ETV Bharat / spiritual

ಉದ್ಯೋಗಸ್ಥ ಮಹಿಳೆಯರಿಗೆ ಈ ವಾರ ಸವಾಲು; ಅನಗತ್ಯ ಹಣ ಪೋಲಾಗದಂತೆ ಎಚ್ಚರ ವಹಿಸಿ.. ಇಲ್ಲದಿದ್ದರೆ.. - Weekly Horoscope - WEEKLY HOROSCOPE

ಈ ವಾರವು ನಿಮಗೆ ಹೇಗಿರಲಿದೆ? ಇಲ್ಲಿದೆ ವಾರದ ರಾಶಿ ಭವಿಷ್ಯ.

weekly horoscope
ವಾರದ ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Sep 29, 2024, 5:01 AM IST

ಮೇಷ : ಈ ವಾರ ನೀವು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಕೆಲಸದಲ್ಲಿ ಮೂಗು ತೂರಿಸಿ ತೊಂದರೆ ಮಾಡುವಂತಹ ಸಹೋದ್ಯೋಗಿಗಳ ಬಗ್ಗೆ ಗಮನವಿರಲಿ. ವಾದ್ವಾದಗಳಿಗೆ ಸಿಲುಕದೆ ಇರುವುದು ಜಾಣತನ. ಉದ್ಯೋಗಕ್ಕೆ ಸಂಬಂಧಪಟ್ಟಂತೆ ನಡೆಯುವ ಹಣಕಾಸಿನ ವ್ಯವಹಾರಗಳ ಬಗ್ಗೆ ಎಚ್ಚರ ಇರಲಿ. ತಪ್ಪಿದಲ್ಲಿ ಹಣ ಕಳೆದುಕೊಳ್ಳಬೇಕಾದ ಅನಿವಾರ್ಯತೆ ಎದುರಾಗಬಹುದು. ವಾರದ ಮಧ್ಯದಲ್ಲಿ ಕೆಲವು ಕೌಟುಂಬಿಕ ಮನಸ್ತಾಪಗಳು ನಡೆಯುವ ಸಂಭವ ಇದ್ದು, ಆದಕಾರಣ ನೀವು ನಿಮ್ಮ ಆರೋಗ್ಯ ಹಾಗೂ ಸಂಬಂಧಗಳನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕಿದೆ. ಪ್ರೀತಿ-ಪ್ರೇಮದ ವಿಷಯದಲ್ಲಿ ಸಹ ಜಾಣತನ ಅಗತ್ಯ ಹಾಗೂ ನಿಮ್ಮ ಸಂಗಾತಿಯ ಮಾತುಗಳಿಗೆ ಪ್ರಾಮಾಣಿಕವಾಗಿ ಕಿವಿಗೊಡಿ. ಮದುವೆಯ ಸಂಬಂಧ ಸರಾಗವಾಗಿ ನಡೆಯಬೇಕಾದರೆ ನಿಮ್ಮ ಸಂಗಾತಿಯೊಡನೆ ಒಟ್ಟಾಗಿ ಶ್ರಮವಹಿಸಬೇಕಾದ ಅಗತ್ಯ ಇದೆ. ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆ ಸೇರಬಹುದಾದ ಸಾಧ್ಯತೆ ಕೂಡ ಇದೆ. ಹೀಗಾದಲ್ಲಿ, ಅದೇ ಸಮಯದಲ್ಲಿ ಉದ್ಯೋಗಕ್ಕೆ ಸಂಬಂಧಪಟ್ಟಂತೆ ಪ್ರಯಾಣ ಮಾಡಬೇಕಾಗಿ ಬರುವುದರಿಂದ ಸಾಕಷ್ಟು ಆಯಾಸ, ಬಳಲಿಕೆ ಅನುಭವಿಸಲಿದ್ದೀರಿ.

