ETV Bharat / international

ಇಂದು ವಿಶ್ವ ಕಬಾಬ್​ ದಿನ: ಬಾಯಲ್ಲಿ ನೀರೂರಿಸುವ ಮೆಚ್ಚಿನ ಖಾದ್ಯದ ಇತಿಹಾಸ ನಿಮಗೆ ಗೊತ್ತಾ? - World Kebab Day

author img

By ETV Bharat Karnataka Team

Published : Jul 12, 2024, 5:28 PM IST

ಇಂದು (ಜುಲೈ 12) ವಿಶ್ವ ಕಬಾಬ್ ದಿನವಾಗಿದೆ. ಆಹಾರ ಪ್ರಿಯರ ಮೆಚ್ಚಿನ ಖಾದ್ಯಗಳಲ್ಲಿ ಒಂದಾದ ಕಬಾಬ್​ಗೆ ಶತಮಾನಗಳ ಇತಿಹಾಸ ಇದೆ.

ಕಬಾಬ್
ಕಬಾಬ್ (Getty Images)

ಕಬಾಬ್​ ಎಂದಾಕ್ಷಣ ಬಾಯಲ್ಲಿ ನೀರೂರುತ್ತದೆ. ಆದರೆ, ಬಹುತೇಕರಿಗೆ ಅದರ ಹಿನ್ನೆಲೆ ಹಾಗೂ ಇತಿಹಾಸ ಗೊತ್ತಿರಲ್ಲ. ವಿಶ್ವದ ಪ್ರಸಿದ್ಧ ಖಾದ್ಯಗಳಲ್ಲಿ ಒಂದಾದ ಈ ಕಬಾಬ್​ಗೂ ಒಂದು ದಿನ ಮೀಸಲಿದೆ. ಪ್ರತಿ ವರ್ಷ ಜುಲೈ 12ರಂದು ವಿಶ್ವ ಕಬಾಬ್ ದಿನ ಆಚರಿಸಲಾಗುತ್ತದೆ. ಪ್ರಪಂಚದಾದ್ಯಂತ ವಿವಿಧ ಪ್ರದೇಶಗಳಲ್ಲಿ ಆಯಾ ಪದ್ಧತಿಗೆ ಅನುಗುಣವಾಗಿ ವಿವಿಧ ರೀತಿಯ ಕಬಾಬ್‌ಗಳನ್ನು ತಯಾರಿಸಲಾಗುತ್ತದೆ. ಭಾರತ, ಇರಾನ್ ಮತ್ತು ಟರ್ಕಿಯಲ್ಲಿ ಕಬಾಬ್​ ತುಂಬಾ ಜನಪ್ರಿಯವಾಗಿದೆ. ಕಬಾಬ್​ಗೆ ಬಹಳ ಹಿಂದಿನಿಂದಲೂ ಇತಿಹಾಸ ಇದೆ.

ಕಬಾಬ್ ಎಂದರೇನು?: ಕಬಾಬ್‌ ಒಂದು ಜನಪ್ರಿಯ ಮಧ್ಯಪ್ರಾಚ್ಯ ಆಹಾರ. ಮಾಂಸದ ತುಂಡುಗಳನ್ನು ಸ್ಕೆವರ್‌ನಲ್ಲಿ ಜೋಡಿಸಿ ನಂತರ ಅದನ್ನು ಗ್ರಿಲ್ ಮಾಡಿ ತಯಾರಿಸಲಾಗುತ್ತದೆ. ಈ ಕಬಾಬ್​ ಹುಟ್ಟು ಟರ್ಕಿಯಲ್ಲಿ ಆಗಿದೆ ಎಂದು ಪರಿಗಣಿಸಲಾಗಿದೆ. ಟರ್ಕಿಶ್ ಭಾಷೆಯಲ್ಲಿ ಕಬಾಬ್ ಎಂದರೆ 'ಬೇಯಿಸಿದ ಮಾಂಸ'.

