ಹೈದರಾಬಾದ್: ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ ರನ್ಗಳಿಸುವಲ್ಲಿ ವೈಫಲ್ಯ ಅನುಭವಿಸಿದ್ದರು. ಎರಡು ಪಂದ್ಯಗಳ ನಾಲ್ಕು ಇನ್ನಿಂಗ್ಸ್‌ನಲ್ಲಿ ಒಂದೂ ಅರ್ಧಶತಕ ಸಿಡಿಸಲು ಸಾಧ್ಯವಾಗಿರಲಿಲ್ಲ. ಮೊದಲ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿ 6 ಮತ್ತು 17 ರನ್ಗಳಿಸಿದ್ದ ಕೊಹ್ಲಿ, ಎರಡನೇ ಪಂದ್ಯದಲ್ಲೂ ಮೊದಲ ಇನ್ನಿಂಗ್ಸ್‌ನಲ್ಲಿ 29 ಮತ್ತು 2ನೇ ಇನ್ನಿಂಗ್ಸ್‌ನಲ್ಲಿ 47 ರನ್ ಗಳಿಸಿದ್ದರು. ಒಟ್ಟಾರೆ ಸರಣಿಯಲ್ಲಿ 99 ರನ್ಮಾತ್ರ ಕಲೆಹಾಕಿದ್ದರು. ಇದರಿಂದಾಗಿ ಕೊಹ್ಲಿ ಟೀಕೆಗೆ ಗುರಿಯಾಗಿದ್ದರು.
ಇದೀಗ ಕೋಚ್ ಗಂಭೀರ್ ಕೊಹ್ಲಿಯನ್ನು ಸಮರ್ಥಿಸಿಕೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಕೇಳಿದ ಪ್ರಶ್ನೆಗೆ, "ಕೊಹ್ಲಿಗೆ ರನ್ ದಾಹವಿದೆ. ನ್ಯೂಜಿಲೆಂಡ್ ಸರಣಿಯಲ್ಲಿ ಖಂಡಿತಾ ತಮ್ಮ ಶಕ್ತಿ ಪ್ರದರ್ಶಿಸಲಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯಲ್ಲೂ ಅದೇ ವೇಗವನ್ನು ಮುಂದುವರಿಸುತ್ತಾರೆ ಎಂದು ಭಾವಿಸುತ್ತೇನೆ. ಒಂದು ಪಂದ್ಯ ಅಥವಾ ಸರಣಿಯ ಆಧಾರದ ಮೇಲೆ ಆಟಗಾರನನ್ನು ನಿರ್ಣಯಿಸಬಾರದು. ಕ್ರೀಡೆಯಲ್ಲಿ, ಆಟಗಾರರು ಕೆಲವೊಮ್ಮೆ ವಿಫಲರಾಗುತ್ತಾರೆ" ಎಂದರು.
ಇದು ಬೌಲರ್‌ಗಳ ಯುಗ: ಬ್ಯಾಟರ್‌ಗಳು 1,000 ರನ್ ಗಳಿಸಿದರೂ, ತಂಡ ಪಂದ್ಯ ಗೆಲ್ಲುತ್ತದೆ ಎಂಬ ಭರವಸೆ ಇಲ್ಲ, ಆದರೆ ಬೌಲರ್ 20 ವಿಕೆಟ್ ಪಡೆದರೆ ಗೆಲುವು ಖಚಿತ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಭಾರತ ನ್ಯೂಜಿಲೆಂಡ್ ಟೆಸ್ಟ್ ಸರಣಿ: ಈ ಮೂರು ದಾಖಲೆ ಬರೆಯಲು ಹಿಟ್ಮ್ಯಾನ್ ಸಜ್ಜು!