ವೃಷಭ : ಈ ವಾರ ನೀವು ಮನೆಯಲ್ಲಾಗಲೀ ಅಥವಾ ಕಚೇರಿಯಲ್ಲಾಗಲೀ ಇತರರ ಜೊತೆಗೂಡಿ ಕೆಲಸ ಮಾಡಬೇಕಾಗುತ್ತದೆ. ಉದ್ಯೋಗ ಬದಲಾವಣೆಯ ಕುರಿತು ಸಿದ್ಧತೆ ನಡೆಸುತ್ತಿದ್ದಲ್ಲಿ, ಸಾಕಷ್ಟು ಯೋಚಿಸಿ, ನೀವಿರುವ ಸನ್ನಿವೇಶವನ್ನು ಪರಿಗಣಿಸಿ ಮುಂದುವರೆಯುವುದು ಉತ್ತಮ. ಪ್ರಮುಖವಾದ ನಿರ್ಣಯಗಳನ್ನು ತೆಗೆದುಕೊಳ್ಳುವ ಮುನ್ನ ನಿಮ್ಮ ಪ್ರೀತಿಪಾತ್ರರು ಅಥವಾ ಪರಿಣತರ ಸಲಹೆ ಪಡೆದುಕೊಳ್ಳುವುದು ಉತ್ತಮ. ಆತುರದಿಂದ ಅಥವಾ ಭಾವನೆಗಳ ಆವೇಗಕ್ಕೆ ಒಳಗಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳದೇ ಇರುವುದು ಸೂಕ್ತ. ಪ್ರೀತಿ ಸಂಬಂಧದಲ್ಲಿ ಪ್ರಾಮಾಣಿಕತೆ ಇರಲಿದೆ. ಮನಸ್ತಾಪ, ಭಿನ್ನಾಭಿಪ್ರಾಯಗಳನ್ನು ಜಗಳದ ಬದಲು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದು ಒಳ್ಳೆಯದು. ಗಾಯಗೊಳ್ಳುವ ಸಂಭವ ಇರುವುದರಿಂದ, ವಾಹನ ಚಾಲನೆ ಮಾಡುವಾಗ ಎಚ್ಚರಿಕೆ ವಹಿಸಿ. ವೈವಾಹಿಕ ಜೀವನ ಸುಖ ಸಂತೋಷದಿಂದ ಕೂಡಿರಲಿದ್ದು, ಪತಿ/ಪತ್ನಿಯ ಬೆಂಬಲ ದೊರೆಯಲಿದೆ. ವಾರಾಂತ್ಯದಲ್ಲಿ ಮಕ್ಕಳ ಕಡೆಯಿಂದ ಒಳ್ಳೆಯ ಸುದ್ದಿ ಕೇಳಲಿದ್ದೀರಿ.

ಮಿಥುನ : ಈ ವಾರ ನಿಮಗೆ ಕಠಿಣವಾದ ಸಮಯವಾಗಿರಲಿದೆ. ವಾರದ ಆರಂಭದಲ್ಲಿ ನೀವು ಉದ್ಯೋಗ ಅಥವಾ ವ್ಯಾಪಾರಕ್ಕಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ಇದರಿಂದ ನಿಮ್ಮ ಶಕ್ತಿ ಸೋರಿಹೋದಂತೆ ಎನಿಸುವಷ್ಟು ಆಯಾಸ ಆವರಿಸಬಹುದು. ಕಠಿಣ ಪರೀಕ್ಷೆ ಎದುರಿಸಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಇನ್ನಷ್ಟು ಪರಿಶ್ರಮ ವಹಿಸಿ ಅಧ್ಯಯನ ನಡೆಸಬೇಕಿದೆ. ಉದ್ಯೋಗಸ್ಥ ಮಹಿಳೆಯರಿಗೆ ಈ ವಾರ ಉದ್ಯೋಗ ಹಾಗೂ ಮನೆ ಎರಡನ್ನೂ ಸಮಾನವಾಗಿ ತೂಗಿಸಿಕೊಂಡು ಹೋಗುವುದು ಕಷ್ಟ ಎನಿಸಬಹುದು. ವಾರದ ಮಧ್ಯದ ವೇಳೆಗೆ, ನಿಮ್ಮ ಶಕ್ತಿ ಮೀರಿದ್ದಾದರೂ ಜೀವನ ಸುಗಮಗೊಳಿಸುವಂತಹ ಸೌಕರ್ಯಗಳಿಗಾಗಿ ಹಣ ಖರ್ಚು ಮಾಡಲಿದ್ದೀರಿ. ವಾರಾಂತ್ಯದ ವೇಳೆಗೆ ವ್ಯಾಪಾರಸ್ಥರು ತಾವು ಅಂದುಕೊಂಡಷ್ಟು ಲಾಭ ಗಳಿಸುವ ಸಾಧ್ಯತೆ ಇದೆ. ವಹಿವಾಟನ್ನು ಬೆಳೆಸುವ ಯೋಜನೆ ನಡೆಸುತ್ತಿರುವವರಿಗೆ ಯಾರಾದರೂ ವಿಶೇಷವಾದ ಗೆಳೆಯರು ಅಥವಾ ವಿಸ್ತಾರವಾದ ಜನಸಂಪರ್ಕ ಹೊಂದಿರುವ ವ್ಯಕ್ತಿಯಿಂದ ಸಹಾಯ ಸಿಗಬಹದು. ಪ್ರೀತಿ ಇನ್ನಷ್ಟು ಆಳವಾಗಲಿದ್ದು, ನಿಮ್ಮ ಸಂಗಾತಿಗೆ ನಿಮ್ಮ ಕುರಿತಾದ ನಂಬಿಕೆ ಹಾಗೂ ಪ್ರೀತಿ ಇನ್ನಷ್ಟು ಹೆಚ್ಚಾಗಲಿದೆ. ವಿವಾಹಿತರಿಗೆ ಜೀವನ ಸುಗಮವಾಗಿ ಸಾಗಲಿದೆ.

