ETV Bharat / sports

ಟೆಸ್ಟ್​ನಲ್ಲಿ 5 ಲಕ್ಷ ರನ್​ ಪೂರ್ಣಗೊಳಿಸಿದ ಇಂಗ್ಲೆಂಡ್​: ವಿಶ್ವದ ಏಕೈಕ ತಂಡವಾಗಿ ದಾಖಲೆ; 3ನೇ ಸ್ಥಾನದಲ್ಲಿದೆ ಭಾರತ! - ENG VS NZ 2ND TEST

ನ್ಯೂಜಿಲೆಂಡ್​ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಟೆಸ್ಟ್​ ಕ್ರಿಕೆಟ್​ನಲ್ಲಿ 5 ಲಕ್ಷ ರನ್​​ ಪೂರ್ಣಗೊಳಿಸಿದೆ.

ENG VS NZ 2ND TEST  ENGLAND CRICKET TEAM  TEST CRICKET  ENGLAND TEST RECORD
England test Cricket (Source Associated Press)
author img

By ETV Bharat Sports Team

Published : Dec 7, 2024, 1:05 PM IST

England Test Record: ಟೆಸ್ಟ್​ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ವಿಶ್ವ ದಾಖಲೆ ನಿರ್ಮಿಸಿದೆ. 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ 5 ಲಕ್ಷ ರನ್​ ಗಡಿ ದಾಟಿದ ಮೊದಲ ತಂಡವಾಗಿ ದಾಖಲೆ ಬರೆದಿದೆ.

ಸದ್ಯ ನ್ಯೂಜಿಲೆಂಡ್​ ಪ್ರವಾಸದಲ್ಲಿರುವ ಇಂಗ್ಲೆಂಡ್​ ತಂಡ ಕಿವೀಸ್​ ವಿರುದ್ಧ 3 ಪಂದ್ಯಗಳ ಟೆಸ್ಟ್​ ಸರಣಿಯನ್ನು ಆಡುತ್ತಿದೆ. ಮೊದಲ ಪಂದ್ಯದಲ್ಲಿ 8 ವಿಕೆಟ್​ಗಳಿಂದ ಗೆದ್ದಿರುವ ಆಂಗ್ಲರು ಇದೀಗ ಎರಡನೇ ಪಂದ್ಯದ ಮೇಲೂ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ. ಮೊದಲ ಇನ್ನಿಂಗ್ಸ್​ನಲ್ಲಿ ಹ್ಯಾರಿ ಬ್ರೂಕ್​ (123) ಮತ್ತು ಓಲಿ ಪೋಪ್​ (66) ಬ್ಯಾಟಿಂಗ್​ ನೆರವಿನಿಂದ 280 ರನ್​ ಕಲೆ ಹಾಕಿದ್ದ ಆಂಗ್ಲರು, ಕಿವೀಸ್​ ಪಡೆಯನ್ನು 125 ರನ್​ಗಳಿಗೆ ಆಲೌಟ್​ ಮಾಡಿದ್ದರು. ಇದೀಗ ಎರಡನೇ ಇನ್ನಿಂಗ್ಸ್​ನಲ್ಲೂ 500+ ರನ್​ಗಳ ಮುನ್ನಡೆಯೊಂದಿಗೆ ಬ್ಯಾಟಿಂಗ್​ ಅನ್ನು ಮುಂದುವರೆಸಿದೆ. ಕಿವೀಸ್​ ಪಡೆಗೆ ಬೃಹತ್​ ಗುರಿಯನ್ನು ನೀಡಲು ಯೋಜನೆ ರೂಪಿಸಿಕೊಂಡಿದೆ. ಇದೇ ಪಂದ್ಯದಲ್ಲಿ ಇಂಗ್ಲೆಂಡ್ 5 ಲಕ್ಷ ರನ್​ಗಳನ್ನು ಪೂರ್ಣಗೊಳಿಸಿದೆ.

