ETV Bharat / spiritual

ದೀಪಾವಳಿಯಲ್ಲಿ ತಪ್ಪದೇ ತಿಳಿದುಕೊಳ್ಳಬೇಕಾದ ಕಥೆಯಿದು: ಕಳ್ಳತನ ಯತ್ನ ಮಾಡಿ ಸತ್ತವ ಕುಬೇರನಾಗಿದ್ದು ಹೇಗೆ?

ಕುಬೇರನ ಹಿಂದಿನ ಜನ್ಮದ ಕಥೆ ಏನು?: ಸಂಪತ್ತಿನ ದೇವರು ಆದದ್ದು ಹೇಗೆ?

kubera-story-in-Kannada-the-epic-saga-of-lord-kuber-from-thief-to-a-demi-god
ದೀಪಾವಳಿಯಲ್ಲಿ ತಪ್ಪದೇ ತಿಳಿದುಕೊಳ್ಳಬೇಕಾದ ಕಥೆಯಿದು: ಕಳ್ಳನಾಗಿದ್ದವ ಕುಬೇರನಾಗಿದ್ದು ಹೇಗೆ? (ETV Bharat)
author img

By ETV Bharat Karnataka Team

Published : Oct 29, 2024, 11:47 AM IST

Kubera Story: ದೀಪಾವಳಿ ಅಮವಾಸ್ಯೆಯ ಮೊದಲು ಬರುವ ತ್ರಯೋದಶಿಯ ದಿನದಂದು ಕುಬೇರನನ್ನು ಪೂಜಿಸುವುದು ವಾಡಿಕೆ. ಕುಬೇರನನ್ನು ಪೂಜಿಸದೇ ದೀಪಾವಳಿ ಪೂಜೆ ಅಪೂರ್ಣ ಎಂದು ಶಾಸ್ತ್ರಗಳು ಹೇಳುತ್ತವೆ. ಕುಬೇರನಿಗೆ ಹಿಂದೂ ಸಂಪ್ರದಾಯದಲ್ಲಿ ಮಾತ್ರವಲ್ಲದೇ ಪ್ರಪಂಚದಾದ್ಯಂತ ಭಕ್ತರಿದ್ದಾರೆ. ಕುಬೇರನನ್ನು ವಿವಿಧ ದೇಶಗಳಲ್ಲಿ ವಿವಿಧ ರೂಪಗಳಲ್ಲಿ ಪೂಜಿಸಲಾಗುತ್ತದೆ.

ಯಾರು ಈ ಕುಬೇರ?: ಶಿವ, ಮತ್ಸ್ಯ ಮತ್ತು ಸ್ಕಂದ ಪುರಾಣಗಳ ಪ್ರಕಾರ, ಕುಬೇರನ ದೇಹವು ಭಗವಾನ್ ವಿನಾಯಕನ ದೇಹವನ್ನು ಹೋಲುತ್ತದೆ. ಕುಬೇರ ರಾವಣನ ಸಹೋದರ. ಕುಬೇರನನ್ನು ಯಕ್ಷ ರಾಜ ಮತ್ತು ಸಂಪತ್ತಿನ ಪ್ರಧಾನ ದೇವತೆ ಎಂದು ಪರಿಗಣಿಸಲಾಗುತ್ತದೆ. ತಿರುಮಲದ ವೆಂಕಟೇಶ್ವರನು ಪದ್ಮಾವತಿ ದೇವಿಯನ್ನು ಮದುವೆಯಾಗಲು ಕುಬೇರನಿಂದ ಸಾಲವನ್ನು ಪಡೆದನೆಂದು ಹೇಳಲಾಗುತ್ತದೆ. ಅದರ ಪುರಾವೆಗಳು ತಾಮ್ರದ ಹಾಳೆಗಳ ಮೇಲಿನ ಶಾಸನಗಳ ರೂಪದಲ್ಲಿ ಇನ್ನೂ ಅಸ್ತಿತ್ವದಲ್ಲಿವೆ. ಆದರೆ, ಕುಬೇರನು ಸಂಪತ್ತು ಮತ್ತು ಸಂಪತ್ತಿನ ದೇವರು ಆದದ್ದು ಹೇಗೆ? ಕುಬೇರನ ಹಿಂದಿನ ಜನ್ಮ ಯಾವುದು? ಈ ವಿಷಯಗಳನ್ನು ನಾವು ಈ ಸುದ್ದಿಯಲ್ಲಿ ವಿವರವಾಗಿ ತಿಳಿದುಕೊಳ್ಳೋಣ

ಸಂಪತ್ತಿನ ಅಧಿದೇವತೆ: ಸಂಪತ್ತಿನ ಅಧಿಪತಿಯಾದ ಕುಬೇರನು ತನ್ನ ಹಿಂದಿನ ಜನ್ಮದಲ್ಲಿ ದೊಡ್ಡ ಪುಣ್ಯ ಮಾಡಿರಬೇಕು ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ಹಿಂದಿನ ಜನ್ಮದಲ್ಲಿ ಕುಬೇರ ಕಳ್ಳತನಕ್ಕೆ ಯತ್ನಿಸಿ ಸಾವನ್ನಪ್ಪಿದ್ದ. ಅಂತಹ ವ್ಯಕ್ತಿ ಸಂಪತ್ತಿನ ಅಧಿಪತಿಯಾದದ್ದು ಹೇಗೆ ಎಂದು ನೋಡೋಣ.

