Indian Cricket Team: ಬಾರ್ಡರ್-ಗವಾಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ 2ನೇ ಟೆಸ್ಟ್ ಪಂದ್ಯ(ಪಿಂಕ್ ಬಾಲ್ ಟೆಸ್ಟ್) ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ಡಿಸೆಂಬರ್ 6ರಿಂದ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನವೆಂಬರ್ 30ರಿಂದ(ನಾಳೆಯಿಂದ) ಎರಡು ದಿನಗಳ ಪಿಂಕ್ ಬಾಲ್ ಡೇ-ನೈಟ್ ಟೆಸ್ಟ್ ಅಭ್ಯಾಸ ಪಂದ್ಯ ನಡೆಯಲಿದೆ. ಈ ಅಭ್ಯಾಸ ಪಂದ್ಯಕ್ಕೂ ಮುನ್ನ ಗುರುವಾರ ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರು ಭಾರತ ಕ್ರಿಕೆಟ್ ತಂಡವನ್ನು ಭೇಟಿ ಮಾಡಿ, ಭೋಜನ ಕೂಟ ಆಯೋಜಿಸಿ ಮಾತುಕತೆ ನಡೆಸಿದರು.
ಇದಕ್ಕೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಮ್ಮ ಸದಸ್ಯರನ್ನು ಆಸೀಸ್ ಪ್ರಧಾನಿಗೆ ಪರಿಚಯಿಸಿದರು.
Anthony Albanese - Good time in Perth
— 𝘿 (@DilipVK18) November 28, 2024
Holy hell, As if we weren't suffering enough at that point that was just …
Virat Kohli - You always gotta add some spice to it
Bro is cooking even Australia’s Prime Minister pic.twitter.com/bcSF4rxHl0
'ನನ್ನ ಆತ್ಮೀಯ ಸ್ನೇಹಿತ..'-ಪ್ರಧಾನಿ ಮೋದಿ ಸಂತಸ: ಭಾರತ ತಂಡವನ್ನು ಆಸ್ಟ್ರೇಲಿಯಾ ಭೇಟಿ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಅಲ್ಬನೀಸ್ ಟ್ವೀಟ್ ಹಂಚಿಕೊಂಡಿರುವ ಮೋದಿ, "ನನ್ನ ಆತ್ಮೀಯ ಸ್ನೇಹಿತ ಆಂಥೋನಿ ಅಲ್ಬನೀಸ್ ಭಾರತ ಮತ್ತು ಪ್ರೆಸಿಡೆಂಟ್ಸ್ ಇಲೆವೆನ್ ತಂಡವನ್ನು ಭೇಟಿ ಮಾಡಿರುವುದು ಸಂತೋಷ ತಂದಿದೆ. ಭಾರತ ಈ ಸರಣಿಯಲ್ಲಿ ಗೆಲುವಿನ ಆರಂಭ ಪಡೆದಿದೆ. 140 ಕೋಟಿ ಭಾರತೀಯರು ಮೆನ್ ಇನ್ ಬ್ಲೂವನ್ನು ಬೆಂಬಲಿಸುತ್ತಿದ್ದಾರೆ. ಮುಂಬರುವ ಪಂದ್ಯಗಳಿಗಾಗಿ ಉತ್ಸುಕನಾಗಿದ್ದೇನೆ" ಎಂದು ಬರೆದಿದ್ದಾರೆ.
ಜ್ಯಾಕ್ ಎಡ್ವರ್ಡ್ಸ್ ನೇತೃತ್ವದ ಪ್ರೆಸಿಡೆಂಟ್ಸ್ ಇಲೆವೆನ್ ತಂಡ ಸಹ ಅಲ್ಬನೀಸ್ ಅವರನ್ನು ಭೇಟಿಯಾಯಿತು.
Glad to see my good friend Prime Minister @AlboMP with the Indian and PM’s XI teams.
— Narendra Modi (@narendramodi) November 28, 2024
Team India is off to a great start in the series and 1.4 billion Indians are strongly rooting for the Men in Blue.
I look forward to exciting games ahead. https://t.co/Oc7UWBKSGh
ಕ್ರಿಕೆಟ್ ರಾಜತಾಂತ್ರಿಕತೆಯು ಭಾರತ-ಆಸ್ಟ್ರೇಲಿಯಾ ಸಂಬಂಧದ ಒಂದು ಭಾಗ. ಅಲ್ಬನೀಸ್ ಕಳೆದ ವರ್ಷ ಭಾರತಕ್ಕೆ ಅಧಿಕೃತ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನರೇಂದ್ರ ಮೋದಿ ಜೊತೆಗೆ ಅಹಮದಾಬಾದ್‌ನಲ್ಲಿ ಟೆಸ್ಟ್ ಪಂದ್ಯ ವೀಕ್ಷಿಸಿದ್ದರು. ಎರಡೂ ತಂಡಗಳ ಆಟಗಾರರನ್ನೂ ಭೇಟಿ ಮಾಡಿದ್ದರು.
ಕಳೆದ ಬಾರಿ ಅಡಿಲೇಡ್ ಟೆಸ್ಟ್‌ನಲ್ಲಿ ಏನಾಗಿತ್ತು?: ಇದೀಗ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ, ಮೊದಲ ಟೆಸ್ಟ್ ಪಂದ್ಯ ಗೆದ್ದು ಸರಣಿಯಲ್ಲಿ ಉತ್ತಮ ಆರಂಭ ಪಡೆದಿದೆ. ಡಿಸೆಂಬರ್ 6ರಿಂದ ಶುರುವಾಗುವ ಅಡಿಲೇಡ್ ಟೆಸ್ಟ್ ಅನ್ನು ಉತ್ಸಾಹದಿಂದಲೇ ಎದುರು ನೋಡುತ್ತಿದೆ. ಕಳೆದ ಬಾರಿ ಅಡಿಲೇಡ್‌ನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಭಾರತದ ಪ್ರದರ್ಶನ ಉತ್ತಮವಾಗಿರಲಿಲ್ಲ. ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ 36 ರನ್‌ಗಳಿಗೆ ಆಲೌಟ್ ಆಗಿ ಮುಖಭಂಗ ಅನುಭವಿಸಿತ್ತು.
ಇದನ್ನೂ ಓದಿ: IPLಗೆ ದಾರಿ ತೋರಿದ ಸೈಕಲ್: ಮೈಸೂರು ಯುವ ಕ್ರಿಕೆಟಿಗ ಮನ್ವಂತ್ ಸಾಧನೆ ಬಗ್ಗೆ ತಂದೆ - ತಾಯಿ ಹೇಳುವುದೇನು?