ETV Bharat / opinion

ಯಮುನಾ ನದಿ ಮಾಲಿನ್ಯಕ್ಕೆ ಕಾರಣಗಳೇನು? ತಡೆಗಟ್ಟುವುದು ಹೇಗೆ?: ವಿಶ್ಲೇಷಣೆ - YAMUNA RIVER POLLUTION

ಯಮುನಾ ನದಿ ಮಾಲಿನ್ಯ ಹಾಗೂ ಅದನ್ನು ತಡೆಗಟ್ಟುವ ಕ್ರಮಗಳ ಕುರಿತಾಗಿ ವಿಶ್ಲೇಷಣೆ ಇಲ್ಲಿದೆ.

ಕಲುಷಿತ ಯಮುನಾ ನದಿಯಲ್ಲಿ ತೇಲುತ್ತಿರುವ ವಿಷಕಾರಿ ನೊರೆಯನ್ನು ದೋಣಿಯ ಮೂಲಕ ಹೊರತೆಗೆಯುತ್ತಿರುವುದು
ಕಲುಷಿತ ಯಮುನಾ ನದಿಯಲ್ಲಿ ತೇಲುತ್ತಿರುವ ವಿಷಕಾರಿ ನೊರೆಯನ್ನು ದೋಣಿಯ ಮೂಲಕ ಹೊರತೆಗೆಯುತ್ತಿರುವುದು (PTI)
author img

By ETV Bharat Karnataka Team

Published : Oct 23, 2024, 7:08 PM IST

"ಸಮಯದ ಕೆನ್ನೆಯ ಮೇಲಿನ ಕಣ್ಣೀರಿನ ಹನಿ" ಎಂದು ರವೀಂದ್ರನಾಥ ಟ್ಯಾಗೋರ್ ಅವರು ತಾಜ್ ಮಹಲ್ ಅನ್ನು ಬಣ್ಣಿಸಿದ್ದರು. ಶಹಜಹಾನ್ ತನ್ನ ಕೊನೆಯ ದಿನಗಳನ್ನು ಸೆರೆಯಲ್ಲಿ ಕಳೆದಾಗ, ಸಮಾಧಿಯನ್ನು ದುಃಖದಿಂದ ನೋಡುತ್ತಿದ್ದಾಗ ಮತ್ತು ಯಮುನಾ ನದಿಯಲ್ಲಿ ಅದರ ಪ್ರತಿಬಿಂಬವನ್ನು ನೋಡುತ್ತಿದ್ದಾಗ ಆತ ಅನುಭವಿಸಿದ ದುಃಖವನ್ನು ಪ್ರತಿನಿಧಿಸಲು ಕವಿ ಬಳಸಿದ 'ಕಣ್ಣೀರಿನ ಹನಿ' ರೂಪಕವಾಗಿರಬಹುದು.

ಯಮುನಾ ನದಿಯು ತಾಜ್ ಮಹಲ್ ವಿನ್ಯಾಸದ ಅವಿಭಾಜ್ಯ ಅಂಗವಾಗಿದೆ. ಆದರೆ ಅದು ಭವಿಷ್ಯದಲ್ಲಿ ಒಣಗಿ ಕಿರಿದಾಗಲಿದೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಈಗ ನದಿ ಕಿರಿದಾಗಿದ್ದು, ಕಲುಷಿತವೂ ಆಗಿದೆ. ಕಲುಷಿತ ಮತ್ತು ಕಿರಿದಾದ ಯಮುನಾ ನದಿಯು ತಾಜ್ ಮಹಲ್​ ಮರದ ಅಡಿಪಾಯಗಳನ್ನು ದುರ್ಬಲಗೊಳಿಸಬಹುದು. ಹೀಗಾಗಿ, ತಾಜ್ ಮಹಲ್ ನ ರಚನಾತ್ಮಕ ಸಮಗ್ರತೆಯನ್ನು ಉಳಿಸಿಕೊಳ್ಳಲು, ಮುಕ್ತವಾಗಿ ಹರಿಯುವ ಯಮುನಾ ಅದರ ಮೂಲ ರೂಪದಲ್ಲಿ ಅತ್ಯಗತ್ಯ. ಮುಕ್ತವಾಗಿ ಹರಿಯುವ, ಮಾಲಿನ್ಯರಹಿತ ಯಮುನಾ ನದಿಯು ಅದನ್ನು ಅವಲಂಬಿಸಿರುವ ಲಕ್ಷಾಂತರ ಜನರ ಕಲ್ಯಾಣ ಮತ್ತು ಆರೋಗ್ಯಕ್ಕೂ ಅತ್ಯಗತ್ಯವಾಗಿದೆ.

