ETV Bharat / sports

ಬೆಂಗಳೂರಲ್ಲಿ ರನ್​ ಹೊಳೆ ಹರಿಸಿದ ವನಿತೆಯರು! 646 ರನ್, 4 ಸೆಂಚುರಿ; ರೋಚಕ ಪಂದ್ಯ ಗೆದ್ದು ಬೀಗಿದ ಭಾರತ - India Beat South Africa - INDIA BEAT SOUTH AFRICA

ದಕ್ಷಿಣ ಆಫ್ರಿಕಾ ವಿರುದ್ಧದ ಐಸಿಸಿ ಚಾಂಪಿಯನ್​ಶಿಪ್​ ಏಕದಿನ ಸರಣಿಯನ್ನು 2-0 ಅಂತರದಿಂದ ಭಾರತೀಯ ವನಿತೆಯರು ಗೆದ್ದಿದ್ದಾರೆ.

India beat South Africa
ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಗೆದ್ದ ಭಾರತೀಯ ವನಿತೆಯರು (Ani Pictures)
author img

By PTI

Published : Jun 19, 2024, 9:35 PM IST

Updated : Jun 19, 2024, 10:06 PM IST

ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಐಸಿಸಿ ಚಾಂಪಿಯನ್​ಶಿಪ್​ ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ವನಿತೆಯರು ರನ್​ ಮಳೆ ಸುರಿಸಿದರು. ಚಿಕ್ಕ ಬೌಂಡರಿಯಲ್ಲಿ ಎರಡೂ ಇನ್ನಿಂಗ್ಸ್​ ಮೂಲಕ ಬರೋಬ್ಬರಿ 646 ರನ್​ಗಳು ಹರಿದುಬಂದವು. ಕೊನೆಯ ಎಸೆತದವರೆಗೂ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಹರ್ಮನ್​ಪ್ರೀತ್​ ಕೌರ್​ ಪಡೆ 4 ರನ್​ಗಳಿಂದ ಗೆಲುವಿನ ಕೇಕೆ ಹಾಕಿತು. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿರುವಾಗಲೇ 2-0 ಅಂತರದಿಂದ ಭಾರತೀಯ ವನಿತೆಯರು ಜಯಿಸಿದರು.

ಭಾನುವಾರ ಇದೇ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಹರ್ಮನ್​ಪ್ರೀತ್​ ಕೌರ್​ ಬಳಗ 143 ರನ್‌ಗಳಿಂದ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತ್ತು. ಇಂದಿನ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ನಾಯಕಿ ಲೌರಾ ವೊಲ್ವಾರ್ಡ್ಟ್ ಟಾಸ್​ ಗೆದ್ದು, ಭಾರತೀಯ ವನಿತೆಯರಿಗೆ ಮೊದಲು ಬ್ಯಾಟಿಂಗ್​ಗೆ ಆಹ್ವಾನಿಸಿದ್ದರು.

ಹರಿಣ ಪಡೆಯ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಸ್ಟಾರ್​ ಬ್ಯಾಟರ್​ ಸ್ಮೃತಿ ಮಂಧಾನ (136) ಹಾಗೂ ನಾಯಕಿ ಹರ್ಮನ್​ಪ್ರೀತ್​ ಕೌರ್ (103 ಅಜೇಯ) ನೆರವಿನಿಂದ ಕೇವಲ ಮೂರು ವಿಕೆಟ್​ ನಷ್ಟಕ್ಕೆ ಟೀಂ ಇಂಡಿಯಾ 325 ರನ್​​ಗಳ ಬೃಹತ್​ ಮೊತ್ತ ಪೇರಿಸಿತ್ತು. ಈ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆಟಗಾರ್ತಿಯರು ನಿಗದಿತ 50 ಓವರ್​ಗಳಲ್ಲಿ 6 ವಿಕೆಟ್​ ಕಳೆದುಕೊಂಡು 321 ರನ್​ ಕಲೆಹಾಕಲಷ್ಟೇ ಶಕ್ತವಾದರು.

