ETV Bharat / spiritual

ಸಂಕಷ್ಟಿ ಚತುರ್ಥಿ ಏಕೆ ಆಚರಿಸುತ್ತಾರೆ?: ಶಾಸ್ತ್ರಗಳ ಪ್ರಕಾರ ವ್ರತದ ಹಿನ್ನೆಲೆ ಏನು? - Sankatahara Chaturthi 2024 - SANKATAHARA CHATURTHI 2024

Sankatahara Chaturthi Vrat Katha: ಸಂಕಷ್ಟ ಗಣಪತಿ ಪೂಜೆ ಮುಗಿದ ನಂತರ ಸಂಕಷ್ಟ ಗಣಪತಿ ವ್ರತ ಕಥಾ ಓದುವುದು ಕಡ್ಡಾಯ. ಸಂಕಷ್ಟ ಗಣಪತಿ ವ್ರತದ ಕಥೆಯನ್ನು ಓದುವುದು ಅಥವಾ ಕೇಳುವುದು ಹೆಚ್ಚಿನ ಪುಣ್ಯವನ್ನು ನೀಡುತ್ತದೆ. ಸಂಕಷ್ಟ ಗಣಪತಿ ವ್ರತದ ಕಥೆಯನ್ನು ಕೇಳದಿದ್ದರೆ ವ್ರತ ಅಪೂರ್ಣವಾಗುತ್ತದೆ ಎನ್ನುತ್ತಾರೆ ಹಿರಿಯರು. ಹಾಗಾದರೆ ಈ ವ್ರತದ ಕಥೆಯನ್ನೂ ತಿಳಿಯೋಣ.

ಸಂಕಷ್ಟ ಚತುರ್ಥಿ ಮಹಾತ್ಮೆ
ಸಂಕಷ್ಟ ಚತುರ್ಥಿ ಮಹಾತ್ಮೆ (ETV Bharat)
author img

By ETV Bharat Karnataka Team

Published : Jun 26, 2024, 10:34 AM IST

Updated : Jun 27, 2024, 1:23 PM IST

ಹಿಂದೂ ಧರ್ಮದಯಲ್ಲಿ ಗಣಪತಿಯನ್ನು ಮಂಗಳಕರ ದೇವರು ಎಂದು ಭಾವಿಸಲಾಗುತ್ತದೆ. ಹಾಗಾಗಿ ಪ್ರತಿ ಮಂಗಳ ಕಾರ್ಯಗಳಿಗೆ ಮುನ್ನ ಸಂಕಷ್ಟಗಳು ದೂರವಾಗಲಿ ಎಂದು ಗಣಪನಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಅದರಂತೆ ಪ್ರತಿ ತಿಂಗಳ ಚತುರ್ಥಿಯಂದೂ ಸಂಕಷ್ಟ ಚತುರ್ಥಿ ವ್ರತವನ್ನು ಆಚರಿಸಲಾಗುತ್ತದೆ. ಈ ವ್ರತವನ್ನು ಸಂಕಷ್ಟಿ ಚತುರ್ಥಿ, ಸಂಕಷ್ಟಹರ ಚತುರ್ಥಿ, ಅಥವಾ ಸಂಕಷ್ಟಿ ಎಂದೂ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಈ ವ್ರತವನ್ನು ಆಚರಿಸುವುದರಿಂದ ಸಂಕಷ್ಟಗಳು ದೂರವಾಗಿ ಜೀವನದಲ್ಲಿ ಸುಖ, ಶಾಂತಿ, ಐಶ್ವರ್ಯ, ಸಮೃದ್ಧಿ ಪ್ರಾಪ್ತಿಯಾಗಲಿದೆ ಎಂದು ನಂಬಲಾಗುತ್ತದೆ. ಹಾಗಾಗಿ ಈ ದಿನವನ್ನು ಗಣಪನಿಗೆ ವಿಶೇಷ ಪೂಜೆ ಸಲ್ಲಿಸಿ ವ್ರತವನ್ನು ಆಚರಣೆ ಮಾಡಲಾಗುತ್ತದೆ.

ಇನ್ನು ಸಂಕಷ್ಟ ಗಣಪತಿ ಪೂಜೆ ಮುಗಿದ ನಂತರ ಸಂಕಷ್ಟ ಗಣಪತಿ ವ್ರತ ಕಥಾ ಓದುವುದು ಕಡ್ಡಾಯ. ಶಾಸ್ತ್ರಗಳ ಪ್ರಕಾರ ಸಂಕಷ್ಟ ಗಣಪತಿ ವ್ರತದ ಕಥೆಯನ್ನು ಓದುವುದು ಅಥವಾ ಕೇಳುವುದು ಹೆಚ್ಚಿನ ಪುಣ್ಯವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ. ಸಂಕಷ್ಟ ಗಣಪತಿ ವ್ರತದ ಕಥೆಯನ್ನು ಕೇಳದಿದ್ದರೆ ವ್ರತವೂ ಅಪೂರ್ಣವಾಗುತ್ತದೆ ಎನ್ನುತ್ತಾರೆ ಹಿರಿಯರು. ಹಾಗಾದರೆ, ಈ ವ್ರತದ ಕಥೆಯನ್ನೂ ತಿಳಿಯೋಣ.