ಕರ್ಕಾಟಕ : ಆಲಸ್ಯದಿಂದ ಇರುವುದು ಅಥವಾ ಇನ್ನೊಬ್ಬರು ನಿಮಗಾಗಿ ಕೆಲಸ ಮಾಡಿಕೊಡುತ್ತಾರೆ ಎಂಬ ನಿರೀಕ್ಷೆಯ ಸುಳಿಗೆ ಬೀಳದಿರಿ. ಯಾವುದೇ ದೊಡ್ಡ ಕೆಲಸ ಕೈಗೊಂಡಿದ್ದಲ್ಲಿ, ಅದನ್ನು ಸರಿಯಾದ ರೀತಿಯಲ್ಲಿ ಹಾಗೂ ಸರಿಯಾದ ಸಮಯಕ್ಕೆ ಮುಗಿಸಲು ನೀವು ಹೆಚ್ಚಿನ ಪರಿಶ್ರಮ ವಹಿಸಬೇಕಾದ ಅಗತ್ಯ ಇದೆ. ಆದಾಯ ಗಳಿಸಲು ನೀವು ಸಾಮಾನ್ಯವಾಗಿ ಅನುಸರಿಸುವ ದಾರಿಗಳಲ್ಲಿ ಈ ವಾರ ಅಡ್ಡಿಗಳು ಎದುರಾಗಲಿವೆ. ವ್ಯವಹಾರಸ್ಥರಿಗೆ ಈ ವಾರ ಕಠಿಣ ಸ್ಪರ್ಧೆ ಎದುರಾಗಲಿದೆ. ಪ್ರಯಾಣ ಕೈಗೊಳ್ಳುವವರಿದ್ದಲ್ಲಿ, ನಿಮ್ಮ ಆರೋಗ್ಯ ಹಾಗೂ ವಸ್ತುಗಳ ಬಗ್ಗೆ ಗಮನ ಹರಿಸಿ. ವಾರಾಂತ್ಯದ ವೇಳೆಗೆ, ನೀವು ತಾಳ್ಮೆ ಇಟ್ಟುಕೊಂಡು, ಮಾತಿನ ಮೇಲೆ ನಿಯಂತ್ರಣ ಹೊಂದುವುದು ಅಗತ್ಯ. ಇಲ್ಲವಾದಲ್ಲಿ ನಿಮ್ಮ ಸಂಗಾತಿಯೊಡನೆ ಕಲಹ ಏರ್ಪಡುವ ಸಂಭವ ಇದೆ. ಯಾವುದೇ ಧಾರ್ಮಿಕ ಅಥವಾ ಪ್ರೇಕ್ಷಣೀಯ ಸ್ಥಳಕ್ಕೆ ಕುಟುಂಬದವರೊಂದಿಗೆ ಪ್ರವಾಸ ತೆರಳಲು ಇದು ಸರಿಯಾದ ಸಮಯ. ನೀವು ಸೇವಿಸುವ ಆಹಾರ ಪದಾರ್ಥಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಲ್ಲವಾದರೆ ಹೊಟ್ಟೆಯ ತೊಂದರೆ ಕಾಣಿಸಿಕೊಳ್ಳಬಹುದು.

ಸಿಂಹ : ವಾರದ ಆರಂಭದಲ್ಲಿ ಮನೆಯಲ್ಲಿ ಕೆಲವು ಧಾರ್ಮಿಕ ಹಾಗೂ ಅದೃಷ್ಟದಾಯಕ ಕೆಲಸಗಳನ್ನು ಕೈಗೊಳ್ಳಲಿದ್ದೀರಿ. ಹತ್ತಿರದ ಅಥವಾ ದೂರದ ಸ್ಥಳಕ್ಕೆ ಪ್ರವಾಸ ಕೈಗೊಳ್ಳಬಹುದು. ಸರ್ಕಾರದೊಂದಿಗೆ ಉತ್ತಮ ಸಂಪರ್ಕ ಹೊಂದಿರುವ ವ್ಯಕ್ತಿಯೊಂದಿಗೆ ಹೊಸ ಯೋಜನೆಯೊಂದರ ವಿಷಯವಾಗಿ ಕೈಜೋಡಿಸಲು ನಿಮಗೆ ಈ ವಾರ ಉತ್ತಮ ಅವಕಾಶ ದೊರೆಯಲಿದೆ. ಜಮೀನು ಅಥವಾ ಕಟ್ಟಡ ಖರೀದಿ ನಿಮ್ಮ ಬಹಳ ಕಾಲದ ಕನಸಾಗಿದ್ದಲ್ಲಿ, ಈ ವಾರ ನಿಮಗೆ ಶುಭ ಉಂಟುಮಾಡಲಿದೆ. ಇನ್ನೂ ಕೆಲವು ಹೊಸ ಯೋಜನೆಗಳು ನಿಮ್ಮ ಕೈಸೇರಲಿವೆ. ಕುಟುಂಬಕ್ಕೆ ಸೇರಿದ ಆಸ್ತಿಯ ಕುರಿತಾದ ಇರುವ ವ್ಯಾಜ್ಯಗಳು ಈ ವಾರ ಬಗೆಹರಿಯಲಿವೆ. ನಿಮ್ಮ ಹಾಗೂ ಸಂಗಾತಿಯ ನಡುವೆ ತಲೆದೋರಿರುವ ಸಮಸ್ಯೆಗಳಿಗೆ ಗೆಳತಿಯೊಬ್ಬರ ಸಹಾಯದಿಂದ ಪರಿಹಾರ ಕಂಡುಕೊಳ್ಳಲಿದ್ದೀರಿ ಹಾಗೂ ನಿಮ್ಮ ಸಂಬಂಧ ಸಾಕಷ್ಟು ಗಟ್ಟಿಗೊಳ್ಳಲಿದೆ. ಸಂಗಾತಿಯೊಂದಿಗೆ ಸುಖಮಯ ಜೀವನ ನಡೆಸಲಿದ್ದೀರಿ. ಮಕ್ಕಳ ಕುರಿತಾದ ಯಾವುದೇ ದೊಡ್ಡ ಚಿಂತೆ ಪರಿಹಾರವಾಗುವ ಮೂಲಕ ಮನೆಯಲ್ಲಿ ಸಂತೋಷ ನೆಲೆಸಲಿದೆ. ಉತ್ತಮ ಆರೋಗ್ಯ ಹೊಂದಿರಲಿದ್ದೀರಿ.