ಕಲುಷಿತ ಯಮುನಾ ನದಿಯಲ್ಲಿ ತೇಲುತ್ತಿರುವ ವಿಷಕಾರಿ ನೊರೆಯನ್ನು ದೋಣಿಯ ಮೂಲಕ ಹೊರತೆಗೆಯುತ್ತಿರುವುದು
ಕಲುಷಿತ ಯಮುನಾ ನದಿಯಲ್ಲಿ ತೇಲುತ್ತಿರುವ ವಿಷಕಾರಿ ನೊರೆಯನ್ನು ದೋಣಿಯ ಮೂಲಕ ಹೊರತೆಗೆಯುತ್ತಿರುವುದು (PTI)

ಗರ್ವಾಲ್ ಹಿಮಾಲಯದ ಯಮಮೋರಿ ಹಿಮನದಿಯಿಂದ ಹುಟ್ಟಿಕೊಂಡ ಗಂಗಾನದಿಯ ಉಪನದಿಯಾಗಿರುವ ಯಮುನಾ ನದಿಯು ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳನ್ನು ಸಮೀಪಿಸುವ ಪ್ರದೇಶಗಳಲ್ಲಿ ಅತ್ಯಂತ ಕಲುಷಿತವಾಗಿದೆ. ನದಿಯ ಶೇ 76ರಷ್ಟು ಮಾಲಿನ್ಯ ಇಲ್ಲಿಯೇ ಹರಡಿಕೊಂಡಿದೆ. ಎರಡು ಸರ್ಕಾರಗಳು ಅಧಿಕಾರದಲ್ಲಿರುವ ದೆಹಲಿ ಬಳಿ ಯಮುನಾ ನದಿಯಲ್ಲಿ ನೊರೆ ಉಕ್ಕುವುದು ಪ್ರತಿವರ್ಷವೂ ನಡೆಯುವ ವಿದ್ಯಮಾನವಾಗಿದೆ. ನದಿಯನ್ನು ಸ್ವಚ್ಛಗೊಳಿಸಲು ಈಗಾಗಲೇ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದ್ದರೂ ನೊರೆ ಉಕ್ಕುತ್ತಿರುವುದು ವಿಪರ್ಯಾಸ.

ಕಳೆದ ವಾರದಿಂದ, ದೆಹಲಿಯ ಯಮುನಾ ನದಿಯ ಮೇಲ್ಮೈ ಮತ್ತೆ ಬಿಳಿ ನೊರೆಯ ದಪ್ಪ ಪದರದಿಂದ ಆವೃತವಾಗಿವೆ. ಇದು ಜನರ ಆರೋಗ್ಯಕ್ಕೆ ಅಪಾಯಕಾರಿಯಾಗಿದೆ. ವಿಶೇಷವಾಗಿ ದೀಪಾವಳಿ ಹಬ್ಬವು ಹತ್ತಿರವಿರುವ ಈ ಸಮಯದಲ್ಲಿ ವಿಶ್ವದ ಅತ್ಯಂತ ಕಲುಷಿತ ನಗರವೆಂದು ಕುಖ್ಯಾತಿ ಪಡೆದಿರುವ ರಾಜಧಾನಿ ನಗರವು ವಾಯುಮಾಲಿನ್ಯದಿಂದ ಬಳಲುತ್ತಿದೆ. ಈ ವರ್ಷ ನವೆಂಬರ್ 5 ರಂದು ಆಚರಿಸಲಾಗುವ ಛತ್ ಪೂಜೆಗೆ ಭಕ್ತರು ನದಿಯಲ್ಲಿ ಸ್ನಾನ ಮಾಡುತ್ತಾರೆ. ಆದರೆ ನದಿಯ ಕಲುಷಿತ ಸ್ಥಿತಿಯಿಂದಾಗಿ ಆ ನೀರಲ್ಲಿ ಸ್ನಾನ ಮಾಡುವುದು ಸಾಧ್ಯವೇ ಇಲ್ಲ.

