಟೈಮ್ಸ್​​ನೌ ವರದಿಯ ಪ್ರಕಾರ, ರೊನಾಲ್ಡೊ ಚಾನೆಲ್ ಕೇವಲ ಜಾಹೀರಾತಿನಿಂದ $1.2 ಮಿಲಿಯನ್ ನಿಂದ $6 ಮಿಲಿಯನ್ ಹಣ ಗಳಿಸಿದೆ.

ರೊನಾಲ್ಡೊ ಅನುಯಾಯಿಗಳ ಸಂಖ್ಯೆ ಎಷ್ಟು?: ರೊನಾಲ್ಡೊ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ 964 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಈ ಪೈಕಿ, ಅವರು Instagram ನಲ್ಲಿ ಗರಿಷ್ಠ 637 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಇದಲ್ಲದೆ, X ನಲ್ಲಿ 112.6 ಮಿಲಿಯನ್ ಮತ್ತು ಫೇಸ್‌ಬುಕ್‌ನಲ್ಲಿ 170 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: ಐಸಿಸಿ ನೂತನ ಅಧ್ಯಕ್ಷ ಜಯ್​ ಶಾ ಸಂಭಾವನೆ ಎಷ್ಟು?: ಅವರಿಗೆ ಏನೇನೆಲ್ಲಾ ಸವಲತ್ತುಗಳಿವೆ ಗೊತ್ತಾ? - JAY SHAH ICC SALARY

ETV Bharat Logo

Copyright © 2024 Ushodaya Enterprises Pvt. Ltd., All Rights Reserved.