ETV Bharat / sports

ಭಾರತ ತಂಡದ ಕೋಚ್ ಆಗುವ ಬಗ್ಗೆ ಗೌತಮ್ ಗಂಭೀರ್ ಮೊದಲ ಪ್ರತಿಕ್ರಿಯೆ - Gautam Gambhir - GAUTAM GAMBHIR

ಭಾರತ ಕ್ರಿಕೆಟ್​ ತಂಡದ ಮುಂದಿನ ಕೋಚ್​ ಆಗುವ ಬಗ್ಗೆ ಮಾಜಿ ಆಟಗಾರ​ ಗೌತಮ್​ ಗಂಭೀರ್ ಪ್ರತಿಕ್ರಿಯೆ ನೀಡಿದ್ದಾರೆ.

gautam gambhir
ರೋಹಿತ್​ ಶರ್ಮಾ, ಗೌತಮ್ ಗಂಭೀರ್ (IANS)
author img

By PTI

Published : Jun 3, 2024, 8:15 AM IST

ದುಬೈ: ಭಾರತ​ ತಂಡದ ಮುಂದಿನ ಕೋಚ್​ ಯಾರು ಎಂಬ ಚರ್ಚೆ ಕ್ರಿಕೆಟ್​ ವಲಯದಲ್ಲಿ ನಡೆಯುತ್ತಿದೆ. ಮುಖ್ಯ ತರೆಬೇತುದಾರನ ಹುದ್ದೆಗೆ ಮಾಜಿ ಬ್ಯಾಟರ್​ ಗೌತಮ್​ ಗಂಭೀರ್ ಹೆಸರು ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಮೊದಲ ಬಾರಿಗೆ ಸ್ವತಃ ಗಂಭೀರ್​ ಅವರೇ ಪ್ರತಿಕ್ರಿಯಿಸಿದ್ದು, ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

ಗಂಭೀರ್ ಮಾರ್ಗದರ್ಶನದಲ್ಲಿ ಇತ್ತೀಚೆಗೆ ಕೋಲ್ಕತ್ತಾ ನೈಟ್ ರೈಡರ್ಸ್‌ ತಂಡ ಮೂರನೇ ಐಪಿಎಲ್ ಪ್ರಶಸ್ತಿ ಗೆದ್ದಿತ್ತು. ಇದಾದ ಬಳಿಕ ಗೌತಮ್​ ಕೋಚ್​ ಆಗಲೆಂದು ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಸದ್ಯ ನಡೆಯುತ್ತಿರುವ ಟಿ20 ವಿಶ್ವಕಪ್‌ನ ಬಳಿಕ ಹಾಲಿ ಕೋಚ್​ ರಾಹುಲ್​ ದ್ರಾವಿಡ್​ ಅವರ ಒಪ್ಪಂದವು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಸಮರ್ಥ ಉತ್ತರಾಧಿಕಾರಿಯ ಹುಡುಕಾಟ ನಡೆಯುತ್ತಿದೆ.

ಮುಖ್ಯ ಕೋಚ್ ಪಾತ್ರಕ್ಕೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನಾಂಕವಾಗಿತ್ತು. ಆದರೆ ಗಂಭೀರ್ ಅರ್ಜಿ ಸಲ್ಲಿಸಿದ್ದಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

''ನಾನು ಭಾರತ ತಂಡಕ್ಕೆ ಕೋಚ್ ಆಗಲು ಇಷ್ಟಪಡುತ್ತೇನೆ. ರಾಷ್ಟ್ರೀಯ ತಂಡಕ್ಕೆ ತರಬೇತಿ ನೀಡುವುದಕ್ಕಿಂತ ದೊಡ್ಡ ಗೌರವ ಮತ್ತೊಂದಿಲ್ಲ. ಇದೊಂದು 140 ಕೋಟಿ ಭಾರತೀಯರು ಮತ್ತು ಜಗತ್ತಿನಾದ್ಯಂತ ಇರುವ ಅಭಿಮಾನಿಗಳನ್ನು ಪ್ರತಿನಿಧಿಸುವ ಅವಕಾಶವಾಗಿದೆ'' ಎಂದು 42 ವರ್ಷದ ಗಂಭೀರ್​ ಅಬುಧಾಬಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.

ಇತ್ತೀಚೆಗೆ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಗಂಭೀರ್ ಅವರನ್ನು ಭಾರತ ಮುಖ್ಯ ಕೋಚ್ ಆಗಬೇಕೆಂದು ಬೆಂಬಲ ವ್ಯಕ್ತಪಡಿಸಿದ್ದರು. ಗಂಭೀರ್​ ಉತ್ತಮ ಆಯ್ಕೆ ಎಂದು ದಾದಾ ಹೇಳಿದ್ದರು.

