ETV Bharat / sports

RCB ಫೈನಲ್​ ಪ್ರವೇಶಿಸಬೇಕಾದ್ರೆ ಈ ನಾಲ್ವರು ತಂಡಕ್ಕೆ ಬೇಕೇ ಬೇಕು: ಎಬಿಡಿ - AB DE VILLIERS

IPL ಮೆಗಾ ಹರಾಜಿನಲ್ಲಿ ನಾಲ್ವರು ಆಟಗಾರರನ್ನು ಖರೀದಿಸುವಂತೆ ಆರ್​ಸಿಬಿ ಫ್ರಾಂಚೈಸಿಗೆ ಎಬಿ ಡಿವಿಲಿಯರ್ಸ್​ ಸಲಹೆ ನೀಡಿದ್ದಾರೆ.

ಎಬಿ ಡಿವಿಲಿಯರ್ಸ್​
ಎಬಿ ಡಿವಿಲಿಯರ್ಸ್​ (IANS)
author img

By ETV Bharat Sports Team

Published : Nov 8, 2024, 9:45 AM IST

ಹೈದರಾಬಾದ್​: ರಾಯಲ್​ ಚಾಲೆಂಜರ್ಸ್​ ಬೆಂಗಳೂರು(ಆರ್‌ಸಿಬಿ) ತಂಡದ ಮಾಜಿ ಸ್ಪೋಟಕ ಬ್ಯಾಟರ್​ ಎಬಿ ಡಿವಿಲಿಯರ್ಸ್,​ ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್) 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಯಾವ ಆಟಗಾರರನ್ನು ಖರೀದಿಸಬೇಕು ಎಂಬುದರ ಬಗ್ಗೆ ಸಲಹೆ ನೀಡಿದ್ದಾರೆ.

ಎಬಿಡಿ​ ಒಟ್ಟು 11 ಋತುಗಳಲ್ಲಿ ಆರ್​ಸಿಬಿ ಪರ ಆಡಿದ್ದಾರೆ. ಇವರ ಅವಧಿಯಲ್ಲಿ ತಂಡ ಎರಡು ಬಾರಿ ಫೈನಲ್​ ಪ್ರವೇಶಿಸಿದೆ. ಆದರೆ ಕಪ್ ​ಗೆಲ್ಲಲು ಸಾಧ್ಯವಾಗಿರಲಿಲ್ಲ. ಇದೀಗ ಮುಂದಿನ ಆವೃತ್ತಿಗೂ ಮೊದಲು ಮೆಗಾ ಹರಾಜು ನಡೆಯಲಿದ್ದು, ಆರ್​​ಸಿಬಿ ಮೂವರು ಆಟಗಾರರಾದ ವಿರಾಟ್​ ಕೊಹ್ಲಿ, ರಜತ್​ ಪಾಟೀದಾರ್​, ಯಶ್​ ದಯಾಳ್​ ಅವರನ್ನು ಮಾತ್ರ ರಿಟೇನ್​ ಮಾಡಿಕೊಂಡು ಪರ್ಸ್​ನಲ್ಲಿ ₹83 ಕೋಟಿ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಎಬಿಡಿ,​ ಆರ್​ಸಿಬಿಗೆ ಈ ನಾಲ್ವರು ಆಟಗಾರರನ್ನು ಸೇರಿಸಿಕೊಳ್ಳುವಂತೆ ಸೂಚಿಸಿದ್ದಾರೆ.

ಕಗಿಸೊ ರಬಾಡ
ಕಗಿಸೊ ರಬಾಡ (IANS)

ಎಬಿಡಿ ಸೂಚಿಸಿದ ನಾಲ್ವರು ಆಟಗಾರರು:

ಮೊಹಮ್ಮದ್ ಶಮಿ
ಮೊಹಮ್ಮದ್ ಶಮಿ (IANS)

ರಬಾಡ/ಮೊಹಮ್ಮದ್ ಶಮಿ: ಮೆಗಾ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಸ್ಟಾರ್​ ಬೌಲರ್​ ಕಗಿಸೋ ರಬಾಡ ಅಥವಾ ಏಕದಿನ ವಿಶ್ವಕಪ್​ನಲ್ಲಿ ಹೆಚ್ಚು ವಿಕೆಟ್​ ಪಡೆದ ಭಾರತೀಯ ವೇಗಿ ಮೊಹಮ್ಮದ್​ ಶಮಿ ಇಬ್ಬರಲ್ಲಿ ಒಬ್ಬರನ್ನು ಖರೀದಿಸುವಂತೆ ಫ್ರಾಂಚೈಸಿಗೆ ಸೂಚಿಸಿದ್ದಾರೆ.

