ಗೆದ್ದವರಿಗೆ ಸೋತ ಮನೋಭಾವ, ಸೋತವರಿಗೆ ಗೆದ್ದಷ್ಟೇ ಖುಷಿ.. ಇದು 18ನೇ ಲೋಕಸಭೆ ಚುನಾವಣಾ ಫಲಿತಾಂಶದಲ್ಲಿ ರಾಜಕೀಯ ಪಕ್ಷಗಳ ಮನಸ್ಥಿತಿ. ಹೇಗೆಂದರೆ, ಆಡಳಿತದಲ್ಲಿದ್ದ ಬಿಜೆಪಿ 400 ರ ಗಡಿ ದಾಟುವ ಗುರಿ ಹೊಂದಿತ್ತು. ಆದರೆ, 240 ಕ್ಕೆ ಬಂದು ನಿಂತಿದೆ. ದೊಡ್ಡ ಗೆಲುವಿನ ನಿರೀಕ್ಷೆಯು ಹುಸಿಯಾಗಿ ಸೋತ ಮನೋಭಾವ ಸಣ್ಣದಾಗಿ ಮೂಡಿದೆ. ಇತ್ತ ಕಾಂಗ್ರೆಸ್ 99 ಸ್ಥಾನಗಳಲ್ಲಿ ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಹಿಂದಿನದ್ದಕ್ಕಿಂತ ಹೆಚ್ಚು ಸ್ಥಾನಗಳು ಗಳಿಸಿತು. ಇದು ಆ ಪಕ್ಷಕ್ಕೆ ಗೆಲುವಿನ ಸಂಭ್ರಮ ತಂದಿದೆ.
ಬಿಜೆಪಿ 400 ಸ್ಥಾನ ಗೆಲ್ಲುವ ರೇಸ್ನಲ್ಲಿ ಹಿಂದೆ ಬಿದ್ದು, ಮ್ಯಾಜಿಕ್ ನಂಬರ್ ಆದ 272 ರ ಹತ್ತಿರಕ್ಕೂ ಬರಲಿಲ್ಲ. 32 ಸ್ಥಾನಗಳ ಕೊರತೆ ಅನುಭವಿಸಿತು. ಕಾಂಗ್ರೆಸ್ ಪಕ್ಷ ಕೂಡ ಸತತ ಮೂರನೇ ಸಾರ್ವತ್ರಿಕ ಚುನಾವಣೆಯಲ್ಲೂ ಸರ್ಕಾರ ರಚನೆ ಮಾಡಲು ಅರ್ಧದಷ್ಟು ಸ್ಥಾನಗಳನ್ನೂ ಗೆಲ್ಲಲೂ ವಿಫಲವಾಗಿದೆ. ಕಳೆದ ಮೂರು ಚುನಾವಣೆಗಳಲ್ಲಿ 44, 52 ಮತ್ತು 99 ಸ್ಥಾನಗಳಲ್ಲಿ ಗೆದ್ದಿದೆ. ಈ ಮೂಲಕ ಬಿಜೆಪಿ ಗೆದ್ದ ಸ್ಥಾನಗಳಿಗಿಂತ 45 ಸೀಟು ಕಡಿಮೆ ಇದೆ. ಹೀಗಿದ್ದರೂ, ಆ ಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣೆಯಲ್ಲಿ ಗೆದ್ದಂತೆ ಬೀಗುತ್ತಿರುವುದು ಪ್ರಶ್ನಾರ್ಥವಾಗಿದೆ.
ದೇಶದಲ್ಲಿ ಏನೇ ಹೋರಾಟ ನಡೆಸಿದರೂ, ಪ್ರಧಾನಿ ಮೋದಿ ಅವರನ್ನು ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ರಾಜಕೀಯ ಹೋರಾಟದಲ್ಲಿ ಅವರು ಯಶಸ್ಸು ಪಡೆಯಲು ವಿಫಲವಾದರು. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ಮಾಜಿ ಪ್ರಧಾನಿ ದಿವಂಗರ ಪಂಡಿತ್ ಜವಾಹರ್ಲಾಲ್ ನೆಹರೂ ಅವರ ಬಳಿಕ ಸತತ ಮೂರನೇ ಬಾರಿಗೆ ಪ್ರಧಾನಿ ಸ್ಥಾನಕ್ಕೇರಿದ ಶ್ರೇಯಕ್ಕೆ ಪಾತ್ರರಾದರು.
