IRCTC Golden Triangle Package: ದೇಶದ ರಾಜಧಾನಿ ದೆಹಲಿಯು ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಇಲ್ಲಿ ಭೇಟಿ ನೀಡಲು ಹಲವು ಐತಿಹಾಸಿಕ ಕಟ್ಟಡಗಳು ಮತ್ತು ಸ್ಥಳಗಳಿವೆ. ಅದಕ್ಕಾಗಿಯೇ ದೇಶ ಮಾತ್ರವಲ್ಲದೆ ವಿದೇಶಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ನೀವು ಸಹ ಆ ಸ್ಥಳಗಳಿಗೆ ಭೇಟಿ ಕೊಡಲು ಬಯಸುತ್ತೀರಾ? ಹಾಗಾದ್ರೆ, ಇಂಡಿಯನ್ ರೈಲ್ವೆ ಕೇಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ನಿಮಗಾಗಿ ಟೂರ್ ಪ್ಯಾಕೇಜ್ ಘೋಷಣೆ ಮಾಡಿದೆ.
ಐಆರ್ಸಿಟಿಸಿ ನಿಮಗಾಗಿ 'ಗೋಲ್ಡನ್ ಟ್ರಯಾಂಗಲ್' (Golden Triangle) ಹೆಸರಿನಲ್ಲಿ ಪ್ರವಾಸ ಪ್ಯಾಕೇಜ್ ಜಾರಿಗೊಳಿಸಿದೆ. ಈ ಪ್ರವಾಸದ ಒಟ್ಟು ಅವಧಿಯು 7 ರಾತ್ರಿಗಳು ಮತ್ತು 8 ಹಗಲುಗಳು ಆಗಿವೆ. ಪ್ಯಾಕೇಜ್‌ನಲ್ಲಿ ಘೋಷಿಸಲಾದ ದಿನಾಂಕಗಳ ಅನ್ವಯ, ಈ ಪ್ರವಾಸವು ಪ್ರತಿ ಬುಧವಾರ ಲಭ್ಯವಿರುತ್ತದೆ. ದೆಹಲಿ, ಜೈಪುರ, ಆಗ್ರಾ ಸೇರಿದಂತೆ ನೀವು ಅನೇಕ ಸ್ಥಳಗಳಿಗೆ ಭೇಟಿ ನೀಡಬಹುದು. ಪ್ರವಾಸದ ವಿವರಗಳು ಇಲ್ಲಿವೆ ನೋಡೋಣ.
1ನೇ ದಿನ: ಮೊದಲ ದಿನ ರೈಲು ಪ್ರಯಾಣವು (ರೈಲು ಸಂಖ್ಯೆ- 12723) ಹೈದರಾಬಾದ್‌ನಿಂದ ಬೆಳಿಗ್ಗೆ 6ಕ್ಕೆ ಆರಂಭವಾಗುತ್ತದೆ. ಇಡೀ ದಿನ ಪ್ರಯಾಣವಾಗಿರುತ್ತದೆ.
2ನೇ ದಿನ: ಎರಡನೇ ದಿನ ಬೆಳಗ್ಗೆ 8ಕ್ಕೆ ದೆಹಲಿ ರೈಲು ನಿಲ್ದಾಣ ತಲುಪುವುದು. ಅಲ್ಲಿಂದ ಹೋಟೆಲ್ ತಲುಪಿ ಚೆಕ್ ಇನ್ ಮಾಡಿ ಫ್ರೆಶ್ ಆಗಬೇಕಾಗುತ್ತದೆ. ಆ ನಂತರ ದೆಹಲಿಯ ಕುತುಬ್ ಮಿನಾರ್, ಲೋಟಸ್ ಟೆಂಪಲ್ ಹಾಗೂ ಅಕ್ಷರಧಾಮಕ್ಕೆ ಭೇಟಿ ಕೊಡಲಾಗುವುದು. ಅಂದು ರಾತ್ರಿ ಆ ಹೋಟೆಲ್‌ನಲ್ಲಿ ಉಳಿಯಲಾಗುವುದು.
