ETV Bharat / lifestyle

ಕುರುಕಲು ಸ್ನಾಕ್ಸ್​ "ರಿಬ್ಬನ್ ಪಕೋಡ" - ಈ ಸಲಹೆ ಅನುಸರಿಸಿದ್ರೆ ರುಚಿ ಅದ್ಭುತ! - RIBBON PAKODA RECIPE

ಚಳಿಗಾಲ ಆರಂಭವಾಗಿದ್ದು, ಸಂಜೆ ವೇಳೆಗೆ ಏನಾದರೂ ಸ್ನಾಕ್ಸ್​ ಸವಿಯಬೇಕು ಅಂತ ಅನಿಸದೇ ಇರದು. ಅದಕ್ಕಾಗಿ ರುಚಿಕರ ರಿಬ್ಬನ್​ ಪಕೋಡ ತಯಾರಿಸುವ ಬಗೆ ಮತ್ತು ಸಲಹೆ ಇಲ್ಲಿದೆ.

ribbon pakoda
ರಿಬ್ಬನ್ ಪಕೋಡ (ETV Bharat)
author img

By ETV Bharat Karnataka Team

Published : Nov 6, 2024, 2:18 PM IST

How to Make Ribbon Pakoda Recipe: ಸಂಜೆಯ ಟೀ ಸಮಯದಲ್ಲಿ ಏನಾದರೂ ತಿಂಡಿ ತಿನ್ನಲು ಅನೇಕರು ಬಯಸುತ್ತಾರೆ. ಸಮೋಸ, ಮಿರ್ಚಿ ಬಜ್ಜಿ ತಿನ್ನಲು ಇಷ್ಟಪಡುತ್ತಾರೆ. ಪ್ರತಿದಿ ಇವುಗಳನ್ನೇ ತಿಂದು ಸಾಕಾಗಿದೆ, ಬೇರೆ ಇನ್ನೇನಾದ್ರು ತಿನ್ನಬೇಕು ಅಂತಾ ಅನಿಸುತ್ತದೆ. ಹೀಗೆ ಹೊಸ ತಿಂಡಿಯನ್ನು ತಿನ್ನಲು ಬಯಸುವವರಿಗೆ ಕುರುಕಲು ತಿಂಡಿಯಾದ ರಿಬ್ಬನ್ ಪಕೋಡವನ್ನು ಪ್ರಯತ್ನಿಸಬಹುದು. ತುಂಬಾ ಗರಿಗರಿಯಾದ ಮತ್ತು ಟೇಸ್ಟಿಯಾಗಿರುವ ರಿಬ್ಬನ್ ಪಕೋಡವನ್ನು ಸಂಜೆಯ ಟೀ ಸಮಯಕ್ಕೆ ಅತ್ಯುತ್ತಮ ತಿಂಡಿ ಎಂದು ಹೇಳಬಹುದು.

ಹೆಚ್ಚು ಶ್ರಮವಿಲ್ಲದೆ ಹೀಗೆ ಮಾಡಿದರೆ ಮನೆಯಲ್ಲಿಯೇ ಸ್ವೀಟ್ ಶಾಪ್ ಸ್ಟೈಲ್ ನಂತೆ ಮಾಡಬಹುದು. ಮಕ್ಕಳಿಗಾಗಿ ತಿಂಡಿ ಬಾಕ್ಸ್​ನಲ್ಲಿ ಹಾಕುವುದು ಸಹ ಒಳ್ಳೆಯದು. ಮತ್ತು ತಡಮಾಡದೆ, ಸರಳವಾದ ಕುರುಕಲು ರಿಬ್ಬನ್ ಪಕೋಡವನ್ನು ತಯಾರಿಸಲು ಬೇಕಾದ ಪದಾರ್ಥದ ಬಗ್ಗೆ ತಿಳಿಯೋಣ..

ರಿಬ್ಬನ್ ಪಕೋಡಕ್ಕೆ ಬೇಕಾಗುವ ಸಾಮಗ್ರಿಗಳು:

  • ಕಡಲೆ ಹಿಟ್ಟು - ಅರ್ಧ ಕಪ್
  • ಅಕ್ಕಿ ಹಿಟ್ಟು - ಅರ್ಧ ಕಪ್
  • ಪುಟಾಣಿ -ಅರ್ಧ ಕಪ್ಪು
  • ಇಂಗು - ಒಂದು ಚಿಟಿಕೆ
  • ಜೀರಿಗೆ-1 ಟೀ ಸ್ಪೂನ್​
  • ಮೆಣಸಿನಕಾಯಿ -1 ಟೀ ಸ್ಪೂನ್​
  • ಎಳ್ಳು - 1 ಟೀಸ್ಪೂನ್
  • ಬೆಣ್ಣೆ - 2 ಟೀಸ್ಪೂನ್
  • ಉಪ್ಪು ರುಚಿಗೆ ತಕ್ಕಷ್ಟು
  • ಎಣ್ಣೆ - ಪಕೋಡ ಕರಿಯಲು ಸಾಕಾಗುಷ್ಟು