ಟೆಸ್ಟ್​ ಇತಿಹಾಸ: 1877ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್​ ತನ್ನ ಮೊದಲ ಟೆಸ್ಟ್ ಪಂದ್ಯವನ್ನು ಆಡಿತು. ಅಲ್ಲಿಂದ​ ಈವರೆಗೆ ಒಟ್ಟು 1082 ಪಂದ್ಯಗಳನ್ನು ಆಡಿದೆ. ವಿಶ್ವ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿದ ತಂಡವಾಗಿಯೂ ಇಂಗ್ಲೆಂಡ್ ದಾಖಲೆ ಬರೆದಿದೆ. ಇದೀಗ 5 ಲಕ್ಷ ರನ್​ ಮೈಲಿಗಲ್ಲು ತಲುಪಿದೆ. 717 ಆಟಗಾರರ ಸಹಾಯದಿಂದ ಇಂಗ್ಲೆಂಡ್​ ಈ ಸಾಧನೆ ಮಾಡಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ತಂಡ ಆಸ್ಟ್ರೇಲಿಯಾ ಆಗಿದೆ. ಈವರೆಗೆ ಆಸೀಸ್​ 4,28,816 ಟೆಸ್ಟ್​ ರನ್‌ಗಳನ್ನು ಪೂರ್ಣಗೊಳಿಸಿದೆ. ಟೀಂ ಇಂಡಿಯಾ ಮೂರನೇ ಸ್ಥಾನದಲ್ಲಿದೆ. ಆದರೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾಕ್ಕೆ ಹೋಲಿಸಿದರೆ ಭಾರತದ ರನ್‌ಗಳಲ್ಲಿ ಭಾರಿ ವ್ಯತ್ಯಾಸವಿದೆ. ಇದುವರೆಗೆ ಭಾರತ 586 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 316 ಆಟಗಾರರ ನೆರವಿನಿಂದ 2 ಲಕ್ಷ 78 ಸಾವಿರ ರನ್ ಗಳಿಸಿದೆ.

929 ಶತಕ: ಇಂಗ್ಲೆಂಡ್‌ನ ಎಲ್ಲ ಅಗ್ರ ಬ್ಯಾಟ್ಸ್‌ಮನ್‌ಗಳು ಇದುವರೆಗೆ ಟೆಸ್ಟ್‌ನಲ್ಲಿ 929 ಶತಕಗಳನ್ನು ಗಳಿಸಿದ್ದಾರೆ. ಇಂಗ್ಲೆಂಡ್​ ಪರ ಜೋ ರೂಟ್ 35 ಶತಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಎಲ್ಲ ಆಟಗಾರರು ಈವರೆಗೆ ಟೆಸ್ಟ್​ನಲ್ಲಿ 592 ಶತಕ ಸಿಡಿಸಿದ್ದರೆ, ಟೀಂ ಇಂಡಿಯಾ ಆಟಗಾರರು 552 ಶತಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಟೆಸ್ಟ್​ನಲ್ಲಿ ಹೆಚ್ಚು ರನ್​ ಗಳಿಸಿದ ತಂಡಗಳು

  • ಇಂಗ್ಲೆಂಡ್​ - 5,00,000
  • ಆಸ್ಟ್ರೇಲಿಯಾ - 4,28,816
  • ಇಂಡಿಯಾ - 2,78,751
  • ವೆಸ್ಟ್​ ಇಂಡೀಸ್​ - 2,70,429
  • ದಕ್ಷಿಣ ಆಫ್ರಿಕಾ - 2,18,108

ಇದನ್ನೂ ಓದಿ: ₹1.3 ಲಕ್ಷ ಕೋಟಿ ರೂ ದಾಟಿದ IPL ಬ್ರಾಂಡ್ ವ್ಯಾಲ್ಯೂ​: RCB ಮೌಲ್ಯ ಎಷ್ಟು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.