ETV Bharat / sports

ಕುಸ್ತಿ ಕಲಿಸಿದ ಚಿಕ್ಕಪ್ಪನನ್ನೇ ಮರೆತ ವಿನೇಶ್​ ಫೋಗಟ್​​ಗೆ ದೇವರು ಒಳ್ಳೆಯ ಬುದ್ಧಿ ನೀಡಲಿ: ಸೋದರ ಮಾವ ಅಸಮಾಧಾನ - Vinesh Phogat post

ವಿನೇಶ್​ ಫೋಗಟ್​ ತಮ್ಮ ಕುಸ್ತಿ ಪ್ರಯಾಣದ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಸೋದರ ಮಾವ ಬೇಸರ ವ್ಯಕ್ತಪಡಿಸಿ ದೇವರು ವಿನೇಶ್​ಗೆ ಒಳ್ಳೆಯ ಬುದ್ಧಿ ಕೊಡಲಿ ಎಂದು ಬರೆದಿದ್ದಾರೆ.

ವಿನೇಶ್​ ಫೋಗಟ್​
ವಿನೇಶ್​ ಫೋಗಟ್​ (IANS Photos)
author img

By ETV Bharat Sports Team

Published : Aug 17, 2024, 4:59 PM IST

ನವದೆಹಲಿ: ಭಾರತದ ಕುಸ್ತಿಪಟು ವಿನೇಶ್ ಫೋಗಟ್​ಗೆ ಪ್ಯಾರಿಸ್​ ಒಲಿಂಪಿಕ್​ ಮಹಿಳಾ 50 ಕೆಜಿ ಕುಸ್ತಿ ಪಂದ್ಯದಲ್ಲಿ ದೇಹ ತೂಕ ಹೆಚ್ಚಿರುವ ಕಾರಣ ಫೈನಲ್​ ಪಂದ್ಯದಿಂದ ಅನರ್ಹಗೊಳಿಸಲಾಗಿತ್ತು. ಬಳಿಕ ಫೈನಲ್​ ತಲುಪಿರುವ ಅವರಿಗೆ ಕನಿಷ್ಠ ಬೆಳ್ಳಿ ಪದಕವನ್ನಾದರು ನೀಡಲಿ ಎಂದು ವಿನೇಶ್​ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ (ಸಿಎಎಸ್) ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತ್ತು.

