ಹೈದರಾಬಾದ್: ಕಾರ್ತಿಕ ಮಾಸದ ಕೃಷ್ಣ ಪಕ್ಷದ ಚತುರ್ಥಿಯಂದು ಕರ್ವಾ ಚೌತ್ ಆಚರಿಸಲಾಗುವುದು. ಈ ಬಾರಿ ಇದು ಅಕ್ಟೋಬರ್ 20 ಭಾನುವಾರದಂದು ಆಗಮಿಸಿದೆ. ವಿವಾಹಿತ ಮಹಿಳೆಯರು ತಮ್ಮ ಗಂಡನ ಸಂತೋಷ, ಯಶಸ್ಸು ಮತ್ತು ದೀರ್ಘಾಯುಷ್ಯಕ್ಕಾಗಿ ಮಾಡುವ ಪೂಜೆ ಇದಾಗಿದೆ. ಈ ಬಾರಿಯ ಕರ್ವಾ ಚೌತ್ ಸಂಕಷ್ಟ ಚತುರ್ಥಿಯಂದು ಬರುತ್ತದೆ, ಈ ದಿನ ಗಣೇಶನ ಆರಾಧನೆ ಕೂಡಾ ನಡೆಸಲಾಗುವುದು. ಕರ್ವಾ ಚೌತ್ ಸಾಮಾನ್ಯ ಆಚರಣೆಯಾಗಿರದೇ ಅದೊಂದು ಪ್ರೀತಿ, ಭಕ್ತಿ ಮತ್ತು ಮದುವೆಯ ಪವಿತ್ರ ಬಂಧದ ಸಂಭ್ರಮಾಚರಣೆಯಾಗಿದೆ.
ಏನಿದು ಕರ್ವಾ ಚೌತ್?: ವಿವಾಹಿತ ಹಿಂದೂ ಮಹಿಳೆಯರು ಗಂಡನ ಒಳಿತಿಗೆ ಆಚರಿಸುವ ಹಬ್ಬ ಇದಾಗಿದ್ದು, ಹೆಚ್ಚಾಗಿ ಉತ್ತರ ಭಾರತದಲ್ಲಿ ಇದರ ಆಚರಣೆ ಕಾಣಬಹುದು. ಇದನ್ನು ಕಾರಕ ಚತುರ್ಥಿ ಎಂದೂ ಕರೆಯುತ್ತಾರೆ, ಇಲ್ಲಿ ಕರ್ವಾ ಅಥವಾ ಕಾರಕ್ ಎಂದರೆ ನೀರನ್ನು ಅರ್ಪಿಸುವ ಮಣ್ಣಿನ ಮಡಕೆ ಎಂದು ಮಣ್ಣಿನ ಮಡಕೆಯ ನೀರನ್ನು ಚಂದ್ರನಿಗೆ ಅರ್ಘ್ಯ ರೂಪದಲ್ಲಿ ನೀಡಲಾಗುವುದು.
ಸೂರ್ಯೋದಯದಿಂದ ನಿರ್ಮಲ ವ್ರತವನ್ನು ಆಚರಿಸುವ ವಿವಾಹಿತರು, ಚಂದ್ರ ಕಾಣಿಸಿಕೊಂಡ ಬಳಿಕ ವ್ರತ ಮುಗಿಸುತ್ತಾರೆ. ಧಾರ್ಮಿಕ ವಿಷಯಗಳ ಪರಿಣತರ ಪ್ರಕಾರ, ಕರ್ವಾ ಚೌತ್ ಉಪವಾಸವು ಕಠಿಣವಾಗಿರುತ್ತದೆ. ಸೂರ್ಯೋದಯದ ನಂತರ ರಾತ್ರಿಯಲ್ಲಿ ಚಂದ್ರನು ಗೋಚರಿಸುವವರೆಗೆ ಉಪವಾಸ ಮಾಡಬೇಕು. ಈ ಸಮಯದಲ್ಲಿ, ಉಪವಾಸ ಮಾಡುವವರು ಏನನ್ನು ತಿನ್ನುವುದು. ಒಂದು ಹನಿ ನೀರು ಕೂಡ ಕುಡಿಯುವಂತಿಲ್ಲ.