ಕುಬೇರನ ಹಿಂದಿನ ಜನ್ಮ: ಮಹರ್ಷಿ ವ್ಯಾಸ ಬರೆದ ಶಿವ ಮಹಾಪುರಾಣದ ಪ್ರಕಾರ, ಕುಬೇರನು ತನ್ನ ಹಿಂದಿನ ಜನ್ಮದಲ್ಲಿ ಗುಣನಿಧಿ ಆಗಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದನು. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದರೂ ಕೆಟ್ಟ ಚಟಗಳಿಂದ ಭಾದಿತನಾಗಿದ್ದ, ಜೂಜಾಡುತ್ತಿದ್ದ. ಈ ಜೂಜಾಟದಲ್ಲಿ ಎಲ್ಲವನ್ನೂ ಕಳೆದುಕೊಂಡಿದ್ದ ಎಂದು ಹೇಳಲಾಗುತ್ತದೆ.

ಗುಣನಿಧಿಯ ಕಾರ್ಯಗಳನ್ನು ತಾಯಿ ಮರೆಮಾಚುತ್ತಾಳೆ: ಗುಣಾನಿಧಿ ಇಷ್ಟೆಲ್ಲಾ ಮಾಡುತ್ತಿದ್ದರೂ ಅವರ ತಾಯಿ ಮಗ ಮಾಡುತ್ತಿರುವುದನ್ನು ಬೆಂಬಲಿಸಿ ಮುಚ್ಚಿಡುತ್ತಿದ್ದರು. ಗುಣನಿಧಿಯ ಚಟುವಟಿಕೆಗಳು ಅವನ ತಂದೆಗೆ ತಿಳಿಯದಂತೆ ಎಚ್ಚರ ವಹಿಸಿದ್ದಳು. ಆದರೆ, ಒಂದು ದಿನ ಗುಣನಿಧಿ ತಂದೆಗೆ ಸತ್ಯ ತಿಳಿಯಿತು. ತಂದೆಗೆ ಸತ್ಯ ತಿಳಿದಾಗ ಗುಣನಿಧಿ ಹೆದರಿದ್ದನು. ಮನೆಯಿಂದ ಓಡಿಹೋಗಿ ಶಿವನ ದೇವಸ್ಥಾನದಲ್ಲಿ ತಲೆಮರೆಸಿಕೊಂಡಿದ್ದನಂತೆ.

ತಿಳಿದೋ ತಿಳಿಯದೆಯೋ ಶಿವರಾತ್ರಿಯ ನಿಯಮಗಳನ್ನು ಪಾಲಿಸಿದ್ದ ಗುಣನಿಧಿ: ಅಂದು ಮಹಾಶಿವರಾತ್ರಿಯಾದ್ದರಿಂದ ಶಿವನ ದೇವಸ್ಥಾನಕ್ಕೆ ಬಂದ ಭಕ್ತರು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಎಲ್ಲರಿಗೂ ಪ್ರಸಾದ ವಿತರಿಸಿ, ಜಾಗರಣೆ ಬಳಿಕ ಮೆಲ್ಲನೆ ನಿದ್ದೆಗೆ ಜಾರಿದ್ದರು . ಕತ್ತಲಾದಾಗ ದೇವಸ್ಥಾನದಲ್ಲಿದ್ದ ಗುಣನಿಧಿಗೆ ತುಂಬಾ ಹಸಿವು ಬಾಯಾರಿಕೆಯಾಯಿತು. ಜನರೆಲ್ಲರೂ ನಿದ್ರಿಸಿದ್ದಾರೆ ಎಂದು ಖಚಿತಪಡಿಸಿಕೊಂಡ ನಂತರ, ಹಸಿದ ಗುಣನಿಧಿಯು ಶಿವನಿಗೆ ಅರ್ಪಿಸಿದ ಪ್ರಸಾದವನ್ನು ತಿನ್ನಲು ಗರ್ಭ ಗುಡಿಗೆ ಹೊಕ್ಕನು. ಕತ್ತಲೆಯಲ್ಲಿ ಏನನ್ನೂ ಕಾಣದೇ ತನ್ನ ಮೇಲಿನ ಉಡುಪನ್ನು ಬತ್ತಿಯಲ್ಲಿ ಹರಿದು ಅಲ್ಲಿದ್ದ ಎಣ್ಣೆಯಿಂದ ದೀಪವನ್ನು ಹಚ್ಚಿದ್ದನು. ಆ ಬೆಳಕಿನಲ್ಲಿ ಪ್ರಸಾದದ ಪಾತ್ರೆಗಳನ್ನು ನೋಡಿ ಸಂತೋಷದಿಂದ ಹೊರನಡೆಯುತ್ತಿದ್ದಾಗ ದೇವಸ್ಥಾನದಲ್ಲಿ ಮಲಗಿದ್ದ ಭಕ್ತನ ಕಾಲಿಗೆ ತಗುಲಿದ ಪರಿಣಾಮ ಗುಣನಿಧಿ ಪ್ರಾಣ ಕಳೆದುಕೊಂಡ.

