ETV Bharat / lifestyle

ಊಟದ ಜೊತೆ ನೆಂಚಿಕೊಳ್ಳಲು ಬೇಕು ಕರಿದ ಒಣ ಮೆಣಸಿನಕಾಯಿ: ಸಿದ್ಧಪಡಿಸೋದು ಹೇಗೆ? - BUTTERMILK CHILLI RECIPE

ಅನೇಕರು ಊಟದ ಜೊತೆಗೆ ಸೆಂಡಿಗೆ ಮತ್ತು ಹಪ್ಪಳ, ಉಪ್ಪಿನ ಕಾಯಿ ಸವಿಯುತ್ತಾರೆ. ಆದರೆ, ಊಟದೊಂದಿಗೆ ಸಖತ್ ಟೇಸ್ಟಿಯಾದ ಒಣ ಮೆಣಸಿನಕಾಯಿ ಸಿದ್ಧಪಡಿಸುವುದು ಹೇಗೆ ಗೊತ್ತೇ?

BUTTERMILK CHILLI RECIPE  HOW TO MAKE BUTTERMILK CHILLI  BUTTERMILK CHILLI  BUTTERMILK CHILLI RECIPE IN KANNADA
ಊಟದ ಜೊತೆ ಬೇಕು ಕರಿದ ಒಣ ಮೆಣಸಿನಕಾಯಿ! (ETV Bharat)
author img

By ETV Bharat Lifestyle Team

Published : Oct 7, 2024, 7:04 PM IST

Buttermilk Chilli Recipe: ಮಜ್ಜಿಗೆ ಅಥವಾ ಮೊಸರು ಮೆಣಸಿನಕಾಯಿ ಕನ್ನಡದ ಸಾಂಪ್ರದಾಯಿಕ ಖಾದ್ಯಗಳಲ್ಲಿ ಒಂದು. ಹಿಂದಿನವರು ಈ ಮೆಣಸಿನಾಯಿಯನ್ನು ಹೆಚ್ಚಾಗಿ ತಯಾರಿಸುತ್ತಿದ್ದರು. ಅವುಗಳನ್ನು ಮಜ್ಜಿಗೆ ಅಥವಾ ಮೊಸರು ಮೆಣಸಿನಕಾಯಿ ಎಂದೂ ಕರೆಯುತ್ತಾರೆ. ಊಟದ ಜೊತೆಗೆ ಸ್ವಲ್ಪ ಖಾರ ಮತ್ತು ಉಪ್ಪಿನಿಂದ ಕೂಡಿರುವ ಮೆಣಸಿನಕಾಯಿ ರುಚಿಕಟ್ಟಾಗಿರುತ್ತದೆ.

ಒಮ್ಮೆ ತಿಂದರೆ ಮತ್ತೆ ಮತ್ತೆ ಬೇಕೆನಿಸುತ್ತದೆ. ಆದಾಗ್ಯೂ, ಸಾಮಾನ್ಯವಾಗಿ ಹಸಿ ಮೆಣಸಿನಕಾಯಿಯನ್ನು ಮೊಸರಿನಲ್ಲಿ ನೆನೆಸಿ ಐದು ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಆದ್ರೆ, ಯಾವುದೇ ಮೊಸರು ಅಥವಾ ಮಜ್ಜಿಗೆ ಇಲ್ಲದೆಯೂ ಕೇವಲ ಒಂದೇ ದಿನದಲ್ಲಿ ಒಣಮೆಣಸಿನಕಾಯಿ ತಯಾರಿಸಬಹುದು.