ಕರ್ವಾ ಚೌತ್ ತಿಥಿಗಳು
ಕರ್ವಾ ಚೌತ್ ಉಪವಾಸವು ಅಕ್ಟೋಬರ್ 20ರ ಭಾನುವಾರ ಆಚರಿಸಲಾಗುವುದು
ಕರ್ವ ಚೌತ್ ಪೂಜೆಯ ಶುಭ ಸಮಯ - ಸಂಜೆ 5:17 ರಿಂದ 6:33 ರವರೆಗೆ
ಕರ್ವಾ ಚೌತ್ ವ್ರತ ಆರಂಭ ಸಮಯ - ಬೆಳಗ್ಗೆ 5:17 ರಿಂದ 7:29 ರವರೆಗೆ
ಕರ್ವಾ ಚೌತ್ ಉಪವಾಸದ ದಿನದಂದು ಚಂದ್ರೋದಯ ಸಮಯ - ರಾತ್ರಿ 7:29 ರವರೆಗೆ
ಚತುರ್ಥಿ ತಿಥಿಯ ಆರಂಭ ಮತ್ತು ಅಂತ್ಯ
ಚತುರ್ಥಿ ತಿಥಿ ಆರಂಭದ ಸಮಯ: ಅಕ್ಟೋಬರ್ 20ರಂದು ಬೆಳಗ್ಗೆ 6:46 ರಿಂದ
ಚತುರ್ಥಿ ತಿಥಿ ಮುಕ್ತಾಯ ಸಮಯ: ಅಕ್ಟೋಬರ್ 21 ಬೆಳಗ್ಗೆ 4:16
ಕರ್ವಾ ಚೌತ್ ಮಹತ್ವ: ಕರ್ವಾ ಚೌತ್ ವೈವಾಹಿಕ ಸಂಬಂಧದ ಬಲವನ್ನು ಸಂಕೇತಿಸುತ್ತದೆ. ಸಾವಿತ್ರಿಯು ತನ್ನ ಗಂಡನ ಆತ್ಮಕ್ಕಾಗಿ ಯಮನನ್ನು ಗೆದ್ದ ಕಥೆಯು ಈ ವ್ರತದಲ್ಲಿ ಅಡಕವಾಗಿದೆ. ಜೊತೆಗೆ ಮಹಾಭಾರತದಲ್ಲಿ ಅರ್ಜುನ ನೀಲಗಿರಿಗೆ ಪ್ರಯಾಣಿಸಿದಾಗ ಕೃಷ್ಣನ ಸಹಾಯ ಯಾಚಿಸಿದ ದ್ರೌಪದಿಗೆ ಪಾರ್ವತಿಯು ಶಿವನ ಸುರಕ್ಷತೆಗಾಗಿ ಮಾಡಿದಂತಹ ಕಟ್ಟು ನಿಟ್ಟಾದ ವ್ರತ ನೀನೂ ಸಹ ಆಚರಣೆ ಮಾಡುವಂತೆ ಸೂಚಿಸುತ್ತಾನೆ. ಅದರಂತೆ ದ್ರೌಪದಿ ವ್ರತ ಕೈಗೊಂಡಾಗ ಅರ್ಜುನ ಸುರಕ್ಷಿತವಾಗಿ ಹಿಂದಿರುಗುತ್ತಾನೆ
ಗಂಡನ ರಕ್ಷಣೆಗೆಗಾಗಿ ಹೆಂಡತಿ ನಡೆಸುವ ಉಪವಾಸವೂ ಭಕ್ತಿ ಮತ್ತು ಪತಿ ಬಗೆಗಿನ ಪ್ರೀತಿಯನ್ನು ಸೂಚಿಸುತ್ತದೆ. ಕರ್ವಾ ಚೌತ್ ಅನ್ನು ಮುಖ್ಯವಾಗಿ ಉತ್ತರ ಮತ್ತು ಪಶ್ಚಿಮ ಭಾರತದಲ್ಲಿ ಆಚರಿಸಲಾಗುತ್ತದೆ. ಪಂಜಾಬ್ ಮತ್ತು ಹರಿಯಾಣದಂತಹ ರಾಜ್ಯಗಳಲ್ಲಿ ಇದರ ಸಂಭ್ರಮ ಹೆಚ್ಚಿರುತ್ತದೆ.
ಕರ್ವಾ ಚೌತ್ ವ್ರತ ಉಪವಾಸದ ಕಠಿಣ ವ್ರತವಾಗಿದ್ದು, ಇದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಮಧುಮೇಹ, ಹೃದಯ ರೋಗ, ಹಿರಿಯ ಮಹಿಳೆಯರು, ಆಹಾರ ಅಸ್ವಸ್ಥತೆ, ಕಿಡ್ನಿ ರೋಗ, ಅಧಿಕ ರಕ್ತದೊತ್ತಡ, ಔಷಧಿಗಳನ್ನು ತೆಗೆದುಕೊಳ್ಳುವ ಮಹಿಳೆಯರು, ಕಡಿಮೆ ತೂಕ ಹೊಂದಿರುವ ಮಹಿಳೆಯರು, ಜೀರ್ಣಾಂಗವ್ಯೂಹದ ಅಸ್ವಸ್ಥತೆಗಳು, ದೀರ್ಘಕಾಲದ ಕಾಯಿಲೆ, ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು, ಮಾನಸಿಕ ಆರೋಗ್ಯ ಸಮಸ್ಯೆಗಳಿರುವ ಮಹಿಳೆಯರು ಈ ವ್ರತವನ್ನು ಆಚರಿಸದೇ ಇರುವುದು ಒಳಿತು.
ಇದನ್ನೂ ಓದಿ: ಚಪಾತಿ ಮಾಡಿದ ನಂತರ ಗಟ್ಟಿಯಾಗುತ್ತಾ? ಈ ರೀತಿ ಮಾಡಿದರೆ ಎಷ್ಟು ಗಂಟೆಗಳು ಕಳೆದರೂ ಸೂಪರ್ ಸಾಫ್ಟ್ ಆಗಿರುತ್ತೆ!