KL Rahul Best Knocks outside india: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಕೆಎಲ್ ರಾಹುಲ್ ಇತ್ತೀಚಿನ ದಿನಗಳಲ್ಲಿ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿದ್ದಾರೆ. ಆಗಾಗ್ಗೆ ತಮ್ಮ ಬ್ಯಾಟಿಂಗ್ ವಿಧಾನದಿಂದ ಟೀಕೆಗೂ ಗುರಿಯಾಗಿದ್ದಾರೆ. ಅದಾಗ್ಯೂ ಕನ್ನಡಿಗ ಕೆಎಲ್ ರಾಹುಲ್ ಪ್ರತಿಭಾವಂತ ಆಟಗಾರ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಏರಿಳಿತಗಳಿಂದ ಕೂಡಿರುವ ಅವರ ಕ್ರಿಕೆಟ್ ಪ್ರಯಾಣದಲ್ಲಿ ಕೆಲವು ಬೆಸ್ಟ್ ಇನ್ನಿಂಗ್ಸ್ಗಳನ್ನು ಆಡಿದ್ದು ಇಂದಿಗೂ ಕ್ರೀಡಾಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿವೆ. ಅದರಲ್ಲೂ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಬಿಟ್ಟು ಹೊರ ರಾಷ್ಟ್ರಗಳಲ್ಲಿ ಕೆಲ ಬೆಸ್ಟ್ ನಾಕ್ಗಳನ್ನು ರಾಹುಲ್ ಆಡಿದ್ದಾರೆ. ಹಾಗದ್ರೆ ಕೆಎಲ್ ರಾಹುಲ್ ವಿದೇಶಿ ನೆಲದಲ್ಲಿ ಆಡಿರುವ 5 ಬೆಸ್ಟ್ ಇನ್ನಿಂಗ್ಸ್ ಯಾವವು ಎಂದು ಇದೀಗ ತಿಳಿಯಿರಿ.
5. ಸಿಡ್ನಿ ಟೆಸ್ಟ್: ಕೆಎಲ್ ರಾಹುಲ್ ಅವರ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಆಸ್ಟ್ರೇಲಿಯಾ ವಿರುದ್ಧ ಸಿಡ್ನಿ ಮೈದಾನದಲ್ಲಿ ಸಿಡಿಸಿದ್ದರು. 2015ರಲ್ಲಿ ಆಸ್ಟ್ರೇಲಿಯಾ ಪ್ರವಾಸದ ವೇಳೆ ಸಿಡ್ನಿ ಟೆಸ್ಟ್ನಲ್ಲಿ ಕೆಎಲ್ ರಾಹುಲ್ ಮೊದಲ ಇನ್ನಿಂಗ್ಸ್ನಲ್ಲಿ 110 ರನ್ ಸಿಡಿಸಿದ್ದರು. ಅವರ ಈ ಇನ್ನಿಂಗ್ಸ್ನಲ್ಲಿ 13 ಬೌಂಡರಿ ಮತ್ತು 1 ಸಿಕ್ಸರ್ ಸೇರಿತ್ತು.
4. ಸೆಂಚುರಿಯನ್ ಟೆಸ್ಟ್: 2021ರಲ್ಲಿ ಟೀಂ ಇಂಡಿಯಾ 3 ಪಂದ್ಯಗಳ ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾಗೆ ಪ್ರವಾಸ ಬೆಳೆಸಿತ್ತು. ಈ ವೇಳೆ ಸೆಚುರಿಯನ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ಲ್ಲಿ ರಾಹುಲ್ ಶತಕ ಸಿಡಿಸಿ ಭಾರತದ ಗೆಲುವಿಗೆ ಅಡಿಪಾಯ ಹಾಕಿದ್ದರು. ರಾಹುಲ್ 17 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 123 ರನ್ ಕಲೆಹಾಕಿದ್ದರು.
3. ಲಾರ್ಡ್ಸ್ ಟೆಸ್ಟ್: 2021ರಲ್ಲಿ ಇಂಗ್ಲೆಂಡ್ ಪ್ರವಾಸದ 2ನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್ ರಾಹುಲ್ ವಿಶೇಷ ಸಾಧನೆ ಮಾಡಿದ್ದರು. ಲಾರ್ಡ್ಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಾಹುಲ್ 129 ರನ್ಗಳನ್ನು ಬಾರಿಸಿದ್ದರು. ಅವರ ಈ ಆಕರ್ಷಕ ಇನ್ನಿಂಗ್ಸ್ ನೆರವಿನಿಂದ ಭಾರತ 151 ರನ್ಗಳಿಂದ ಗೆಲುವು ಸಾಧಿಸಿತ್ತು.
2. ಓವಲ್ ಟೆಸ್ಟ್: ಭಾರತ ಮತ್ತು ಇಂಗ್ಲೆಂಡ್ 2018ರಲ್ಲಿ 5 ಪಂದ್ಯಗಳ ಟೆಸ್ಟ್ ಸೆಣಿಯನ್ನು ಆಡಿದ್ದವು. ಇದರಲ್ಲಿ ಭಾರತ 4-1 ರಿಂದ ಸೋಲನುಭವಿಸಿತ್ತು. ಆದರೆ ಈ ಸರಣಿಯ 5ನೇ ಮತ್ತು ಅಂತಿಮ ಟೆಸ್ಟ್ನಲ್ಲಿ ರಾಹುಲ್ 149 ರನ್ಗಳನ್ನು ಬಾರಿಸಿದ್ದರು. ಈ ಪಂದ್ಯವನ್ನು ಭಾರತ 118 ರನ್ಗಳಿಂದ ಗೆದ್ದುಕೊಂಡಿತ್ತು.
1. ಕಿಂಗ್ಸ್ಟನ್ ಟೆಸ್ಟ್: ಭಾರತ 2016ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿತ್ತು. ಈ ವೇಳೆ 4 ಪಂದ್ಯಗಳ ಟೆಸ್ಟ್ ಸರಣಿಯ 2ನೇ ಪಂದ್ಯದಲ್ಲಿ ರಾಹುಲ್ 158 ರನ್ಗಳ ಇನ್ನಿಂಗ್ಸ್ ಆಡಿದ್ದರು. ಈ ಪಂದ್ಯ ಡ್ರಾನಲ್ಲಿ ಕೊನೆಗೊಂಡಿತ್ತು.
ಇದನ್ನೂ ಓದಿ: IND vs AUS Test: ಬುಮ್ರಾ ದಾಳಿಗೆ ನಡುಗಿದ ಆಸ್ಟ್ರೇಲಿಯಾ, 104 ರನ್ಗಳಿಗೆ ಸರ್ವಪತನ!