ಹರಿದ್ವಾರ್ (ಉತ್ತರಾಖಂಡ್): ಇಂದು ಸೋಮವಾತಿ ಅಮಾವಾಸ್ಯೆ. ಎಲ್ಲಾ ಅಮಾವಾಸ್ಯೆಗಳು ಪ್ರಮುಖವಲ್ಲದಿದ್ದರೂ, ಈ ಅಮವಾಸ್ಯೆಯನ್ನು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಇಂದು ನದಿಗಳಲ್ಲಿ ಜನ ಪವಿತ್ರ ಸ್ನಾನ ಮಾಡುತ್ತಾರೆ. ಹರಿದ್ವಾರದಲ್ಲೂ ಕೂಡ ಜನರು ಪವಿತ್ರ ಗಂಗೆಯಲ್ಲಿ ಸೋಮವಾತಿ ಅಮಾವಾಸ್ಯೆ ನಿಮಿತ್ತ ಮಿಂದೇಳುತ್ತಾರೆ. ಚಳಿಗಾಲದ ಮೈಕೊರೆಯುವ ಚಳಿ ನಡುವೆಯೂ ಭಕ್ತರು ಗಂಗೆಯಲ್ಲಿ ಪುಣ್ಯ ಸ್ನಾನ ಮಾಡುತ್ತಾರೆ.
ಗಂಗಾಸ್ನಾನದ ಮಹತ್ವ: ಸೋಮವಾತಿ ಅಮವಾಸ್ಯೆಯಂದು ಗಂಗಾ ಸ್ನಾನ ಮಾಡುವುದರಿಂದ ಎಲ್ಲಾ ಸಮಸ್ಯೆ, ತೊಂದರೆಗಳು ದೂರವಾಗುತ್ತವೆ ಎಂಬ ನಂಬಿಕೆ ಜನರಲ್ಲಿದೆ. ಇಷ್ಟಾರ್ಥಗಳ ಈಡೇರಿಕೆಗಾಗಿ ಈ ದಿನ ಪ್ರಾರ್ಥನೆ ನಡೆಸಲಾಗುವುದು. ಇಂದಿನ ಪ್ರಾರ್ಥನೆಗಳು ನೂರು ಅಶ್ವಮೇಧ ಯಜ್ಞಕ್ಕೆ ಸಮ ಎಂಬ ನಂಬಿಕೆ ಇದೆ. ಈ ದಿನ ಪೂರ್ವಜರಿಗೆ ಪೂಜೆ ಸಲ್ಲಿಸುವುದರಿಂದ ಜೀವನದಲ್ಲಿ ಖುಷಿ ಮತ್ತು ಶಾಂತಿ ಇರುತ್ತದೆ.
ಪುಣ್ಯ ಸ್ನಾನದ ಹಿನ್ನೆಲೆ ಇಂದು ಗಂಗಾ ನದಿಯ ತಟದಲ್ಲಿ ಸುರಕ್ಷತೆ ಮತ್ತು ಭದ್ರತೆಯ ಎಲ್ಲ ವ್ಯವಸ್ಥೆಗಳನ್ನು ಪೊಲೀಸ್ ಇಲಾಖೆ ಮಾಡಿದ್ದು, ವಲಯ ಮತ್ತು ವಿಭಾಗ ಮಟ್ಟದಲ್ಲಿ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
ಹರಿದ್ವಾರದಲ್ಲಿ ಜನಸಾಗರ: ಪಂಡಿತ್ ಮನೋಜ್ ತ್ರಿಪಾಠಿ ಹೇಳುವಂತೆ ಉಳಿದ ಅಮವಾಸ್ಯೆಗಳಿಗಿಂತ ಸೋಮವಾತಿ ಅಮವಾಸ್ಯೆಯ ದಿನ ಗಂಗಾ ಸ್ನಾನ ಮಾಡುವುದು ಮಹತ್ವ ಪಡೆದಿದೆ. ಈ ಅಮಾವಾಸ್ಯೆಗಾಗಿ ಭೀಷ್ಮ ಪಿತಾಮಹ ಕೂಡ ಮರಣ ಹೊಂದಲು ಕಾದಿದ್ದ ಎಂಬ ಐತಿಹ್ಯವಿದೆ.
ಸ್ನಾನದ ಮಹತ್ವ: ಈ ದಿನ ಶ್ರದ್ಧಾ ಮತ್ತು ತಪರ್ಣ ಕಾರ್ಯ ನಡೆಸುವುದರಿಂದ, ಅರಳಿ ಮರ ಪೂಜೆಯಿಂದ ಕೂಡ ಪೂರ್ವಜರು ಸಂತೃಪ್ತಿಗೊಳ್ಳುತ್ತಾರೆ. 108 ಪರಿಕ್ರಮಗಳನ್ನು ನಡೆಸಿ ಅರಳಿ ಮರಕ್ಕೆ ದಾರ ಕಟ್ಟುವುದರಿಂದ ಕೂಡ ಪ್ರಾರ್ಥನೆ ಸಲ್ಲಿಸಬಹುದು. ಇದರಿಂದ ಜೀವನದ ಸಂಕಷ್ಟ ದೂರವಾಗುತ್ತದೆ. ಹರಿದ್ವಾರ ಮಾತ್ರವಲ್ಲದೇ, ಪವಿತ್ರ ಪುಣ್ಯ ನದಿಗಳಲ್ಲಿ ಇಂದು ಜನರು ಪವಿತ್ರ ಮಾಡುತ್ತಾರೆ. ಈ ದಿನ ದಾನ ಮಾಡುವುದರಿಂದಲೂ ಕೂಡ ಇಷ್ಟಾರ್ಥ ಈಡೇರುತ್ತದೆ.
ಸೋಮವಾತಿ ಅಮವಾಸ್ಯೆಯಿಂದ ಪುಣ್ಯ ಸ್ನಾನ ಮಾಡುವುದರಿಂದ ಕುಟುಂಬದಲ್ಲಿ ಖುಷಿ, ಸಮೃದ್ಧಿ ಮತ್ತು ನೆಮ್ಮದಿ ಮೂಡುತ್ತದೆ. ಇದರ ಜೊತೆಗೆ ನಮ್ಮ ಪೂರ್ವಜರು ಕೂಡ ಸಂತೃಪ್ತಿಗೊಳ್ಳುತ್ತಾರೆ.
ಭದ್ರತಾ ವ್ಯವಸ್ಥೆ: ಗಂಗಾ ಸ್ನಾನದ ಹಿನ್ನೆಲೆ 14 ವಲಯ ಮತ್ತು 39 ವಿಭಾಗದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನೇಮಕಾತಿ ಮಾಡಲಾಗಿದ್ದು, ಭಕ್ತರು ಯಾವುದೇ ರೀತಿ ಸಮಸ್ಯೆಗೆ ಒಳಗಾಗದಂತೆ ಮತ್ತು ಸ್ನಾನದ ವೇಳೆ ಸುರಕ್ಷತೆ ಕೈಗೊಳ್ಳುವಂತೆ ಸೂಚಿಸಲಾಗಿದೆ. ಹೆದ್ದಾರಿಗಳಲ್ಲಿ ರಸ್ತೆ ಸಂಚಾರ ಕೂಡ ಸುಗಮವಾಗಿಸಲು ಕೂಡ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಹೊಸ ವರ್ಷಕ್ಕೆ ಹರಿದು ಬರಲಿರುವ ಭಕ್ತರು; ವಾರಾಣಸಿ ದೇಗುಲ ದರ್ಶನದಲ್ಲಿ ಕೆಲ ಬದಲಾವಣೆ