ಎರಡು ಇನ್ನಿಂಗ್ಸ್; ತಲಾ ಎರಡು ಸೆಂಚುರಿ!: ಮೊದಲು ಬ್ಯಾಟ್​ ಮಾಡಿದ ಭಾರತ ತಂಡದ ಮಂಧಾನ ಹಾಗೂ ಕೌರ್ ಇಬ್ಬರೂ ಶತಕ ಸಿಡಿಸಿ ಮಿಂಚಿದರು. ನಂತರ ಬೃಹತ್ ಟಾರ್ಗೆಟ್‌ ಅನ್ನು ಸವಾಲಾಗಿ ಸ್ವೀಕರಿಸಿದ ದಕ್ಷಿಣ ಆಫ್ರಿಕಾ ನಾಯಕಿ ವೂಲ್ವಾರ್ಡ್ ಹಾಗೂ ಮರಿಝನ್ನೆ ಕಪ್ಪ್ ಸಹ ಅಮೋಘ ಬ್ಯಾಟಿಂಗ್ ಮೂಲಕ ಶತಕ ಬಾರಿಸಿದರು. ಮೊದಲ ಇನ್ನಿಂಗ್ಸ್​ನಲ್ಲಿ ಸ್ಮೃತಿ ಮತ್ತು ಕೌರ್​ ತಮ್ಮ ಬ್ಯಾಟಿಂಗ್​ ವೈಭವ ಪ್ರದರ್ಶಿಸಿದರೆ, ಎರಡನೇ ಇನ್ನಿಂಗ್ಸ್​ನಲ್ಲಿ ವೂಲ್ವಾರ್ಡ್, ಕಪ್ಪ್ ಜೋಡಿ ಅತ್ಯುತ್ತಮ ಜೊತೆಯಾಟ ನೀಡಿ ಪ್ರೇಕ್ಷಕರ ಮನಸೂರೆಗೊಳಿಸಿತು.

ಮಂಧಾನ-ಕೌರ್; 171 ರನ್​ ಜೊತೆಯಾಟ: ಭಾರತದ ಪರ ಮಂಧಾನ ಜೊತೆಗೆ ಕ್ರೀಸ್​ಗೆ ಬಂದಿದ್ದ ಶಫಾಲಿ ವರ್ಮಾ 20 ರನ್​ಗೆ ವಿಕೆಟ್​ ಒಪ್ಪಿಸಿದರು. ಎರಡನೇ ಕ್ರಮಾಂಕದಲ್ಲಿ ಬಂದ ಹೇಮಲತಾ ಸಹ 24 ರನ್​ಗೆ ಸೀಮಿತವಾದರು. ಈ ವೇಳೆ, ತಂಡದ ಮೊತ್ತ 23 ಓವರ್​ಗಳಲ್ಲಿ ಕೇವಲ 100 ರನ್​ ಆಗಿತ್ತು. ಆಗ ನಾಯಕಿ ಹರ್ಮನ್​ಪ್ರೀತ್​ ಕೌರ್ ಅವರು ಸ್ಮೃತಿ ಮಂಧಾನ ಜೊತೆಗೂಡಿದರು. ಈ ಜೋಡಿ ಅದ್ಭುತ ಹೊಡೆತಗಳೊಂದಿಗೆ ರನ್​ ವೇಗ ನೀಡಿದರು. ಇದರ ನಡುವೆ ಬಿರುಸಾಗಿ ಬ್ಯಾಟ್​ ಬೀಸಿದ ಸ್ಮೃತಿ ಮಂಧಾನ 103 ಎಸೆತಗಳಲ್ಲಿ ಶತಕ ಪೂರೈಸಿದರು. ಏಕದಿನ ಕ್ರಿಕೆಟ್​ನಲ್ಲಿ 7ನೇ ಶತಕದ ದಾಖಲೆ ಬರೆದರು.

ಮೂರನೇ ವಿಕೆಟ್​ಗೆ ಸ್ಮೃತಿ ನಿರ್ಗಮಿಸುವ ವೇಳೆ ಈ ಜೋಡಿ 136 ಬಾಲ್​ಗಳಲ್ಲಿ 171 ರನ್​ ಬಾರಿಸಿತು. 120 ಎಸತೆಗಳಲ್ಲಿ 136 ಬಾರಿಸಿದ ಸ್ಮೃತಿ ಅವರ ಇನ್ನಿಂಗ್ಸ್‌ನಲ್ಲಿ​ 18 ಬೌಂಡರಿ, 2 ಸಿಕ್ಸರ್ ಒಳಗೊಂಡಿತ್ತು. ಮೊದಲ ಏಕದಿನ ಪಂದ್ಯದಲ್ಲಿ 117 ರನ್ ಗಳಿಸಿದ್ದ ಸ್ಮೃತಿ, ದ್ವಿತೀಯ ಪಂದ್ಯದಲ್ಲಿಯೂ ಶತಕ ದಾಖಲಿಸುವ ಮೂಲಕ ಸತತ ಎರಡು ಶತಕ ದಾಖಲಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಖ್ಯಾತಿಗೂ ಭಾಜನರಾದರು.

