ETV Bharat / sports

ವಿಶ್ವದ 10 ಅತ್ಯಂತ ಜನಪ್ರಿಯ ಕ್ರೀಡೆಗಳು ಯಾವುವು ಹೇಳಿ ನೋಡೋಣ! - Most Popular Sports - MOST POPULAR SPORTS

ವಿಶ್ವದಲ್ಲಿ ಅತ್ಯಂತ ಜನಪ್ರಿಯತೆ ಪಡೆದಿರುವ ಟಾಪ್​ 10 ಕ್ರೀಡೆಗಳು ಯಾವುವು? ಅವು ಹೊಂದಿರುವ ಅಭಿಮಾನಿಗಳ ಸಂಖ್ಯೆಯ ಕುರಿತಾದ ವಿಶೇಷ ವರದಿ ಇಲ್ಲಿದೆ.

ವಿಶ್ವದ 10 ಅತ್ಯಂತ ಜನಪ್ರಿಯ ಕ್ರೀಡೆಗಳು
ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳು (ANI)
author img

By ETV Bharat Sports Team

Published : Aug 23, 2024, 3:56 PM IST

ನವದೆಹಲಿ: ಭಾರತ ಸೇರಿದಂತೆ ವಿಶ್ವಾದ್ಯಂತ ನಾನಾ ಬಗೆಯ ಕ್ರೀಡೆಗಳನ್ನು ಆಡಲಾಗುತ್ತದೆ. ಆದರೆ ಕೆಲವು ಕ್ರೀಡೆಗಳು ವಿಶ್ವದೆಲ್ಲೆಡೆ ಜನಪ್ರಿಯತೆ ಪಡೆದುಕೊಂಡಿವೆ. ಇವುಗಳ ಅಭಿಮಾನಿಗಳ ಸಂಖ್ಯೆಯೂ ಕೋಟಿಗಳಲ್ಲಿದೆ. ಹಾಗಾದರೆ, ಯಾವುವು ಆ ಹತ್ತು ವಿಶ್ವವಿಖ್ಯಾತ ಆಟಗಳು ಎಂಬುದನ್ನು ನೋಡೋಣ.

ಪ್ರಪಂಚದ 10 ಜನಪ್ರಿಯ ಕ್ರೀಡೆಗಳು:

  1. ಫುಟ್ಬಾಲ್​: ಫುಟ್ಬಾಲ್ ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಮೊದಲ ಸ್ಥಾನದಲ್ಲಿದೆ. 12ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಹುಟ್ಟಿಕೊಂಡ ಇದು ಇಂದು ವಿಶ್ವವಿಖ್ಯಾತಿ ಗಳಿಸಿದೆ. ಫುಟ್ಬಾಲ್​ ಕ್ರೀಡೆ 208 ದೇಶಗಳಲ್ಲಿ ಖ್ಯಾತಿ ಪಡೆದಿದೆ. 93 ದೇಶಗಳಲ್ಲಿ ಇದು ಅಚ್ಚುಮೆಚ್ಚಿನ ಕ್ರೀಡೆ. 4 ಬಿಲಿಯನ್(ಶತಕೋಟಿ) ಅಭಿಮಾನಿಗಳನ್ನು ಹೊಂದಿದೆ. ಒಟ್ಟು 22 ಆಟಗಾರರು ಈ ಆಟದಲ್ಲಿ ಭಾಗವಹಿಸುತ್ತಾರೆ. ಇತ್ತಂಡಗಳು ತಲಾ 11 ಆಟಗಾರರನ್ನು ಹೊಂದಿರುತ್ತವೆ.
    ಫುಟ್ಬಾಲ್​
    ಫುಟ್ಬಾಲ್​ (IANS)
  2. ಕ್ರಿಕೆಟ್: ವಿಶ್ವದ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಕ್ರಿಕೆಟ್ ಎರಡನೇ ಸ್ಥಾನದಲ್ಲಿದೆ. ಈ ಆಟ 16ನೇ ಶತಮಾನದ ಕೊನೆಯಲ್ಲಿ ಇಂಗ್ಲೆಂಡ್‌ನಲ್ಲಿ ಪ್ರಾರಂಭವಾಯಿತು. ಕ್ರಿಕೆಟ್ ಇಂಗ್ಲೆಂಡಿನ ರಾಷ್ಟ್ರೀಯ ಆಟವಾಗಿದ್ದು ಇಂದು 100ಕ್ಕೂ ಹೆಚ್ಚು ದೇಶಗಳಿಗೆ ವ್ಯಾಪಿಸಿದೆ. 3 ಶತಕೋಟಿ ಅಭಿಮಾನಿಗಳನ್ನು ಹೊಂದಿದೆ. ಐಸಿಸಿ ಏಕದಿನ ವಿಶ್ವಕಪ್, ಟಿ20 ವಿಶ್ವಕಪ್​, ಟೆಸ್ಟ್​ ಚಾಂಪಿಯನ್ಸ್​ ಟ್ರೋಫಿ ಕ್ರಿಕೆಟ್​ನ ದೊಡ್ಡ ಈವೆಂಟ್​ಗಳು.
    ಕ್ರಿಕೆಟ್​
    ಕ್ರಿಕೆಟ್​ (IANS)
  3. ಫೀಲ್ಡ್ ಹಾಕಿ: ಹಾಕಿ ಕ್ರಿಸ್ತಪೂರ್ವ ಮೂರನೇ ಶತಮಾನದಲ್ಲಿ ಪ್ರಾರಂಭವಾಗಿದೆ. ಸುಮಾರು 2-3 ಬಿಲಿಯನ್ ಜನರು ಈ ಆಟವನ್ನು ಇಷ್ಟಪಡುತ್ತಾರೆ. ವಿಶ್ವದ ಮೂರನೇ ಅತ್ಯಂತ ಜನಪ್ರಿಯ ಆಟವೂ ಹೌದು. ತಲಾ 11 ಆಟಗಾರರ ಎರಡು ತಂಡಗಳಲ್ಲಿ ಭಾಗವಹಿಸುತ್ತವೆ. ಫೀಲ್ಡ್ ಹಾಕಿ ಯುರೋಪ್, ಆಫ್ರಿಕಾ, ಏಷ್ಯಾ ಮತ್ತು ಆಸ್ಟ್ರೇಲಿಯಾ ಮತ್ತು ಭಾರತದಲ್ಲಿ ಹೆಚ್ಚು ಜನಪ್ರಿಯ.​
    ಹಾಕಿ
    ಹಾಕಿ (IANS)
  4. ಟೆನಿಸ್: ಟೆನಿಸ್ 14ನೇ ಶತಮಾನದಲ್ಲಿ ಫ್ರಾನ್ಸ್‌ನಲ್ಲಿ ಹುಟ್ಟಿಕೊಂಡಿತು. ಸಿಂಗಲ್ಸ್​ ಮತ್ತು ಡಬಲ್ಸ್‌ ಪಂದ್ಯಗಳು ನಡೆಯುತ್ತವೆ. ವಿಶ್ವಾದ್ಯಂತ ಸರಿಸುಮಾರು 1 ಶತಕೋಟಿ ಅಭಿಮಾನಿಗಳನ್ನು ಹೊಂದಿದೆ.
    ಟೆನ್ನಿಸ್
    ಟೆನ್ನಿಸ್ (IANS)
  5. ವಾಲಿಬಾಲ್: ಈ ಆಟ 1895ರಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಾರಂಭವಾಯಿತು. ವಾಲಿಬಾಲ್ 900 ಮಿಲಿಯನ್ ಜಾಗತಿಕ ಅಭಿಮಾನಿಗಳನ್ನು ಹೊಂದಿದೆ.
    ವಾಲಿಬಾಲ್​
    ವಾಲಿಬಾಲ್​ (IANS)
  6. ಟೇಬಲ್ ಟೆನಿಸ್: 19ನೇ ಶತಮಾನದಲ್ಲಿ ಪ್ರಾರಂಭವಾದ ಟೇಬಲ್​ ಟೆನ್ನಿಸ್ ಇಂದು ವಿಶ್ವದ ಜನಪ್ರಿಯ ಆಟ. ಚೀನಾದ ರಾಷ್ಟ್ರೀಯ ಆಟವೂ ಹೌದು. ಈ ಆಟವನ್ನು ಸಿಂಗಲ್ಸ್ ಮತ್ತು ಡಬಲ್ಸ್ ಎಂದು ಎರಡು ಸ್ಪರ್ಧೆಗಳಲ್ಲಿ ಆಡಿಸಲಾಗುತ್ತದೆ. ಚೀನಾ, ಇಂಡೋನೇಷ್ಯಾ ಮತ್ತು ಮಲೇಷ್ಯಾದಲ್ಲಿ ಟೇಬಲ್ ಟೆನಿಸ್ ಬಹಳ ಪ್ರಸಿದ್ಧ. ಈ ಕ್ರೀಡೆಗಿರುವ ಅಭಿಮಾನಿಗಳ ಸಂಖ್ಯೆ ಅಂದಾಜು 850 ಮಿಲಿಯನ್.
