ETV Bharat / international

ರಷ್ಯಾ-ಉಕ್ರೇನ್ ಯುದ್ಧ ಕೊನೆಗೊಳಿಸಲು ಶಾಂತಿದೂತನಾಗಲಿದೆಯಾ ಭಾರತ? ವಿಶ್ಲೇಷಣೆ - Russia Ukraine Peace Talks - RUSSIA UKRAINE PEACE TALKS

ರಷ್ಯಾ ಮತ್ತು ಉಕ್ರೇನ್ ಮಧ್ಯದ ಯುದ್ಧವನ್ನು ಕೊನೆಗೊಳಿಸಲು ಭಾರತ ಶಾಂತಿದೂತನ ಪಾತ್ರ ವಹಿಸಬಹುದಾದ ಸಾಧ್ಯತೆಗಳ ಕುರಿತಾದ ಅವಲೋಕನ ಇಲ್ಲಿದೆ.

ಪ್ರಧಾನಿ ಮೋದಿ, ಉಕ್ರೇನ್ ಅಧ್ಯಕ್ಷ ಜೆಲೆನ್​ ಸ್ಕಿ
ಪ್ರಧಾನಿ ಮೋದಿ, ಉಕ್ರೇನ್ ಅಧ್ಯಕ್ಷ ಜೆಲೆನ್​ ಸ್ಕಿ (IANS)
author img

By ETV Bharat Karnataka Team

Published : Aug 28, 2024, 6:47 PM IST

ನವದೆಹಲಿ: ಕಳೆದ ವಾರ ಪೋಲೆಂಡ್ ಮತ್ತು ಉಕ್ರೇನ್​​ಗೆ ಪ್ರಧಾನಿ ನರೇಂದ್ರ ಮೋದಿ ಐತಿಹಾಸಿಕ ಭೇಟಿ ನೀಡಿ ಮರಳಿದ್ದಾರೆ. ಅದರ ನಂತರ ಅವರು ಇತ್ತೀಚೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು. ಉಕ್ರೇನ್ ರಾಜಧಾನಿ ಕೀವ್​ನಲ್ಲಿ ಅಧ್ಯಕ್ಷ ಜೆಲೆನ್​ ಸ್ಕಿ ಅವರೊಂದಿಗೆ ನಡೆದ ಮಾತುಕತೆಗಳ ಮಾಹಿತಿಯನ್ನು ಮೋದಿ ದೂರವಾಣಿ ಸಂಭಾಷಣೆಯಲ್ಲಿ ಹಂಚಿಕೊಂಡಿದ್ದಾರೆ.

ಮಂಗಳವಾರ ಮೋದಿ ಮತ್ತು ಪುಟಿನ್ ನಡುವಿನ ಸಂಭಾಷಣೆಯ ನಂತರ, ವಿದೇಶಾಂಗ ಸಚಿವಾಲಯ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಉಭಯ ನಾಯಕರು ರಷ್ಯಾ-ಉಕ್ರೇನ್ ಸಂಘರ್ಷದ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ಹೇಳಿದೆ.

"ಪ್ರಧಾನಿಯವರು ತಮ್ಮ ಇತ್ತೀಚಿನ ಉಕ್ರೇನ್ ಭೇಟಿಯ ಮಾಹಿತಿಗಳನ್ನು ಹಂಚಿಕೊಂಡರು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಂಘರ್ಷಕ್ಕೆ ಶಾಶ್ವತ ಮತ್ತು ಶಾಂತಿಯುತ ಪರಿಹಾರ ಕಂಡುಕೊಳ್ಳಲು ಮಾತುಕತೆ, ರಾಜತಾಂತ್ರಿಕತೆ ಮತ್ತು ಎಲ್ಲಾ ಮಧ್ಯಸ್ಥಗಾರರ ನಡುವೆ ಪ್ರಾಮಾಣಿಕ ಮತ್ತು ಪ್ರಾಯೋಗಿಕ ತೊಡಗಿಸಿಕೊಳ್ಳುವಿಕೆಯ ಮಹತ್ವವನ್ನು ಪ್ರಧಾನಿ ಒತ್ತಿಹೇಳಿದರು.

