ETV Bharat / lifestyle

ಫಳ ಫಳ ಹೊಳೆಯುವ ಮುಖ ನಿಮ್ಮದಾಗಬೇಕೇ?: ತಜ್ಞರು ತಿಳಿಸುವಂತೆ ಒಮ್ಮೆ 'ಕಾಫಿ ಫೇಸ್​ ಮಾಸ್ಕ್' ಹಾಕಿ ನೋಡಿ.. - How to Make Coffee Mask - HOW TO MAKE COFFEE MASK

How to Make Coffee Mask: ಅನೇಕ ಜನರು ಚರ್ಮದ ಶುಷ್ಕತೆ, ಬಿರುಕು ಸೇರಿದಂತೆ ವಿವಿಧ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ, ಇಂತಹ ಸಮಸ್ಯೆಗಳಿಗೆ ಈ ಕಾಫಿ ಸ್ಕ್ರಬ್ ಅಥವಾ ಕಾಫಿ ಫೇಸ್ ಮಾಸ್ಕ್ ಉತ್ತಮ ಪರಿಹಾರ ಎನ್ನುತ್ತಾರೆ ಬ್ಯೂಟಿಷಿಯನ್​ಗಳು. ಈ ಸ್ಟೋರಿಯಲ್ಲಿ 'ಕಾಫಿ ಫೇಸ್​ ಮಾಸ್ಕ್' ಬಗ್ಗೆ ಸಂಪೂರ್ಣವಾಗಿ ತಿಳಿಯೋಣ.

COFFEE MASK FOR FACE AT HOME  COFFEE MASK FOR FACE  COFFEE SCRUBS FOR FACE SKIN  BEAUTY TIPS IN Kannada
ಕಾಫಿ ಫೇಸ್​ ಮಾಸ್ಕ್ (Getty Images)
author img

By ETV Bharat Lifestyle Team

Published : Sep 30, 2024, 7:41 PM IST

Updated : Oct 1, 2024, 7:22 PM IST

How to Make Coffee Mask: ಅನೇಕ ಜನರು ಮುಖ ಚರ್ಮವು ಶುಷ್ಕರ ಸೇರಿದಂತೆ ವಿವಿಧ ಚರ್ಮದಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ, ಇಂತಹ ಸಮಸ್ಯೆಗಳಿಗೆ ಈ ಕಾಫಿ ಸ್ಕ್ರಬ್ ಅಥವಾ ಫೇಸ್ ಮಾಸ್ಕ್ ಉತ್ತಮ ಪರಿಹಾರ ಎನ್ನುತ್ತಾರೆ ಬ್ಯೂಟಿಷಿಯನ್​ಗಳು. ಕಾಫಿ ಫೇಸ್ ಮಾಸ್ಕ್ ಮೂಲಕ ನಿಮ್ಮ ಮುಖದ ಚರ್ಮವು ಫಳ ಫಳ ಹೊಳೆಯುತ್ತದೆ ಎಂದು ತಜ್ಞರು ಹೇಳುತ್ತಾರೆ. ಈ ಹಿನ್ನೆಲೆಯಲ್ಲಿ ಕಾಫಿ ಫೇಸ್​ ಮಾಸ್ಕ್​ ತಯಾರಿಸುವುದು ಹೇಗೆ? ಇದನ್ನು ಬಳಕೆಗೆ ಮುನ್ನ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿಯೋಣ.

ಕಾಫಿ ಫೇಸ್​ ಮಾಸ್ಕ್ ಸಿದ್ಧಪಡಿಸುವುದು ಹೇಗೆ?