Sankatahara Chaturthi Vrat Katha: ಒಮ್ಮೆ ಸ್ವರ್ಗದ ಅಧಿಪತಿಯಾದ ಇಂದ್ರನು ಗಣಪನ ಮಹಾನ್ ಭಕ್ತ ಬೃಗಾಂಡಿ ಎಂಬ ಋಷಿಯನ್ನು ಭೇಟಿ ಮಾಡಿ ಸ್ವರ್ಗಕ್ಕೆ ಹಿಂದಿರುಗುತ್ತಿದ್ದಾಗ ಪುಷ್ಟಕ ವಿಮಾನವು ಇದ್ದಕ್ಕಿದ್ದಂತೆ ಪ್ರದೇಶವೊಂದರಲ್ಲಿ ನಿಂತಿತು. ಆಗ ಈ ಪ್ರದೇಶದ ರಾಜ ಸುರಸೇನು ಇದನ್ನು ಕಂಡು ಅದರಲ್ಲಿದ್ದ ಇಂದ್ರನನ್ನು ನೋಡಿ ಸಂತೋಷದಿಂದ ನಮಸ್ಕರಿಸಿದನು.

ಮಹಾರಾಜನು ಇಂದ್ರನು ವಿಮಾನವು ಅಲ್ಲಿ ನಿಲ್ಲಲು ಕಾರಣ ಏನು ಎಂದು ಕೇಳಿದನು. ಆಗ ಇಂದ್ರನು, ನಿನ್ನ ರಾಜ್ಯದಲ್ಲಿ ಅನೇಕ ಪಾಪಗಳನ್ನು ಮಾಡಿದ ವ್ಯಕ್ತಿಯ ದೃಷ್ಟಿ ವಿಮಾನದ ಮೇಲೆ ನೆಟ್ಟಿದ್ದರಿಂದ ಮಧ್ಯದಲ್ಲಿ ವಿಮಾನ ನಿಂತಿತು ಎಂದು ಹೇಳಿದನು. ಆಗ ರಾಜ ಸುರಸೇನನು ಈ ವಿಮಾನವು ಸರಿಹೋಗಲು ಏನು ಮಾಡಬೇಕು ಎಂದು ಕೇಳಿದಾಗ ಇಂದ್ರನು ಇಂದು ಪಂಚಮಿ ಮತ್ತು ನಿನ್ನೆ ಚತುರ್ಥಿ ಎಂದು ಹೇಳಿದನು. ಇಂದು ಉಪವಾಸ ಮಾಡಿದರೇ ಪುಣ್ಯ ಬರಲಿದ್ದು ಆಗ ವಿಮಾನ ಸರಿಯಾಗುತ್ತದೆ ಎಂದು ತಿಳಿಸಿದರು.

ನಂತರ ಆ ರಾಜ್ಯದ ಎಲ್ಲಾ ಸೈನಿಕರು ಪ್ರತಿಯೊಬ್ಬರು ಉಪವಾಸ ಮಾಡುವಂತೆ ಆದೇಶ ಮಾಡಿದರು. ಅದೇ ಸಮಯದಲ್ಲಿ ಗಣೇಶನ ದೂತರೊಬ್ಬರು ಸತ್ತ ಮಹಿಳೆಯ ದೇಹವನ್ನು ಭುಜದ ಮೇಲೆ ಹೊತ್ತುಕೊಂಡು ಸಾಗಿಸುವುದನ್ನು ನೋಡುತ್ತಾರೆ. ಆ ಮಹಿಳೆ ತನ್ನ ಜೀವನದಲ್ಲಿ ಅನೇಕ ಪಾಪಗಳನ್ನು ಮಾಡಿದ್ದಳು. ಈ ಮಹಾಪಾಪಿ ಹೆಣ್ಣನ್ನು ಗಣೇಶನ ಲೋಕಕ್ಕೆ ಏಕೆ ಕರೆದುಕೊಂಡು ಹೋಗುತ್ತಿದ್ದೀರಿ ಎಂದು ಸೈನಿಕರು ಕೇಳಿದರು, ಆಗ ಗಣೇಶನ ದೂತನು ಈ ಮಹಿಳೆ ತಿಳಿದೋ ತಿಳಿಯದೆಯೋ ಸಂಕಷ್ಟ ಚತುರ್ಥಿ ದಿನ ಉಪವಾಸ ಮಾಡುತ್ತಿದ್ದಾಳೆ. ಮರುದಿನ ಚಂದ್ರೋದಯದ ನಂತರ ಊಟ ಮಾಡಿದಳು. ಇದರಿಂದ ಸಂಕಷ್ಟ ಚತುರ್ಥಿ ವ್ರತದ ಫಲ ಆಕೆಗೆ ಲಭಿಸಿದೆ. ಇಂದು ಆಕೆ ನಿಧನ ಹೊಂದಿದ್ದಾಳೆ, ಹಾಗಾಗಿ ಸಂಕಷ್ಟ ಗಣಪತಿ ವ್ರತದ ಪುಣ್ಯದಿಂದ ಆಕೆಯನ್ನು ಗಣೇಶನ ಲೋಕಕ್ಕೆ ಕೊಂಡೊಯ್ಯಲಾಗುತ್ತಿದೆ ಎಂದು ತಿಳಿಸುತ್ತಾರೆ.