ಕಾಳಿಂದಿ ಕುಂಜ್ ನಲ್ಲಿ ವಿಷಕಾರಿ ನೊರೆಯಿಂದ ಆವೃತವಾದ ಯಮುನಾ ನದಿಯಲ್ಲಿ ಜಾನುವಾರುಗಳು ಈಜುತ್ತಿರುವುದು
ಕಾಳಿಂದಿ ಕುಂಜ್ ನಲ್ಲಿ ವಿಷಕಾರಿ ನೊರೆಯಿಂದ ಆವೃತವಾದ ಯಮುನಾ ನದಿಯಲ್ಲಿ ಜಾನುವಾರುಗಳು ಈಜುತ್ತಿರುವುದು (PTI)

ಗಂಗಾ ನದಿ, ಜೀವನದಿ, ಸಾವಿನ ನದಿ ಕುರಿತ ತಮ್ಮ ಪುಸ್ತಕದಲ್ಲಿ ವಿಕ್ಟರ್ ಮಲ್ಲೆಟ್ ಅವರ ಪ್ರಶ್ನೆಯು ಈ ಸಂದರ್ಭದಲ್ಲಿ ಸಮಯೋಚಿತವಾಗಿದೆ ಅನಿಸುತ್ತದೆ: ಒಂದು ನದಿಯನ್ನು ಭಾರತೀಯರು ಹೇಗೆ ಪೂಜಿಸಬಹುದು ಮತ್ತು ಅದೇ ಜನ ಆ ನದಿಯನ್ನು ಕಲುಷಿತಗೊಳಿಸುವುದು ಏಕೆ? ನದಿ ದೇವತೆಗಳೊಂದಿಗೆ ಭಾರತೀಯರ ನಾಗರಿಕ ಸಂಬಂಧದ ಹೊರತಾಗಿಯೂ, ಅವರು ನೀರನ್ನು ಕೊಳಕುಗೊಳಿಸಿದ್ದಾರೆ. ಈಗ ಈ ನದಿಗಳನ್ನು ಸ್ವಚ್ಛ ಮಾಡಲಾಗದ ಸ್ಥಿತಿ ತಲುಪಿದೆ. ನದಿ ಹರಿವಿನ ನೇರ ಪರಿಣಾಮದೊಂದಿಗೆ ಒಂದು ಕಟು ಸತ್ಯವೆಂದರೆ, ಯಮುನಾ ಸೇರಿದಂತೆ ಎಲ್ಲಾ ಮಹಾನ್ ಹಿಮಾಲಯನ್ ನದಿಗಳ ಮೂಲ ಹಿಮಾಲಯದ ಹಿಮನದಿಗಳು ಸಹ ಒಣಗುತ್ತಿವೆ. ಪರ್ವತಗಳಲ್ಲಿನ ಮಾನವಜನ್ಯ ಚಟುವಟಿಕೆಗಳಿಂದ ನದಿ ಒಣಗುವಿಕೆಯು ಭಾಗಶಃ ವೇಗಗೊಂಡಿದೆ.

ನವದೆಹಲಿಯ ಕಾಳಿಂದಿ ಕುಂಜ್ ನಲ್ಲಿ ಕಲುಷಿತ ಯಮುನಾ ನದಿಯ ಮೇಲ್ಮೈಯಲ್ಲಿ ತೇಲುತ್ತಿರುವ ವಿಷಕಾರಿ ನೊರೆ
ನವದೆಹಲಿಯ ಕಾಳಿಂದಿ ಕುಂಜ್ ನಲ್ಲಿ ಕಲುಷಿತ ಯಮುನಾ ನದಿಯ ಮೇಲ್ಮೈಯಲ್ಲಿ ತೇಲುತ್ತಿರುವ ವಿಷಕಾರಿ ನೊರೆ (PTI)

