ETV Bharat / sports

ಚೆಸ್​ ಒಲಿಂಪಿಯಾಡ್​ನಲ್ಲಿ ಚಿನ್ನ ಗೆದ್ದ ಆಟಗಾರರಿಗೆ ತವರಿನಲ್ಲಿ ಅದ್ಧೂರಿ ಸ್ವಾಗತ - Grand welcome

author img

By ETV Bharat Sports Team

Published : 3 hours ago

ಯೂರೋಪಿನ ಹಂಗೇರಿಯಲ್ಲಿ ನಡೆದ ಚೆಸ್​​ ಒಲಿಂಪಿಯಾಡ್​​ನಲ್ಲಿ ಚಿನ್ನ ಗೆದ್ದಿರುವ ಪ್ರಜ್ಞಾನಂದ, ಗುಕೇಶ್​, ವೈಶಾಲಿ ಮತ್ತು ಶ್ರೀನಾಥ ಅವರಿಗೆ ತವರೂರು ಚೆನ್ನೈನಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು.

ಪ್ರಜ್ಞಾನಂದ, ವೈಸಾಲಿ, ಶ್ರೀನಾಥ್​
ಪ್ರಜ್ಞಾನಂದ, ವೈಸಾಲಿ, ಶ್ರೀನಾಥ್​ (ETV Bharat)

ಚೆನ್ನೈ: ಹಂಗೇರಿಯಲ್ಲಿ ನಡೆದ 45ನೇ ಚೆಸ್ ಒಲಿಂಪಿಯಾಡ್​ನಲ್ಲಿ ಚಿನ್ನ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ಸ್ವದೇಶಕ್ಕೆ ಮರುಳಿದ್ದಾರೆ. ಈ ಪೈಕಿ ಚೆಸ್​​ ಚಾಂಪಿಯನ್​ಗಳಾದ ಗುಕೇಶ್​, ಪ್ರಜ್ಞಾನಂದ, ವೈಶಾಲಿ, ಶ್ರೀನಾಥ್ ಅವರನ್ನು ತವರೂರು ಚೆನ್ನೈನಲ್ಲಿ ಅದ್ಧೂರಿಯಾಗಿ ಸ್ವಾಗತಿಸಲಾಯಿತು.

ಇಂದು ಬೆಳಗ್ಗೆ ಚೆನ್ನೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ಯುವ ಚಾಂಪಿಯನ್ನರಿಗೆ ಅಲ್ಲಿ ನೆರೆದಿದ್ದ ಅಭಿಮಾನಿಗಳು ಮತ್ತು ಕ್ರೀಡಾ ಪ್ರಾಧಿಕಾರದಿಂದ ಸ್ವಾಗತ ಕೋರಲಾಯಿತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀನಾಥ್, “45ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿವೆ. ಇದರಿಂದ ನಮಗೆ ತುಂಬಾ ಹೆಮ್ಮೆ ಇದೆ, ನಾವು ಹೆಚ್ಚು ಅಂಕಗಳನ್ನು ಗಳಿಸಿ ಈ ಸಾಧನೆ ಮಾಡಿದ್ದೇವೆ. ಇದಕ್ಕೂ ಮುನ್ನ ರಷ್ಯಾ ಜೊತೆಗೂಡಿ ಚಿನ್ನದ ಪದಕವನ್ನು ಗೆದ್ದಿದ್ದೇವೆ. ಆದರೆ ಇದೀಗ ಏಕಾಂಗಿಯಾಗಿ ಪದಕವನ್ನು ಜಯಿಸಿದ್ದೇವೆ ಎಂದು ತಿಳಿಸಿದರು.