ಅಬುಧಾಬಿಯ ಮೆಡಿಯರ್ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳ ಜೊತೆ ಗಂಭೀರ್ ಮಾತನಾಡಿದರು. ಭಾರತ ಕ್ರಿಕೆಟ್ ತಂಡಕ್ಕೆ ತರಬೇತಿ ನೀಡುವ ಬಗ್ಗೆ ಮತ್ತು ಅವರ ಅನುಭವದಿಂದ ವಿಶ್ವಕಪ್ ಗೆಲ್ಲಲು ನೆರವಾಗುವ ಬಗ್ಗೆ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆಗೆ ಗಂಭೀರ್ ಪ್ರತಿಕ್ರಿಯಿಸಿದ್ದಾರೆ. ''ಈ ಪ್ರಶ್ನೆಗೆ ನಾನು ಉತ್ತರಿಸಲು ಬಯಸುವುದಿಲ್ಲ. ಆದರೆ, ಬಹಳಷ್ಟು ಜನರು ನನಗೆ ಇದನ್ನೇ ಕೇಳಿದ್ದಾರೆ. ನಾನು ಈಗ ನಿಮಗೆ ಉತ್ತರಿಸಬೇಕಾಗಿದೆ. 140 ಕೋಟಿ ಭಾರತೀಯರು ಕೂಡ ದೇಶಕ್ಕೆ ವಿಶ್ವಕಪ್ ಗೆಲ್ಲಲು ನೆರವಾಗುತ್ತಾರೆ. ಪ್ರತಿಯೊಬ್ಬರೂ ನಮಗಾಗಿ ಪ್ರಾರ್ಥಿಸಿದರೆ ಮತ್ತು ನಾವು ದೇಶವನ್ನು ಪ್ರತಿನಿಧಿಸಿ ಆಡಿದರೆ ಮಾತ್ರ ಭಾರತ ವಿಶ್ವಕಪ್ ಗೆಲ್ಲುತ್ತದೆ. ನಿರ್ಭೀತ ಆಟದ ಪ್ರದರ್ಶನ ಅತ್ಯಂತ ಮುಖ್ಯವಾದ ವಿಚಾರ'' ಎಂದು ಗಂಭೀರ್ ಹೇಳಿದ್ದಾರೆ.

ಯುಎಇ ಪ್ರವಾಸ ಕೈಗೊಂಡಿದ್ದ ಗಂಭೀರ್​ ಅಲ್ಲಿನ ಮೀಡಿಯರ್ ಆಸ್ಪತ್ರೆಯ ಕ್ರೀಡಾ ಔಷಧ ವಿಭಾಗಕ್ಕೆ ಭೇಟಿ ನೀಡಿದ್ದರು. ಭೇಟಿಯ ಸಮಯದಲ್ಲಿ, ಅಬುಧಾಬಿಯ ವಿವಿಧ ಅಕಾಡೆಮಿಗಳ ಯುವ ಕ್ರಿಕೆಟಿಗರೊಂದಿಗೆ ಮಾತುಕತೆ ನಡೆಸಿದರು. ಸ್ಪೂರ್ತಿದಾಯಕ ಪ್ರಯಾಣ ಮತ್ತು ಇತ್ತೀಚಿನ ಸಾಧನೆಗಳ ಒಳನೋಟಗಳನ್ನು ಅವರೊಂದಿಗೆ ಹಂಚಿಕೊಂಡರು.

''ಡ್ರೆಸ್ಸಿಂಗ್ ರೂಂ ಎಂಬುದು ಸದಾ ಸಂತೋಷದಿಂದ ಕೂಡಿರಬೇಕು. ಆಗ ಮಾತ್ರ ಅದು ವಿಜೇತ ಡ್ರೆಸ್ಸಿಂಗ್ ಕೋಣೆಯಾಗಿ ಪರಿಣಮಿಸಬಹುದು. ಕೆಕೆಆರ್‌ ತಂಡದಲ್ಲಿ ನಾನು ಮಾಡಿದ ಏಕೈಕ ಕೆಲಸವೆಂದರೆ ಈ ಮಂತ್ರವನ್ನು ಅನುಸರಿಸುವುದು. ದೇವರ ದಯೆಯಿಂದ ಅದು ಕೆಲಸ ಮಾಡಿದೆ'' ಎಂದರು.

2007ರ ವಿಶ್ವ ಟಿ20 ಮತ್ತು 2011ರ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಪ್ರಮುಖ ಸದಸ್ಯರಾಗಿದ್ದ ಗಂಭೀರ್ ಅವರಿಗೆ ಕೆಕೆಆರ್ ತಂಡದ ಐಪಿಎಲ್​ ಯಶಸ್ಸಿನಿಂದಾಗಿ ಸಾಕಷ್ಟು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಇದನ್ನೂ ಓದಿ: ನಾನು ಕಷ್ಟಗಳಿಗೆ ಹೆದರಲ್ಲ, ಎದುರಿಸಿ ಗೆಲ್ಲುವೆ: ಹಾರ್ದಿಕ್​ ಪಾಂಡ್ಯ - Hardik Pandya

ETV Bharat Logo

Copyright © 2024 Ushodaya Enterprises Pvt. Ltd., All Rights Reserved.