ಹೋಟೆಲ್​ನವರು ತಮ್ಮಲ್ಲಿನ ಸಂಸ್ಕರಿಸದ ಕಸವನ್ನು ನದಿಗೆ ಎಸೆಯುತ್ತಾರೆ. ಅಲ್ಲದೆ ಅನಧಿಕೃತ ನಿರ್ಮಾಣಗಳು ನದಿಗೆ ಅಪಾಯವನ್ನುಂಟುಮಾಡುತ್ತಿವೆ. ಅಂತಹ ಕಟ್ಟಡ ಚಟುವಟಿಕೆಗಳನ್ನು ನಿರ್ಬಂಧಿಸಲು ಜಾರಿಗೊಳಿಸಲಾದ ಎಲ್ಲಾ ಕಾನೂನುಗಳು ನಿರರ್ಥಕವಾಗಿವೆ. ಸಂಸ್ಕರಿಸದ ತ್ಯಾಜ್ಯವನ್ನು ನೇರವಾಗಿ ನದಿಗೆ ಪಂಪ್ ಮಾಡಲಾಗುತ್ತದೆ. ಕೃಷಿಗೆ ಬಳಸುವ ಕೀಟನಾಶಕಗಳು ಸಹ ನದಿ ಸೇರುತ್ತಿವೆ. ಇದು ಯುಟ್ರೋಫಿಕೇಷನ್​ಗೆ ಕಾರಣವಾಗುತ್ತಿದೆ. ಇದು ಕಳೆ ಸಸ್ಯಗಳು ಮತ್ತು ಆಲ್ಗಲ್ ಹೂವುಗಳನ್ನು ಉತ್ತೇಜಿಸುತ್ತದೆ. ಈ ನದಿಗಳು ಅತ್ಯಂತ ಪ್ರಬಲವಾದ ಬ್ಯಾಕ್ಟೀರಿಯಾಗಳನ್ನು ಒಳಗೊಂಡಿರುವುದರಿಂದ ಮತ್ತು ಕೆಳಭಾಗದ ಪ್ರದೇಶಗಳಲ್ಲಿನ ಗ್ರಾಮಸ್ಥರ ಲಕ್ಷಾಂತರ ನೀರು ಬಳಕೆದಾರರಿಗೆ ಪ್ರತಿಜೀವಕಗಳಿಗೆ ನಿರೋಧಕ ಸೋಂಕು ಉಂಟು ಮಾಡುತ್ತಿರುವುದರಿಂದ ಈ ನದಿಗಳನ್ನು ಸ್ವಚ್ಛಗೊಳಿಸುವುದು ಈಗ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ.

ನದಿಯಿಂದ ತ್ಯಾಜ್ಯ ಹೊರತೆಗೆಯುತ್ತಿರುವ ಸ್ವಯಂ ಸೇವಕ
ನದಿಯಿಂದ ತ್ಯಾಜ್ಯ ಹೊರತೆಗೆಯುತ್ತಿರುವ ಸ್ವಯಂ ಸೇವಕ (PTI)

ದೆಹಲಿ ಬಳಿಯ ಯಮುನಾದ ಅನೇಕ ಬದಿಗಳಲ್ಲಿ ತ್ಯಾಜ್ಯ ವಸ್ತುಗಳನ್ನು, ಪ್ಲಾಸ್ಟಿಕ್, ಕೈಗಾರಿಕಾ ತ್ಯಾಜ್ಯ ಮತ್ತು ಸಂಸ್ಕರಿಸದ ಒಳಚರಂಡಿ ನೀರನ್ನು ಬಿಡಲಾಗುತ್ತಿದೆ. ಗಾಢವಾದ ವಾಸನೆ ಹೊಂದಿರುವ ಬಿಳಿ ಬಣ್ಣದ ಉಬ್ಬಿದ ನೊರೆಯು ಕೈಗಾರಿಕಾ ತ್ಯಾಜ್ಯದಲ್ಲಿನ ಹೆಚ್ಚಿನ ಸಾಂದ್ರತೆಯ ಅಮೋನಿಯಾ ಮತ್ತು ಫಾಸ್ಫೇಟ್​ಗಳನ್ನು ಹೊಂದಿರುತ್ತದೆ. ಇದು ಚರ್ಮದ ಕಾಯಿಲೆಗಳಿಗೆ ಕಾರಣವಾಗಬಹುದು. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅದರ ರಾಜ್ಯ ಅಂಗಸಂಸ್ಥೆಗಳು ಇದನ್ನು ತಡೆಗಟ್ಟಲು ವಿಫಲವಾಗಿದ್ದು, ಕಳಪೆ ಮತ್ತು ಅವಾಸ್ತವಿಕ ನಿಯಮಗಳನ್ನು ಜಾರಿ ಮಾಡಿವೆ. ಮಾಲಿನ್ಯದ ಸಮಸ್ಯೆಯನ್ನು ನಿಭಾಯಿಸುವ ಬಗ್ಗೆ ದೊಡ್ಡ ದೊಡ್ಡ ಭಾಷಣಗಳ ಹೊರತಾಗಿಯೂ, ಮಣ್ಣಿನ ಮಾಲಿನ್ಯ ತಡೆಗೆ ಇನ್ನೂ ನಿಯಮಗಳನ್ನು ರೂಪಿಸಲಾಗಿಲ್ಲ ಎಂಬುದು ಆಶ್ಚರ್ಯಕರ.