  • ರುಬ್ಬಿದ ಕಾಫಿ ಪುಡಿ - 2 ಟೀಸ್ಪೂನ್
  • ಬ್ರೌನ್ ಶುಗರ್- ಒಂದೂವರೆ ಚಮಚ
  • ಆಲಿವ್ ಎಣ್ಣೆ - ಒಂದು ಚಮಚ
  • ಜೇನುತುಪ್ಪ - ಒಂದು ಟೀಚಮಚ
  • ಹಾಲು - ಒಂದು ಟೀಚಮಚ

ಮಾಸ್ಕ್​ ಮಾಡೋದು ಹೇಗೆ?:

  • ಮೊದಲು ಮಿಕ್ಸಿಂಗ್ ಬೌಲ್ ತೆಗೆದುಕೊಳ್ಳಿ. ಇದಕ್ಕೆ ಮೇಲೆ ತಿಳಿಸಿದ ಎಲ್ಲ ಪದಾರ್ಥಗಳನ್ನು ಸೇರಿಸಿ ಮತ್ತು ಪೇಸ್ಟ್ ರೀತಿಯಲ್ಲಿ ಮಿಶ್ರಣ ಮಾಡಿ. ನಂತರ ಮಿಶ್ರಣವನ್ನು ವೃತ್ತಾಕಾರದಲ್ಲಿ ಮುಖದ ಮೇಲೆ ಅನ್ವಯಿಸಿ.
  • ಮಿಶ್ರಣವನ್ನು ಅನ್ವಯಿಸಿ ಮತ್ತು 20 ನಿಮಿಷಗಳ ಕಾಲ ಇರಿಸಿ. 20 ನಿಮಿಷಗಳ ನಂತರ ತಣ್ಣೀರಿನಿಂದ ತೊಳೆದುಕೊಳ್ಳಲು ತಜ್ಞರು ಸಲಹೆ ನೀಡುತ್ತಾರೆ.
  • ಈ ಕಾಫಿ ಫೇಸ್​ ಮಾಸ್ಕ್​ ಹಾಕಿಕೊಳ್ಳುವುದರಿಂದ ಮುಖದ ಶುಷ್ಕ ಚರ್ಮವು ಸಹಜ ಸ್ಥಿತಿಗೆ ಬರುತ್ತದೆ. ಚರ್ಮದ ಸಮಸ್ಯೆಗಳು ಸರಿಪಡಿಸಲು ಉತ್ತಮ ಪರಿಹಾರ ಒದಗಿಸುತ್ತದೆ ಎನ್ನುತ್ತಾರೆ ತಜ್ಞರು.
  • ಇದು ಮುಖವನ್ನು ಮೃದು ಮತ್ತು ಕಾಂತಿಯುತವಾಗಿಸುತ್ತದೆ. ಈ ಕಾಫಿ ಸ್ಕ್ರಬ್ ಅನ್ನು ದೇಹದ ಸ್ಕ್ರಬ್ ಆಗಿಯೂ ಬಳಸಬಹುದು ಎಂದು ಹೇಳಲಾಗುತ್ತದೆ.

ಕಾಫಿ ಸ್ಕ್ರಬ್​ನಿಂದ ಲಭಿಸುವ ಲಾಭಗಳು: ಈ ಮುಖದ ಮಾಸ್ಕ್​ ತಯಾರಿಸುವುದು ತುಂಬಾ ಸುಲಭ! ಮೇಲಾಗಿ ಇದರಲ್ಲಿ ಬಳಸುವ ವಸ್ತುಗಳಲ್ಲಿ ಹಲವು ಸೌಂದರ್ಯ ರಹಸ್ಯಗಳು ಅಡಗಿವೆ ಎನ್ನುತ್ತಾರೆ ತಜ್ಞರು. ಇದೀಗ ಈ ಬಗ್ಗೆ ತಿಳಿದುಕೊಳ್ಳೋಣ.

ಕಾಫಿಯಲ್ಲಿರುವ ಗುಣಗಳು: ಕಾಫಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಚರ್ಮದ ಮೇಲೆ ವಾತಾವರಣದ ಮಾಲಿನ್ಯದ ಪರಿಣಾಮಗಳನ್ನು ತಡೆಯುತ್ತದೆ. ಈ ಫಲಿತಾಂಶವು ಚರ್ಮದ ಹೊಳಪು ಹೆಚ್ಚಿಸುತ್ತದೆ. ಮೊಡವೆಗಳ ಜೊತೆಗೆ ಕಣ್ಣಿನ ಕೆಳಗಿರುವ ಡಾರ್ಕ್​ ಸರ್ಕಲ್​ಗಳನ್ನು ಕಡಿಮೆ ಮಾಡುವ ಶಕ್ತಿ ಕಾಫಿಗೆ ಇದೆ ಎನ್ನುತ್ತಾರೆ ತಜ್ಞರು.

ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ: ಬ್ರೌನ್ ಶುಗರ್ ಚರ್ಮದ ಫ್ಲಾಕಿ ಸಮಸ್ಯೆ ಕಡಿಮೆ ಮಾಡುತ್ತದೆ. ಅದನ್ನು ಮೃದು ಮತ್ತು ಯೌವನ ಆಗಿರುವಂತೆ ಮಾಡುತ್ತದೆ. ಇದು ಸತ್ತ ಜೀವಕೋಶಗಳನ್ನು ಸಹ ತೆಗೆದುಹಾಕುತ್ತದೆ. ಇದರಲ್ಲಿರುವ ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳು ಮತ್ತು ಗ್ಲೈಕೋಲಿಕ್ ಆಮ್ಲವು ಚರ್ಮವನ್ನು ಕಾಂತಿಯುತಗೊಳಿಸಲು ಸಹಾಯ ಮಾಡುತ್ತದೆ.

ಆ್ಯಂಟಿಬ್ಯಾಕ್ಟೀರಿಯಲ್: ಆಲಿವ್ ಎಣ್ಣೆಯು ಚರ್ಮಕ್ಕೆ ನೈಸರ್ಗಿಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿರುವ ವಿಟಮಿನ್ 'ಎ', 'ಡಿ', 'ಇ' ಮತ್ತು 'ಕೆ' ಚರ್ಮದ ಆರೋಗ್ಯಕ್ಕೆ ಅತ್ಯಗತ್ಯ. ಆಲಿವ್ ಎಣ್ಣೆ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇವು ಪರಿಸರದಲ್ಲಿ ಬ್ಯಾಕ್ಟೀರಿಯಾಗಳ ಪ್ರಭಾವದಿಂದ ಚರ್ಮವನ್ನು ರಕ್ಷಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

ಮೊಡವೆಗಳನ್ನು ಕಡಿಮೆ ಮಾಡುತ್ತೆ: ಜೇನುತುಪ್ಪದಲ್ಲಿರುವ ಆ್ಯಂಟಿ ಮೈಕ್ರೋಬಿಯಲ್ ಗುಣಗಳು ಮೊಡವೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ಜೇನು ಸತ್ತ ಜೀವಕೋಶಗಳು, ಸುಕ್ಕುಗಳು ಮತ್ತು ಮುಖದ ಗೆರೆಗಳನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ ಎಂದು ಹೇಳಲಾಗುತ್ತದೆ.

ಒಣ ತ್ವಚೆಯ ಸಮಸ್ಯೆ ಕಡಿಮೆ ಮಾಡುತ್ತೆ: ಒಣ ತ್ವಚೆ ಶಮನಗೊಳಿಸುವಲ್ಲಿ ಹಾಲು ನಂಬರ್ ಒನ್ ಕೆಲಸ ಮಾಡುತ್ತದೆ. ಹಾಲಿನಲ್ಲಿರುವ ವಿಟಮಿನ್ ಎ ಇದಕ್ಕೆ ಸಹಾಯ ಮಾಡುತ್ತದೆ. ಇದರಲ್ಲಿರುವ ವಿಟಮಿನ್ ಡಿ ಮುಖದ ಮೇಲಿನ ಸುಕ್ಕುಗಳು ಮತ್ತು ಗೆರೆಗಳನ್ನು ಕಡಿಮೆ ಮಾಡುತ್ತದೆ. ಚರ್ಮದ ಸ್ಥಿತಿಸ್ಥಾಪಕತ್ವ ಹೆಚ್ಚಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ಇದನ್ನೂ ಓದಿ:

Last Updated : Oct 1, 2024, 7:22 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.