ಕನ್ಯಾ : ನಿಮ್ಮ ವೃತ್ತಿ ಹಾಗೂ ವ್ಯಾಪಾರದಲ್ಲಿ ಎತ್ತರಕ್ಕೇರಲು ಈ ವಾರ ನಿಮಗೆ ಉತ್ತಮ ಅವಕಾಶಗಳು ದೊರೆಯಲಿವೆ. ವಾರದ ಆರಂಭದಲ್ಲಿ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮುಗಿಸುವುದರಿಂದ ನಿಮಗೆ ಸಂತೋಷ ಹಾಗೂ ಧೈರ್ಯ ಸಿಗಲಿದೆ. ವಾರದ ಮಧ್ಯದ ವೇಳೆಗೆ, ಒಬ್ಬರು ವಿಶೇಷ ವ್ಯಕ್ತಿಯ ಮೂಲಕ ನೀವು ನಿಮ್ಮ ವಹಿವಾಟನ್ನು ಬೆಳೆಸುವ ಬಗ್ಗೆ ಯೋಜನೆ ರೂಪಿಸಲಿದ್ದೀರಿ. ಹತ್ತಿರದ ಅಥವಾ ದೂರದ ಸ್ಥಳಕ್ಕೆ ನೀವು ಕೆಲಸದ ಉದ್ದೇಶಕ್ಕಾಗಿ ಪ್ರಯಾಣ ಬೆಳೆಸಲಿದ್ದೀರಿ. ಈ ಪ್ರಯಾಣದಿಂದ ಸಂತೋಷ ಸಿಗಲಿದ್ದೂ, ಪ್ರಯೋಜನಕಾರಿಯೂ ಆಗಲಿದೆ. ಮದುವೆಯ ಬಂಧದಲ್ಲಿ ನೀವು ಆನಂದ ಕಂಡುಕೊಳ್ಳಲಿದ್ದು, ಸಂಗಾತಿಯ ಬಗ್ಗೆ ಹೆಚ್ಚು ಹೆಚ್ಚು ಆಕರ್ಷಿತರಾಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯೊಂದಿಗಿನ ಸಂಬಂಧ ಗಟ್ಟಿಗೊಂಡಿರುವ ಅಂಶ ಈ ವಾರ ನಿಮ್ಮ ಗಮನಕ್ಕೆ ಬರಲಿದೆ. ಆರೋಗ್ಯ ಉತ್ತಮವಾಗಿ ಇರಲಿದೆ. ವಾರಾಂತ್ಯದ ಸಮಯಕ್ಕೆ ನಿಮ್ಮ ಧಾರ್ಮಿಕ ಹಾಗೂ ವ್ಯಕ್ತಿಗತ ಆಸಕ್ತಿಗಳು ಸಾಕಾರಗೊಳ್ಳಲಿವೆ. ಕುಟುಂಬ ವರ್ಗದವರೊಂದಿಗೆ ನೀವು ಈ ವಾರ ಒಂದು ಧಾರ್ಮಿಕ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯೂ ಇದೆ.