ಆಗ ಸೈನಿಕರು ಆ ಮಹಿಳೆಯ ಮೃತ ದೇಹವನ್ನು ತಮಗೆ ನೀಡಬೇಕೆಂದು ಒತ್ತಾಯಿಸಿದರು, ಹಾಗೆ ಮಾಡಿದರೆ ಮಾತ್ರ ಸ್ಥಗಿತಗೊಂಡ ಇಂದ್ರನ ವಿಮಾನವು ಅಲ್ಲಿಂದ ಹೊರಡುತ್ತದೆ ಎಂದರು. ಗಣೇಶನ ದೂತರು ಅವಳ ಫಲವನ್ನು ನೀಡಲು ನಿರಾಕರಿಸಿದರು. ಆ ಸಮಯದಲ್ಲಿ ಆಶ್ಚರ್ಯ ಎಂಬಂತೆ ಜೋರಾದ ಬಿರುಗಾಳಿ ಬೀಸಿ ಇಂದ್ರ ವಿಮಾನವು ಅಲ್ಲಿಂದ ಹೊರಡಲು ಸಿದ್ದವಾಗುತ್ತದೆ. ಅದನ್ನು ಕಂಡು ಎಲ್ಲರೂ ಭಕ್ತಿಯಿಂದ ನಮಸ್ಕರಿಸಿ ವ್ರತದ ಹಿರಿಮೆಯನ್ನು ಸ್ಮರಿಸುತ್ತಾರೆ.

ಹಾಗಾಗಿ ಮನೆಯಲ್ಲಿ ಈ ವ್ರತವನ್ನು ನಿಯಮಿತವಾಗಿ ಆಚರಿಸಲು ಸಾಧ್ಯವಾಗದವರು ವಿನಾಯಕನ ಗುಡಿಯಲ್ಲಿ ಪ್ರತಿ ಚುತುರ್ಥಿಯ ದಿನ ನಡೆಯುವ ಸಂಕಷ್ಟ ಗಣಪತಿ ವ್ರತ ಪೂಜೆಯನ್ನು ಮಾಡಿದರೆ ಕಷ್ಟಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ಮನೆಯಲ್ಲಾಗಲಿ ಅಥವಾ ದೇವಸ್ಥಾನದಲ್ಲಾಗಲಿ ಪೂಜೆ ಮುಗಿದ ನಂತರ ಚಂದ್ರನ ದರ್ಶನ ಮಾಡಿ ತಲೆಗೆ ಅಕ್ಷಿಣಿಯನ್ನು ಧರಿಸಬೇಕು. ಆಗ ಮಾತ್ರ ಈ ವ್ರತದ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಪ್ರಮುಖ ಟಿಪ್ಪಣಿ: ಮೇಲಿನ ವಿವರಗಳನ್ನು ವಿವಿಧ ಪುರಾಣ ಪುಸ್ತಕಗಳಲ್ಲಿ ಉಲ್ಲೇಖಿಸಲಾದ ಅಂಶಗಳ ಆಧಾರದ ಮೇಲೆ ತಿಳಿಸಲಾಗಿದೆ. ಆದಾಗ್ಯೂ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಓದುಗರು ಗಮನಿಸಬೇಕು.

ಇದನ್ನೂ ಓದಿ: ಕಣಗಲೆ ಹೂವಿನ ಗಿಡಗಳನ್ನು ಮನೆಯಲ್ಲಿ ಬೆಳೆಸಬಹುದೇ?: ಬೋನ್ಸಾಯ್, ಹತ್ತಿ, ಕಳ್ಳಿ ಗಿಡ ನೆಟ್ಟರೆ ಅಪಾಯ ಪಕ್ಕಾ! ವಾಸ್ತು ತಜ್ಞರು ಹೇಳುವುದೇನು? - Oleander Flower At Home

Last Updated : Jun 27, 2024, 1:23 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.