ಈ ಬಗ್ಗೆ ವಿನೇಶ್ ಶುಕ್ರವಾರ 3 ಪುಟಗಳ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ತಮ್ಮ ಈ ಹೇಳಿಕೆಯಲ್ಲಿ ಅವರ ಜೀವನ ಕಥೆ ಮತ್ತು ಕುಸ್ತಿ ಪ್ರಯಾಣದ ಬಗ್ಗೆ ಬರೆದುಕೊಂಡಿದ್ದಾರೆ. 2028 ಮತ್ತು 2032ರ ಒಲಿಂಪಿಕ್​ನಲ್ಲಿ ಭಾರತವನ್ನು ಪ್ರತಿನಿಧಿಸುವ ಸುಳಿವು ನೀಡಿರುವ ಅವರು 2032ರವರೆಗೂ ತಾವು ಕ್ರೀಡೆಯಲ್ಲಿ ಸಕ್ರಿಯಾವಾಗಿರುವುದಾಗಿ ಹೇಳಿಕೊಂಡಿದ್ದಾರೆ. ಆದ್ರೆ ತಾವು ಬಿಡುಗಡೆಗೊಳಿಸಿರುವ ಕುಸ್ತಿ ಪ್ರಯಾಣದ ಹೇಳಿಕೆಯಲ್ಲಿ ಚಿಕ್ಕಪ್ಪನ ಹೆಸರನ್ನು ಉಲ್ಲೇಖಿಸಲಿಲ್ಲವೆಂದು ವಿನೇಶ್​ ಸಹೋದರಿ ಗೀತಾ ಫೋಗಟ್​ ಅವರ ಪತಿ ಪವನ್​ ಸರೋಹಾ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಕಾಮನ್​ವೆಲ್ತ್​ ಕುಸ್ತಿ ಚಾಂಪಿಯನ್ ಪವನ್​​ ಸರೋಹಾ ಅವರು, ದೇವರು ನಿನಗೆ ಒಳ್ಳೆಯ ಬುದ್ಧಿಯನ್ನು ನೀಡಲಿ ಎಂದು ಬರೆದಿದ್ದಾರೆ. 'ವಿನೇಶ್, ನೀವು ನಿಮ್ಮ ಕುಸ್ತಿ ಪ್ರಯಾಣದ ಬಗ್ಗೆ ಅದ್ಬುತವಾಗಿ ಬರೆದಿದ್ದೀರಿ. ಆದರೇ ನಿಮ್ಮ ಚಿಕ್ಕಪ್ಪ ಮಹಾವೀರ್ ಫೋಗಟ್ ಅವರನ್ನು ಮರೆತಿದ್ದೀರಿ. ನಿಮ್ಮ ಕುಸ್ತಿ ವೃತ್ತಿಯು ಯಾರಿಂದ ಪ್ರಾರಂಭವಾಯಿತು ಎಂಬುದನ್ನು ನೆನಪಿಸಿಕೊಳ್ಳಿ. ದೇವರು ನಿಮಗೆ ಶುದ್ಧ ಬುದ್ಧಿ ನೀಡಲಿ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಮಹಾವೀರ್ ಫೋಗಟ್ ಯಾರು?: ಮಹಾವೀರ್ ಸಿಂಗ್ ಫೋಗಟ್ ಅವರು ಮಾಜಿ ಭಾರತೀಯ ಕುಸ್ತಿಪಟು ಮತ್ತು ವಿನೇಶ್ ಫೋಗಟ್ ಅವರ ಸೋದರ ಸಂಬಂಧಿಗಳಾದ ಗೀತಾ ಮತ್ತು ಬಬಿತಾ ಅವರ ತಂದೆ ಆಗಿದ್ದಾರೆ. ಚಿಕ್ಕವಯಸ್ಸಿನಲ್ಲೇ ವಿನೇಶ್​ ತಂದೆ ತೀರಿಕೊಂಡ ನಂತರ ಮಹಾವೀರ್ ಅವರು ವಿನೇಶ್ ಅವರನ್ನು ತಮ್ಮ ಬಳಿಯೇ ಇರಿಸಿಕೊಂಡು ಕುಸ್ತಿ ತರಬೇತಿ ನೀಡಿದ್ದರು. ಮಹಾವೀರ್ ಫೋಗಟ್ ಅವರ ಮಾರ್ಗದರ್ಶನದಲ್ಲಿ ವಿನೇಶ್ ಫೋಗಟ್​ ಕುಸ್ತಿ ಕೌಶಲ್ಯ ಮತ್ತು ತಂತ್ರಗಳನ್ನು ಕಲಿತರು. ಅವರ ಸೋದರ ಸಂಬಂಧಿಗಳಾದ ಗೀತಾ ಮತ್ತು ಬಬಿತಾ ಫೋಗಟ್ ಅವರೊಂದಿಗೆ ಇಂದು ಅಗ್ರ ಮಹಿಳಾ ಕುಸ್ತಿಪಟುಗಳಲ್ಲಿ ಒಬ್ಬರಾಗಿದ್ದಾರೆ.

3 ಒಲಿಂಪಿಕ್​ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ವಿನೇಶ್ ಫೋಗಟ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 3 ಚಿನ್ನದ ಪದಕ ಮತ್ತು ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಅವರ ಈ ಕುಸ್ತಿ ವೃತ್ತಿಜೀವನದಲ್ಲಿ ಮಹಾವೀರ್ ಫೋಗಟ್​​ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಒಟ್ಟಾರೆ ಹೇಳುವುದಾದರೇ ಮಹಾವೀರ್​ ಅವರು ವಿನೇಶ್​ಗೆ ಮೊದಲ ಗುರು ಆಗಿದ್ದರು.

ಇದನ್ನೂ ಓದಿ: ಕ್ರಿಕೆಟ್​ ಮೈದಾನಗಳಿಗೆ ಬಾಡಿಗೆ ಫ್ಲಡ್​ಲೈಟ್​ ಅಳವಡಿಸಲು ಮುಂದಾದ ಪಾಕಿಸ್ತಾನ: ನೆಟ್ಟಿಗರಿಂದ ಟ್ರೋಲ್​ - Renatal floodlights

ETV Bharat Logo

Copyright © 2024 Ushodaya Enterprises Pvt. Ltd., All Rights Reserved.