3ನೇ ದಿನ: ಉಪಹಾರದ ನಂತರ ಮೂರನೇ ದಿನ ಕೆಂಪು ಕೋಟೆ, ತಿನ್ಮೂರ್ತಿ ಭವನ, ರಾಜ್ ಘಾಟ್ ಮತ್ತು ಇಂಡಿಯಾ ಗೇಟ್ ಅನ್ನು ವೀಕ್ಷಿಸಲಾಗುವುದು. ಆ ದಿನವೂ ದೆಹಲಿಯಲ್ಲೇ ವಾಸ್ತವ್ಯ ಹೂಡಲಾಗುವುದು.
4ನೇ ದಿನ: ಉಪಹಾರದ ನಂತರ ನಾಲ್ಕನೇ ದಿನ ಚೆಕ್ ಔಟ್ ಮಾಡಿ, ಜೈಪುರಕ್ಕೆ ತೆರಳಲಾಗುವುದು. ಅಲ್ಲಿಗೆ ತಲುಪಿದ ನಂತರ, ಹೋಟೆಲ್‌ನಲ್ಲಿ ಚೆಕ್ ಇನ್ ಮಾಡಿ, ಹವಾ ಮಹಲ್‌ಗೆ ಭೇಟಿ ಕೊಡಲಾಗುವುದು. ನಂತರ ಶಾಪಿಂಗ್ ಮಾಡಲು ಅವಕಾಶವಿರುತ್ತದೆ. ರಾತ್ರಿ ಅಲ್ಲಿಯೇ ಉಳಿದುಕೊಳ್ಳಬೇಕಾಗುತ್ತದೆ.
5ನೇ ದಿನ: ಐದನೇ ದಿನ ಅಮೀರ್ ಕೋಟೆ, ಜಂತರ್ ಮಂತರ್ ಹಾಗೂ ಸಿಟಿ ಪ್ಯಾಲೇಸ್ನ್ನು ವೀಕ್ಷಿಸಲಾಗುವುದು. ಆ ರಾತ್ರಿ ಜೈಪುರದಲ್ಲಿ ವಾಸ್ತವ್ಯ ಹೂಡಲಾಗುವುದು.
6ನೇ ದಿನ: ಆರನೇ ದಿನ ಬೆಳಗ್ಗೆ ಜೈಪುರದಿಂದ ಆಗ್ರಾಕ್ಕೆ ಹೊರಡಲಾಗುವುದು, ದಾರಿಯಲ್ಲಿ ಫತೇಪುರ್ ಸಿಕ್ರಿಗೆ ಭೇಟಿ ನೀಡಲಾಗುವುದು. ಆಗ್ರಾ ತಲುಪಿದ ನಂತರ, ಹೋಟೆಲ್‌ನಲ್ಲಿ ಚೆಕ್-ಇನ್ ಮಾಡಿ ಮತ್ತು ರಾತ್ರಿ ಅಲ್ಲಿಯೇ ಉಳಿಯಲಾಗುವುದು.
7ನೇ ದಿನ: ಏಳನೇ ದಿನದ ಬೆಳಿಗ್ಗೆ ತಾಜ್ ಮಹಲ್‌ಗೆ ಭೇಟಿ ನೀಡಲಾಗುವುದು. ನಂತರ ಹೋಟೆಲ್‌ನಿಂದ ಚೆಕ್ ಇನ್ ಮಾಡಿದ ನಂತರ, ಆಗ್ರಾ ಕೋಟೆಗೆ ಭೇಟಿ ಕೊಡಲಾಗುವುದು. ಅಂದು ಸಂಜೆ ಆಗ್ರಾ ರೈಲು ನಿಲ್ದಾಣದಲ್ಲಿ ಪ್ರವಾಸಿಗರನ್ನು ತಂದು ಬಿಡಲಾಗುವುದು. ಅಲ್ಲಿಂದ ವಾಪಸ್ ಪ್ರಯಾಣ (ರೈಲು ಸಂಖ್ಯೆ- 12724) ಸಂಜೆ 6ಕ್ಕೆ ಆರಂಭವಾಗಲಿದೆ. ಇದು ಇಡೀ ರಾತ್ರಿ ಪ್ರಯಾಣವಾಗಿರುತ್ತದೆ.