ಬೇಕಾಗುವ ಪದಾರ್ಥಗಳು:

  • ಅರ್ಧ ಕೆ.ಜಿ ಹಸಿ ಮೆಣಸಿನಕಾಯಿ (ಹಣ್ಣು)
  • 30 ಗ್ರಾಂ ಅಜ್ವಾನ್ ಪುಡಿ
  • ಕಾಲು ಕಪ್ ಉಪ್ಪು
  • ಒಂದು ನಿಂಬೆಹಣ್ಣಿನ ರಸ
  • ಎಣ್ಣೆ

ತಯಾರಿಸುವುದು ಹೇಗೆ?:

  • ಮೊದಲು ಹಸಿ ಮೆಣಸಿನಕಾಯಿ ತೆಗೆದುಕೊಂಡು ಶುದ್ಧ ನೀರಿನಲ್ಲಿ ತೊಳೆದು ಬಟ್ಟಲಿನಲ್ಲಿ ಹಾಕಿ.
  • ಅದರ ನಂತರ ಫ್ಯಾನ್ ಗಾಳಿ ಕೆಳಗೆ ಬಟ್ಟೆ ಹಾಸಿ, ಅದರಲ್ಲಿ ತೊಳೆದಿರುವ ಹಸಿ ಮೆಣಸಿನಕಾಯಿಯನ್ನು ಒಣಗಿಸಿ. (ಫ್ಯಾನ್ ಗಾಳಿಯಲ್ಲಿ ಮಾತ್ರ ಹಾಕಿ. ಬಿಸಿಲಿಗೆ ಹಾಕಬೇಡಿ)
  • ನಂತರ ಅವುಗಳನ್ನು ಮಧ್ಯದಲ್ಲಿ ಈ ಮೆಣಸಿನಕಾಯಿಗಳನ್ನು ಎರಡು ತುಂಡುಗಳಾಗಿ ಕತ್ತರಿಸಿ ಒಂದು ಪಾತ್ರೆಯಲ್ಲಿಡಿ.
  • ಈಗ ಅದಕ್ಕೆ ಅಜ್ವಾನ್​ ಪುಡಿ, ಕಾಲು ಕಪ್ ಉಪ್ಪು ಮತ್ತು ನಿಂಬೆ ರಸ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಒಂದು ಗಂಟೆ ಬಿಡಿ. (ಕಡಿಮೆ ಖಾರವಿರುವ ಮೆಣಸಿನಕಾಯಿಯನ್ನು ತೆಗೆದುಕೊಳ್ಳಿ)
  • ಅದರ ನಂತರ, ಅವುಗಳನ್ನು ಮತ್ತೆ ಚೆನ್ನಾಗಿ ಮಿಶ್ರಣ ಮಾಡಿ, ಇನ್ನೊಂದು ಪಾತ್ರೆಯಲ್ಲಿ ತೆಗೆದುಕೊಂಡು ಅದನ್ನು ಇಡೀ ದಿನ ಮುಚ್ಚಿಡಿ. (ನೀವು ಪ್ರತಿ 8 ಗಂಟೆಗಳ ನಡುವೆ ಒಮ್ಮೆ ಮಿಶ್ರಣ ಮಾಡಿದರೆ ಎಲ್ಲವೂ ಚೆನ್ನಾಗಿ ನೆನೆಯುತ್ತದೆ)
  • 24 ಗಂಟೆಗಳ ನಂತರ, ಅವುಗಳನ್ನು ಬಟ್ಟೆಯ ಮೇಲೆ ತೆಳುವಾಗಿ ಹರಡಿ ಮತ್ತು ಬಿಸಿಲಿನಲ್ಲಿ ಒಣಗಿಸಿ.
  • ಅದೇ ರೀತಿ ಇವುಗಳು ತುಂಬಾ ಖಡಕ್​ ಆಗುವವರೆಗೆ ಸುಮಾರು 3 ದಿನಗಳ ಕಾಲ ಒಣಗಿಸಬೇಕು.
  • ಚೆನ್ನಾಗಿ ಒಣಗಿದ ನಂತರ ಸ್ಟವ್ ಆನ್ ಮಾಡಿ ಎಣ್ಣೆ ಹಾಕಿ ಬಿಸಿ ಮಾಡಿ. (ಮಧ್ಯಮ ಉರಿಯಲ್ಲಿ ಹಾಕಿ)
  • ಈಗ ಒಣ ಮೆಣಸಿನಕಾಯಿಯನ್ನು ಎಣ್ಣೆಯಲ್ಲಿ ಹುರಿಯಿರಿ. ಟೇಸ್ಟಿಯಾದ ಮೆಣಸಿನಕಾಯಿ ರೆಡಿ!

ಇದನ್ನೂ ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.