ತಯಾರಿಸುವ ವಿಧಾನ:

  • ಮೊದಲು ಮಿಕ್ಸಿಂಗ್ ಬೌಲ್‌ನಲ್ಲಿ ಪುಟಾಣಿಯನ್ನು ತೆಗೆದುಕೊಳ್ಳಿ. ಇದಕ್ಕೆ ಜೀರಿಗೆ ಮತ್ತು ಮೆಣಸಿನ ಪುಡಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
  • ನಂತರ ಮಿಕ್ಸಿಂಗ್ ಬೌಲ್ ನಲ್ಲಿ ಅಕ್ಕಿಹಿಟ್ಟು, ಉದ್ದಿನಬೇಳೆ ಮತ್ತು ರುಬ್ಬಿದ ಉದ್ದಿನಬೇಳೆಯನ್ನು ಹಾಕಿ ಕಲಸಿ. ಇದಕ್ಕೆ ಬೇಕಾದಷ್ಟು ಉಪ್ಪು, ಎಳ್ಳು, ಇಂಗು ಸೇರಿಸಿ ಮಿಶ್ರಣ ಮಾಡಿ.
  • ನಂತರ ಒಲೆಯ ಮೇಲೆ ಸಣ್ಣ ಪ್ಯಾನ್ ಇಡಿ. ಬಟ್ಟಲಿನಲ್ಲಿ ಬೆಣ್ಣೆಯನ್ನು ಕರಗಿಸಿ. ಕರಗಿದ ಬೆಣ್ಣೆಯನ್ನು ಹಿಟ್ಟಿಗೆ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. (ಇಲ್ಲಿ ನೀವು ಬೆಣ್ಣೆಯ ಬದಲಿಗೆ ಬಿಸಿ ಎಣ್ಣೆ ಅಥವಾ ತುಪ್ಪವನ್ನು ಬಳಸಬಹುದು)
  • ಈಗ ಹಿಟ್ಟಿಗೆ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಗಟ್ಟಿಯಾದ ಹಿಟ್ಟನ್ನು ಮಾಡಿಕೊಳ್ಳಿ. (ರಿಬ್ಬನ್ ಪಕೋಡ ಗರಿಗರಿಯಾಗಲು ಹಿಟ್ಟು ಸ್ವಲ್ಪ ಗಟ್ಟಿಯಾಗಿರಬೇಕು)
  • ಈಗ ರಿಬ್ಬನ್ ಪಕೋಡವನ್ನು ಹುರಿಯಲು ಕಡಾಯಿಯನ್ನು ಒಲೆಯ ಮೇಲೆ ಇರಿಸಿ. ಅದಕ್ಕೆ ಬೇಕಾದಷ್ಟು ಎಣ್ಣೆ ಹಾಕಿ ಬಿಸಿ ಮಾಡಿ.
  • ನಂತರ ರಿಬ್ಬನ್ ಪಕೋಡ ಅಚ್ಚು ಹಾಕಿ. ಅದಕ್ಕೆ ಎಣ್ಣೆ ಹಾಕಿ ಹಿಟ್ಟನ್ನು ಕಲಸಿ.
  • ಈಗ ಕಾದ ಎಣ್ಣೆಯಲ್ಲಿ ರಿಬ್ಬನ್ ಪಕೋಡ ಹಾಕಿ ಫ್ರೈ ಮಾಡಿ.
  • ರಿಬ್ಬನ್ ಪಕೋಡವನ್ನು ಎರಡೂ ಕಡೆ ಚೆನ್ನಾಗಿ ಕರಿದ ನಂತರ, ಅದನ್ನು ಪ್ಲೇಟ್‌ಗೆ ತೆಗೆದುಕೊಳ್ಳಿ.
  • ತಣ್ಣಗಾದ ನಂತರ ತಿಂದರೆ ಅವು ಕುರುಕಲಾಗಿ ಮತ್ತು ತುಂಬಾ ರುಚಿಯಾಗಿರುತ್ತವೆ.

ಇದು ಚಹಾ ಸಮಯಕ್ಕೆ ಉತ್ತಮವಾದ ತಿಂಡಿಯಾಗಿದೆ. ಕಡಿಮೆ ಸಮಯದಲ್ಲಿ ತಯಾರಿಸಬಹುದು ಅನ್ನೋದು ವಿಶೇಷ.

ಇದನ್ನೂ ಓದಿ: ಚಳಿಗಾಲದ ವಿಶೇಷ ಈ "ಕಲ್ಯಾಣ ರಸಂ" ; ಹೀಗೆ ಮಾಡಿದ್ರೆ ತಿನ್ನುವುದಷ್ಟೇ ಅಲ್ಲ, ಕುಡಿಯಲೂಬಹುದು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.