ETV Bharat / sports

ರಾಂಚಿ ಟೆಸ್ಟ್​: ಚೊಚ್ಚಲ ಪಂದ್ಯದಲ್ಲೇ ಆಕಾಶ್​ ದೀಪ್​ ಮಿಂಚು, ಇಂಗ್ಲೆಂಡ್​ 112ಕ್ಕೆ 5 ವಿಕೆಟ್​ - ಆಕಾಶ್​ ದೀಪ್

ನಾಲ್ಕನೇ ಟೆಸ್ಟ್​ ಪಂದ್ಯದ ಮೊದಲ ದಿನದ​​ ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್ 5 ವಿಕೆಟ್​ ಕಳೆದುಕೊಂಡು 112 ರನ್​ ಬಾರಿಸಿದೆ.

Etv Bharat
Etv Bharat
author img

By ETV Bharat Karnataka Team

Published : Feb 23, 2024, 11:54 AM IST

ರಾಂಚಿ: ಪದಾರ್ಪಣೆ ಪಂದ್ಯದಲ್ಲೇ ಮಿಂಚಿನ ಬೌಲಿಂಗ್​ ಪ್ರದರ್ಶಿಸಿದ ಆಕಾಶ್​ ದೀಪ್​ ದಾಳಿಗೆ ಸಿಲುಕಿದ ಇಂಗ್ಲೆಂಡ್​​ ತಂಡ ಭೋಜನ ವಿರಾಮದ ವೇಳೆಗೆ 5 ವಿಕೆಟ್​ ಕಳೆದುಕೊಂಡು 112 ರನ್​ ಗಳಿಸಿದೆ. ಇಲ್ಲಿನ ಜೆಎಸ್‌ಸಿಎ ಇಂಟರ್‌ನ್ಯಾಷನಲ್ ಮೈದಾನದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್​ ಪಂದ್ಯದಲ್ಲಿ ಟಾಸ್​​ ಗೆದ್ದ ಆಂಗ್ಲರು ಮೊದಲು ಬ್ಯಾಟಿಂಗ್​ಗಿಳಿದಿದ್ದಾರೆ.

ಸರಣಿ ಸಮಬಲ ಸಾಧಿಸುವ ನಿಟ್ಟಿನಲ್ಲಿ ಕಣಕ್ಕಿಳಿದಿರುವ ಇಂಗ್ಲೆಂಡ್​ ಎಂದಿನಂತೆ ಬಾಜ್​​ಬಾಲ್​ ಶೈಲಿಯ ಬಿರುಸಿನ ಆರಂಭ ಪಡೆಯಿತು. ಮೊದಲ ವಿಕೆಟ್​ಗೆ ಝಾಕ್​ ಕ್ರಾಲಿ (42) ಹಾಗೂ ಬೆನ್​ ಡಕೆಟ್​ (11) 9.2 ಓವರ್​ಗಳಲ್ಲೇ 47 ರನ್​ ಸೇರಿಸಿದರು. ಈ ಹಂತದಲ್ಲಿ 11 ರನ್​ ಬಾರಿಸಿದ್ದ ಡಕೆಟ್​ ಆಕಾಶ್​ ದೀಪ್​ಗೆ ಮೊದಲ ಬಲಿಯಾದರು.