ಕಬಾಬ್ ಡೇ ಟೈಮ್‌ಲೈನ್

ಕಬಾಬ್‌ ಮೂಲ: 19ನೇ ಶತಮಾನದಲ್ಲಿ (1800ರಲ್ಲಿ) ಮಧ್ಯಪ್ರಾಚ್ಯದಲ್ಲಿ ಕಬಾಬ್‌ ರಚನೆ ಗುರುತಿಸಬಹುದು. ವಿಶೇಷವಾಗಿ ಟರ್ಕಿ ಮತ್ತು ಪರ್ಷಿಯಾದಂತಹ ಪ್ರದೇಶಗಳಲ್ಲಿ ಓರೆಯಾದ ಮತ್ತು ಸುಟ್ಟ ಮಾಂಸ ಜನಪ್ರಿಯವಾಗಿದೆ.

ಜಾಗತಿಕವಾಗಿ ಕಬಾಬ್‌: 20ನೇ ಶತಮಾನದಲ್ಲಿ (1900ರಲ್ಲಿ) ಕಬಾಬ್‌ ಗ್ರೀಕ್ ಸೌವ್ಲಾಕಿ ಅಥವಾ ಇಂಡಿಯನ್ ಟಿಕ್ಕಾದಂತಹ ವಿವಿಧ ರೀತಿಯಾಗಿ ರೆಸಿಪಿಗಳ ಮೂಲಕ ಪ್ರಪಂಚದಾದ್ಯಂತ ಹರಡಿತು. ಆಹಾರ ಪ್ರಿಯರ ಅಚ್ಚುಮೆಚ್ಚಿನ ಅಂತಾರಾಷ್ಟ್ರೀಯ ಖಾದ್ಯದ ಮನ್ನಡೆ ಗಳಿಸಿದೆ.

ಅಮೆರಿಕದಲ್ಲಿ ಕಬಾಬ್‌: 20ನೇ ಶತಮಾನದ ಮಧ್ಯಭಾಗದಲ್ಲಿ 1950ರಲ್ಲಿ ಕಬಾಬ್‌ಗಳನ್ನು ಅಮೆರಿಕದಲ್ಲಿ ಪರಿಚಯಿಸಲಾಯಿತು. ಪ್ರಮುಖವಾಗಿ ಟರ್ಕಿಶ್ ಮತ್ತು ಗ್ರೀಕ್ ವಲಸಿಗರು ಇದನ್ನು ಪರಿಚಯಿಸಿದರು. ಕಡಿಮೆ ಅವಧಿಯಲ್ಲೇ ಅಮೆರಿಕದ ಜನಪ್ರಿಯ ಬೀದಿ ಆಹಾರವೂ ಆಯಿತು.

ಕಬಾಬ್‌ನಲ್ಲಿ ಬದಲಾವಣೆ: 1990ರ ದಶಕದಿಂದ ಪಾಕಶಾಲೆಯ ನಾವೀನ್ಯತೆಯು ಸಸ್ಯಾಹಾರಿ ಕಬಾಬ್‌ಗಳು, ಸಮುದ್ರಾಹಾರ ಕಬಾಬ್‌ಗಳು ಮತ್ತು ಫ್ಯೂಷನ್ ಪಾಕಪದ್ಧತಿ ಕಬಾಬ್‌ಗಳಂತಹ ಅಸಂಖ್ಯಾತ ಕಬಾಬ್ ಆಗಿ ಇದು ಬದಲಾವಣೆ ಕಾಣುತ್ತಿದೆ.

ಫೈನ್ ಡೈನಿಂಗ್‌ನಲ್ಲಿ ಕಬಾಬ್‌: 21ನೇ ಶತಮಾನದಲ್ಲಿ (2000ರಲ್ಲಿ) ಕಬಾಬ್‌ ಉನ್ನತ ಮತ್ತು ಉತ್ತಮ ಗುಣಮಟ್ಟದ ಊಟದ ಸ್ಥಳಗಳಲ್ಲಿ ಸ್ಥಾನವನ್ನು ಕಂಡುಕೊಂಡಿದೆ. ಬೀದಿ ಆಹಾರದ ಸ್ಥಿತಿಯಿಂದ ಸ್ವಾದಿಷ್ಟ ಸುವಾಸನೆಯೊಂದಿಗೆ ಉನ್ನತ ಮಟ್ಟದ ಭಕ್ಷ್ಯವಾಗಿ ಮಾರ್ಪಟ್ಟಿದೆ.