ವಿಷಕಾರಿ ನೊರೆಯೊಂದಿಗೆ ಆಟವಾಡುತ್ತಿರುವ ಮಕ್ಕಳು, ಜನತೆ
ವಿಷಕಾರಿ ನೊರೆಯೊಂದಿಗೆ ಆಟವಾಡುತ್ತಿರುವ ಮಕ್ಕಳು, ಜನತೆ (PTI)

'ಯಮುನಾ ಕ್ರಿಯಾ ಯೋಜನೆ' ಎಂಬ ನದಿ ಪುನಃಸ್ಥಾಪನಾ ಕಾರ್ಯಕ್ರಮವನ್ನು 1993 ರಲ್ಲಿ ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಯೋಜನೆಯಾಗಿ ಪ್ರಾರಂಭಿಸಲಾಯಿತು. ಕೇಂದ್ರ ಪರಿಸರ ಸಚಿವಾಲಯಕ್ಕೆ 2012-13ನೇ ಸಾಲಿನ ವರದಿಯಲ್ಲಿ ಪರಿಸರ ಮತ್ತು ಅರಣ್ಯಗಳ ಸಂಸದೀಯ ಸಮಿತಿಯು ಗಂಗಾ ಮತ್ತು ಯಮುನಾವನ್ನು ಸ್ವಚ್ಛಗೊಳಿಸುವ ಅಭಿಯಾನ ವಿಫಲವಾಗಿದೆ ಎಂದು ಹೇಳಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮವಾದ "ನಮಾಮಿ ಗಂಗೆ ಕಾರ್ಯಕ್ರಮದ" ಭಾಗವಾಗಿ ಯಮುನಾವನ್ನು ಸ್ವಚ್ಛಗೊಳಿಸಲು ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ.

ಒಳಚರಂಡಿ ಮತ್ತು ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಹೊಂದಿರುವ ನಗರಗಳು ಸೇರಿದಂತೆ ನಗರ ಕೇಂದ್ರಗಳಲ್ಲಿ ಹಸಿರು ತಂತ್ರಜ್ಞಾನವನ್ನು ಸ್ಥಾಪಿಸಲು ಸರ್ಕಾರ ಸಾಕಷ್ಟು ಆದ್ಯತೆಯಿಂದ ಕೆಲಸ ಮಾಡುತ್ತಿಲ್ಲ. ಅಂತಹ ಆಲ್ಟ್-ತಂತ್ರಜ್ಞಾನವು ಕೌಶಲ್ಯರಹಿತ ಮತ್ತು ಅರೆ-ನುರಿತ ನಗರ ಯುವಕರ ಬೆಳೆಯುತ್ತಿರುವ ಜನಸಂಖ್ಯೆಗೆ ದೊಡ್ಡ ಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ. ಅನುಷ್ಠಾನದಲ್ಲಿನ ವಿಳಂಬದ ಹೊರತಾಗಿ, ಹೊಸ ಸರ್ಕಾರದ ದೌರ್ಬಲ್ಯವೆಂದರೆ ಗಂಗಾ ಮತ್ತು ಯಮುನಾ ಎರಡೂ ನದಿಗಳನ್ನು ವಿವಿಧ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳಲಾಗುತ್ತಿರುವುದು. ಮೃತ ದೇಹಗಳನ್ನು ಎಸೆಯುವುದು ಮತ್ತು ಆಗಾಗ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಲಾದ ಧಾರ್ಮಿಕ ಆಚರಣೆಗಳ ತ್ಯಾಜ್ಯ ಸೇರಿದಂತೆ ಸುಸ್ಥಿರವಲ್ಲದ ನದಿ ಕೇಂದ್ರಿತ ಕ್ರಿಯೆಗಳು ನದಿಯನ್ನು ತೀರಾ ಕಲುಷಿತಗೊಳಿಸುತ್ತಿವೆ.

