ಬರ್ಲಿನ್: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ಐವರು ಸಹಪ್ರಯಾಣಿಕರಿಗೆ ಚೂರಿಯಿಂದ ದಾಳಿ ಮಾಡಿರುವ ಘಟನೆ ಜರ್ಮನಿಯ ನಾರ್ತ್ ರೈನ್- ವೆಸ್ಟ್ಫಾಲಿಯಾದ ಸೀಗೆನ್ನಲ್ಲಿ ನಡೆದಿದೆ. ಐವರು ಗಾಯಗೊಂಡಿದ್ದು, ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ. ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ವೇಳೆ ಬಸ್‌ನಲ್ಲಿ ಸುಮಾರು 40 ಪ್ರಯಾಣಿಕರಿದ್ದು, ಉಳಿದ ಪ್ರಯಾಣಿಕರಿಗೆ ಹೆಚ್ಚಿನ ಅಪಾಯವಾಗಿಲ್ಲ. ದಾಳಿ ಮಾಡಿದ ಮಹಿಳೆ ಜರ್ಮನ್ ಪ್ರಜೆಯಾಗಿದ್ದು, ಆಕೆ ಮಾನಸಿಕ ಆರೋಗ್ಯ ಸಮಸ್ಯೆ ಹಾಗೂ ಮಾದಕವಸ್ತುಗಳ ಪ್ರಭಾವಕ್ಕೆ ಸಿಲುಕಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ. ಭಯೋತ್ಪಾದನೆಯನ್ನು ಪ್ರೇರೇಪಿಸುವಂತಹ ಅಂಶದ ಬಗ್ಗೆ ಯಾವುದೇ ಅನುಮಾನ ಇಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಪಶ್ಚಿಮ ಜರ್ಮನಿಯ ಸೊಲಿಂಗೆನ್‌ನಲ್ಲಿ ನಡೆದ ಉತ್ಸವವೊಂದರಲ್ಲಿ ಸಿರಿಯನ್ ವ್ಯಕ್ತಿಯೊಬ್ಬ ಮೂರು ಜನರನ್ನು ಇರಿದು ಕೊಂದು, ಹಲವರ ಮೇಲೆ ದಾಳಿ ಮಾಡಿರುವುದಾಗಿ ಒಪ್ಪಿಕೊಂಡ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಆ ಘಟನೆಯಲ್ಲಿ 67 ಮತ್ತು 56 ವರ್ಷದ ಇಬ್ಬರು ಪುರುಷರು ಮತ್ತು 56 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ವೆಸ್ಟ್ಬ್ಯಾಂಕ್ನ 4 ನಗರಗಳ ಮೇಲೆ ಇಸ್ರೇಲ್ ಏಕಕಾಲಕ್ಕೆ ದಾಳಿ: 11 ಪ್ಯಾಲೆಸ್ಟೈನಿಯರ ಸಾವು - Israel attacks West Bank