ಮತ್ತೊಂದೆಡೆ, ಕೊನೆಯಲ್ಲಿ ನಾಯಕಿ ಹರ್ಮನ್​ಪ್ರೀತ್​ ಕೌರ್ ಸಹ ತಮ್ಮ ಶತಕ ಪೂರೈಸಿದರು. 88 ಎಸೆತಗಳನ್ನು ಎದುರಿಸಿದ ನಾಯಕಿ 9 ಬೌಂಡರಿ, 3 ಸಿಕ್ಸರ್​ಸಮೇತ 103 ರನ್​ ಸಿಡಿಸಿ ಅಜೇಯರಾಗಿ ಉಳಿದರು. ವಿಕೆಟ್​ ಕೀಪರ್​ ರಿಚಾ ಘೋಷ್ 25 ರನ್​ಗಳ ಕಾಣಿಕೆ ನೀಡಿದರು. ಈ ಮೂಲಕ ಭಾರತೀಯ ವನಿತೆಯರು 325 ರನ್​​ ಬೃಹತ್​ ಮೊತ್ತ ಪೇರಿಸಲು ಸಾಧ್ಯವಾಯಿತು.

ವೂಲ್ವಾರ್ಡ್-ಕಪ್ಪ್; 184 ರನ್​ ಜೊತೆಯಾಟ: 325 ರನ್​ಗಳ ದೊಡ್ಡ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಆಟಗಾರ್ತಿಯರೂ ಸಹ ಪ್ರಬಲ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕರಾಗಿ ಬಂದ ನಾಯಕಿ ವೂಲ್ವಾರ್ಡ್ ಅವರಿಗೆ ಇತರ ಬ್ಯಾಟರ್​ಗಳು ಅಷ್ಟೇನು ಉತ್ತಮ ಸಾಥ್​ ನೀಡಲಿಲ್ಲ. ತಜ್ಮಿನ್ ಬ್ರಿಟ್ಸ್ (5), ಅನ್ನೆಕೆ ಬಾಷ್ (18), ಸುನೆ ಲೂಸ್ (12) ಬೇಗನೇ ಪೆವಿಲಿಯನ್​ ಸೇರಿಕೊಂಡರು. ಹೀಗೆ ವಿಕೆಟ್​ ಉರುಳುತ್ತಿದ್ದ ಸಮಯದಲ್ಲಿ ಮರಿಝನ್ನೆ ಕಪ್ಪ್ ಕ್ರೀಸ್​ಗೆ ಬಂದರು. ಈ ಜೋಡಿ 170 ಬಾಲ್​ಗಳಲ್ಲಿ 184 ರನ್​ಗಳನ್ನು ಬಾರಿಸಿ ಪಂದ್ಯದ ಗತಿಯನ್ನೇ ಬದಲಿಸಿದರು. ಕಪ್ಪ್ 114 ಬಾರಿಸಿ ವಿಕೆಟ್​ ಒಪ್ಪಿಸಿದರು.

ಇದರ ನಡುವೆ ಕೊನೆಯ 5 ಓವರ್‌ಗಳಲ್ಲಿ ಹರಿಣಗಳಿಗೆ 54 ರನ್‌ಗಳು ರನ್​ಗಳು ಬಾಕಿತ್ತು. ನಾಯಕಿ ವೂಲ್ವಾರ್ಡ್ ಅವಕಾಶ ಸಿಕ್ಕಾಗ ಬೌಂಡರಿಗಳನ್ನು ಬಾರಿಸುವ ಮೂಲಕ ಅಂತಿಮ ಓವರ್‌ ಅನ್ನು 11 ರನ್​ಗೆ ಇಳಿಸಿದರು. ಆದರೆ, ಈ ಓವರ್​ನಲ್ಲಿ ಪೂಜಾ ವಸ್ತ್ರಕರ್ ಎರಡು ವಿಕೆಟ್‌ಗಳನ್ನು ಪಡೆಯುವ ಮೂಲಕ ಆಘಾತ ನೀಡಿದರು. ನಾಯಕಿ ವೂಲ್ವಾರ್ಡ್ 135 ಬಾರಿಸಿ ಅಜೇಯರಾಗಿ ಉಳಿದರೂ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ವಿಫಲರಾಗಿ 4 ರನ್​ಗಳ ಸೋಲುಂಡರು.

ಇದನ್ನೂ ಓದಿ: ದ.ಆಫ್ರಿಕಾ ವಿರುದ್ಧ 2ನೇ ಏಕದಿನ ಪಂದ್ಯ: ಸ್ಮೃತಿ, ಹರ್ಮನ್ ಶತಕ ವೈಭವ!

Last Updated : Jun 19, 2024, 10:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.