77 Runs In one over: ಕ್ರಿಕೆಟ್ ಲೋಕದಲ್ಲಿ ದಾಖಲೆಗಳನ್ನು ನಿರ್ಮಿಸುವುದು ಮತ್ತು ಮುರಿಯುವುದು ಸಾಮಾನ್ಯ. ಆದರೆ, ಊಹಿಸಲೂ ಸಾಧ್ಯವಾಗದ ಕೆಲ ಅಪರೂಪದ ದಾಖಲೆಗಳು ಕೂಡ ನಿರ್ಮಾಣಗೊಂಡಿವೆ. ಅವುಗಳಲ್ಲಿ ಒಂದು ಬೌಲರ್ ಒಬ್ಬ ಓವರ್ ಒಂದರಲ್ಲಿ 77 ರನ್ಗಳು ಬಿಟ್ಟುಕೊಟ್ಟಿರುವುದು. ಇದು ನಂಬಲು ಅಸಾಧ್ಯವೆನಿಸಿದರೂ ನಿಜ. ಹಾಗಾದರೆ ಬನ್ನಿ ಈ ದಾಖಲೆ ಯಾವಾಗ ನಿರ್ಮಾಣವಾಯಿತು. ಯಾವ ಬೌಲರ್ ಹೆಸರಲ್ಲಿದೆ ಈ ಕಳಪೆ ದಾಖಲೆ ಎಂದು ಇದೀಗ ತಿಳಿಯೋಣ.
ವಾಸ್ತವಾಗಿ, ಫೆಬ್ರವರಿ 20, 1990ರಂದು ನ್ಯೂಜಿಲೆಂಡ್‌ನಲ್ಲಿ ನಡೆದ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಈ ದಾಖಲೆ ನಿರ್ಮಾಣಗೊಂಡಿದೆ. ವೆಲ್ಲಿಂಗ್ಟನ್ಸ್ ಮತ್ತು ಕ್ಯಾಂಟರ್ಬರ್ರಿ ಮಧ್ಯ ಕ್ರೈಸ್ಟ್ ಚರ್ಚ್ನಲ್ಲಿ ವೆಲ್ಲಿಂಗ್ಟನ್ ಶೆಲ್ ಟ್ರೋಫಿ ಟೆಸ್ಟ್ ಪಂದ್ಯವನ್ನು ಆಯೋಜಿಸಲಾಗಿತ್ತು. ಈ ವೇಳೆ, ಕ್ಯಾಂಟರ್‌ಬರಿ ತಂಡಕ್ಕೆ ಪಂದ್ಯವನ್ನು ಗೆಲ್ಲಲು 2 ಓವರ್‌ಗಳಲ್ಲಿ 95 ರನ್‌ಗಳ ಅಗತ್ಯವಿತ್ತು. ವೆಲ್ಲಿಂಗ್ಟನ್ ಪರ ಬೌಲಿಂಗ್ ಮಾಡಿದ ಬರ್ಟ್ ವ್ಯಾನ್ಸ್ ಒಂದೇ ಓವರ್‌ನಲ್ಲಿ 22 ಬೌಲ್ಗಳನ್ನು ಎಸೆದಿದ್ದಲ್ಲದೇ 77 ರನ್ಗಳನ್ನು ಬಿಟ್ಟುಕೊಟ್ಟಿದ್ದಾರೆ. ಈ ವೇಳೆ ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಲೀ ಜರ್ಮನ್ ಈ ಓವರ್‌ನಲ್ಲಿ 70 ರನ್ ಸಿಡಿಸಿದ್ದರು. ಇದು ಕ್ರಿಕೆಟ್ ಚರಿತ್ರೆಯಲ್ಲೆ ಇದೂವರೆಗೂ ಬ್ಯಾಟ್ಸ್‌ಮನ್ ದಾಖಲಿಸಿದ ಅತ್ಯುತ್ತಮ ಸ್ಕೋರ್ ಆಗಿದೆ.