ತುಲಾ : ಉದ್ಯೋಗದಲ್ಲಿ ಈ ವಾರ ಕೆಲವು ಗುರುತರ ಬದಲಾವಣೆಗಳನ್ನು ವಾರದ ಆರಂಭದಲ್ಲಿ ಕಾಣಬಹುದು. ನಿಮ್ಮ ಸ್ನೇಹಿತರೊಂದಿಗೆ ಒಂದು ಒಳ್ಳೆಯ ಕೆಲಸದಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಬಹುದು. ಹೊಸ ಉದ್ಯೋಗ ಅಥವಾ ಇರುವ ಕೆಲಸದಲ್ಲಿ ನಿಮಗೆ ಬೇಕಾದ ಸ್ಥಾನಮಾನ ದೊರೆತಲ್ಲಿ ನಿಮ್ಮ ಮನೆಯಲ್ಲಿ ಸಂತೋಷ ತುಂಬಿತುಳುಕಲಿದೆ. ನಿಮಗೆ ಆರಾಮ ಎನಿಸುವ ವಿಷಯಗಳ ಬಗ್ಗೆ ಆಸಕ್ತಿ ಹೆಚ್ಚಿಸಿಕೊಳ್ಳಲು ಇದು ಸರಿಯಾದ ಸಮಯ. ನಿಮ್ಮ ಯೌವನದ ಸಾಕಷ್ಟು ಭಾಗ ಒಳ್ಳೆಯ ಭಾವನೆ ಹಾಗೂ ಆನಂದದಿಂದ ಕೂಡಿರಲಿದೆ. ವಾರದ ಮಧ್ಯದ ವೇಳೆಗೆ, ನೀವು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಹೆಚ್ಚು ಪಾಲ್ಗೊಳ್ಳಲಿದ್ದೀರಿ. ನೀವು ಒಳ್ಳೆಯ ವ್ಯಕ್ತಿಯಾಗಿ ಗುರುತಿಸಿಕೊಳ್ಳಲಿದ್ದು, ಹೆಚ್ಚಿನ ಗೌರವ ಗಳಿಸಲಿದ್ದೀರಿ. ವ್ಯಾಪಾರದಲ್ಲಿ ಹಣ ಗಳಿಸಲಿದ್ದೀರಿ ಹಾಗೂ ಈವರೆಗೆ ನೀವು ಅನುಭವಿಸುತ್ತಾ ಬಂದ ಹಣಕಾಸಿನ ಬಿಕ್ಕಟ್ಟುಗಳನ್ನು ಈ ವಾರ ಬಗೆಹರಿಸಿಕೊಳ್ಳಲಿದ್ದೀರಿ. ವಾರಾಂತ್ಯದ ಸಮಯಕ್ಕೆ, ನಿಮ್ಮ ಆತ್ಮೀಯರೊಂದಿಗೆ ಪ್ರವಾಸ ಅಥವಾ ಪಾರ್ಟಿ ಕೈಗೊಳ್ಳಲಿದ್ದೀರಿ. ಪ್ರೀತಿ ವೃದ್ಧಿಸಲಿದ್ದು, ವೈವಾಹಿಕ ಜೀವನ ಅತ್ಯುತ್ತಮವಾಗಿರಲಿದೆ. ಜೊತೆಗೆ, ನಿಮ್ಮ ಆರೋಗ್ಯವೂ ಈ ವಾರ ಚೆನ್ನಾಗಿರಲಿದೆ.

ವೃಶ್ಚಿಕ : ಈ ವಾರ ನಿಮಗೆ ಕಷ್ಟ ಕಾಲವಾಗಿರಲಿದ್ದು, ಸಾಕಷ್ಟು ಸಮಸ್ಯೆಗಳು ಎದುರಾಗಲಿವೆ. ಆದರೆ, ಸಮಸ್ಯೆಗಳಿಗೆ ಹೆದರಿ ಕುಗ್ಗುವ ಬದಲಾಗಿ, ಕಲಿತು ಬೆಳೆಯಲು ಒಂದು ಅವಕಾಶ ಎಂದು ಯೋಚಿಸುವುದು ಉತ್ತಮ. ನಿಮ್ಮ ಅಹಂ ಭಾವವನ್ನು ಬದಿಗಿಟ್ಟು, ಎಲ್ಲರೊಂದಿಗೆ ಸ್ನೇಹದಿಂದ ವರ್ತಿಸಬೇಕಿದೆ. ವಾರದ ಅರ್ಧಭಾಗ ಕಳೆಯುವ ವೇಳೆಗೆ, ನಿಮ್ಮ ಮನೆಯ ದುರಸ್ತಿ ಅಥವಾ ಇತರ ಕೆಲಸಕಾರ್ಯಗಳಿಗಾಗಿ ನೀವು ದೊಡ್ಡ ಮೊತ್ತದ ಹಣ ಖರ್ಚು ಮಾಡಬೇಕಾಗುತ್ತದೆ. ಪರೀಕ್ಷೆ ಹಾಗೂ ಸ್ಪರ್ಧೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸುವ ನಿಟ್ಟಿನಲ್ಲಿ ಹೆಚ್ಚಿನ ಪರಿಶ್ರಮ ವಹಿಸಬೇಕಾದ ಅಗತ್ಯ ಇದೆ. ಸಂಗಾತಿಯ ಹುಡುಕಾಟದಲ್ಲಿ ಭೇಟಿಯಾದವರ ಎದುರು ನಿಮ್ಮ ಬಗ್ಗೆ ಅತಿಯಾದ ಪ್ರದರ್ಶನ ಬೇಡ, ಅದೇ ಮುಂದೆ ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಪ್ರೇಮ ಸಂಬಂಧ ಉತ್ತಮವಾಗಿರುವುದು ಒಳ್ಳೆಯದು, ಆದರೆ ನಿಮ್ಮ ಕುಟುಂಬದ ಯಾವುದೇ ಹಿರಿಯರಿಗೆ ಹೆಚ್ಚಿನ ಕಾಳಜಿಯ ಅಗತ್ಯವಿದೆಯೇ ಎಂಬುದರ ಕುರಿತು ಕೂಡ ಎಚ್ಚರ ಇಟ್ಟುಕೊಳ್ಳಬೇಕಿದೆ.