ಫಲಿತಾಂಶ ಕ್ರಿಕೆಟ್ಗೆ ಹೋಲಿಸಿದರೆ ಹೀಗಿರುತ್ತೆ: ಇದೆಲ್ಲವನ್ನೂ ಗಮನಿಸಿದಾಗ, 2024 ರ ಲೋಕಸಭಾ ಫಲಿತಾಂಶವನ್ನು ಕ್ರಿಕೆಟ್ ಆಟಕ್ಕೆ ಹೋಲಿಕೆ ಮಾಡಬಹುದು. ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೂರು ಶತಕಗಳನ್ನು ಶತಕ ಬಾರಿಸುತ್ತೇನೆ ಎಂದು ಹೇಳಿದ್ದರೆ, ಅವರು ಸತತ ಎರಡು ಪಂದ್ಯಗಳಲ್ಲಿ ಶತಕ ಬಾರಿಸುತ್ತಾರೆ. ಮೂರನೇ ಪಂದ್ಯದಲ್ಲಿ ಹತ್ತು ಅಥವಾ ಅದಕ್ಕಿಂತ ಕಡಿಮೆ ರನ್ನಿಂದ ಶತಕ ವಂಚಿತರಾಗುತ್ತಾರೆ. ಇದನ್ನೇ ಲೆಕ್ಕ ಹಾಕಿ ವಿರಾಟ್ ಕೊಹ್ಲಿ ಉತ್ತಮ ಬ್ಯಾಟರ್ ಅಲ್ಲ ಎಂದು ನಿರ್ಧರಿಸುತ್ತೀರಾ?, ಬಿಜೆಪಿಯ ಈಗಿನ ಸಾಧನೆಯೂ ಇದೇ ಆಗಿದೆ.
400 ಪಾರ್ ಎಂಬ ಬಿಜೆಪಿ ಘೋಷಣೆ ಕಾಂಗ್ರೆಸ್ಗೆ ಭಾರೀ ಮುಳುವಾಯಿತು. ಪ್ರಚಾರದಲ್ಲೂ ಕಾಂಗ್ರೆಸ್ ಇದನ್ನೇ ಹೇಳಿಕೊಂಡು ಬಂದಿತು. ಪ್ರಧಾನಿ ಮೋದಿ ಅವರು 400 ಸ್ಥಾನ ಪಡೆಯುತ್ತಾರೆ ಎಂಬುದೇ ಆ ಪಕ್ಷದಲ್ಲಿ ಚರ್ಚೆಗೀಡು ಮಾಡಿತು. ಜೊತೆಗೆ ಸಂವಿಧಾನ ಬದಲಾವಣೆ, ಪರಿಶಿಷ್ಟ ಜಾತಿ, ಪಂಗಡ, ಇತರ ಹಿಂದುಳಿದ ಜಾತಿಗಳ ಮೀಸಲಾತಿ ರದ್ದು ಸೇರಿದಂತೆ ಹಲವು ವಿಚಾರಗಳು ಭಾರೀ ಚರ್ಚೆಗೆ ಬಂದವು. ಇದು ಉತ್ತರಪ್ರದೇಶದಲ್ಲಿ ಮಾಯಾವತಿ ಅವರ ಬಿಎಸ್‌ಪಿ ಜೊತೆಗಿದ್ದ ಎಸ್‌ಸಿ, ಎಸ್‌ಟಿ ಮತಗಳು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಕ್ಕೆ ವರ್ಗವಾದವು.
ಪಕ್ಷಗಳ ಅಸ್ತ್ರ, ಪ್ರತ್ಯಸ್ತ್ರ: ಬಿಜೆಪಿಯ 400 ಪಾರ್ ಗುರಿಗೆ ವಿರುದ್ಧವಾಗಿ ಕಾಂಗ್ರೆಸ್ ಸಂವಿಧಾನ ಬದಲಾವಣೆ ಎಂಬ ಅಸ್ತ್ರವನ್ನು ಬಳಸಿಕೊಂಡಿತು. ಇದರಿಂದ ಪ್ರಧಾನಿ ಮೋದಿ ಅವರಿಗೆ ಹಾನಿ ಮಾಡುವುದು ಇದರ ಉದ್ದೇಶವಾಗಿತ್ತು. ಪ್ರಚಾರದ ಮಧ್ಯದಲ್ಲಿ ಬಿಜೆಪಿಯು ಸಂವಿಧಾನ ಬದಲಿಸುತ್ತದೆ ಎಂಬ ಕಾಂಗ್ರೆಸ್ ಪ್ರಚಾರ ದೊಡ್ಡ ಮಟ್ಟದಲ್ಲಿ ಲಾಭ ತಂದುಕೊಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಇದಕ್ಕೆ ಪ್ರತಿತಂತ್ರವಾಗಿ ಬಿಜೆಪಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ಬಯಸಿದೆ ಎಂಬ ಪ್ರಚಾರ ನಡೆಸಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.