Wellington' Bert Vance conceded 77-run in an over in a #first-class match in #1990. Over: #0444664614106666600401 pic.twitter.com/wIZsSYN3Mm
— Gaurav (@GauravDas) October 27, 2014
ಇದನ್ನೂ ಓದಿ: ಸೂಪರ್ ಓವರ್‌ನಲ್ಲಿ ಒಂದೇ ಒಂದು ರನ್ ಬಿಟ್ಟುಕೊಡದೆ ವಿಶ್ವದಾಖಲೆ ಬರೆದ ಬೌಲರ್ ಯಾರು ಗೊತ್ತಾ?
ಈ ಓವರ್‌ನಲ್ಲಿ ಬರ್ಟ್ ವ್ಯಾನ್ಸ್ ಮೊದಲ ಎಸೆತವನ್ನು ಹೊರತು ಪಡಿಸಿ ಉಳಿದ 17 ಎಸೆತಗಳು ನೋ ಬೌಲ್ ಆಗಿದ್ದವು. ಅಲ್ಲದೇ ಈ ಓವರ್‌ನಲ್ಲಿ 8 ಸಿಕ್ಸರ್ ಮತ್ತು 6 ಬೌಂಡರಿಗಳು ದಾಖಲಾಗಿದ್ದವು. ನೋ ಬಾಲ್ನ ಉಪಯೋಗ ಪಡೆದ ಬ್ಯಾಟರ್ ಜರ್ಮನ್ ಲೀ ಶತಕವನ್ನೂ ಪೂರೈಸಿದ್ದರು. ಕೊನೆಯ ಓವರ್‌ನಲ್ಲಿ ಕ್ಯಾಂಟರ್ಬರಿ ಗೆಲುವಿಗೆ 18 ರನ್‌ಗಳ ಅಗತ್ಯವಿತ್ತು. ಜರ್ಮನ್ ಲೀ ಮೊದಲ ಐದು ಎಸೆತಗಳಲ್ಲಿ 17 ರನ್ ಗಳಿಸಿದ್ದರು. ಆದರೆ, ಕೊನೆಯ ಎಸೆತದಲ್ಲಿ ಒಂದು ರನ್ ಗಳಿಸಲು ಸಾಧ್ಯವಗಾಲಿಲ್ಲ ಮತ್ತು ಈ ರೋಚಕ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು.
ಬರ್ಟ್ ವ್ಯಾನ್ಸ್ ಓವರ್‌ನಲ್ಲಿ ಬಂದ ರನ್ಗಳು: 0,4,4,4,6,6,4,6,1,4,1,0,6,6,6,6,0,0,4,0,1
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ವೆಲ್ಲಿಂಗ್ಟನ್ 59 ಓವರ್ಗಳಲ್ಲಿ 291 ರನ್ ಸಿಡಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಈ ಗುರಿಯನ್ನು ಬೆನ್ನತ್ತಿದ ಕ್ಯಾಂಟರ್ಬರಿ ಕೇವಲ 108 ರನ್‌ಗಳಿಗೆ 8 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ, ವೆಲ್ಲಿಂಗ್ಟನ್ ಪಂದ್ಯವನ್ನು ಗೆಲ್ಲುತ್ತದೆ ಎಂದೇ ಎಲ್ಲರೂ ಭಾವಿಸಿದ್ದರು, ಆದರೇ ನಂತರ ನಡೆದಿದ್ದು ಇತಿಹಾಸ.
ಇದನ್ನೂ ಓದಿ: ಕ್ರಿಕೆಟ್ ಪಂದ್ಯ ರದ್ದಾದರೆ ಟಿಕೆಟ್ ಹಣ ವಾಪಸ್ ಪಡೆಯುವುದು ಹೇಗೆ: ಅದಕ್ಕಿರುವ ನಿಯಮಗಳೇನು?