ಧನು : ವಾರದ ಆರಂಭದಲ್ಲಿ, ನಿಮ್ಮ ಕುಟುಂಬದ ಸದಸ್ಯರೊಬ್ಬರ ಸಾಧನೆಯಿಂದಾಗಿ ನಿಮ್ಮ ಬಗೆಗಿನ ಗೌರವ ಹೆಚ್ಚಾಗಲಿದೆ ಹಾಗೂ ಮನೆಯಲ್ಲಿ ಧಾರ್ಮಿಕ ಹಾಗೂ ಮಂಗಳಕರ ಕಾರ್ಯಕ್ರಮಗಳು ನಡೆಯಲಿವೆ. ಪ್ರಭಾವಿ ವ್ಯಕ್ತಿಯೊಬ್ಬರ ನೆರವಿನಿಂದ ನಿಮ್ಮ ಭೂಮಿ ಹಾಗೂ ಆಸ್ತಿಗೆ ಸಂಬಂಧಿಸಿದ ಬಿಕ್ಕಟ್ಟುಗಳು ಪರಿಹಾರ ಕಾಣಲಿವೆ. ನಿಮ್ಮ ವ್ಯಾಪಾರವನ್ನು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುವ ಕೆಲಸದಲ್ಲಿ ಆತ್ಮೀಯ ಸ್ನೇಹಿತರು ಹಾಗೂ ನಿಮ್ಮ ಕುಟುಂಬದ ಸಹವರ್ತಿಗಳ ಸಹಕಾರ ದೊರೆಯಲಿದೆ. ವಾರದ ಮಧ್ಯದಲ್ಲಿ, ಕುಟುಂಬ ಸದಸ್ಯರೊಬ್ಬರಿಗೆ ಆರೋಗ್ಯ ಸಮಸ್ಯೆ ಎದುರಾಗಲಿದ್ದು, ಅದು ನಿಮ್ಮನ್ನು ಚಿಂತೆಗೆ ದೂಡಲಿದೆ. ಇದರ ಜೊತೆಗೆ, ನಿಮ್ಮ ಆದಾಯ ಕಡಿಮೆಯಾಗಲಿದ್ದು, ಖರ್ಚು ಸಹ ಹೆಚ್ಚಲಿದೆ. ಇದರಿಂದ ನಿಮ್ಮ ಆಯವ್ಯಯದಲ್ಲಿ ಅಸ್ಥಿರತೆ ಉಂಟಾಗಲಿದೆ. ಪ್ರೇಮ ಸಂಬಂಧದಲ್ಲಿ ಕೆಲವು ಅಡ್ಡಿಗಳು ಎದುರಾಗಲಿದ್ದು, ಸಂಗಾತಿಯನ್ನು ಭೇಟಿ ಮಾಡಲಾಗದ ಕಾರಣ ನಿಮ್ಮ ಮನಸ್ಸು ಚಂಚಲಗೊಳ್ಳಲಿದೆ. ವೈವಾಹಿಕ ಜೀವನ ಸಾಮಾನ್ಯವಾಗಿ ನಡೆಯಲಿದ್ದು, ಸಿಹಿ ಹಾಗೂ ಕಹಿ ಬಿಕ್ಕಟ್ಟುಗಳು ಎದುರಾಗುವ ಸಂಭವ ಇದೆ. ಆರೋಗ್ಯ ಸಮಸ್ಯೆಗಳನ್ನು ಹಾಗೂ ಆಸ್ಪತ್ರೆಗೆ ಹೋಗಬೇಕಾದ ಸಾಧ್ಯತೆಯ ಬಗ್ಗೆ ಅಲಕ್ಷ್ಯ ಮಾಡದಿರಿ.