ಕ್ರೆಮ್ಲಿನ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಮೋದಿ ಅವರು ಪುಟಿನ್ ಅವರಿಗೆ ತಮ್ಮ ಇತ್ತೀಚಿನ ಕೀವ್ ಭೇಟಿಯ ಬಗ್ಗೆ ಮಾಹಿತಿ ನೀಡಿದ್ದಾರೆ ಮತ್ತು ರಾಜಕೀಯ ಮತ್ತು ರಾಜತಾಂತ್ರಿಕ ವಿಧಾನಗಳ ಮೂಲಕ ಉಕ್ರೇನ್​-ರಷ್ಯಾ ಯುದ್ಧವನ್ನು ಕೊನೆಗೊಳಿಸುವ ಬದ್ಧತೆಯನ್ನು ಒತ್ತಿ ಹೇಳಿದರು.

"ವ್ಲಾದಿಮಿರ್ ಪುಟಿನ್ ಕೀವ್​ ಅಧಿಕಾರಿಗಳು ಮತ್ತು ಅವರ ಪಾಶ್ಚಿಮಾತ್ಯ ಬೆಂಬಲಿಗ ರಾಷ್ಟ್ರಗಳ ವಿನಾಶಕಾರಿ ನೀತಿಗಳ ಬಗ್ಗೆ ತಮ್ಮ ತಾತ್ವಿಕ ಅಭಿಪ್ರಾಯಗಳನ್ನು ಹಂಚಿಕೊಂಡರು ಮತ್ತು ಈ ಸಂಘರ್ಷವನ್ನು ಪರಿಹರಿಸಲು ರಷ್ಯಾದ ಪ್ರಯತ್ನಗಳನ್ನು ಎತ್ತಿ ತೋರಿಸಿದರು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸೋಮವಾರ, ಮೋದಿ ಬೈಡನ್ ಅವರೊಂದಿಗೆ ಮಾತನಾಡಿದರು, ನಂತರ ಉಭಯ ನಾಯಕರು ಹಲವಾರು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ವಿವರವಾದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.

"ಉಕ್ರೇನ್ ಪರಿಸ್ಥಿತಿಯ ಬಗ್ಗೆ ಚರ್ಚಿಸುವ ಸಂದರ್ಭದಲ್ಲಿ ಪ್ರಧಾನಿ ಮೋದಿ ಅಧ್ಯಕ್ಷ ಬೈಡನ್ ಅವರಿಗೆ ತಮ್ಮ ಇತ್ತೀಚಿನ ಉಕ್ರೇನ್ ಭೇಟಿಯ ಬಗ್ಗೆ ವಿವರಿಸಿದರು" ಎಂದು ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಪ್ರತ್ಯೇಕ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಾತುಕತೆ ಮತ್ತು ರಾಜತಾಂತ್ರಿಕತೆಯ ಪರವಾಗಿ ಭಾರತದ ಸ್ಥಿರ ನಿಲುವನ್ನು ಅವರು ಪುನರುಚ್ಚರಿಸಿದರು ಮತ್ತು ಶಾಂತಿ ಮತ್ತು ಸ್ಥಿರತೆ ಶೀಘ್ರವಾಗಿ ಮರಳಲು ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು.

ಸಂಭಾಷಣೆಯ ನಂತರ ಶ್ವೇತಭವನ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ಬೈಡನ್ ಮೋದಿಯವರನ್ನು ಪೋಲೆಂಡ್ ಮತ್ತು ಉಕ್ರೇನ್​ಗೆ ಐತಿಹಾಸಿಕ ಭೇಟಿ ನೀಡಿದ್ದಕ್ಕಾಗಿ ಶ್ಲಾಘಿಸಿದರು.

"ಯುಎನ್ ಚಾರ್ಟರ್ ಆಧಾರದ ಮೇಲೆ ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಸಂಘರ್ಷದ ಶಾಂತಿಯುತ ಪರಿಹಾರಕ್ಕೆ ತಮ್ಮ ನಿರಂತರ ಬೆಂಬಲವನ್ನು ನಾಯಕರು ದೃಢಪಡಿಸಿದರು" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇಂಡೋ-ಪೆಸಿಫಿಕ್​ನಲ್ಲಿ ಶಾಂತಿ ಮತ್ತು ಸಮೃದ್ಧಿಗೆ ಕೊಡುಗೆ ನೀಡಲು ಕ್ವಾಡ್ ನಂತಹ ಪ್ರಾದೇಶಿಕ ಗುಂಪುಗಳ ಮೂಲಕ ಒಟ್ಟಾಗಿ ಕೆಲಸ ಮಾಡುವ ನಿರಂತರ ಬದ್ಧತೆಯನ್ನು ನಾಯಕರು ಒತ್ತಿ ಹೇಳಿದರು.

