Tips to Making Soft Chapati at Home: ಚಪಾತಿ ಅಂದ್ರೆ ಸಾಕು ಅನೇಕರು ಸೇವಿಸಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ವಿಶೇಷವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು, ಬಿಪಿ ಮತ್ತು ಶುಗರ್ ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುವವರು, ದಿನಕ್ಕೆ ಒಮ್ಮೆಯಾದರೂ ತಮ್ಮ ಆಹಾರದಲ್ಲಿ ಚಪಾತಿಗಳನ್ನು ಮಿಸ್ ಮಾಡದೇ ಸೇರಿಸಿಕೊಳ್ಳುತ್ತಾರೆ. ಕೆಲವರು ಹೊರಗಿನ ಅಂಗಡಿಗಳಿಂದ ಚಪಾತಿಗಳನ್ನು ಖರೀದಿಸುತ್ತಾರೆ. ಇನ್ನು ಕೆಲವರು ತಮ್ಮ ಮನೆಯಲ್ಲಿ ಸಿದ್ಧಪಡಿಸುತ್ತಾರೆ.
ಮನೆಯಲ್ಲಿ ಚಪಾತಿ ಮಾಡಲು ಸರಿಯಾಗಿ ಹಿಟ್ಟನ್ನು ಕಲಸಿಕೊಳ್ಳಬೇಕಾಗುತ್ತದೆ. ಆದ್ರೆ, ನೀವು ಎಷ್ಟು ರೀತಿಯಲ್ಲಿ ಪ್ರಯತ್ನಿಸಿದರೂ, ನೀವು ಎಷ್ಟು ಪದಾರ್ಥಗಳನ್ನು ಬೆರೆಸಿದರೂ ಚಪಾತಿಗಳು ಗಟ್ಟಿಯಾಗುತ್ತದೆ. ನೀವು ಈ ಟಿಪ್ಸ್ ಪಾಲಿಸಿದರೆ ಸಾಕು ಚಪಾತಿ ತುಂಬಾ ಸಾಫ್ಟ್ ಆಗಿ ಬರುತ್ತದೆ. ಜಾಹೀರಾತುಗಳಲ್ಲಿ ತೋರಿಸುವಂತೆ ಚಪಾತಿ ಮೃದು ಹಾಗೂ ನಯವಾಗಿ ಬರುತ್ತದೆ ಎಂದು ಅಡುಗೆ ತಜ್ಞರು ತಿಳಿಸುತ್ತಾರೆ. ಕೈಯಿಂದ ಬೆರೆಸುವ ಅಗತ್ಯವಿಲ್ಲ, ಕೋಲಿನಿಂದ ಕಲಿಸುವ ಅಗತ್ಯವಿಲ್ಲ. ಇದೀಗ ಸೂಪರ್ ಸಾಫ್ಟ್ ಚಪಾತಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ.
ಸಾಫ್ಟ್ ಚಪಾತಿಗೆ ಬೇಕಾಗುವ ಪದಾರ್ಥಗಳೇನು?:
- ಗೋಧಿ ಹಿಟ್ಟು - 1 ಕಪ್
- ಉಪ್ಪು - ರುಚಿಗೆ ಬೇಕಾಗುವಷ್ಟು
- ನೀರು - 1 ಕಪ್
- ಎಣ್ಣೆ - 2 ಟೀಸ್ಪೂನ್
ಮೃದುವಾದ ಚಪಾತಿ ತಯಾರಿಸುವ ವಿಧಾನ:
- ಮೊದಲು ಒಂದು ಪಾತ್ರೆಯನ್ನು ತೆಗೆದುಕೊಂಡು ಗೋಧಿ ಹಿಟ್ಟು ಹಾಗೂ ಉಪ್ಪನ್ನು ಹಾಕಿಕೊಳ್ಳಬೇಕು.
- ಇದಾದ ನಂತರ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಹಾಗೂ ಮಿಶ್ರಣ ಮಾಡಿ.
- ಈಗ ದಪ್ಪ ಪಾತ್ರೆ ಅಥವಾ ಕುಕ್ಕರ್ ತೆಗೆದುಕೊಂಡು ಅದಕ್ಕೆ ಎಣ್ಣೆ ಹಾಕಿ.
- ನಂತರ ಕಲಸಿದ ಗೋಧಿ ಹಿಟ್ಟನ್ನು ಪಾತ್ರೆಯಲ್ಲಿ ಹಾಕಿ ಸಮವಾಗಿ ಹರಡಿ.
- ಈಗ ಒಲೆ ಆನ್ ಮಾಡಿ ಪಾತ್ರೆ ಇಡಿ. ಉರಿ ಮಧ್ಯಮದಲ್ಲಿ ಇರಿಸಿ. ಗೋಧಿ ಹಿಟ್ಟು ಮುದ್ದೆಯಾಗುವವರೆಗೆ ಬೇಯಿಸಿ.
- ಗೋಧಿ ಹಿಟ್ಟು ಪಾತ್ರೆಗೆ ಅಂಟಿಕೊಳ್ಳದೆ ಮುದ್ದೆಯಾದಾಗ ಸ್ಟವ್ ಆಫ್ ಮಾಡಿ ತಣ್ಣಗಾಗಲು ಬಿಡಿ.
- ಬೆಚ್ಚಗಿರುವಾಗಲೇ ಉಂಡೆಗಳನ್ನಾಗಿ ಮಾಡಿಕೊಳ್ಳಿ.
- ಈಗ ಒಂದು ಕವರ್ ತೆಗೆದುಕೊಂಡು ಇನ್ನೊಂದು ಕವರ್ ಮೇಲೆ ಇಟ್ಟು ಒಂದು ಪ್ಲೇಟ್ ಅಥವಾ ಚಪಾತಿ ಪ್ಲೇಟ್ ಇಟ್ಟು ಗಟ್ಟಿಯಾಗಿ ಒತ್ತಿದರೆ ಚಪಾತಿ ರೆಡಿಯಾಗುತ್ತದೆ.
- ಈಗ ಸ್ಟವ್ ಆನ್ ಮಾಡಿ ಮತ್ತು ಅದರ ಪ್ಯಾನ ಇಡಿ, ಚಪಾತಿಗಳನ್ನು ಹಾಕಿ ಮತ್ತು ರಡೂ ಬದಿಗಳನ್ನು ಫ್ರೈ ಮಾಡಿಕೊಳ್ಳಿ. ಅಗತ್ಯವಿದ್ದರೆ ಎಣ್ಣೆಯನ್ನು ಸಹ ಅನ್ವಯಿಸಬಹುದು. ಹೀಗೆ ಎಲ್ಲಾ ಚಪಾತಿಗಳನ್ನು ಬೇಯಿಸಿದರೆ ತುಂಬಾ ರುಚಿಯಾದ ಹಾಗೂ ಮೃದುವಾದ ಚಪಾತಿ ಸಿದ್ಧವಾಗುತ್ತವೆ.
- ಈಗ ನಿಮಗೆ ಇಷ್ಟವಾದ ಪಲ್ಯದ ಜೊತೆಗೆ ರುಚಿ ರುಚಿಯಾದ ಚಪಾತಿ ಸೇವಿಸಬಹುದು. ನೀವು ಇಷ್ಟವಾದರೆ ಸಾಫ್ಟ್ ಚಪಾತಿ ಪ್ರಯತ್ನಿಸಿ ನೋಡಿ.