ಮಕರ : ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದು ಹಾಗೂ ಸಾಂಸಾರಿಕ ತಾಪತ್ರಯದ ಬಗ್ಗೆ ತಲೆಕೆಡಿಸಿಕೊಳ್ಳುವುದರ ಕುರಿತು ನೀವು ಕಷ್ಟಪಡಲಿದ್ದೀರಿ. ಇದರಿಂದ ನಿಮ್ಮ ಕೆಲಸದಲ್ಲಿ ಸಹ ತೊಂದರೆ ಆಗುವ ಸಾಧ್ಯತೆ ಇದೆ. ಹಾಗಾಗಿ, ತಾಳ್ಮೆಯಿಂದ ವ್ಯವಹರಿಸುವುದು ಅಗತ್ಯ. ವಾರದ ಮಧ್ಯದಲ್ಲಿ ನೀವು ಉದ್ಯೋಗದ ಅಗತ್ಯಕ್ಕಾಗಿ ಪ್ರಯಾಣ ಮಾಡುವ ಸಾಧ್ಯತೆ ಇದೆ. ಹಣವನ್ನು ಜಾಣತನದಿಂದ ಬಳಸಿ ಹಾಗೂ ಅನಗತ್ಯವಾಗಿ ಹಣ ಪೋಲು ಮಾಡುವುದರ ಬಗ್ಗೆ ಎಚ್ಚರ ವಹಿಸಿ. ವಾರಾಂತ್ಯದ ವೇಳೆಗೆ, ಎಲ್ಲವೂ ವಾರದ ಆರಂಭಕ್ಕಿಂತ ಉತ್ತಮವಾಗಿ ಇರಲಿದೆ. ಈ ಹಂತದಲ್ಲಿ ನೀವು ಗೆಳೆಯರೊಬ್ಬರ ಸಹಾಯದೊಂದಿಗೆ ಅನೇಕ ಬಿಕ್ಕಟ್ಟುಗಳನ್ನು ಸರಿಪಡಿಸಿಕೊಳ್ಳಬಹುದು ಹಾಗೂ ಉದ್ಯೋಗದಲ್ಲಿ ಉತ್ತಮ ಆಯ್ಕೆಗಳನ್ನು ಮಾಡಿಕೊಳ್ಳಬಹುದು. ಇಡೀ ವಾರ ನಿಮಗೆ ಪ್ರೀತಿ ಎಲ್ಲೆಡೆಯೂ ದೊರೆಯಲಿದೆ. ಕೆಲವು ಕಷ್ಟದ ಪರಿಸ್ಥಿತಿಗಳನ್ನು ಎದುರಿಸಲಿದ್ದೀರಿ ಹಾಗೂ ನಿಮ್ಮ ಸಂಗಾತಿಯೊಡನೆ ಕೆಲವು ಸಿಹಿ ಕ್ಷಣಗಳನ್ನು ಸಹ ಕಳೆಯಲು ನಿಮಗೆ ಅವಕಾಶ ದೊರೆಯಲಿದೆ. ನಿಮ್ಮ ದೈನಂದಿನ ಚಟುವಟಿಕೆಗಳನ್ನು ತಪ್ಪಿಸದಂತೆ ಪಾಲಿಸಿ, ನಿಮ್ಮನ್ನು ನೀವು ನೋಡಿಕೊಳ್ಳುವುದರ ಬಗ್ಗೆ ಅಲಕ್ಷ್ಯ ಮಾಡಬೇಡಿ.

ಕುಂಭ : ವಾರ ಆರಂಭವಾಗುತ್ತಲೇ ನಿಮ್ಮ ಉದ್ಯೋಗ ಅಥವಾ ವ್ಯಾಪಾರದಲ್ಲಿ ಪ್ರಗತಿ ಕಾಣಲಿದ್ದೀರಿ. ವಾರದ ಮಧ್ಯದ ವೇಳೆಗೆ ನಿಮಗೆ ಮನೆಯಲ್ಲಿ ನಡೆಯುವ ಕೆಲವು ಸಂಗತಿಗಳ ಕಾರಣದಿಂದ ಒತ್ತಡ ಉಂಟಾಗಲಿದ್ದು, ಅವುಗಳಿಗೆ ನೀವು ಪರಿಹಾರ ಕಂಡುಕೊಳ್ಳಲಿದ್ದೀರಿ. ವಾರಾಂತ್ಯದ ಸಮಯಕ್ಕೆ, ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯ ಅವಕಾಶಗಳನ್ನು ಒದಗಿಸಿಕೊಡುವಂತಹ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಲಿದ್ದೀರಿ. ಇತರ ದೇಶಗಳ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಲು ಹಾಗೂ ಅವರಿಂದ ಯಾವ ರೀತಿಯ ಪ್ರಯೋಜನಗಳನ್ನು ಪಡೆಯಬಹುದು ಎಂಬ ಬಗ್ಗೆ ಚಿಂತನೆ ನಡೆಸಲು ಸಹ ಇದೊಂದು ಉತ್ತಮ ಸಮಯ. ಕೆಲವು ಸಮಸ್ಯೆಗಳು ಎದುರಾಗಿ, ಅದರಿಂದ ನೀವು ಬೇಸರಗೊಂಡಿರುವ ಕಾರಣ ವಾರದ ಆರಂಭದಲ್ಲಿ ನಿಮ್ಮ ಸಂಗಾತಿಯೊಡನೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗದೇ ಇರಬಹುದು. ಆದರೆ ವಾರಾಂತ್ಯದ ವೇಳೆಗೆ, ಪರಿಸ್ಥಿತಿ ಬದಲಾಗಲಿದ್ದು, ನಿಮ್ಮ ಸಂಗಾತಿಯೊಡನೆ ಸಂತೃಪ್ತಿಯಿಂದ ಸಂತೋಷವಾಗಿ ಕಳೆಯಲು ಹೆಚ್ಚಿನ ಸಮಯ ಒದಗಿ ಬರಲಿದೆ. ವೈವಾಹಿಕ ಜೀವನ ಉತ್ತಮ ರೀತಿಯಲ್ಲಿ ನಡೆಯಲಿದೆ.