ಅಲ್ಲದೆ ಸೋಮವಾರ ರಷ್ಯಾದ ಉಪ ವಿದೇಶಾಂಗ ಸಚಿವ ಮಿಖಾಯಿಲ್ ಗಲುಜಿನ್ ಮಾಸ್ಕೋದಲ್ಲಿ ರಷ್ಯಾದ ಭಾರತೀಯ ರಾಯಭಾರಿ ವಿನಯ್ ಕುಮಾರ್ ಅವರನ್ನು ಭೇಟಿಯಾಗಿ ಉಕ್ರೇನ್ ಸಂಘರ್ಷದಲ್ಲಿ ತಮ್ಮ ದೇಶದ ತಾತ್ವಿಕ ನಿಲುವನ್ನು ವಿವರಿಸಿದ್ದಾರೆ.

"ಉಕ್ರೇನ್ ಸಂಘರ್ಷದ ಬಗ್ಗೆ ರಷ್ಯಾದ ತಾತ್ವಿಕ ನಿಲುವನ್ನು ಮತ್ತೊಮ್ಮೆ ಭಾರತೀಯ ರಾಜತಾಂತ್ರಿಕ ನಿಯೋಗದ ಮುಖ್ಯಸ್ಥರಿಗೆ ವಿವರಿಸಲಾಗಿದೆ" ಎಂದು ಸಭೆಯ ನಂತರ ನವದೆಹಲಿಯ ರಷ್ಯಾ ರಾಯಭಾರ ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಸಂಭಾಷಣೆಯು ವಿಶ್ವಾಸಾರ್ಹ ಮತ್ತು ರಚನಾತ್ಮಕ ವಾತಾವರಣದಲ್ಲಿ ನಡೆಯಿತು ಎಂದು ಹೇಳಲಾಗಿದೆ.

ಇದೆಲ್ಲವನ್ನೂ ಗಮನಿಸಿದರೆ, ಭಾರತವು ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿದೂತನ ಪಾತ್ರವನ್ನು ವಹಿಸಬಹುದೇ ಮತ್ತು ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಸಂಘರ್ಷಕ್ಕೆ ರಾಜತಾಂತ್ರಿಕ ಪರಿಹಾರವನ್ನು ರೂಪಿಸಬಹುದೇ ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಮಾತ್ರ ಸಂಘರ್ಷವನ್ನು ಪರಿಹರಿಸಬಹುದು ಎಂದು ಭಾರತ ಮೊದಲಿನಿಂದಲೂ ಹೇಳುತ್ತ ಬಂದಿದೆ.

ಕಳೆದ ವಾರ ಮೋದಿ ಅವರೊಂದಿಗಿನ ಸಭೆಯ ನಂತರ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ಅವರು ಉಕ್ರೇನ್ ಕುರಿತು ಭಾರತವು ಎರಡನೇ ಶಾಂತಿ ಶೃಂಗಸಭೆಯನ್ನು ಆಯೋಜಿಸಬೇಕೆಂದು ಬಯಸುವುದಾಗಿ ತಿಳಿಸಿದ್ದರು. ಅಂತಹ ಶೃಂಗಸಭೆಯನ್ನು ಆಯೋಜಿಸಲು ಉಕ್ರೇನ್ ಜಾಗತಿಕ ದಕ್ಷಿಣದಲ್ಲಿ ಒಂದು ದೇಶವನ್ನು ಹುಡುಕುತ್ತಿದೆ.

"ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾಗಿರುವ ಭಾರತದಲ್ಲಿ ಜಾಗತಿಕ ಶಾಂತಿ ಶೃಂಗಸಭೆಯನ್ನು ನಡೆಸಬಹುದು ಎಂದು ನಾನು ಪ್ರಧಾನಿ ಮೋದಿಯವರಿಗೆ ತಿಳಿಸಿದ್ದೇನೆ" ಎಂದು ಆಗಸ್ಟ್ 23 ರಂದು ಮೋದಿಗೆ ಆತಿಥ್ಯ ನೀಡಿದ ಒಂದು ದಿನದ ನಂತರ ಜೆಲೆನ್ ಸ್ಕಿ ಹೇಳಿದ್ದರು. ಆದರೆ ಇಂಥದೊಂದು ಶೃಂಗಸಭೆಯನ್ನು ಆಯೋಜನೆ ಮಾಡುವ ದೇಶಕ್ಕೆ ಜೆಲೆನ್ ಸ್ಕಿ ವಿಧಿಸಿರುವ ಷರತ್ತನ್ನು ಒಪ್ಪಿಕೊಳ್ಳಲು ಭಾರತಕ್ಕೆ ಕಷ್ಟವಾಗಬಹುದು.

"ಈ ಸಂದರ್ಭದಲ್ಲಿ ಮುಕ್ತ ಮನಸಿನಿಂದ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಇದು ಭಾರತಕ್ಕೆ ಮಾತ್ರವಲ್ಲ, ಎರಡನೇ ಶೃಂಗಸಭೆಯನ್ನು ಆಯೋಜಿಸಲು ಇಚ್ಛಿಸುವ ಯಾವುದೇ ದೇಶಕ್ಕೆ ಅನ್ವಯಿಸುತ್ತದೆ. ಶಾಂತಿ ಶೃಂಗಸಭೆಯ ಪ್ರಕಟಣೆಗೆ ಇನ್ನೂ ಸಹಿ ಹಾಕದ ದೇಶದಲ್ಲಿ ಶಾಂತಿ ಶೃಂಗಸಭೆ ನಡೆಯುವುದನ್ನು ನಾವು ಒಪ್ಪುವುದಿಲ್ಲ" ಎಂದು ಜೆಲೆನ್​ ಸ್ಕಿ ಕೈವ್ ಇಂಡಿಪೆಂಡೆಂಟ್ ಭಾರತೀಯ ಪತ್ರಕರ್ತರೊಂದಿಗಿನ ಸಂವಾದದ ಸಮಯದಲ್ಲಿ ಹೇಳಿದರು.

ಈ ವರ್ಷದ ಜೂನ್​ನಲ್ಲಿ ಸ್ವಿಟ್ಜರ್ ಲೆಂಡ್​ನ ಬರ್ಗೆನ್ ಸ್ಟಾಕ್​ನಲ್ಲಿ ನಡೆದ ಮೊದಲ ಶಾಂತಿ ಶೃಂಗಸಭೆ ಸೇರಿದಂತೆ ಉಕ್ರೇನ್​ನಲ್ಲಿನ ಯುದ್ಧ ಕೊನೆಗಾಣಿಸುವ ಕುರಿತಾದ ಎಲ್ಲಾ ನಾಲ್ಕು ಅಂತರರಾಷ್ಟ್ರೀಯ ಸಭೆಗಳಲ್ಲಿ ಭಾರತ ಭಾಗವಹಿಸಿದ್ದರೂ, ಶೃಂಗಸಭೆಯ ನಂತರ ಹೊರಡಿಸಲಾದ ಜಂಟಿ ಹೇಳಿಕೆಗೆ ಸಹಿ ಹಾಕಿಲ್ಲ ಎಂಬುದು ಇಲ್ಲಿ ಗಮನಾರ್ಹ.

ಶಾಂತಿ ಚೌಕಟ್ಟು ಕುರಿತಾದ ಜಂಟಿ ಹೇಳಿಕೆಯು ಶೃಂಗಸಭೆಯ ಅಂತಿಮ ಹೇಳಿಕೆಯಾಗಿದೆ ಮತ್ತು ಶೃಂಗಸಭೆಯಲ್ಲಿ ಭಾಗವಹಿಸಿದ್ದ ಬಹುತೇಕ ದೇಶಗಳು ಇದನ್ನು ಬೆಂಬಲಿಸಿವೆ. "ಸಹಿ ಹಾಕಿದವರು ಪರಮಾಣು ಶಕ್ತಿ ಮತ್ತು ಶಸ್ತ್ರಾಸ್ತ್ರಗಳು, ಆಹಾರ ಭದ್ರತೆ, ಕೈದಿಗಳು ಮತ್ತು ಗಡೀಪಾರುಗಳು ಎಂಬ ಮೂರು ವಿಷಯಗಳ ಮೇಲೆ ಎಲ್ಲಾ ಪಕ್ಷಗಳ ಪ್ರತಿನಿಧಿಗಳ ಹೆಚ್ಚಿನ ತೊಡಗಿಸಿಕೊಳ್ಳುವಿಕೆಯೊಂದಿಗೆ ದೃಢವಾದ ಕ್ರಮಗಳನ್ನು ತೆಗೆದುಕೊಳ್ಳಲು ಒಪ್ಪಿಕೊಂಡಿದ್ದಾರೆ ..." ಎಂದು ಜಂಟಿ ಹೇಳಿಕೆಯು ತಿಳಿಸುತ್ತದೆ.

"ಜಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರ ಸೇರಿದಂತೆ ಉಕ್ರೇನಿಯನ್ ಪರಮಾಣು ವಿದ್ಯುತ್ ಸ್ಥಾವರಗಳು ಮತ್ತು ಸ್ಥಾಪನೆಗಳು ಉಕ್ರೇನ್ ನ ಸಂಪೂರ್ಣ ಸಾರ್ವಭೌಮ ನಿಯಂತ್ರಣದಲ್ಲಿ ಮತ್ತು ಐಎಇಎ ತತ್ವಗಳಿಗೆ ಅನುಗುಣವಾಗಿ ಮತ್ತು ಅದರ ಮೇಲ್ವಿಚಾರಣೆಯಲ್ಲಿ ಸುರಕ್ಷಿತವಾಗಿ ಕಾರ್ಯನಿರ್ವಹಿಸಬೇಕು ಮತ್ತು ಉಕ್ರೇನ್ ವಿರುದ್ಧ ನಡೆಯುತ್ತಿರುವ ಯುದ್ಧದ ಸಂದರ್ಭದಲ್ಲಿ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ಒಪ್ಪುವುದಿಲ್ಲ" ಎಂದು ಸಹಿ ಹಾಕಿದ ರಾಷ್ಟ್ರಗಳು ಒಪ್ಪಿಕೊಂಡಿವೆ.

"ಆಹಾರ ಉತ್ಪನ್ನಗಳ ಪೂರೈಕೆಗಾಗಿ ಬಂದರುಗಳಲ್ಲಿ ಮತ್ತು ಇಡೀ ಮಾರ್ಗದಲ್ಲಿ ಸಾಗುವ ವ್ಯಾಪಾರಿ ಹಡಗುಗಳ ಮೇಲಿನ ದಾಳಿಗಳು, ನಾಗರಿಕ ಬಂದರುಗಳು ಮತ್ತು ನಾಗರಿಕ ಬಂದರು ಮೂಲಸೌಕರ್ಯಗಳ ವಿರುದ್ಧದ ದಾಳಿಗಳು ಸ್ವೀಕಾರಾರ್ಹವಲ್ಲ ಮತ್ತು ಉಕ್ರೇನಿಯನ್ ಕೃಷಿ ಉತ್ಪನ್ನಗಳನ್ನು ಆಸಕ್ತ ಮೂರನೇ ದೇಶಗಳಿಗೆ ಸುರಕ್ಷಿತವಾಗಿ ಮತ್ತು ಮುಕ್ತವಾಗಿ ಸಾಗಿಸಲು ಅವಕಾಶ ನೀಡಬೇಕು. ಎಲ್ಲಾ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಬೇಕು ಮತ್ತು ಕಾನೂನುಬಾಹಿರವಾಗಿ ಬಂಧಿಸಲ್ಪಟ್ಟ ಎಲ್ಲಾ ಮಕ್ಕಳು ಮತ್ತು ಇತರ ಉಕ್ರೇನಿಯನ್ ನಾಗರಿಕರನ್ನು ಉಕ್ರೇನ್ ಗೆ ಹಿಂದಿರುಗಿಸಬೇಕು" ಎಂದು ಜಂಟಿ ಹೇಳಿಕೆಯು ಒತ್ತಾಯಿಸುತ್ತದೆ.

