IPL Mega Auction: ಜೆಡ್ಡಾದಲ್ಲಿ ಎರಡನೇ ದಿನ ಜಿದ್ದಾಜಿದ್ದಿನ ಹರಾಜು ಪ್ರಕ್ರಿಯೆ ಮುಂದುವರೆದಿದೆ. ಆದರೆ, ಅಚ್ಚರಿ ಎಂಬಂತೆ ಕೆಲ ಸ್ಟಾರ್ ಆಟಗಾರರು ಹರಾಜಿನಲ್ಲಿ ಯಾವುದೇ ತಂಡಗಳು ಖರೀದಿಸಿಲ್ಲ. ಇದರಲ್ಲಿ ಸ್ಪೋಟಕ ಬ್ಯಾಟರ್ಗಳು ಸೇರಿದಂತೆ ಬೌಲರ್ಗಳು ಸೇರಿದ್ದಾರೆ. ಪ್ರಮುಖವಾಗಿ ನ್ಯೂಜಿಲೆಂಡ್ನ ಸ್ಟಾರ್ ಬ್ಯಾಟರ್ಗಳಾದ ಕೇನ್ ವಿಲಿಯನ್ಸ್ನ, ಗ್ಲೆನ್ ಫಿಲಿಪ್ಸ್ , ಡೆವಿಡ್ ವಾರ್ನರ್ ಸೇರಿದಂತೆ ಭಾರತದ ಮಯಾಂಕ್ ಯಾದವ್ ಅವರನ್ನು ಯಾವುದೇ ತಂಡಗಳು ಖರೀದಿ ಮಾಡಿಲ್ಲ. ಏತನ್ಮಧ್ಯೆ ಡೇಂಜರ್ ಬೌಲರ್ ಒಬ್ಬರು ಅನ್ಸೋಲ್ಡ್ ಆಗಿ ಅಚ್ಚರಿ ಮೂಡಿಸಿದ್ದಾರೆ.
ಐಪಿಎಲ್ನಲ್ಲಿ 148 ಪಂದ್ಯಗಳನ್ನು ಆಡಿರುವ ಈ ಬೌಲರ್ 144 ವಿಕೆಟ್ಗಳನ್ನು ಉರುಳಿಸಿದ್ದಾರೆ. ಇದಷ್ಟೇ ಅಲ್ಲದೇ ವಿಶ್ವಕಪ್ನಲ್ಲಿ ಅತೀ ಹೆಚ್ಚು ವಿಕೆಟ್ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. 2015ರ ವಿಶ್ವಕಪ್ನಲ್ಲಿ 18 ವಿಕೆಟ್ ಪಡೆದಿದ್ದ ಉಮೇಶ್ ಯಾದವ್ ಭಾರತದ ಪರ ಅತೀ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಆದರೆ, ಈ ಬಾರಿಯ ಹರಾಜಿನಲ್ಲಿ ಅವರನ್ನು ಯಾವುದೇ ತಂಡಗಳು ಖರೀದಿಸಿಲ್ಲ.
ಕ್ರಿಕೆಟ್ನಲ್ಲಿ 152ರ ವೇಗದಲ್ಲಿ ಬೌಲಿಂಗ್ ಮಾಡಿದ್ದ ದಾಖಲೆಯನ್ನು ಉಮೇಶ್ ಯಾದವ್ ಹೊಂದಿದ್ದಾರೆ. ಈ ಬಾರಿ ಕಳೆದ ಬಾರಿ ಗುಜರಾತ್ ಟೈಟಾನ್ಸ್ ತಂಡದ ಪರ ಆಡಿದ್ದ ಇವರನ್ನು GT ರಿಟೇನ್ ಮಾಡಿಕೊಳ್ಳದೇ ತಂಡದಿಂದ ಕೈಬಿಟ್ಟಿತ್ತು. ಈ ಹಿನ್ನೆಲೆ 2 ಕೋಟಿ ಮೂಲ ಬೆಲೆಯೊಂದಿಗೆ ಉಮೇಶ್ ಹರಾಜಿಗೆ ಬಂದಿದ್ದರು. ಆದರೆ, 10 ತಂಡಗಳೂ ಇವರನ್ನು ಖರೀದಿಸಲು ಮುಂದೆ ಬರಲಿಲ್ಲ. ಇದರಿಂದಾಗಿ ಉಮೇಶ್ ಅನ್ಸೋಲ್ಡ್ ಲೀಸ್ಟ್ಗೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಅಚ್ಚರಿ...! 121 ಐಪಿಎಲ್ ಪಂದ್ಯ 2,665 ರನ್: 13 ಅರ್ಧಶತಕ, 1 ಶತಕ ಸಿಡಿಸಿದ್ದ ಕನ್ನಡಿಗನೂ Unsold!