ಮೀನ : ವಾರದ ಆರಂಭದಲ್ಲಿ, ಉದ್ಯೋಗ ಗಳಿಸಿಕೊಳ್ಳುವ ವಿಷಯದಲ್ಲಿ ಎದುರಾಗಿದ್ದ ಅಡ್ಡಿಗಳು ನಿವಾರಣೆಯಾಗಲಿದ್ದು, ನಿಮ್ಮ ಹೆಗಲ ಮೇಲಿನಿಂದ ದೊಡ್ಡ ಭಾರವೊಂದು ಇಳಿದಂತೆ ಭಾಸವಾಗಲಿದೆ. ಈ ಸಮಯದಲ್ಲಿ ವ್ಯಾಪಾರ-ವಹಿವಾಟಿನಲ್ಲಿ ಉತ್ತಮ ಲಾಭ ಬರಲಿದ್ದು, ವ್ಯವಹಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವಿರಿ. ಸಂತೋಷ ನೀಡುವ ವಸ್ತುಗಳ ಖರೀದಿಗೆ ಈ ವಾರ ಹಣ ವ್ಯಯಿಸಲಿದ್ದೀರಿ. ಭೂಮಿ ಅಥವಾ ಕಟ್ಟಡದ ಮಾಲೀಕತ್ವಕ್ಕೆ ಸಂಬಂಧಪಟ್ಟಂತೆ ನಡೆಯುತ್ತಿರುವ ಯಾವುದೇ ಸಮಸ್ಯೆ ಈ ವಾರ ಬಗೆಹರಿಯಲಿದೆ. ನ್ಯಾಯಾಲಯದ ಯಾವುದೇ ಕಲಾಪದಲ್ಲಿ ನೀವು ಕಕ್ಷಿದಾರರಾಗಿದ್ದಲ್ಲಿ, ಪ್ರಕರಣದ ತೀರ್ಪು ನಿಮ್ಮ ಪರವಾಗಿ ಹೊರಬೀಳಲಿದೆ. ಉದ್ಯೋಗದ ಸಂಬಂಧವಾಗಿ ಹೊರದೇಶಕ್ಕೆ ಹೋಗಿ ನೆಲೆಸುವ ಕನಸು ನಿಮ್ಮದಾಗಿದ್ದಲ್ಲಿ, ಈ ವಾರ ಅದು ಸಾಕಾರಗೊಳ್ಳಲಿದೆ. ಉದ್ಯೋಗಸ್ಥ ಅಮ್ಮಂದಿರು ಈ ವಾರ ಕೆಲವು ವಿಶೇಷ ಸವಲತ್ತುಗಳನ್ನು ಪಡೆಯಲಿದ್ದೀರಿ. ನಿಮ್ಮ ಆತ್ಮೀಯ ಸ್ನೇಹಿತರು ಅಥವಾ ಪ್ರೇಮಸಂಗಾತಿಯಾಗುವ ಸಾಧ್ಯತೆ ಇರುವ ವ್ಯಕ್ತಿಗಳನ್ನು ಈ ವಾರ ನೀವು ಭೇಟಿ ಮಾಡಲಿದ್ದೀರಿ. ಇದರ ಮಧ್ಯೆ, ನಿಮ್ಮ ಈಗಿನ ಪ್ರೇಮಸಂಬಂಧ ಇನ್ನಷ್ಟು ಪಕ್ವಗೊಳ್ಳಲಿದೆ. ನಿಮ್ಮ ಸಂಗಾತಿಗೆ ಜನರಿಂದ ಮೆಚ್ಚುಗೆಯ ಸುರಿಮಳೆಯೇ ಸಿಗಲಿದೆ. ನಿಮ್ಮ ವೈವಾಹಿಕ ಜೀವನ ಸಂತೋಷಭರಿತವಾಗಿ ಇರಲಿದ್ದು, ಸಂಗಾತಿಯೊಂದಿಗೆ ಸುತ್ತಾಟದಲ್ಲಿ ಒಳ್ಳೆಯ ಸಮಯ ಕಳೆಯಲಿದ್ದೀರಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.