ವಾಸ್ತವದಲ್ಲಿ ಮುಸ್ಲಿಂ ವಿರೋಧಿ ಹೇಲಿಕೆಯು ಬಿಜೆಪಿಯ ವಿರುದ್ಧ ಮತ ಚಲಾಯಿಸುವ ಮುಸ್ಲಿಮರ ಸಂಕಲ್ಪವನ್ನು ಬಲಪಡಿಸಿತು. ಮೌಲ್ವಿಗಳು ಮತ್ತು ಮುಲ್ಲಾಗಳು ಮತ್ತು ಇತರ ಸಮುದಾಯದ ಮುಖಂಡರ ಉಪದೇಶಕ್ಕೆ ತಲೆಬಾಗಿದ ಮುಸ್ಲಿಂ ಸಮುದಾಯ ಬಿಜೆಪಿಯನ್ನು ಸೋಲಿಸಲು ಒಗ್ಗೂಡಿತು. ಯುಪಿಯಲ್ಲಿ ಅವರು ಬಿಎಸ್‌ಪಿ ಅಥವಾ ಇತರ ಪಕ್ಷಗಳಿಂದ ಬೇರ್ಪಟ್ಟು ಸಮಾಜವಾಗಿ ಮತ್ತು ಕಾಂಗ್ರೆಸ್ಗೆ ಬೆಂಬಲಿಸಿದವು.
ಮುಸ್ಲಿಮರ ನಿರ್ಧಾರ ಒಗ್ಗಟ್ಟಾಗಿದ್ದರೂ, ಪಶ್ಚಿಮ ಬಂಗಾಳದಲ್ಲಿ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್ ವಿರುದ್ಧ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಸೋಲು ಕಂಡರು. ಯೂಸುಫ್ ಪಠಾಣ್ ಪರ ಅಲ್ಲಿದ್ದ ಶೇಕಡಾ 52ರಷ್ಟು ಮುಸ್ಲಿಮರು ಮತ ಹಾಕಿದರು. ಇದರ ಬಳಿಕ ಮಾತನಾಡಿದ್ದ ಚೌಧರಿ ಅವರು, ಮೂವತ್ತು ವರ್ಷಗಳ ಕಾಲ ಬೆಹ್ರಾಂಪುರಕ್ಕಾಗಿ ನನ್ನ ಬೆವರು ಮತ್ತು ರಕ್ತವನ್ನು ನೀಡಿದ್ದೇನೆ. ಸೋಲನ್ನು ಒಪ್ಪಿಕೊಳ್ಳುವೆ ಎಂದಿದ್ದರು. ಮತ್ತೊಂದು ವಿಚಿತ್ರ ಸಂಗತಿಯೆಂದರೆ, ಉತ್ತರಪ್ರದೇಶದ ರಾಂಪುರ ಲೋಕಸಭಾ ಕ್ಷೇತ್ರದಲ್ಲಿ ನೂರಕ್ಕೆ ನೂರು ಮುಸ್ಲಿಮರಿರುವ ಗ್ರಾಮವಿದೆ. ಈ ಗ್ರಾಮದಲ್ಲಿ ಸುಮಾರು 550 ಮನೆಗಳನ್ನು ಯೋಗಿ ಆದಿತ್ಯನಾಥ್ ಸರ್ಕಾರವು ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಿಕೊಟ್ಟಿದೆ. ಇಲ್ಲಿ 2,300ಕ್ಕೂ ಹೆಚ್ಚು ಮತಗಳು ಚಲಾವಣೆಯಾಗಿವೆ. ಇದರಲ್ಲಿ ಒಂದು ಬಿಜೆಪಿ ಪರ ಬಿದ್ದಿಲ್ಲ.