8ನೇ ದಿನ: ಎಂಟನೇ ದಿನ, ಸಂಜೆ 5ಕ್ಕೆ ಹೈದರಾಬಾದ್ ತಲುಪಲಾಗುವುದು. ಈ ಮೂಲಕ ಪ್ರವಾಸದ ಪ್ರಯಾಣವು ಕೊನೆಗೊಳ್ಳುತ್ತದೆ.
ಶುಲ್ಕಗಳ ವಿವರ: 1 ರಿಂದ 3 ಪ್ರಯಾಣಿಕರಿಗೆ..
- ಕಂಫರ್ಟ್‌ನಲ್ಲಿ ಸಿಂಗಲ್ ಸೀಟು ಹಂಚಿಕೆಗಾಗಿ (ವ್ಯಕ್ತಿಯೊಬ್ಬರಿಗೆ) ₹58,340
- ಎರಡು ಸೀಟು ಹಂಚಿಕೆಗಾಗಿ ₹32,640
- ಟ್ರಿಪಲ್ ಸೀಟು ಹಂಚಿಕೆಗೆ ₹25,420 ನಿಗದಿಪಡಿಸಲಾಗಿದೆ.
- 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ, ಹಾಸಿಗೆ ಸಹಿತ ₹18,440 ಶುಲ್ಕ ಪಾವತಿಸಬೇಕಾಗುತ್ತದೆ
- ಸ್ಟ್ಯಾಂಡರ್ಡ್‌ನಲ್ಲಿ ಸಿಂಗಲ್ ಸೀಟು ಹಂಚಿಕೆಗಾಗಿ ₹55,290
- ಡಬಲ್ ಸೀಟು ಹಂಚಿಕೆಗಾಗಿ ₹29,590
- ಟ್ರಿಪಲ್ ಸೀಟು ಹಂಚಿಕೆಗೆ ₹22,370 ಶುಲ್ಕ ಪಾವತಿಸಬೇಕಾಗುತ್ತದೆ.
- 5 ರಿಂದ 11 ವರ್ಷದ ಮಕ್ಕಳಿಗೆ ಹಾಸಿಗೆ ಸಹಿತ ₹15,390
- ಹಾಸಿಗೆ ರಹಿತ ₹14,260 ಪಾವತಿಸಬೇಕು.
- ಗ್ರೂಪ್ ಬುಕ್ಕಿಂಗ್‌ನಲ್ಲಿ ಸ್ವಲ್ಪ ದರದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ.
ಟೂರ್ ಪ್ಯಾಕೇಜ್ನ ಇತರ ಸೌಲಭ್ಯಗಳು:
- ರೈಲು ಟಿಕೆಟ್ಗಳು (ಹೈದರಾಬಾದ್ - ದೆಹಲಿ, ಆಗ್ರಾ - ಹೈದರಾಬಾದ್)
- ಹೋಟೆಲ್ ವಸತಿ
- 5 ಉಪಹಾರಗಳು
- ಪ್ಯಾಕೇಜ್ ಪ್ರಕಾರ ಸ್ಥಳ ವೀಕ್ಷಿಸುವ ವಾಹನ
- ಪ್ರಯಾಣ ವಿಮೆ
- ಪ್ರಸ್ತುತ ಈ ಪ್ಯಾಕೇಜ್ ಜನವರಿ 8, 15, 22, 29 ರಂದು ಲಭ್ಯವಿದೆ.
- ಸಂಪೂರ್ಣ ಪ್ರವಾಸದ ವಿವರಗಳು, ಪ್ಯಾಕೇಜ್ ಬುಕ್ಕಿಂಗ್ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ.
https://www.irctctourism.com/pacakage_description?packageCode=SHR044
ಇದನ್ನೂ ಓದಿ: ದೇವಭೂಮಿ ಉತ್ತರಾಖಂಡಕ್ಕೆ ಕಡಿಮೆ ಬೆಲೆಯಲ್ಲಿ 8 ದಿನಗಳ ಪ್ರವಾಸ