ಗುಣನಿಧಿಗಾಗಿ ಬಂದ ಯಮ ದೂತರು: ಮೃತ ಗುಣನಿಧಿಯ ಆತ್ಮವನ್ನು ತೆಗೆದುಕೊಂಡು ಹೋಗಲು ಯಮದೂತರು ಬರುತ್ತಾರೆ. ಆಗ ಪರಮೇಶ್ವರ ಪ್ರತ್ಯಕ್ಷನಾದನು ಮತ್ತು ಗುಣನಿಧಿಯೊಂದಿಗೆ ಮಹಾಶಿವರಾತ್ರಿಯ ದಿನ ನನ್ನ ದೇವಾಲಯದಲ್ಲಿನ ದೀಪವು ಆರದಂತೆ ಕಾಪಾಡಿ ಎಂದು ಹೇಳಿದ್ದ. ಇದೇ ವೇಳೆ ಗುಣನಿಧಿಗೆ ಮುಂದಿನ ಜನ್ಮದಲ್ಲಿ ನೀನೇ ಸಂಪತ್ತಿನ ಅಧಿಪತಿಯಾಗು ಎಂದು ವರ ಕೊಟ್ಟನು. ಆತ ಮುಂದೆ ಪುನರ್​ಜನ್ಮ ಪಡೆದು ಕುಬೇರನಾಗಿ ಜನಿಸಿ, ಪ್ರಖ್ಯಾತನಾದ.

ಕುಬೇರನ ಜನನ: ಬ್ರಾಹ್ಮಣ ಜನ್ಮದ ನಂತರ, ಕುಬೇರನು ಮುಂದಿನ ಜನ್ಮದಲ್ಲಿ ವಿಶ್ರವಸ ಮತ್ತು ದೇವವರ್ಣಿನಿಯ ಮಗನಾಗಿ ಜನ್ಮತಾಳಿದನು. ಈ ದಂಪತಿ ತಮ್ಮ ಮಗನಿಗೆ ವೈಶ್ರವಣ ಎಂದು ಹೆಸರಿಟ್ಟರು. ವೈಶ್ರವಣನು ಸಾವಿರ ವರ್ಷಗಳ ಕಾಲ ತಪಸ್ಸು ಮಾಡಿ ಬ್ರಹ್ಮನನ್ನು ಮೆಚ್ಚಿಸಿದನು. ಅದರ ನಂತರ ಅವನು ಯಕ್ಷರ ರಾಜ, ದಿಕ್ಕುಗಳ ರಕ್ಷಕ ಮತ್ತು ಸಂಪತ್ತಿನ ಪ್ರಧಾನ ದೇವತೆ ಎಂದು ಪ್ರಸಿದ್ಧನಾದನು. ಇದುವೇ ಕುಬೇರನ ಕಥೆ.

ಧನತೇರಸ್ ದಿನದಂದು ಕುಬೇರನನ್ನು ಪೂಜಿಸುವುದು, ಅವನ ಜನ್ಮ ವೃತ್ತಾಂತವನ್ನು ಕೇಳುವುದು ಅಥವಾ ಓದುವುದು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ.

ಓದುಗರ ಗಮನಕ್ಕೆ: ಮೇಲಿನ ವಿವರಗಳನ್ನು ವಿವಿಧ ವಿಜ್ಞಾನಗಳಲ್ಲಿ ಉಲ್ಲೇಖಿಸಲಾದ ಅಂಶಗಳ ಆಧಾರದ ಮೇಲೆ ಕೆಲವು ತಜ್ಞರು ಮಾತ್ರ ಒದಗಿಸಿದ್ದಾರೆ. ಆದಾಗ್ಯೂ, ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂಬುದನ್ನು ಗಮನಿಸತಕ್ಕದ್ದು. ಇದು ಸಂಪೂರ್ಣವಾಗಿ ನಿಮ್ಮ ನಂಬಿಕೆಗೆ ಬಿಟ್ಟಿದ್ದು.

ಇವುಗಳನ್ನು ಓದಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.