ಉತ್ತರ ಪ್ರದೇಶದಲ್ಲಿ ಎಡವಿದ ಬಿಜೆಪಿ ಹೈಕಮಾಂಡ್: ಬಿಜೆಪಿ ಕೇಂದ್ರ ನಾಯಕತ್ವವು ಟಿಕೆಟ್ ಹಂಚಿಕೆಯಲ್ಲಿ ಯೋಗಿ ಮತ್ತು ಇತರ ರಾಜ್ಯ ನಾಯಕರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿದೆ ಎಂಬುದರಲ್ಲಿ ಸಂದೇಹವಿಲ್ಲ. ಟಿಕೆಟ್ ಹಂಚಿಕೆ ಮಾತ್ರವಲ್ಲದೆ, ಇಡೀ ಚುನಾವಣಾ ಪ್ರಚಾರದಲ್ಲಿ ದೆಹಲಿ ಹೈಕಮಾಂಡ್ ನಿಯಂತ್ರಿಸಿದೆ. ಆದ್ದರಿಂದ ಪಕ್ಷ ಹಿನ್ನಡೆ ಅನುಭವಿಸಲು ಕಾರಣ. ಇದಕ್ಕೆ ಕೇಂದ್ರ ನಾಯಕರೇ ಹೊಣೆಯಾಗಬೇಕು.
ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರು ಮೋದಿ ಸರ್ಕಾರದ ದೋಣಿಯನ್ನು ಅಲುಗಾಡಿಸುತ್ತಾರೆ ಎಂಬುದು ಕಾಂಗ್ರೆಸ್ ಪಾಳಯದ ನಿರೀಕ್ಷೆ. ಇದು ಎರಡು ಕಾರಣಗಳಿಗಾಗಿ ಸಾಧ್ಯವಿಲ್ಲ. I.N.D.I.A ಮೈತ್ರಿಕೂಟ ಸ್ಥಿರ ಸರ್ಕಾರ ನೀಡಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಎರಡನೆಯದು ಜೆಡಿ(ಯು) ಮತ್ತು ಟಿಡಿಪಿ ಬೆಂಬಲ ಹಿಂತೆಗೆದುಕೊಂಡರೂ ಬೇರೆ ಪಕ್ಷಗಳು ಮೋದಿ ಸರ್ಕಾರಕ್ಕೆ ಬೆಂಬಲ ನೀಡುತ್ತವೆ. ಹೀಗಾಗಿ ಇಬ್ಬರೂ ಸರ್ಕಾರ ಪತನ ಮಾಡುವ ನಿರ್ಧಾರಕ್ಕೆ ಬರುವುದು ಕಷ್ಟ.
ಮಾಜಿ ಪ್ರಧಾನಿ ವಾಜಪೇಯಿ ಸರ್ಕಾರಕ್ಕೆ ಇರುವಷ್ಟು ಮರ್ಜಿ ಮೋದಿ ಸರ್ಕಾರಕ್ಕೆ ಇಲ್ಲ. ಜೊತೆಗೆ ಮನಮೋಹನ್ ಸಿಂಗ್ ಅವರ ಎರಡು ಅವಧಿಯ ಸರ್ಕಾರದಲ್ಲಿ ಇದ್ದಷ್ಟು ಅಸ್ಥಿರತೆ ಇಲ್ಲಿಲ್ಲ. ಹೀಗಾಗಿ ಸರ್ಕಾರ ಯಾವುದೇ ಬೆದರಿಕೆ, ಅಂಜಿಕೆ ಇಲ್ಲದೇ ಸಾಗಲಿದೆ. ಎಕ್ಸಿಟ್ಪೋಲ್ ಫಲಿತಾಂಶ ಮತ್ತು ಷೇರು ಮಾರುಕಟ್ಟೆ ಕುಸಿತ ಬಗ್ಗೆ ಕಾಂಗ್ರೆಸ್ ಟೀಕೆ ಮಾಡಿದೆ. ಆದರೆ, ಅದೆರಡೂ ಈಗ ಅಪ್ರಸ್ತುತವಾಗಿವೆ.
ಇದನ್ನೂ ಓದಿ: ಏಕಾಂಗಿಯಾಗಿ 'ಲೋಕ' ಗೆಲ್ಲಲು ಬಿಜೆಪಿ ವಿಫಲವಾಗಿದ್ದೇಕೆ, ಪಕ್ಷ ಮಾಡಿಕೊಂಡ ಎಡವಟ್ಟುಗಳೇನು? - BJP fail to win majority