ETV Bharat / spiritual

ಐದು ವರ್ಷಕ್ಕೊಮ್ಮೆ ಜರುಗುವ ದುರ್ಗಾದೇವಿಯ ಅದ್ಧೂರಿ ಜಾತ್ರೆ; ಭಂಡಾರದಲ್ಲಿ ಮಿಂದೆದ್ದ ಭಕ್ತ ಸಮೂಹ - Grand Bhandara Jatre - GRAND BHANDARA JATRE

ಐದು ವರ್ಷಕ್ಕೊಮ್ಮೆ ಅದ್ಧೂರಿಯಾಗಿ ನಡೆಯುವ ದುರ್ಗಾದೇವಿಯ ಭಂಡಾರ ಜಾತ್ರೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.

Bagalkote Goddess Durga Bhandara Jatre  grand Bhandara Jatre
ದುರ್ಗಾದೇವಿಯ ಅದ್ಧೂರಿ ಭಂಡಾರ ಜಾತ್ರೆ (ETV Bharat)
author img

By ETV Bharat Karnataka Team

Published : Jun 15, 2024, 3:04 PM IST

ಐದು ವರ್ಷಕ್ಕೊಮ್ಮೆ ಜರುಗುವ ದುರ್ಗಾದೇವಿಯ ಅದ್ಧೂರಿ ಭಂಡಾರ ಜಾತ್ರೆಗೆ ಸಾಕ್ಷಿದ ಭಕ್ತ ಸಮೂಹ (ETV Bharat)

ಬಾಗಲಕೋಟೆ: ಈ ಜಾತ್ರೆಯಲ್ಲಿ ಇಡೀ ನಗರ ಭಂಡಾರಮಯ, ಭಂಡಾರ ತೂರಿ ಹರಕೆ ತೀರಿಸುವ ಭಕ್ತ ಸಮೂಹ, ಇಂತಹ ಜಾತ್ರೆಗೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಲೋಕಾಪುರ ಪಟ್ಟಣವು ಸಾಕ್ಷಿಯಾಗಿದೆ. ಗ್ರಾಮ ದೇವತೆಯಾದ ದುರ್ಗಾದೇವಿ ಜಾತ್ರೆಯು ಪತ್ರಿ ಐದು ವರ್ಷಕ್ಕೊಮ್ಮೆ ನಡೆಯುತ್ತದೆ.

ದುರ್ಗಾದೇವಿ ಜಾತ್ರೆ ಹಿನ್ನೆಲೆ ಭಕ್ತರು ಭಂಡಾರ ತುರುವುದು ಸಂಪ್ರದಾಯ ಇದೆ. ಎಲ್ಲಾ ಜಾತ್ರೆಗಳು ವರ್ಷಕ್ಕೊಮ್ಮೆ ನಡೆದರೆ ಈ ದುರ್ಗಾದೇವಿ ಜಾತ್ರೆ ಐದು ವರ್ಷಕ್ಕೊಮ್ಮೆ ಜರುಗುತ್ತದೆ. ಈ ಭಾಗದಲ್ಲಿ ಇದೇ ಜೂನ್ 14 ರಿಂದ 18ರ ವರೆಗೆ ಭಕ್ತಿಯಿಂದ ಭಂಡಾರ ಜಾತ್ರಾ ಮಹೋತ್ಸವವನ್ನು ಆಚರಣೆ ಮಾಡಲಾಗುತ್ತದೆ. ಲೋಕಾಪುರ ಪಟ್ಟಣದ ದುರ್ಗಾಮಾತೆ ನೆಲೆಸಿರುವ ಶಕ್ತಿ ಪರಂಪರೆಯ ಕೇಂದ್ರವಾಗಿದೆ. ಈ ಜಾತ್ರೆಯ ಹಿನ್ನೆಲೆಯಲ್ಲಿ ದೇವಿಯ ಮಹಾರಥೋತ್ಸವ ಹಾಗೂ ಪಾಲಿಕೋತ್ಸವ ಸಂಭ್ರಮದಿಂದ ಜರುಗಲಿದೆ.

ತಮಿಳುನಾಡಿನ ಕುಂಬಕೋಣಂನಿಂದ ತಂದಿರುವ ಕಳಸ: ದುರ್ಗಾ ದೇವಿಯ ಜಾತ್ರೆಯು 1994, 1999, 2006, 2011, 2018 ರಲ್ಲಿ ನಡೆದಿತ್ತು. ಅದಾದ ಬಳಿಕ ಈ ವರ್ಷದ ಜಾತ್ರೆ ಜೂ.14ರಿಂದ ಆರಂಭವಾಗಿದೆ. ದೇವಿಯ ಜಾತ್ರೆಗೆ ಈಗಾಗಲೇ ನೂತನ ರಥ ಸಿದ್ಧವಾಗಿದೆ. ತಮಿಳುನಾಡಿನ ಕುಂಬಕೋಣಂನಿಂದ ಕಳಸವನ್ನು ತಂದಿರುವುದು ಈ ಬಾರಿಯ ವಿಶೇಷ. ದೇವಿಯ ರಥವು ಲೋಕಾಪುರದ ದೇಸಾಯಿ ಅವರ ವಾಡೆಯಿಂದ ಆರಂಭವಾಗಿ ದುರ್ಗಾದೇವಿ ದೇವಾಲಯದವರೆಗೆ ಮಹಾ ರಥೋತ್ಸವ ಹಾಗೂ ಪಾಲಿಕೋತ್ಸವ ಸಕಲ ವಾದ್ಯಮೇಳಗಳೊಂದಿಗೆ ಜರುಗುತ್ತದೆ.

ವಿಶೇಷತೆಯಿಂದ ಕೂಡಿದ ಈ ಜಾತ್ರೆ ದಿನ ಸುತ್ತಮುತ್ತಲಿನ ಹಳ್ಳಿಯ ಗೌಡರ ಮನೆತನದವರ ಆರತಿ, ನೈವೇದ್ಯ ಸೇರಿದಂತೆ ಇತರ ವಸ್ತುಗಳನ್ನು ದೇವಿಗೆ ಅರ್ಪಿಸುತ್ತಾರೆ. ಪ್ರಮುಖವಾಗಿ ದುರ್ಗಾದೇವಿಯ ತವರೂರು ನಾಗಣಾಪುರ ಚನ್ನಪ್ಪಗೌಡರು ಹಾಗೂ ದೈವದವರಿಂದ ಸೀರೆ, ಖಣ, ಬಳೆ, ನೈವೇದ್ಯ ಅರ್ಪಣೆ ಮಾಡಲಾಗುತ್ತದೆ. ಲೋಕಾಪುರ ದೇಸಗತಿ ಮನೆತನ ಹಾಗೂ 24 ಊರಿನ ದೈವದವರ ನೇತೃತ್ವದಲ್ಲಿ ಜಾತ್ರೆಯು ಯಾವುದೇ ಜಾತಿ, ಮತಗಳ ಭೇದವಿಲ್ಲದೆ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸಿಕೊಂಡು ಬರುತ್ತಿರುವುದು ಇಲ್ಲಿನ ವಿಶೇಷವಾಗಿದೆ.

ಇದನ್ನೂ ಓದಿ: ಹಾವೇರಿ: ವಿಜೃಂಭಣೆಯಿಂದ ನಡೆದ ಆಡೂರು ಮಾಲತೇಶ ಜಾತ್ರೆ-ವಿಡಿಯೋ - Adooru Malatesh jatra

ETV Bharat Logo

Copyright © 2024 Ushodaya Enterprises Pvt. Ltd., All Rights Reserved.