ETV Bharat / sports

ಸಾರ್ವಕಾಲಿಕ ಟೆಸ್ಟ್​ ಪ್ಲೇಯಿಂಗ್ ​-11 ಹೆಸರಿಸಿದ ಗೌತಮ್​ ಗಂಭೀರ್​: ಕೊಹ್ಲಿ, ಧೋನಿಗೆ ತಂಡದಲ್ಲಿ ಸ್ಥಾನ, ರೋಹಿತ್​ - ಬುಮ್ರಾಗಿಲ್ಲ ಅವಕಾಶ - GAUTAM GAMBHIR INDIA TEST XI

author img

By ETV Bharat Sports Team

Published : Sep 2, 2024, 7:23 PM IST

ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​ ಗೌತಮ್​ ಗಂಭೀರ ಸಾರ್ವಕಾಲಿಕ ಟೆಸ್ಟ್​ ಪ್ಲೇಯಿಂಗ್​ - 11 ತಂಡವನ್ನು ಹೆಸರಿಸಿದ್ದಾರೆ. ಈ ತಂಡದ ನಾಯಕನಾಗಿ ಅನಿಲ್​ ಕುಂಬ್ಳೆ ಅವರನ್ನು ಆಯ್ಕೆ ಮಾಡಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಗೌತಮ್​ ಗಂಭೀರ್
ವಿರಾಟ್​ ಕೊಹ್ಲಿ ಮತ್ತು ಗೌತಮ್​ ಗಂಭೀರ್ ((AFP))

ಹೈದರಾಬಾದ್​: ಟೀಂ ಇಂಡಿಯಾದ ಮಾಜಿ ಬ್ಯಾಟರ್​ ಮತ್ತು ಪ್ರಸ್ತುತ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ತಮ್ಮ ಸಾರ್ವಕಾಲಿಕ ಟೆಸ್ಟ್​ ಪ್ಲೇಯಿಂಗ್​-11 ತಂಡವನ್ನು ಆಯ್ಕೆ ಮಾಡಿದ್ದಾರೆ. ಅವರ ಈ ತಂಡದಲ್ಲಿ ರೋಹಿತ್ ಶರ್ಮಾ ಬದಲಿಗೆ ಬೇರೆ ಬ್ಯಾಟರ್​ಗಳನ್ನು ಆರಂಭಿಕರಾಗಿ ಆಯ್ಕೆ ಮಾಡಿದ್ದಾರೆ. ಇದಲ್ಲದೇ ಅನುಭವಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ತಂಡದ ನಾಯಕನನ್ನಾಗಿ ಮಾಡಿದ್ದಾರೆ.

ಪ್ರಸ್ತುತ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ರವಿಚಂದ್ರನ್ ಅಶ್ವಿನ್ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರನ್ನು ಈ ತಂಡಕ್ಕೆ ಸೇರಿಸಿಕೊಂಡಿಲ್ಲ. ಗಂಭೀರ್ ತನ್ನ ಸಾರ್ವಕಾಲಿಕ ಭಾರತ ಟೆಸ್ಟ್ XI ನಲ್ಲಿ ಧೋನಿ ಮತ್ತು ಕೊಹ್ಲಿ ಇಬ್ಬರಿಗೂ ಸ್ಥಾನ ನೀಡಿದ್ದಾರೆ. ಕುಂಬ್ಳೆ ಅವರಿಗೆ ನಾಯಕತ್ವ ವಹಿಸಿರುವ ಗಂಭೀರ್​ ಅತ್ಯುತ್ತಮ ನಾಯಕ ಎಂದು ಒತ್ತಿ ಹೇಳಿದ್ದಾರೆ.

ಈ ತಂಡದಲ್ಲಿ ಎಡಗೈ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಆರಂಭಿಕರಾಗಿದ್ದು, ರಾಹುಲ್ ದ್ರಾವಿಡ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಕ್ರಿಕೆಟ್ ಐಕಾನ್ ಸಚಿನ್ ತೆಂಡೂಲ್ಕರ್, ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ, ಏಕದಿನ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಆಲ್ ರೌಂಡರ್ ಪಾತ್ರದಲ್ಲಿ ಮತ್ತು ಎಂಎಸ್ ಧೋನಿ ವಿಕೆಟ್ ಕೀಪರ್ ಪಾತ್ರದಲ್ಲಿರಲಿದ್ದಾರೆ. ಬೌಲಿಂಗ್​ ವಿಭಾಗದಲ್ಲಿ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಸ್ಪಿನ್ನರ್‌ಗಳಾಗಿದ್ದರೇ, ಜಾವಗಲ್ ಶ್ರೀನಾಥ್ ಮತ್ತು ಜಹೀರ್ ಖಾನ್ ವೇಗದ ಬೌಲರ್​ ಆಗಿದ್ದಾರೆ.

ಹೀಗಿದೆ ಗೌತಮ್ ಗಂಭೀರ್ ಸಾರ್ವಕಾಲಿಕ ಟೆಸ್ಟ್ ಪ್ಲೇಯಿಂಗ್​-11 ತಂಡ: ಸುನಿಲ್ ಗವಾಸ್ಕರ್, ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಕಪಿಲ್ ದೇವ್, ಎಂಎಸ್ ಧೋನಿ, ಹರ್ಭಜನ್ ಸಿಂಗ್, ಅನಿಲ್ ಕುಂಬ್ಳೆ (ನಾಯಕ), ಜಹೀರ್ ಖಾನ್, ಜಾವಗಲ್ ಶ್ರೀನಾಥ್

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್ 2024: ಭಾರತದ ಖಾತೆಗೆ ಎರಡನೇ ಚಿನ್ನ; ಬ್ಯಾಡ್ಮಿಂಟನ್​ನಲ್ಲಿ ನಿತೇಶ್​​ ಕುಮಾರ್​ ಕಮಾಲ್​​ ​ - Nitesh Kumar Clinches Gold

ETV Bharat Logo

Copyright © 2024 Ushodaya Enterprises Pvt. Ltd., All Rights Reserved.