ಮೊದಲ ಕಬಾಬ್ ದಿನ: ಮೊದಲ ಕಬಾಬ್ ದಿನವನ್ನು 2015ರ ಜುಲೈ ಎರಡನೇ ಶುಕ್ರವಾರದಂದು ಆಚರಿಸಲಾಯಿತು. ವಿಶ್ವಾದ್ಯಂತ ಲಕ್ಷಾಂತರ ಜನರು ಇಷ್ಟಪಡುವ ಈ ಬಹುಮುಖ ಮತ್ತು ರುಚಿಕರವಾದ ಭಕ್ಷ್ಯದ ಗೌರವಾರ್ಥವಾಗಿ ಈ ದಿನ ಆಚರಿಸಲಾಗುತ್ತದೆ.

ವಿಶ್ವದ ಅತ್ಯಂತ ರುಚಿಕರವಾದ ಕಬಾಬ್ ಯಾವುದು?: ಡೋನರ್ ಕಬಾಬ್ ಜನಪ್ರಿಯ ಬೀದಿ ಆಹಾರವಾಗಿದ್ದು, ಇದು ಟರ್ಕಿಯಲ್ಲಿ ಹುಟ್ಟಿಕೊಂಡಿದೆ. ಪ್ರಪಂಚದಾದ್ಯಂತ ಜನಪ್ರಿಯ ಆಹಾರವಾಗಿದೆ. ಡೋನರ್ ಕಬಾಬ್‌ ಗ್ರೀಕ್ ಗೈರೊ ಅಥವಾ ಅರಬ್ ಷಾವರ್ಮಾವನ್ನು ಹೋಲುವ ಟರ್ಕಿಶ್ ಖಾದ್ಯವಾಗಿದ್ದು, ರೋಟಿಸ್ಸೆರಿ ಮಸಾಲೆಯುಕ್ತ ಮಾಂಸದಿಂದ ತಯಾರಿಸಲಾಗುತ್ತದೆ. ಜರ್ಮನಿಯೊಂದರಲ್ಲೇ ಡೋನರ್ ಕಬಾಬ್ ಮಾರಾಟವು ಪ್ರತಿ ವರ್ಷ 3.5 ಶತಕೋಟಿ ಯುರೋಗಳಿಗಿಂತ ಹೆಚ್ಚು ತಲುಪುತ್ತದೆ. ಪ್ರತಿ ದಿನ 600 ಟನ್ ಡೋನರ್ ಮಾಂಸ ಸೇವಿಸಲಾಗುತ್ತದೆ. ಇದು ಆ ದೇಶದ ಅತ್ಯಂತ ಜನಪ್ರಿಯ ತ್ವರಿತ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ.

ಭಾರತದಲ್ಲಿ ವಿವಿಧ ರೀತಿಯ ಕಬಾಬ್‌ಗಳು: ಭಾರತದಲ್ಲಿ ವಿವಿಧ ರೀತಿಯ ಕಬಾಬ್‌ಗಳು ವೈವಿಧ್ಯಮಯ ಸುವಾಸನೆ ಮತ್ತು ಪಾಕಶಾಲೆಯ ಸಂಪ್ರದಾಯಗಳ ಭೂಮಿ. ಸ್ಮೋಕಿ ತಂದೂರಿ ಕಬಾಬ್‌ಗಳಿಂದ ಹಿಡಿದು ರಸಭರಿತವಾದ ಸೀಕ್ ಕಬಾಬ್‌ಗಳವರೆಗೆ ಭಾರತದಲ್ಲಿ ವಿವಿಧ ರೀತಿಯ ಕಬಾಬ್‌ಗಳಿವೆ. ದೇಶದ ಪ್ರತಿಯೊಂದು ನಗರದಲ್ಲೂ ಕಬಾಬ್‌ನ ವಿಶಿಷ್ಟ ರುಚಿ ಸವಿಯಬಹುದು.