ವಿಷಕಾರಿ ನೊರೆಯಲ್ಲಿ ಸ್ನಾನ ಮಾಡುತ್ತಿರುವ ವ್ಯಕ್ತಿ
ವಿಷಕಾರಿ ನೊರೆಯಲ್ಲಿ ಸ್ನಾನ ಮಾಡುತ್ತಿರುವ ವ್ಯಕ್ತಿ (PTI)

ಸವಾಲುಗಳ ಹೊರತಾಗಿಯೂ, ಸ್ಥಳೀಯ ಭ್ರಷ್ಟಾಚಾರ ಮತ್ತು ಸೋಮಾರಿ ಅಧಿಕಾರಶಾಹಿಯ ಅಡ್ಡಿಯ ಹೊರತಾಗಿಯೂ ನದಿ ಶುದ್ಧೀಕರಣ ಮಾಡಬಹುದು. ನಾವು ಎರಡು ಸರಳ ಕೆಲಸಗಳನ್ನು ಮಾಡಬೇಕಿದೆ: ಮಾಲಿನ್ಯಕಾರಕಗಳು ನದಿಗೆ ಪ್ರವೇಶಿಸುವುದನ್ನು ನಿಲ್ಲಿಸುವುದು ಮತ್ತು ಕನಿಷ್ಠ ಹರಿವನ್ನು ಕಾಪಾಡಿಕೊಳ್ಳುವುದು. ಆದರೆ ಇವನ್ನು ಜಾರಿಗೆ ತರಬೇಕಾದರೆ ವಿಶ್ವಾಸಾರ್ಹ ಕ್ಷೇತ್ರ ದತ್ತಾಂಶದ ಆಧಾರದ ಮೇಲೆ ದೃಢವಾದ ಕಾನೂನುಗಳನ್ನು ಜಾರಿಗೊಳಿಸಬೇಕಾಗುತ್ತದೆ. ನಮಗೆ ಗುರಿ-ಆಧಾರಿತ ಅನುಷ್ಠಾನ ಕಾರ್ಯವಿಧಾನದ ಅಗತ್ಯವಿದೆ, ಆದರೂ ವಿದ್ಯುತ್ ಕೇಂದ್ರಕ್ಕೆ ಹತ್ತಿರವಿರುವ ಜಲಮೂಲವಾದ ಯಮುನಾವನ್ನು ಸ್ವಚ್ಛಗೊಳಿಸಲು ವರ್ಷಗಳ ವಿಫಲ ಪ್ರಯತ್ನಗಳನ್ನು ನೋಡಿ ನನಗೆ ಅನುಮಾನವಿದೆ. ಅನಾದಿ ಕಾಲದಿಂದಲೂ, ನದಿಗಳು ಮಾನವಕುಲದ ಜೀವನವನ್ನು ಬೆಂಬಲಿಸುವ ವ್ಯವಸ್ಥೆಗಳಾಗಿವೆ ಮತ್ತು ಈಗ ಈ ಜೀವನಾಡಿಗಳು ಸಾಯುತ್ತಿವೆ. ಹೀಗಾಗಿ ಮಾನವ ಕುಲದ ಅಸ್ತಿತ್ವಕ್ಕೇ ಅಪಾಯ ಕಾಣಿಸುತ್ತಿದೆ. ರಾಜಕೀಯದಿಂದ ಮುಕ್ತವಾದ ನಿಷ್ಪಕ್ಷಪಾತ ವೈಜ್ಞಾನಿಕ ವಿಧಾನಗಳಿಂದ ಅಮೂಲ್ಯವಾದ ನದಿ ಹಾಗೂ ನೈಸರ್ಗಿಕ ಸ್ವತ್ತುಗಳ ಪುನರುಜ್ಜೀವನ ಮಾಡಬಹುದು.

ಲೇಖನ: ಸಿ.ಪಿ. ರಾಜೇಂದ್ರನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.