ಯುಜುವೇಂದ್ರ ಚಹಾಲ್​
ಯುಜುವೇಂದ್ರ ಚಹಾಲ್​ (IANS)

ಚಹಾಲ್​: ಆರ್​ಸಿಬಿ ಸ್ಪಿನ್​ ಕಡೆಗೂ ಗಮನ ಹರಿಸಬೇಕೆಂದಿರುವ ಎಬಿಡಿ, ಯುಜುವೇಂದ್ರ ಚಹಾಲ್​ ಅವರನ್ನು ತಂಡಕ್ಕೆ ಮರಳಿ ಪಡೆಯಲು ಸೂಚಿಸಿದ್ದಾರೆ. 2022ರಲ್ಲಿ RCB ಚಹಾಲ್​ ಅವರನ್ನು ಕೈಬಿಟ್ಟಿತ್ತು. ಈ ವೇಳೆ ರಾಜಸ್ಥಾನ್​ ರಾಯಲ್ಸ್​ ಖರೀದಿಸಿತ್ತು. ಚಹಾಲ್​​ ಇಲ್ಲಿಯವರೆಗೂ ಒಟ್ಟು 160 ಐಪಿಎಲ್​ ಪಂದ್ಯಗಳನ್ನಾಡಿದ್ದು 205 ವಿಕೆಟ್​ ಉರುಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಚಹಾಲ್​ ಅವರನ್ನು ತಂಡಕ್ಕೆ ಪಡೆದರೆ ಉತ್ತಮ ಫಲಿತಾಂಶ ಕಾಣಬಹುದು ಎಂದಿದ್ದಾರೆ.

ಭುವನೇಶ್ವರ್​ ಕುಮಾರ್​: ವೇಗದ ಬೌಲರ್​ ಭುವಿ ಅವರನ್ನು ತಂಡಕ್ಕೆ ಪಡೆಯುವುದು ಉತ್ತಮ ಎಂದು ಎಬಿಡಿ ಹೇಳಿದ್ದಾರೆ. ಭುವಿ ಇದುವರೆಗೂ ಒಟ್ಟು 176 ಐಪಿಎಲ್​ ಪಂದ್ಯಗಳನ್ನಾಡಿದ್ದು 181 ವಿಕೆಟ್​ ಪಡೆದಿದ್ದಾರೆ. 19 ರನ್​ಗಳಿಗೆ 5 ವಿಕೆಟ್​ ಪಡೆದಿರುವುದು ಇವರ ಅತ್ಯುತ್ತಮ ಪ್ರದರ್ಶನ.

ಆರ್​ ಅಶ್ವಿನ್​
ಆರ್.ಅಶ್ವಿನ್​ (IANS)

ಆರ್.ಅಶ್ವಿನ್​: ಹಿರಿಯ ಅನುಭವಿ ಆಟಗಾರ ಆರ್.ಅಶ್ವಿನ್​ ಅವರನ್ನು ತಂಡಕ್ಕೆ ಕರೆದುಕೊಳ್ಳುವಂತೆ ಡಿವಿಲಿಯರ್ಸ್​ ಫ್ರಾಂಚೈಸಿಗೆ ಸಲಹೆ ನೀಡಿದ್ದಾರೆ. ಅಶ್ವಿನ್​ ಉತ್ತಮ ಬೌಲಿಂಗ್​ ಜೊತೆಗೆ ಬ್ಯಾಟಿಂಗ್​ ಮಾಡಬಲ್ಲರು. ಹಾಗಾಗಿ ಇವರು ತಂಡಕ್ಕೆ ಉತ್ತಮ ಆಯ್ಕೆ ಎಂದಿದ್ದಾರೆ. ಅಶ್ವಿನ್​ ಇದುವರೆಗೂ 211 ಐಪಿಎಲ್​ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ. ಬೌಲಿಂಗ್​ನಲ್ಲಿ 180 ವಿಕೆಟ್​ ಪಡೆದರೆ, ಬ್ಯಾಟಿಂಗ್​ನಲ್ಲಿ 800 ರನ್​ ಗಳಿಸಿದ್ದಾರೆ. ಇದರಲ್ಲಿ ಒಂದು ಅರ್ಧಶತಕ ಸೇರಿದೆ.

ಆರ್​ಸಿಬಿ ರಿಟೇನ್​ ಮಾಡಿಕೊಂಡ ಆಟಗಾರರು: ವಿರಾಟ್​ ಕೊಹ್ಲಿ (₹21 ಕೋಟಿ), ರಜತ್​ ಪಾಟಿದಾರ್​ (₹11 ಕೋಟಿ), ಯಶ್​​ ದಯಾಳ್ (₹5 ಕೋಟಿ).

ಮೆಗಾ ಹರಾಜು ಯಾವಾಗ, ಎಲ್ಲಿ?: ಐಪಿಎಲ್ 2025ರ ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ನಡೆಯಲಿದೆ.

ಇದನ್ನೂ ಓದಿ: ಇಂದು ಭಾರತ-ದ.ಆಫ್ರಿಕಾ ಮೊದಲ ಟಿ20 ಪಂದ್ಯ: ಹೇಗಿದೆ ಬಲಾಬಲ? ಪಂದ್ಯ ನೋಡುವುದು ಹೇಗೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.