    ಟೇಬಲ್​ ಟೆನ್ನಿಸ್
    ಟೇಬಲ್​ ಟೆನ್ನಿಸ್ (IANS)
  7. ಬೇಸ್‌ಬಾಲ್: ಬೇಸ್‌ಬಾಲ್ 18ನೇ ಶತಮಾನದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಹುಟ್ಟಿಕೊಂಡಿತು. ಮೊದಲ ಲೀಗ್ ಅನ್ನು 1870ರ ದಶಕದಲ್ಲಿ ಆಯೋಜಿಸಲಾಗಿತ್ತು. ಯುನೈಟೆಡ್ ಸ್ಟೇಟ್ಸ್ ಹೊರತುಪಡಿಸಿ ಕ್ಯೂಬಾ, ಡೊಮಿನಿಕನ್ ರಿಪಬ್ಲಿಕ್, ಪೋರ್ಟೊ ರಿಕೊ, ಜಪಾನ್ ಮತ್ತು ವೆನೆಜುವೆಲಾದಂತಹ ದೇಶಗಳಲ್ಲೂ ಬೇಸ್‌ಬಾಲ್ ಸಾಕಷ್ಟು ಜನಪ್ರಿಯವಾಗಿದೆ.
    ಬೇಸ್​ಬಾಲ್​
    ಬೇಸ್​ಬಾಲ್​ (ANI)
  8. ಗಾಲ್ಫ್: 15ನೇ ಶತಮಾನದಲ್ಲಿ ಸ್ಕಾಟ್ಲೆಂಡ್‌ನಲ್ಲಿ ಈ ಕ್ರೀಡೆ ಶುರುವಾಗಿದೆ. ರಾಯಲ್ ಕಲ್ಕತ್ತಾ ಗಾಲ್ಫ್ ಕ್ಲಬ್ ಅನ್ನು 1829ರಲ್ಲಿ ಸ್ಥಾಪಿಸಲಾಯಿತು. ಕ್ರಮೇಣ ಇದು ಐರ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಕೆನಡಾ ಮತ್ತು ಸಿಂಗಾಪುರ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಪ್ರಸಿದ್ಧಿ ಪಡೆಯಲಾರಂಭಿಸಿತು. ಯುರೋಪ್​ನ ಅನೇಕ ಭಾಗಗಳಲ್ಲಿ ಹೆಚ್ಚಾಗಿ ಆಡುತ್ತಾರೆ.
    ಗಾಲ್ಫ್​
    ಗಾಲ್ಫ್​ (IANS)
  9. ಬಾಸ್ಕೆಟ್‌ಬಾಲ್: 1891ರಲ್ಲಿ ಈ ಆಟ ಪ್ರಾರಂಭವಾಯಿತು ಎಂದು ಹೇಳಲಾಗುತ್ತಿದೆ. ಬಾಸ್ಕೆಟ್‌ಬಾಲ್ ಅಮೆರಿಕದ ರಾಷ್ಟ್ರೀಯ ಆಟವೂ ಆಗಿದೆ. ಯುನೈಟೆಡ್ ಸ್ಟೇಟ್ಸ್, ಕೆನಡಾ, ಆಸ್ಟ್ರೇಲಿಯಾ, ಅರ್ಜೆಂಟೀನಾ ಮತ್ತು ಬ್ರೆಜಿಲ್ ಬಲಿಷ್ಠ ತಂಡಗಳಾಗಿವೆ. ಇದರಲ್ಲಿ ಒಟ್ಟು 10 ಆಟಗಾರರು ಭಾಗವಹಿಸುತ್ತಾರೆ. ಪ್ರತಿ ತಂಡ ಐದು ಆಟಗಾರರನ್ನು ಹೊಂದಿರುತ್ತದೆ.
    ಬಾಸ್ಕೆಟ್​ಬಾಲ್​
    ಬಾಸ್ಕೆಟ್​ಬಾಲ್​ (IANS)
  10. ರಗ್ಬಿ: 19ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ರಗ್ಬಿ ಪ್ರಾರಂಭವಾಯಿತು. ಇದನ್ನು ಎರಡು ತಂಡಗಳು ತಲಾ 7 ಆಟಗಾರರೊಂದಿಗೆ ಆಡಲಾಗುತ್ತದೆ. ಇಂಗ್ಲೆಂಡ್, ವೇಲ್ಸ್ ಮತ್ತು ಸ್ಕಾಟ್ಲೆಂಡ್, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಅರ್ಜೆಂಟೀನಾದಲ್ಲಿ ರಗ್ಬಿ ಹೆಚ್ಚು ಜನಪ್ರಿಯ. ರಗ್ಬಿ ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ವೇಲ್ಸ್, ಫಿಜಿ, ಸಮೋವಾ, ಟೊಂಗಾ ಮತ್ತು ಮಡಗಾಸ್ಕರ್‌ನ ರಾಷ್ಟ್ರೀಯ ಆಟವಾಗಿದೆ.
    ರಗ್ಬಿ
    ರಗ್ಬಿ (ANI)

ಇದನ್ನೂ ಓದಿ: ನಿವೃತ್ತಿ ಘೋಷಣೆ ಪೋಸ್ಟರ್ ವೈರಲ್: ಮೌನ ಮುರಿದ ಕೆ ಎಲ್​ ರಾಹುಲ್​ - KL Rahul Retirement

ETV Bharat Logo

Copyright © 2025 Ushodaya Enterprises Pvt. Ltd., All Rights Reserved.