ಆದಾಗ್ಯೂ, ಭಾರತವು ಬರ್ಗೆನ್ ಸ್ಟಾಕ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರೂ ಉಕ್ರೇನ್ ಕುರಿತಾದ ಜಂಟಿ ಹೇಳಿಕೆಯು ಹಿಂದಿನ ಎರಡು ಯುಎನ್ ನಿರ್ಣಯಗಳನ್ನು ಆಧರಿಸಿದ್ದರಿಂದ ಈ ಹೇಳಿಕೆಗೆ ಬದ್ಧನಾಗಲಿಲ್ಲ. ಭಾರತವು ಈ ಎರಡೂ ನಿರ್ಣಯಗಳಿಂದ ದೂರ ಉಳಿದಿತ್ತು. ಅಲ್ಲದೆ, ರಷ್ಯಾವನ್ನು ಶೃಂಗಸಭೆಗೆ ಆಹ್ವಾನಿಸಲಾಗಿರಲಿಲ್ಲ. ಹಿಂದಿನ ನಾಲ್ಕು ಶಾಂತಿ ಸಭೆಗಳಿಗೆ ರಷ್ಯಾವನ್ನು ಆಹ್ವಾನಿಸಲಾಗಿರಲಿಲ್ಲ. ಸಂಘರ್ಷಕ್ಕೆ ಪರಿಹಾರವನ್ನು ಕಂಡುಹಿಡಿಯಲು, ರಷ್ಯಾವನ್ನು ಶೃಂಗಸಭೆಗೆ ಆಹ್ವಾನಿಸಬೇಕೆಂದು ಭಾರತ ನಿರಂತರವಾಗಿ ಒತ್ತಾಯಿಸಿದೆ.

ವಾಸ್ತವವಾಗಿ, ಮೋದಿ-ಜೆಲೆನ್ ಸ್ಕಿ ನಡುವೆ ನಡೆದ ಮಾತುಕತೆಯ ನಂತರ ಕೀವ್​ನಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಎಸ್ ಜೈಶಂಕರ್, "ಯಾವುದೇ ರೀತಿಯ ಶಾಂತಿ ಸಂಧಾನಗಳು ಫಲಪ್ರದವಾಗಬೇಕಾದರೆ, ಸ್ವಾಭಾವಿಕವಾಗಿ ಸಂಬಂಧಪಟ್ಟ ಇತರ ಪಕ್ಷವನ್ನು (ಅಂದರೆ ರಷ್ಯಾ) ಒಳಗೊಳ್ಳಬೇಕು ಎಂಬುದು ನಮ್ಮ ಅಭಿಪ್ರಾಯ. ಇದು ಏಕಪಕ್ಷೀಯ ಪ್ರಯತ್ನವಾಗಲು ಸಾಧ್ಯವಿಲ್ಲ." ಎಂದು ಸ್ಪಷ್ಟವಾಗಿ ಹೇಳಿದರು.

ಶಾಂತಿ ಶೃಂಗಸಭೆಯಲ್ಲಿ ರಷ್ಯಾದ ಭಾಗವಹಿಸುವಿಕೆಗೆ ಪಾಶ್ಚಿಮಾತ್ಯ ದೇಶಗಳು ಒಪ್ಪುತ್ತವೆಯೇ? ಮತ್ತು ಜೆಲೆನ್ ಸ್ಕಿ ಬಯಸಿದಂತೆ ಸ್ವಿಟ್ಜರ್ ಲೆಂಡ್ ಶಾಂತಿ ಶೃಂಗಸಭೆಯ ನಂತರ ಹೊರಡಿಸಲಾದ ಜಂಟಿ ಹೇಳಿಕೆಗೆ ಸಹಿ ಹಾಕಲು ಭಾರತವು ಒಪ್ಪುತ್ತದೆಯೇ? ಎಂಬ ಎರಡು ಪ್ರಾಥಮಿಕ ಪ್ರಶ್ನೆಗಳ ಮೇಲೆ ಭಾರತವು ಶಾಂತಿದೂತನ ಪಾತ್ರವನ್ನು ವಹಿಸಬಹುದೇ ಎಂಬುದನ್ನು ನಿರ್ಧರಿಸಲಿದೆ.

ಲೇಖನ: ಅರೂನಿಮ್ ಭುಯಾನ್, ಈಟಿವಿ ಭಾರತ

ಇದನ್ನೂ ಓದಿ : ಜಾಗತಿಕ ದಕ್ಷಿಣದ ಭವಿಷ್ಯದಲ್ಲಿ ಭಾರತದ ಪಾತ್ರವೇನು?: ವಿಶ್ಲೇಷಣೆ - Global South

ETV Bharat Logo

Copyright © 2024 Ushodaya Enterprises Pvt. Ltd., All Rights Reserved.