ನಂತರ ಮಾತನಾಡಿದ ಮಹಿಳಾ ವಿಜೇತ ತಂಡದ ಆಟಗಾರ್ತಿ ವೈಶಾಲಿ, ನಮಗೆ ತುಂಬಾ ಸಂತೋಷವಾಗಿದೆ. ಕಳೆದ ಬಾರಿ ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ಕಂಚಿನ ಪದಕ ಗೆದ್ದಿದ್ದೆವು. ಆಗ ಚಿನ್ನದ ಪದಕ ಗೆಲ್ಲದಿರುವುದಕ್ಕೆ ತುಂಬಾ ಬೇಸರವಾಗಿತ್ತು. ಆದರೆ ಈಗ ಚಿನ್ನದ ಪದಕ ಗೆದ್ದಿರುವುದು ಅತೀವ ಸಂತಸ ತಂದಿದೆ. ಭಾರತ ಪುರುಷರ ತಂಡ ಅತ್ಯಧಿಕ ಅಂಕಗಳ ಅಂತರದಿಂದ ಗೆದ್ದಿದೆ. ಆದರೆ ಮಹಿಳಾ ತಂಡ ಒಂದು ಪಂದ್ಯದಲ್ಲಿ ಸೋತು ಇನ್ನೆರಡು ಪಂದ್ಯಗಳನ್ನು ಪದಕ ಗೆದ್ದುಕೊಂಡಿತು ಎಂದು ಹೇಳಿದರು.

ಪ್ರಜ್ಞಾನಂದ ಮಾತನಾಡಿ, ಈ ಹಿಂದೆ ಚೆನ್ನೈನಲ್ಲಿ ನಡೆದ ಚೆಸ್ ಒಲಿಂಪಿಯಾಡ್‌ನಲ್ಲಿ ನಾವು ತುಂಬಾ ಹತ್ತಿರಕ್ಕೆ ಬಂದು ಚಿನ್ನದ ಪದಕವನ್ನು ಕಳೆದುಕೊಂಡಿದ್ದೇವೆ. ಈ ಬಾರಿ ಯಾವುದೇ ತಪ್ಪು ಮಾಡದೇ ಹೆಚ್ಚು ಅಂಕಗಳೊಂದಿಗೆ ಪದಕ ಗೆದ್ದಿರುವುದು ಸಂತಸ ತಂದಿದೆ. ಆಡಿದ ಎಲ್ಲಾ ಪಂದ್ಯಗಳು ಕಠಿಣವಾಗಿದ್ದವು. ಅಗ್ರ ಶ್ರೇಯಾಂಕದ ಯುಎಸ್‌ಎಯನ್ನು ಸೋಲಿಸಿದ ನಂತರ ನಮ್ಮ ದೇಶಕ್ಕೆ ಚಿನ್ನದ ಪದಕ ಖಚಿತವಾಯಿತು. ನಮ್ಮನ್ನು ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದರು.

ಚೆಸ್​​ ಒಲಿಂಪಿಯಾಡ್​ನಲ್ಲಿ ಪುರುಷರ ತಂಡದಲ್ಲಿ, ಗುಕೇಶ್, ಪ್ರಜ್ಞಾನಂದ, ಹರಿ ಕೃಷ್ಣ, ವಿದಿತ್ ಗುಜರಾತಿ ಮತ್ತು ಅರ್ಜುನ್ ಎರಿಕೈಸಿ, ಶ್ರೀನಾಥ ಅವರನ್ನು ಒಳಗೊಂಡ ಭಾರತ ತಂಡವು ಚಿನ್ನ ಗೆದ್ದರೇ, ದಿವ್ಯಾ ದೇಶಮುಖ್, ವಂದಿಕಾ ಅಗರ್ವಾಲ್, ತಾನಿಯಾ ಸಚ್‌ದೇವ್ ಮತ್ತು ಅಭಿಜಿತ್ ಕುಂಡೆ ಡಿ.ಹಾರಿಕಾ, ವೈಶಾಲಿ ಮತ್ತು ದಿವ್ಯಾ ದೇಶಮುಖ್ ತಂಡ ಮಹಿಳೆಯರ ವಿಭಾಗದಲ್ಲಿ ಚಿನ್ನ ವಶಪಡಿಸಿಕೊಂಡಿದೆ.

ಇದನ್ನೂ ಓದಿ: ಸಚಿನ್ ತೆಂಡೂಲ್ಕರ್​​ ದಾಖಲೆ ಮುರಿದ ರೋಹಿತ್​ ಶರ್ಮಾ: ವಿಶ್ವ ಕ್ರಿಕೆಟ್​ನಲ್ಲೇ ಐತಿಹಾಸಿಕ ಸಾಧನೆ! - Rohit Sharma

ETV Bharat Logo

Copyright © 2024 Ushodaya Enterprises Pvt. Ltd., All Rights Reserved.