ETV Bharat / sports

60 ವರ್ಷಗಳ ನಂತರ ಭಾರತದ ಹಳೆಯ ಪ್ಲಾನ್ ಅನುಸರಿಸಿ ಟೆಸ್ಟ್​​ನಲ್ಲಿ ಸಕ್ಸಸ್​ ಆದ ಪಾಕಿಸ್ತಾನ!

60 ವರ್ಷಗಳ ಬಳಿಕ ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತದ ಹೆಜ್ಜೆಯನ್ನು ಅನುಸರಿಸಿದ ಪಾಕಿಸ್ಥಾನ ಸಕ್ಸಸ್​ ಆಗಿದೆ.

ಪಾಕಿಸ್ತಾನ ತಂಡ
ಪಾಕಿಸ್ತಾನ ತಂಡ (AP)
author img

By ETV Bharat Sports Team

Published : 3 hours ago

ಹೈದರಾಬಾದ್​: ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಸರಣಿಯಲ್ಲಿ ಪ್ರಸ್ತುತ ಉಭಯ ತಂಡಗಳು 1-1ರಲ್ಲಿ ಸಮಬಲ ಸಾಧಿಸಿವೆ. ಸರಣಿಯ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಸ್ಪಿನ್ನರ್‌ ಸ್ನೇಹಿ ಪಿಚ್​ ಆಗಿರುವ ಕಾರಣ ಎರಡೂ ತಂಡಗಳು ಆಡುವ 11ರಲ್ಲಿ ಸ್ಪಿನ್ನರ್​ಗಳಿ ಸ್ಥಾನ ನೀಡಿವೆ. ಮತ್ತೊಂದೆಡೆ ಇದೇ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಅಪರೂಪದ ಪ್ರಯೋಗ ಮಾಡಿ ಸಕ್ಸಸ್​​ ಆಗಿದೆ.

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಇದೇ ಮೊದಲು: ಪಾಕಿಸ್ತಾನ ವೇಗದ ಬೌಲರ್‌ಗಳಿಂದ ಕೂಡಿರುವ ತಂಡ ಎಂದೇ ಕರೆಯಲಾಗುತ್ತದೆ. ಆದರೆ ಇಂಗ್ಲೆಂಡ್ ತಂಡವನ್ನು ಸೋಲಿಸಿ ಸರಣಿ ಗೆಲ್ಲಲು ಯೋಜನೆ ರೂಪಿಸಿರುವ ಪಾಕ್​ ಇದೆ ಮೊದಲ ಬಾರಿಗೆ ಟೆಸ್ಟ್‌ನಲ್ಲಿ ಇಬ್ಬರು ಸ್ಪಿನ್ನರ್​ಗಳೊಂದಿಗೆ ಓವರ್​ ಆರಂಭಿಸಿತು. ಆಫ್ ಸ್ಪಿನ್ನರ್ ಸಾಜಿದ್ ಖಾನ್ ಮೊದಲ ಓವರ್​ ಬೌಲಿಂಗ್ ಮಾಡಿದರೇ, ನಂತರ ನೋಮನ್ ಅಲಿ ಎಸೆದ ಎರಡನೇ ಓವರ್ ಬೌಲ್​ ಮಾಡಿದರು.

ಪಾಕಿಸ್ತಾನ ಕ್ರಿಕೆಟ್ ಇತಿಹಾಸದಲ್ಲಿ ಸ್ಪಿನ್ನರ್‌ಗಳಿಂದ ಪಂದ್ಯವನ್ನು ಪ್ರಾರಂಭಿಸಿದ್ದು ಇದೇ ಮೊದಲಬಾರಿ ಆಗಿದೆ. ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಇಬ್ಬರು ಎರಡು ಓವರ್​ ಸ್ಪಿನ್ನರ್‌ಗಳು ಬೌಲಿಂಗ್ ಮಾಡಿದ್ದು ಒಟ್ಟಾರೆ ಇದು ನಾಲ್ಕನೇ ಬಾರಿ ಆಗಿದೆ. 2019ರಲ್ಲಿ ಚಿತ್ತಗಾಂಗ್‌ನಲ್ಲಿ ಅಫ್ಘಾನಿಸ್ತಾನದ ವಿರುದ್ಧ ಬಾಂಗ್ಲಾದೇಶ ಕೊನೆಯ ಬಾರಿಗೆ ತೈಜುಲ್ ಇಸ್ಲಾಂ ಮತ್ತು ಶಕೀಬ್ ಅಲ್ ಹಸನ್ ಇಬ್ಬರು ಸ್ಪಿನ್ನರ್​ನೊಂದಿಗೆ ಆರಂಭಿಕ 2 ಓವರ್​ ಬೌಲಿಂಗ್​ ಮಾಡಿತ್ತು. ಈ ಪ್ರಯೋಗವನ್ನು ಮೊದಲು ಮಾಡಿದ್ದು ಭಾರತ. 1964ರಲ್ಲಿ ಟೆಸ್ಟ್ ಇಂಗ್ಲೆಂಡ್ ವಿರುದ್ಧ ಟೆಸ್ಟ್​ನಲ್ಲಿ ಭಾರತ ಸ್ಪಿನ್ನರ್​ಗಳಾದ ಮೋಟಗನಹಳ್ಳಿ ಜಯಸಿಂಹ ಮತ್ತು ಸಲೀಂ ಅಜೀಜ್ ದುರಾನಿ ಮೂಲಕ ಮೊದಲ ಎರಡು ಓವರ್‌ಗಳನ್ನು ಸ್ಪಿನ್​ ಬೌಲಿಂಗ್​ ಮಾಡಿ ಪಂದ್ಯವನ್ನು ಆರಂಭಿಸಿತ್ತು.

ಭಾರತದ 60 ವರ್ಷಗಳ ಈ ಹಳೆಯ ಈ ಪ್ಲಾನ್​ ಅನ್ನು ಇದೀಗ ಇಂಗ್ಲೆಂಡ್​ ವಿರುದ್ಧದ ಮೂರನೇ ಟೆಸ್ಟ್​ನಲ್ಲಿ ಅನುಸರಿಸಿದ ಪಾಕ್​ ಯಶಸ್ವಿಯಾಗಿದೆ. ಸ್ಪಿನ್ನರ್​ ದಾಳಿಗೆ ಸಿಲುಕಿದ ಇಂಗ್ಲೆಂಡ್ 110 ರನ್ ಗಳಿಗೆ 5 ವಿಕೆಟ್​ ಕಳೆದುಕೊಂಡಿತು. ಮೊದಲ ಇನ್ನಿಂಗ್ಸ್​ನಲ್ಲಿ 267 ರನ್​ಗಳಿಗೆ ಆಲೌಟ್​ ಆಗಿದೆ.

ಇದನ್ನೂ ಓದಿ: w,w,w,w,w,w,w ; ವಾರೆವ್ಹಾ! 7 ವಿಕೆಟ್​ ಪಡೆದ ವಾಷಿಂಗ್ಟನ್​ ಸುಂದರ್​: 259ಕ್ಕೆ ಕಿವೀಸ್​ ಆಲೌಟ್!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.