ತಂದೂರಿ ಚಿಕನ್ ಕಬಾಬ್: ತಂದೂರಿ ಚಿಕನ್ ಕಬಾಬ್‌ ಸ್ಮೋಕಿ ಪರ್ಫೆಕ್ಷನ್‌ನ ದ್ಯೋತಕವಾಗಿದೆ. ಮೊಸರು, ಮಸಾಲೆಗಳು ಮತ್ತು ನಿಂಬೆ ಹುಳಿ ಮಿಶ್ರಣವನ್ನು ಮ್ಯಾರಿನೇಡ್ ಮಾಡಿ, ಚಿಕನ್​ ಅನ್ನು ತಂದೂರ್​ನಲ್ಲಿ (ಜೇಡಿಮಣ್ಣಿನ ಒಲೆಯಲ್ಲಿ) ಬೇಯಿಸಿದಾಗ ವಿಶಿಷ್ಟವಾದ ಪರಿಮಳದೊಂದಿಗೆ ಸೇವಿಸಬಹುದು.

ಸೀಖ್ ಕಬಾಬ್: ಈ ಸಿಲಿಂಡರಾಕಾರದ ಸೀಖ್ ಕಬಾಬ್‌ಗಳನ್ನು ಮಾಂಸದಿಂದ (ಕುರಿಮರಿ ಅಥವಾ ಕೋಳಿ) ಮಸಾಲೆಗಳು ಸೇರಿ ಮಾಡಲಾಗುತ್ತದೆ. ನಂತರದಲ್ಲಿ ಕಡ್ಡಿಗಳಿಗೆ ಅಚ್ಚು ಮಾಡಿ ಸುಡಲಾಗುತ್ತದೆ.

ಮಲೈ ಚಿಕನ್ ಕಬಾಬ್: ಮೂಳೆಗಳಿಲ್ಲದ ಚಿಕನ್ ತುಂಡುಗಳನ್ನು ಕ್ರೀಮ್, ಮೊಸರು, ಚೀಸ್ ಮತ್ತು ಮಸಾಲೆಗಳ ಮಿಶ್ರಣದಲ್ಲಿ ಮ್ಯಾರಿನೇಡ್ ಮಾಡಿ, ನಂತರ ಕಬಾಬ್‌ಗಳನ್ನು ಗ್ರಿಲ್ ಮಾಡಲಾಗುತ್ತದೆ.

ಕಲ್ಮಿ ಕಬಾಬ್: ಭಾರತದ ಇತರ ರೀತಿಯ ಕಬಾಬ್‌ಗಳಿಗಿಂತ ಕಲ್ಮಿ ಕಬಾಬ್‌ ಸ್ವಲ್ಪ ಭಿನ್ನವಾಗಿವೆ. ಇದು ಮೊಘಲಾಯಿ ಶೈಲಿಯ ಕಬಾಬ್‌ನ ಪಾಕವಿಧಾನ. ಇದರಲ್ಲಿ ಚಿಕನ್​ ಲೆಗ್ಸ್​ ಮಸಾಲೆಗಳ ವಿಶೇಷ ಮಿಶ್ರಣದಲ್ಲಿ ಮ್ಯಾರಿನೇಡ್ ಮಾಡಿ ಬಳಿಕ ಸುಡಲಾಗುತ್ತದೆ. ಹೀಗೆ ಗಲೌಟಿ ಕಬಾಬ್, ಶಮಿ ಕಬಾಬ್, ಪನೀರ್ ಟಿಕ್ಕಾ ಕಬಾಬ್, ಬೀಟ್ರೂಟ್ ಕಬಾಬ್​ಗಳಿದ್ದು, ಇವು ವಿಶಿಷ್ಟ ರುಚಿಯನ್ನು ನೀಡುತ್ತವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.