ನಂತರ ಬ್ಯಾಟಿಂಗ್​ಗೆ ಬಂದ ಒಲಿ ಪೋಪ್​ ಕೇವಲ ಎರಡು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಪೆವಿಲಿಯನ್​ಗೆ ಮರಳಿದರು. ಈ ಮೂಲಕ ಆಕಾಶ್​ ಎರಡನೇ ವಿಕೆಟ್​ ಕಬಳಿಸಿದರು. 12 ನೇ ಓವರ್​ನಲ್ಲಿ ಭರ್ಜರಿ ಇನ್​ಸ್ವಿಂಗರ್​ ಎಸೆದ ಆಕಾಶ್​ ದೀಪ್​ ಉತ್ತಮವಾಗಿ ಆಡುತ್ತಿದ್ದ ಕ್ರಾಲಿ ಬೌಲ್ಡ್​​ ಮಾಡಿ, ಇಂಗ್ಲೆಂಡ್​ಗೆ ಮತ್ತೊಂದು ಶಾಕ್​ ನೀಡಿದರು. 57 ರನ್​ಗಳಿಗೆ ಇಂಗ್ಲೆಂಡ್​ 3 ವಿಕೆಟ್​ ಕಳೆದು ಕೊಂಡಿತ್ತು.

ಇದನ್ನೂ ಓದಿ: ನಾಲ್ಕನೇ ಟೆಸ್ಟ್​: ಸರಣಿ ಗೆಲುವಿನತ್ತ ಭಾರತ ಚಿತ್ತ; ಮರು ಹೋರಾಟಕ್ಕೆ ಆಂಗ್ಲ ಪಡೆ ಸಜ್ಜು

ಈ ಹಂತದಲ್ಲಿ ಒಂದಾದ ಅನುಭವಿ ಜೋ ರೂಟ್​ ಹಾಗೂ ಜಾನಿ ಬೈರ್​ಸ್ಟೋ ನಾಲ್ಕನೇ ವಿಕೆಟ್​ಗೆ 52 ರನ್​ ಸೇರಿಸಿ ಆಸರೆಯಾದರು. ಈ ಹಂತದಲ್ಲಿ ಆಕ್ರಮಣಕಾರಿ ಆಟವಾಡುತ್ತಿದ್ದ ಬೈರ್​ಸ್ಟೋ (38, 34 ಎಸೆತ) ಅವರು ಅಶ್ವಿನ್​ ಸ್ಪಿನ್​ ಬಲೆಗೆ ಬಿದ್ದರು. ಬಳಿಕ ಮೈದಾನಕ್ಕಿಳಿದ ನಾಯಕ ಬೆನ್​ ಸ್ಟೋಕ್ಸ್​ರನ್ನು ಜಡೇಜಾ ಕೇವಲ 3 ರನ್​ಗೆ ಎಲ್​ಬಿ ಬಲೆಗೆ ಬೀಳಿಸಿದರು.

ಸ್ಟೋಕ್ಸ್​ ಔಟಾಗುತ್ತಿದ್ದಂತೆ ಭೋಜನ ವಿರಾಮ ತೆಗೆದುಕೊಳ್ಳಲಾಗಿದೆ. 24.1 ಓವರ್​ಗಳಲ್ಲಿ ಇಂಗ್ಲೆಂಡ್​ 5 ವಿಕೆಟ್​ಗೆ 112 ರನ್​ ಪೇರಿಸಿದೆ. ಭಾರತದ ಪರ ಆಕಾಶ್​ ದೀಪ್ 24 ರನ್​ಗೆ​ 3 ಹಾಗೂ ಸ್ಪಿನ್​ ಜೋಡಿ ಆರ್​. ಅಶ್ವಿನ್​ ಮತ್ತು ರವೀಂದ್ರ ಜಡೇಜಾ ತಲಾ ಒಂದು ವಿಕೆಟ್​ ಪಡೆದು ಪಂದ್ಯದ ಆರಂಭಿಕ ಅವಧಿಯಲ್ಲೇ ಟೀಂ ಇಂಡಿಯಾಕ್ಕೆ ಮೇಲುಗೈ ಒದಗಿಸಿದ್ದಾರೆ.

ಇದನ್ನೂ ಓದಿ: ರಾಂಚಿ ಟೆಸ್ಟ್: ಟಾಸ್​​ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್​ ಆಯ್ಕೆ; ಭಾರತದ ಪರ ಆಕಾಶ್​ ದೀಪ್​ ಪದಾರ್ಪಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.